Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ಸನಾತನ ಧರ್ಮದಿಂದಲೇ ಸಂವಿಧಾನದ ಉಳಿವು – ಬಸನಗೌಡ ಪಟೀಲ್ ಯತ್ನಲ್

Posted on September 30, 2023 By Admin No Comments on ಸನಾತನ ಧರ್ಮದಿಂದಲೇ ಸಂವಿಧಾನದ ಉಳಿವು – ಬಸನಗೌಡ ಪಟೀಲ್ ಯತ್ನಲ್

 

ಹಾವೇರಿಯಲ್ಲಿ (Haveri) ಗಜಾನನ ಉತ್ಸವ ಸಮಿತಿ ಏರ್ಪಡಿಸಿದ್ದ ಹಾವೇರಿ ಕ ರಾಜ ಗಣಪತೋತ್ಸವ ಹಿಂದೂ ಜನಜಾಗ್ರತ ಸಭೆ ಉದ್ದೇಶಿಸಿ ಮಾತನಾಡಿದ್ದ BJP ಶಾಸಕ ಬಸವನಗೌಡ ಯತ್ನಾಳ್ (Basavana Gowda Yathnal) ಅವರು ಸನಾತನ ಧರ್ಮದ (Sanathana Dharma) ಬಗ್ಗೆ, ಮೋದಿ ಅವರ ಆಡಳಿತದ ವೈಖರಿ ಬಗ್ಗೆ, ಚಂದ್ರಯಾನದ ಯಶಸ್ಸಿನ ಬಗ್ಗೆ, ಮತದಾನದ ಅರಿವಿನ ಬಗ್ಗೆ, ಇಲ್ಲಿದ್ದಕೊಂಡು ಪಾಕಿಸ್ತಾನವನ್ನು ಬೆಂಬಲಿಸುವವರ ಬಗ್ಗೆ, ಸಂಸತ್ತಿನ ಉದ್ಘಾಟನೆ, ಮುಂಬರುವ ಲೋಕಸಭೆ ಚುನಾವಣೆ ಸೇರಿದಂತೆ ಇನ್ನಿತರ ಪ್ರಮುಖ ಪ್ರಚಲಿತ ವಿದ್ಯಮಾನಗಳ ಬಗ್ಗೆ ಮಾತನಾಡಿದರು.

ಅವರ ಮಾತಿನ ಅರ್ಥದಲ್ಲಿ ಸನಾತನ ಧರ್ಮದ ಬಗ್ಗೆ ಅವರಾಡಿದ ಮಾತುಗಳು ಅತ್ಯಂತ ಗಮನ ಸೆಳೆಯಿತು. ಗಣಪತಿ ಹಬ್ಬದ ಉತ್ಸವವು ಸನಾತನ ಧರ್ಮದ ಬಗ್ಗೆ ಜಾಗೃತಿ ಮೂಡಿಸುತ್ತದೆ ಈ ರೀತಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದರಿಂದ ಯುವಕರಲ್ಲಿ ದೇಶ ರಕ್ಷಣೆ ಮತ್ತು ಸನಾತನ ಧರ್ಮದ ರಕ್ಷಣೆ ಬಗ್ಗೆ ಅರಿವು ಮೂಡುತ್ತದೆ ಸನಾತನ ಧರ್ಮ ಇದ್ದರೆ ಮಾತ್ರ ಸಂವಿಧಾನ, ಸಂವಿಧಾನ ಇದ್ದರೆ ನಾವು ಎಂದಿದ್ದಾರೆ.

ಕರ್ನಾಟಕದಲ್ಲಿಯೂ JCB ಬರುತ್ತದೆ, ಒಂದಲ್ಲ ಒಂದು ದಿನ ಆ ಸ್ಥಾನಕ್ಕೆ ನಾನು ಬರುತ್ತೇನೆ ಎಂದ ಶಾಸಕ.!

