ಮಂಡ್ಯದ ಸರ್.ಎಂ ವಿಶ್ವೇಶ್ವರಯ್ಯ (SMV Circle ) ಪ್ರತಿಮೆ ಬಳಿ ಜಿಲ್ಲೆಯ ರೈತ ಹಿತ ರಕ್ಷಣಾ ಸಮಿತಿಯು ಕಳೆದ ವಾರದಿಂದ ಕಾವೇರಿ ನದಿ ನೀರಿಗಾಗಿ (Cauvery protest) ನಡೆಸುತ್ತಿರುವ ಅನಿರ್ದಿಷ್ಟಾವಧಿ ಹೋರಾಟದಲ್ಲಿ ಶುಕ್ರವಾರ ಕರ್ನಾಟಕ ಬಂದ್ (Karnataka bandh) ಪ್ರಯುಕ್ತ ಭಾಗಿಯಾದ ಚಿಂತಕ ಮತ್ತು ನಮೋಬ್ರಿಗೇಡ್ (Namo brigade) ಸಂಸ್ಥಾಪಕರಾದ ಚಕ್ರವರ್ತಿ ಸೂಲಿಬೆಲೆಯವರು (Chakravarthi Sulibele) ರಾಜ್ಯ ಸರ್ಕಾರ ವಿನಾಕಾರಣ ಪ್ರಧಾನಿ ಮೋದಿ ಅವರ ಹೆಸರು ಹೇಳುತ್ತಿದೆ.
ಇದೆಲ್ಲ ರಾಜಕೀಯ ನಾಟಕ, ಕಾಂಗ್ರೆಸ್ ಸರ್ಕಾರವು ತನ್ನ ರಾಜಕೀಯ ಹಿತಕ್ಕಾಗಿ ತಮಿಳುನಾಡಿಗೆ (Thamilunadu) ನೀರು ಹರಿಸಿ ಈಗ ರಾಜ್ಯದಾದ್ಯಂತ ರಾಜ್ಯ ಸರ್ಕಾರದ ನಡೆ ವಿರೋಧಿಸಿ ಹೋರಾಟ ಶುರುವಾದ ಮೇಲೆ ಕೇಂದ್ರದತ್ತ ಬೊಟ್ಟು ಮಾಡಿ ತೋರಿಸುತ್ತಿದೆ ಎಂದು ದೂರಿದ್ದಾರೆ. ನೀವು ನೀವು ಒಪ್ಪಂದ ಮಾಡಿಕೊಂಡು ಸೆಟಲ್ ಆದ ಮೇಲೆ ಪ್ರಧಾನಿ (PM Modi) ಅವರನ್ನು ಮಧ್ಯಸ್ಥಿತಿಗೆ ಕರೆಯುವುದಾದರೂ ಏಕೆ? ಅವರು ಬಂದು ಮಾಡುವುದಾದರೂ ಏನು ಎಂದಿದ್ದಾರೆ.
ಕಾವೇರಿ ನದಿಯನ್ನು ನಿರಂತರವಾಗಿ ಸ್ವಚ್ಛ ಮಾಡುವವರು ನಾವು ಹೋರಾಟದ ದಿನದಂದು ಮಾತ್ರ ಬರುವವರು ಅಲ್ಲ, ಕಾವೇರಿ ಬಗ್ಗೆ ನಮಗೆ ಬಹಳಷ್ಟು ಕಾಳಜಿ ಇದೆ. ಇದು ಎರಡು ರಾಜ್ಯಕ್ಕೆ ಸೇರಿದ್ದು ಆದರೆ ಇಂತಹ ಬರಗಾಲದ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ (State government) ನಮ್ಮ ರೈತರಿಗೆ (farmers) ಅನುಕೂಲವಾಗುವಂತಹ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿತ್ತು. ಆದರೆ DMK ಸರ್ಕಾರದ ಜೊತೆಗೆ ಸ್ನೇಹ ಬೆಳೆಸಿಕೊಂಡಿರುವ ರಾಜ್ಯ ಸರ್ಕಾರ ತನ್ನ ರಾಜಕೀಯ ಲಾಭಕ್ಕಾಗಿ ನಾಡಿನ ರೈತರನ್ನು ಬಲಿ ಕೊಡುತ್ತಿದೆ.
ಇನ್ನಾದರೂ ನಾಡಿನ ನೆಲಜಲದ ಬಗ್ಗೆ ಕಾಳಜಿ ಮಾಡಿ, ರಾಜ್ಯದ ಜನರ ಹಿತವನ್ನು ಕಾಯುವ ಪ್ರಾಮಾಣಿಕ ಪ್ರಯತ್ನ ಮಾಡಿ ಎಂದು ಆಗ್ರಹಿಸಿದ್ದಾರೆ. ಕಾವೇರಿ ಪ್ರಾಧಿಕಾರ ನೀರು ಬಿಡುವಂತೆ ಆದೇಶಿಸಿತ್ತು. ಆದರೆ, ಕಡಿಮೆ ನೀರು ಬಿಡುವಂತೆ ಆದೇಶ ನೀಡಿದೆ ಎಂಬ ಕಾರಣಕ್ಕೆ ತಮಿಳುನಾಡು ಸರಕಾರ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿತ್ತು. ಆದರೆ ನ್ಯಾಯಾಲಯ ಆದೇಶ ನೀಡುವ ಮುನ್ನವೇ ರಾಜ್ಯ ಸರಕಾರ ನೀರು ಬಿಟ್ಟಿತು.
