ಸಾಧನೆ ಎನ್ನುವುದು ಬಹಳ ದೊಡ್ಡ ವಿಷಯ. ಇತ್ತೀಚಿನ ದಿನಗಳಲ್ಲಿ ಹಣ ಸಂಪಾದನೆ ಮಾಡುವುದು ಕೂಡ ಒಂದು ಸಾಧನೆಯೇ. ಆದರೆ ಹಣ ಇದ್ದವರು ಹಣ ಮಾಡುವುದು ಹೊಸದಲ್ಲ, ಜೀರೋ ಇಂದ ಹೀರೋ ಆದವರು ಸಾಧಕರು ಎನಿಸಿಕೊಳ್ಳುತ್ತಾರೆ. ಈ ರೀತಿ ಸಾಧನೆಗೆ ಅವರಿಗೆ ಸ್ಪೂರ್ತಿ ಆಗುವುದು ಅವರ ಜೀವನದ ಕ’ಷ್ಟಗಳೇ ಎನ್ನಬಹುದು ಇಂದು ನಾವು ರೋಲ್ ಮಾಡೆಲ್ ಎಂದು ಸ್ವೀಕರಿಸುವ ಎಲ್ಲರೂ ಕೂಡ ಇಂತಹದೇ ಹಾದಿಯನ್ನು ತುಳಿದು ಬಂದವರು.
ಇದೇ ರೀತಿ ಉದ್ಯೋಗವಿಲ್ಲದೆ ಖಾಲಿ ಕೈಯಲ್ಲಿದ್ದ ಯುವಕ ಕೆಲಸ ಹುಡುಕುವ ಬದಲು ತಾನೇ ಸ್ವಂತ ಉದ್ಯೋಗ ಮಾಡಿ ರಾತ್ರೋರಾತ್ರಿ ಲಕ್ಷಾಧಿಪತಿಯಾಗಿದ್ದಾನೆ. ಆರಂಭದಲ್ಲಿ ಖರ್ಚಿಗೂ ಹಣ ಇಲ್ಲದೆ ತಂದೆಯಿಂದ ರೂ.1800 ಸಾಲ ಪಡೆದಿದ್ದವ ಅದೇ ತಿಂಗಳು 20 ಲಕ್ಷ ಹಣ ಮಾಡಿದ್ದಾನೆ.
ಗೃಹಲಕ್ಷ್ಮಿ ಹಣವನ್ನು ನಿಮ್ಮ ಗಂಡಂದಿರಿಗೆ ಕೊಡಬೇಡಿ ಮಹಿಳೆಯರಿಗೆ ಅಡ್ವೈಸ್ ಮಾಡಿದ – DK ಶಿವಕುಮಾರ್
ಉತ್ತರ ಪ್ರದೇಶದ ಚಂದೋಲಿ ಜಿಲ್ಲೆಯ ಪುಟ್ಟ ಹಳ್ಳಿಯ ಮೃತ್ಯುಂಜಯ ಸಿಂಗ್ ಎಂಬಾತ ತಾನೆ ತನ್ನ ಸ್ವಂತ ಕಂಪನಿಯೊಂದನ್ನು ಶುರು ಮಾಡುವ ಆಸೆಯಿಂದ ತಂದೆಯಿಂದ 1,800 ರೂಪಾಯಿಗಳನ್ನು ಸಾಲದ ರೂಪದಲ್ಲಿ ತೆಗೆದುಕೊಂಡಿದ್ದನು. ಈತನ ತಂದೆ ರೈತನಾಗಿದ್ದರೆ, ಅಣ್ಣ ಒಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.ಮೃತ್ಯುಂಜಯ ಆ್ಯಡ್ಜಂಕ್ಷನ್ ಡಾಟ್ ಕಾಮ್ ಎಂಬ ವೆಬ್ ಸೈಟ್ ಪ್ರಾರಂಭಿಸಿ 20 ದಿನಗಳಲ್ಲಿ 20 ಲಕ್ಷ ಆದಾಯ ಪಡೆದು ಮೂಲಕ ಸುದ್ದಿಯಾಗಿದ್ದಾನೆ.
ದೊಡ್ಡ ದೊಡ್ಡ ಕಂಪನಿಗಳಾದ ನೈನ್ ಆ್ಯಪ್ಸ್, ವಿಡ್ಮೇಟ್, ಯೂಸಿ ಬ್ರೌಸರ್, ಅಲಿಬಾಬಾ, ಅಮೆಜಾನ್ ಇನ್ನು ಹಲವು ಕಂಪೆನಿಗಳು ತಮ್ಮ ಪ್ರಾಡಕ್ಟ್ಸ್ ಗಳ ಪ್ರಮೋಷನ್ ನ್ನು ಈತನ ವೆಬ್ ಸೈಟಲ್ಲಿ ಮಾಡಲು ಬಯಸುತ್ತವೆ ಅಷ್ಟರಮಟ್ಟಿಗೆ ಇದು ತನ್ನ ಬ್ರಾಂಡ್ ನ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ.