ಸುಭಾಷ್ ಸರ್ಕಲ್ ನಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಈ ಸಭೆಯಲ್ಲಿ ಮಾತನಾಡಿದ ಅವರು ಸನಾತನ ಧರ್ಮವನ್ನು ರಕ್ಷಣೆ ಮಾಡುವ ಕೆಲಸವನ್ನು ಮಠಾಧಿಪತಿಗಳು ಮಾಡಬೇಕು, ಆದರೆ ಈಗಿನ ಕಾಲದಲ್ಲಿ ಮಠಾಧೀಶರುಗಳು ಶಾಲಾ ಕಾಲೇಜುಗಳನ್ನು ಕಟ್ಟಿ ಅನುದಾನಕ್ಕಾಗಿ ರಾಜಕೀಯದಲ್ಲಿ ತೊಡಗಿಕೊಂಡು ಲಾಬಿ ಮಾಡುತ್ತಿರುವುದು ದು’ರಂ’ತ. ಜನರು ಮಠಗಳಿಗೆ ಧವಸ ಧಾನ್ಯ ಕಾಣಿಕೆ ಕೊಟ್ಟು ಗುರುಗಳು ಧರ್ಮ ರಕ್ಷಣೆ ಮಾಡಲಿ ಎಂದು ಬಯಸುತ್ತಾರೆ.

ಆದರೆ ಈಗಿನ ಕಾಲದಲ್ಲಿ ಸ್ವಾಮೀಜಿಗಳು ಮಂತ್ರಿಗಳನ್ನು ಮಾಡಲು ಓಡಾಡುತ್ತಾರೆ ಇದು ಧರ್ಮಕ್ಕೆ ಶೋಭೆಯಲ್ಲ ಎಂದು ಟೀಕಿಸಿದರು. ಉದಯನಿಧಿಯವರು ಸನಾತನ ಧರ್ಮದ ನಾಶ ಮಾಡುತ್ತೇನೆ ಎಂದಿರುವುದನ್ನು ಎಲ್ಲಾ ಸ್ವಾಮೀಜಿಗಳು ಕೂಡ ಖಂಡಿಸಬೇಕು, ಸನಾತನ ಧರ್ಮದ ರಕ್ಷಣೆಗೆ ಟೊಂಕಕಟ್ಟಿ ನಿಲ್ಲಬೇಕು ಎಂದರು.

ನಾವ್ ಬಂದ್ರೆ ಕಾವೇರಿ ಸಮಸ್ಯೆ ಪರಿಹಾರ ಆಗುತ್ತ.? ನಿಮ್ ತರ ನಾವು ಮನುಷ್ರೇ, ಸ್ಟಾರ್ ಗಿರಿ ನೀವೇ ಕೊಟ್ಟಿದ್ದು ಬೇಕಾದ್ರೆ ಕಿತ್ತುಕೊಳ್ಳಿ, ನಾವ್ ಮಾತಾಡಿದ್ರೆ ಸಮಸ್ಯೆಗೆ ಪರಿಹಾರ ಸಿಗಲ್ಲ – ಶಿವಣ್ಣ.!

ಭಾರತ ಸುರಕ್ಷಿತವಾಗಿಲ್ಲ, ಭಾರತದಲ್ಲಿ ಅಸಮಾನತೆ ಹೆಚ್ಚು ಎಂದು ಭಾರತದ ಬಗ್ಗೆ ಹೊರದೇಶಗಳಲ್ಲಿ ಹೋಗಿ ಮಾತನಾಡುವ ಅವಿವೇಕಿಗಳ ಮಾತನ್ನು ಖಂಡಿಸಬೇಕು. ಇಂತಹವರ ಕೈಗೆ ದೇಶ ಕೊಟ್ಟರೆ ಏನಾಗುತ್ತದೆ ಎಂದು ಯೋಚಿಸಿ ಎಂದು ಪರೋಕ್ಷವಾಗಿ ಹೆಸರು ಹೇಳದೆ ರಾಹುಲ್ ಗಾಂಧಿ ಅವರನ್ನು ತಿವಿದರು. ಮುಂದಿನ ಲೋಕಸಭಾ ಚುನಾವಣೆಯಲ್ಲಿ (Lokasabha election 2024) ತಪ್ಪದೆ ನಾವೆಲ್ಲರೂ ಮೋದಿಯನ್ನೇ (Modi) ಆರಿಸಬೇಕು.

2024ಕ್ಕೆ ನಾವು ಸ್ವಚ್ಛವಾದ ಸನಾತನ ಧರ್ಮದ ದೇಶವನ್ನು ಕಟ್ಟೋಣ ಆಗ ಮಾತ್ರ ಮುಂದಿನ 25 ವರ್ಷ ದೇಶ ಸುಭದ್ರ ವಾಗಿರುತ್ತದೆ. ಮೋದಿಯವರ ಆಡಳಿತದಲ್ಲಿ ದೇಶ 5ನೇ ಬೃಹತ್ ರಾಷ್ಟ್ರವಾಗಿ ಹೊರಹೊಮ್ಮಿದೆ, ಭಯೋತ್ಪಾದನೆಗೆ ಕಡಿವಾಣ ಬಿದ್ದಿದೆ. ಹಾಗಾಗಿ ಮೋದಿ ಅವರೇ ಮತ್ತೆ ಪ್ರಧಾನಿ ಆಗಬೇಕು ಎಂದರು. ದೇಶದ ಸೈನಿಕರು ವಿವೇಕಾನಂದರು ಇವರನ್ನು ವಿರೋಧಿಸಿ ಹೇಳಿಕೆ ಕೊಡುವವರನ್ನು ಖಂಡಿಸಬೇಕು ಎಂದರು.