ಸನಾತನ ಧರ್ಮದಿಂದಲೇ ಸಂವಿಧಾನದ ಉಳಿವು – ಬಸನಗೌಡ ಪಟೀಲ್ ಯತ್ನಲ್
ನೀರು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರೆ ತಮಿಳುನಾಡು-ಕರ್ನಾಟಕದ ನಡುವೆ ಘರ್ಷಣೆ ತಲೆದೋರುತ್ತಿತ್ತು. ಆಗ ಪ್ರಧಾನಿ ಅಥವಾ ಕೇಂದ್ರ ಸರಕಾರ ವಿವಾದ ಬಗೆಹರಿಸಲು ಮಧ್ಯ ಪ್ರವೇಶ ಮಾಡಬೇಕಿತ್ತು. ಆದರೆ ಇಲ್ಲಿ ಅವರು ನೀರು ಕೇಳಿದರು, ನೀವು ಕೊಟ್ಟಿರಿ, ಈಗ ಇದರಲ್ಲಿ ಪ್ರಧಾನಿ ಪಾತ್ರವೇನು? ರಾಜಕೀಯ ಹಿತಕ್ಕಾಗಿ ರಾಜ್ಯದ ಪರಿಸ್ಥಿತಿ ಹೀಗಿದ್ದರೂ ಕಾವೇರಿ ಬಿಡುಗಡೆ ಮಾಡಿದವರು ಈಗ ಪ್ರಧಾನಿಯನ್ನು ಮಧ್ಯಸ್ಥಿಕೆಗಾಗಿ ಆಹ್ವಾನಿಸುವುದು ಎಷ್ಟು ಸರಿ ? ನೀರು ಬಿಡುವ ಮುನ್ನವೇ ಇಂತಹ ಚಿಂತನೆ ಮಾಡಬೇಕಿತ್ತು.
ನೀರು ಬಿಟ್ಟು ಈಗ ಕೇಂದ್ರದ ಕಡೆಗೆ ಬೊಟ್ಟು ಮಾಡುವುದು ಸರಿಯಲ್ಲ. ರಾಜ್ಯದ ಸಂಸದರೂ ಸಹ ಈ ಬಗ್ಗೆ ಮುತುವರ್ಜಿ ವಹಿಸಬೇಕು. ಆದರೆ, ಪ್ರಧಾನಿ ಬಳಿ ಹೋಗಿ ಏನೆಂದು ಕೇಳಲು ಸಾಧ್ಯ? ಕರ್ನಾಟಕದ ಮುಖ್ಯಮಂತ್ರಿ, ಜಲಸಂಪನ್ಮೂಲ ಸಚಿವರು ತಮಿಳುನಾಡಿಗೆ ಕೇಳದೆಯೇ ನೀರು ಹರಿಸಿದ್ದಾರೆ. ಹೀಗಿರುವಾಗ ನಾನು ಹೇಗೆ ಮಧ್ಯ ಪ್ರವೇಶಿಸಲಿ ಎಂದು ಪ್ರಧಾನಿ ಪ್ರಶ್ನಿಸುತ್ತಾರೆ.
ಕರ್ನಾಟಕದಲ್ಲಿಯೂ JCB ಬರುತ್ತದೆ, ಒಂದಲ್ಲ ಒಂದು ದಿನ ಆ ಸ್ಥಾನಕ್ಕೆ ನಾನು ಬರುತ್ತೇನೆ ಎಂದ ಶಾಸಕ.!
ಇಂತಹ ಸಂದಿಗ್ಧ ಸಂದರ್ಭದಲ್ಲಿ ಸಂಸದರಾದರೂ ಏನು ಮಾಡಲು ಸಾಧ್ಯ ಎಂದು ಮರು ಪ್ರಶ್ನೆ ಮಾಡಿದರು. ರಾಜ್ಯ ಸರಕಾರ ನಡೆಯನ್ನು ಖಂಡಿಸಿ ಇಂದು ರಾಜ್ಯಾದ್ಯಂತ ಬಂದ್ ಯಶಸ್ವಿಯಾಗಿ ನಡೆಯುತ್ತಿದೆ. ಹಳೇಮೈಸೂರು ಅಥವಾ ಬೆಂಗಳೂರು ಭಾಗಕ್ಕೆ ಕಾವೇರಿ ಮಾತ್ರ ಸೀಮಿತವಲ್ಲ. ಇಡೀ ರಾಜ್ಯಕ್ಕೇ ಸೇರಿದ್ದು ಎಂಬ ಸಂದೇಶವನ್ನು ಸಾರಿದರು. ರಾಜ್ಯಾದ್ಯಂತ ಬಂದ್ ಮಾಡುವ ಮೂಲಕ ಈಗ ಸರಕಾರಗಳಿಗೆ ಚಾಟಿ ಬೀಸಲಾಗುತ್ತಿದೆ. ಇನ್ನಾದರೂ ಸರಕಾರಗಳು ಎಚ್ಚೆತ್ತುಕೊಳ್ಳಬೇಕು ಎಂದರು.