ಅಕ್ಕ ತಂಗಿಯರ ಆರೈಕೆಯಷ್ಟೇ ಸಾಕೇನಗೆ ಶಕ್ತಿ ಯೋಜನೆ ಬಗ್ಗೆ ಹರ್ಷ ವ್ಯಕ್ತ ಪಡಿಸಿ ವಿಡಿಯೋ ರಿಲೀಸ್ ಮಾಡಿದ – ಸಿದ್ದರಾಮಯ್ಯ
21 ವರ್ಷದ ಮೃತ್ಯುಂಜಯ ಎಥಿಕಲ್ ಹ್ಯಾಕರ್ ಆಗಿದ್ದು, ತನ್ನ ಕಠಿಣ ಪರಿಶ್ರಮದಿಂದ ಆ್ಯಡ್ಜಂಕ್ಷನ್ ಡಾಟ್ ಕಾಮ್ ಎಂಬ ಜಾಹೀರಾತಿನ ಟೆಕ್ನಾಲಜಿಗೆ ಸಂಬಂಧಿಸಿದ ವೆಬ್ ಸೈಟ್ ತಯಾರಿಸಿದ್ದಾನೆ. ಇದು ಬಹಳ ಇನ್ನೋವೇಟಿವ್ ಆಗಿರುವುದರಿಂದ ಬಹಳ ಬೇಗ ಜನರನ್ನು ರೀಚ್ ಆಗಿದೆ ಮೊದಲು ಗೂಗಲ್ ಆಡ್ ಸೆನ್ಸ್ ನಿಂದ ತನ್ನ ವೆಬ್ಸೈಟ್ ಪ್ರಚಾರ ನಡೆಸುತ್ತಿದ್ದನು.
ಆದರೆ ಕೆಲವು ದಿನಗಳ ಬಳಿಕ ಆತನ ವೈಬಸೈಟ್ ಗೆ ಗೂಗಲ್ ಆಡ್ ಸೆನ್ಸ್ ಬಂದ್ ಆಗಿದೆ ಪರಿಣಾಮವಾಗಿ ಎಲ್ಲಾ ದಿನಗಳವರೆಗೆ ಆರ್ಥಿಕ ಹೊಡೆತ ತಿನ್ನುವಂತಾಯ್ತು. ಮತ್ತೆ ಅದೇ ಹಳೇ ಛಲದಿಂದ ಮುನ್ನುಗ್ಗಿದ್ದಾನೆ. ಅವನು ಯೂನಿಕ್ ಪ್ಲಾಟಫಾರ್ಮ್ ಒಂದನ್ನು ಮಾಡಿ ಅದರಲ್ಲಿ ದೊಡ್ಡ ದೊಡ್ಡ ಕಂಪೆನಿಗಳ ಎಡ್ವಟೇಸ್ಮೆಂಟ್ ಹಾಗೂ ಪ್ರಮೋಷನ್ ಮಾಡಿ ಪಬ್ಲಿಷರ್ ತಮ್ಮ ವೆಬಸೈಟ್ ಹಾಗೂ ಅಪ್ಲಿಕೇಷನ್ ಮೂಲಕ ಹಣ ಗಳಿಸುವಂತೆ ಮಾಡುವ ಯೋಜನೆಯನ್ನು ರೂಪಿಸಿ ಅದರಂತೆ ಅವನು ಒಂದು ವೆಬ್ ಸೈಟ್ ತಯಾರಿಸಿದ್ದಾನೆ. ಈಗ ದೊಡ್ಡ ದೊಡ್ಡ ಕಂಪನಿಗಳು ಆತನ ವೆಬ್ ಸೈಟ್ ನಲ್ಲಿ ಆಡ್ಸ್ ನೀಡುತ್ತಿವೆ.
ದೇವಸ್ಥಾನಕ್ಕೆ ಆಫ್ರಿಕಾ ಕ್ರಿಕೆಟ್ ಆಟಗಾರ ಭೇಟಿ, ಹೆಮ್ಮೆಯ ಸನಾತನಿ ಎಂದ ಭಾರತೀಯರು.!
ಆ ವೆಬ್ಸೈಟ್ ನಿಂದ ಬಹಳಷ್ಟು ಜನರು ಹಣ ಸಂಪಾದಿಸುತ್ತಿದ್ದಾರೆ ಹಾಗೂ ದೊಡ್ಡ ದೊಡ್ಡ ಕಂಪನಿಗಳು ಈತನ ಜೊತೆ ಟೈಯಪ್ ಮಾಡಿಕೊಳ್ಳಲು ಇದೀಗ ಮುಂದೆ ಬರುತ್ತಿವೆ. ಇಷ್ಟಕ್ಕೆ ತೃಪ್ತನಾಗದೆ ಈ ಎಥಿಕಲ್ ಹ್ಯಾಕರ್ ಮೊಬೈಲ್ ಕಳೆದು ಹೋದವರಿಗೆ ಅದು ಯಾವ ಲೊಕೇಶನ್ ನಲ್ಲಿ ಇದೆ ಎಂದು ಹುಡುಕಿ ಕೊಡುವ ಟೆಕ್ನಾಲಜಿ ಕಂಡುಹಿಡಿಯುವ ಅನ್ವೇಷಣೆಯಲ್ಲಿದ್ದಾನೆ. ಈತನ ಈ ಪ್ರಯತ್ನ ಯಶಸ್ವಿಯಾಗಲಿ ಎಂದು ನಾವು ಕೂಡ ಹರಸೋಣ.