ಮುಂದಿನ ತಿಂಗಳಿನಿಂದ 10kg ಅನ್ನಭಾಗ್ಯ ಅಕ್ಕಿ ಗ್ಯಾರೆಂಟಿ – ಸಚಿವ H.K ಮುನಿಯಪ್ಪ

ಮನೆ ಮನೆಗಳಲ್ಲಿ ಕೂಡ ಸನಾತನ ಧರ್ಮದ ಬಗ್ಗೆ ಅಪಾರ ಪ್ರೇಮ ಹೊಂದಿದ್ದ ಶಿವಾಜಿ ಅಂತಹ ರಾಣಪ್ರತಾಪ ಸಿಂಹರಂತಹ ಮಕ್ಕಳು ಹುಟ್ಟಬೇಕು. ಅಂಬೇಡ್ಕರ್ ಅವರು ನಮಗೆ ಕೊಟ್ಟಿದ್ದ ಅತ್ಯಮೂಲ್ಯ ವರ ಮತದಾನ, ನಾವು ಮುಂದಿನ ಚುನಾವಣೆ ವೇಳೆ ಇದನ್ನು ಸರಿಯಾಗಿ ಉಪಯೋಗಿಸೋಣ ಎಂದರು. ಸಮಾರಂಭದ ಸಾನಿಧ್ಯವನ್ನು ನೆಗಳೂರಿನ ಗುರು ಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿಗಳು ವಹಿಸಿದ್ದರು.

ಕಾರ್ಯಕ್ರಮದ ವೇದಿಕೆಯಲ್ಲಿ ಮಾಜಿ ಶಾಸಕ ಶಿವಾರಾಜ ಸಜ್ಜನರ, BJP ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಜ ಕಲಕೋಟಿ, ಗವಿ ಸಿದ್ದಪ್ಪ ದ್ಯಾಮಣ್ಣವರ, ಪ್ರಕಾಶ್ ಬುರುಡಿ ಕಟ್ಟಿ, ಮಲ್ಲಿಕಾರ್ಜುನ ನರಗುಂದ, ಸಂತೋಷ ಆಲದ ಕಟ್ಟಿ, ಗಂಗಾಧರ ಕುಲಕರ್ಣಿ ಗಜಾನನ ಉತ್ಸವ ಸಮಿತಿ ಮುಖಂಡರು ಪದಾಧಿಕಾರಿಗಳು ಮತ್ತು ಹಾವೇರಿಯ ಅಪಾರ ಭಕ್ತಬಳಗ ಹಾಜರಿದ್ದರು.

ಭಾರತಕ್ಕೆ ಬಂದಿಳಿದ ಪಾಕಿಸ್ತಾನಿ ಕ್ರಿಕೆಟ್ ಆಟಗಾರರು, ಕೇಸರಿ ಶಾಲು ಹೊದಿಸಿ ಭವ್ಯ ಸ್ವಾಗತ ಕೋರಿದ ಭಾರತ.!

Viral News

Post navigation

Previous Post: ಕರ್ನಾಟಕದಲ್ಲಿಯೂ JCB ಬರುತ್ತದೆ, ಒಂದಲ್ಲ ಒಂದು ದಿನ ಆ ಸ್ಥಾನಕ್ಕೆ ನಾನು ಬರುತ್ತೇನೆ ಎಂದ ಶಾಸಕ.!
Next Post: ಹೌದು, ಕಾವೇರಿ ನಮ್ದೇ ಆದ್ರೆ ಪ್ರಶ್ನೆ ಮಾಡ್ಬೇಕಾಗಿರೋದು ನಟರನ್ನಲ್ಲಾ ನಾಲಾಯಕ್ ರಾಜಕಾರಣಿಗಳನ್ನ.! ಎಂದು ಕಿಡಿ ಕಾರಿದ ಬಹುಭಾಷಾನಟ ಪ್ರಕಾಶ್ ರಾಜ್

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme