ಮನುಷ್ಯ ಮನಸ್ಸು ಮಾಡಿದರೆ ದೇಹದ ನ್ಯೂನತೆ ಆತನ ಸಾಧನೆಯನ್ನು ಹಿಂದಿಕ್ಕಲಾಗದು ಎನ್ನುವುದು ಸಾಕಷ್ಟು ಉದಾಹರಣೆಗಳ ಮೂಲಕ ಸಾಬೀತಾಗಿದೆ. ಅದಕ್ಕಾಗಿ ಈಗ ಅವರನ್ನು ಅಂಗವಿಕಲರು ಎಂದು ಕರೆಯುವುದನ್ನು ಬಿಟ್ಟು ವಿಶೇಷ ಚೇತನರು ಎಂದು ಕರೆಯಲಾಗುತ್ತಿದೆ. ದೇಹದ ಯಾವುದಾದರೂ ಒಂದು ಅಂಗ ಹೂನವಾಗಿದ್ದರೆ ಅದರ ನೂರರಷ್ಟು ಬುದ್ಧಿಶಕ್ತಿ ಜಾಣತನ ದೇವರು ಕೊಟ್ಟಿರುತ್ತಾನೆ.
ಸಾಮಾನ್ಯವಾಗಿ ಈ ರೀತಿ ಸಮಸ್ಯೆ ಹೊಂದಿದವರು ಸಂಗೀತ ಅಥವಾ ಕಲೆ ಬಗ್ಗೆ ಆಸಕ್ತಿ ಹೊಂದಿ ಆ ಕ್ಷೇತ್ರವನ್ನು ಆರಿಸಿಕೊಂಡು ಸಾಧನೆ ಮಾಡಿದ ಉದಾಹರಣೆ ಹೆಚ್ಚು. ಇದನ್ನು ಹೊರತುಪಡಿಸಿ ಬೇರೆ ಕ್ಷೇತ್ರದಲ್ಲಿ ಕೂಡ ಹೆಸರು ಮಾಡಿದವರು ಇದ್ದಾರೆ ಆದರೆ ಬೆರಳೆಣಿಕೆಯಷ್ಟು ಮಂದಿ. ನ್ಯಾಯಾಂಗ ಇಲಾಖೆಯಲ್ಲಂತೂ ದೃಷ್ಟಿ ದೋಷ ಅಥವಾ ವಾಕ್-ಶ್ರವಣ ದೋಷ ಉಳ್ಳವರು ಸೈ ಎನಿಸಿಕೊಳ್ಳುವುದು ಅಸಾಧ್ಯದ ಮಾತೇ ಎಂದು ಭಾವಿಸಲಾಗಿತ್ತು.
ಆದರೆ ಈಗ ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಸುಪ್ರೀಂಕೋರ್ಟ್ನಲ್ಲಿ (Supreme court) ವಾಕ್-ಶ್ರವಣ ದೋಷವುಳ್ಳ ವಕೀಲೆಯೊಬ್ಬರು (handicap advocate) ಸಂಕೇತ ಭಾಷೆಯ ಅಂದರೆ ಸಂಜ್ಞೆ ಮೂಲಕ ವಾದ ಮಂಡಿಸಿದ್ದಾರೆ. ವಕೀಲರ ವೃತ್ತಿ ಮಾಡುವವರು ಚಾಣಕ್ಯನಂತಿರಬೇಕು.
ಚಾಣಾಕ್ಷನಂತಹ ಬುದ್ಧಿವಂತಿಕೆ ಜೊತೆಗೆ ಹದ್ದಿನಂತಹ ತೀಕ್ಷ್ಣ ದೃಷ್ಟಿ ಕೂಡ ಬೇಕು, ಮುಖ್ಯವಾಗಿ ವಾಚಾಳಿ ಆಗಿರಬೇಕು ಅದರಲ್ಲೂ ಸುಪ್ರೀಂಕೋರ್ಟ್ ನಲ್ಲಿ ಪಾದ ಮಾಡುವುದು ಎಂದರೆ ಅವರ ಬುದ್ಧಿವಂತಿಕೆ ನೆಕ್ಸ್ಟ್ ಲೆವೆಲ್ ಇರಬೇಕು ಎನ್ನುವುದೇ ನಮ್ಮೆಲ್ಲರ ಅಭಿಪ್ರಾಯ. ಆದರೆ ಈ ಎಲ್ಲಾ ಪೂರ್ವಗ್ರಹ ಪೀಡಿತ ಆಲೋಚನೆಗಳಿಗೆ ಬ್ರೇಕ್ ಹಾಕುವಂತಹ ಅದೊಂದು ಬದಲಾವಣೆ ದೇಶದ ಇತಿಹಾಸದಲ್ಲಿ ನಡೆದಿದೆ.
ದರ್ಶನ್ ವೇದಿಕೆ ಏರಿದ್ರು ಕ್ಯಾರೆ ಅನ್ನದ ಧ್ರುವ.! ಡಿ-ಬಾಸ್ & ಧ್ರುವ ಸರ್ಜಾ ನಡುವೆ ವೈಮನಸ್ಸು.?
ಸೆಪ್ಟೆಂಬರ್ 25ರಂದು ಭಾರತದ ಮುಖ್ಯ ನ್ಯಾಯಾಧೀಶ ನ್ಯಾ. ಡಿ.ವೈ ಚಂದ್ರಚೂಡ್ (Chief justice of India Chandrachoodud) ಅವರಿದ್ದ ಪೀಠವು ವರ್ಚುವಲ್ ఆగి ಪ್ರಕರಣಗಳ ವಿಚಾರಣೆ ನಡೆಸುತ್ತಿದ್ದ ವೇಳೆ ಸಾರಾ ಸನ್ನಿ (Sara Sanny) ಎಂಬ ವಾಕ್ ಶ್ರವಣ ದೋಷವುಳ್ಳ ನ್ಯಾಯವಾದಿಯು ತಮ್ಮ ವ್ಯಾಖ್ಯಾನಕಾರ ಸೌರಭ್ ರಾಯ್ ಚೌಧರಿ (Sourabh Roy Choudary) ಮೂಲಕ ವಾದ ಮಂಡಿಸಿದ್ದಾರೆ.
ವಿಚಾರಣೆಯೊಂದರ ಆರಂಭದ ವೇಳೆ ವರ್ಚುವಲ್ ವಿಚಾರಣೆಯ ತಾಂತ್ರಿಕ ತಂಡವು ಸಾರಾಗೆ ಸ್ಟೀನ್ ಮೇಲೆ ಬರಲು ಅನುಮತಿ ನೀಡಿರಲಿಲ್ಲ ಕೇವಲ ಒಬ್ಬರಿಗೆ ಮಾತ್ರ ಅವಕಾಶ ಇದ್ದಿದ್ದರಿಂದ ಸಾರ ಅವರ ವ್ಯಾಖ್ಯಾನಕಾರ ಸೌರಬ್ಗೆ ಮಾತ್ರ ಅನುಮತಿ ನೀಡಿತು. ಹೀಗಾಗಿ ಮೊದಲಿಗೆ ಸ್ಟೀನ್ನಲ್ಲಿ ಸೌರಭ್ ಮಾತ್ರ ಕಾಣಿಸಿಕೊಂಡು ಸಾರಾ ತೆರೆಯ ಹಿಂದೆ ಮಾಡುತ್ತಿದ್ದ ಸಂಜ್ಞೆಗಳಿಗೆ ವಿವರ ನೀಡುತ್ತಿದ್ದರು.
ನಾನು ನಿಜವಾದ ಪ್ರೇಮಿ, ಜಾತಿ-ಧರ್ಮ ಮೀರಿ ಹುಡುಗಿ ಇಷ್ಟ ಪಟ್ಟಿರುವೆ – ನಟ ಧನಂಜಯ್.!
ಬಹಳ ಸೂಕ್ಷ್ಮವಾಗಿ ಇದನ್ನು ಗಮನಿಸಿ ಮಧ್ಯಪ್ರವೇಶಿಸಿದ ನ್ಯಾ. ಚಂದ್ರಚೂಡ್ ಅವರು ವಕೀಲೆ ಸಾರಾ ಅವರಿಗೂ ಸ್ಟೀನ್ ಮೇಲೆ ಬರಲು ಅವಕಾಶ ನೀಡಿ ಎಂದು ಆದೇಶಿಸಿದರು. ಆಗ ಸಾರಾ ಅವರು ಒಂದು ಸ್ಟೀನ್ನಲ್ಲಿ ಸಂಜ್ಞೆಗಳ ಮೂಲಕ ವಾದ ಮಂಡಿಸಿದರೆ ಅವರ ವ್ಯಾಖ್ಯಾನಕಾರ ಸೌರಭ್ ಅವರು ಸಾರಾ ಸಂಜ್ಞೆಗಳನ್ನು ಬಾಯಿ ಮಾತಿನಲ್ಲಿ ಮತ್ತೊಂದು ಸ್ಕ್ರೀನ್ ನಲ್ಲಿ ವಿವರಿಸಿದರು.
ನ್ಯಾಯಕ್ಕೆ ಸಮಾನ ನ್ಯಾಯದಾನದ ಪ್ರತಿಪಾದಕರು ಎನಿಸಿರುವ ನ್ಯಾಯಮೂರ್ತಿ ಚಂದ್ರಚೂಡ್ ಅವರು ಇಬ್ಬರು ಅಂಗವಿಕಲ ಬಾಲಕಿಯರ ದತ್ತು ತಂದೆಯೂ ಹೌದು ಎನ್ನುವುದು ಅನೇಕರಿಗೆ ತಿಳಿದಿರದ ವಿಷಯ. ಈ ವರ್ಷದ ಹೊಸ ವರ್ಷದ ದಿನದಂದು ಅವರು ತಮ್ಮ ಇಬ್ಬರು ದತ್ತು ವಿಶೇಷ ಚೇತನ ಹೆಣ್ಣುಮಕ್ಕಳನ್ನು ತಮ್ಮ ಕಚೇರಿಗೆ ಕರೆತಂದು ಎಲ್ಲರನ್ನೂ ಚಕಿತಗೊಳಿಸಿದ್ದರು.
ನ್ಯಾಯಾಲಯವು ಹೇಗೆ ಕೆಲಸ ಮಾಡುತ್ತದೆ ಮತ್ತು ಅಲ್ಲಿ ತಮ್ಮ ಕೆಲಸವೇನು ಎಂಬುದನ್ನು ಅವರು ತಮ್ಮ ಹೆಣ್ಣುಮಕ್ಕಳಿಗೆ ವಿವರಿಸಿದ್ದರು. ಮಾಧ್ಯಮಗಳಲ್ಲಿ ಸಾರ ಅವರ ವಿಚಾರ ವರದಿಯಾಗುತ್ತಿದ್ದಂತೆ ಸಾರ ಸಾಧನೆಗೆ ಮತ್ತು ಚಂದ್ರಚೂಡ್ ಅವರ ಹೃದಯ ವೈಶಾಲ್ಯತೆಗೆ ಜನರು ಶಹಭಾಷ್ ಗಿರಿ ನೀಡುತ್ತಿದ್ದಾರೆ.