ಏಪ್ರಿಲ್ 1, 2019ಕ್ಕೂ ಮುನ್ನ ಸ್ವಂತ ದ್ವಿಚಕ್ರ ಹಾಗು ನಾಲ್ಕು ಚಕ್ರದ ವಾಹನಗಳನ್ನು (Vehicle owners) ಖರೀದಿಸಿರುವವರಿಗೆ ಸಾರಿಗೆ ಸಚಿವಾಲಯವು (transport department) ಹೆಚ್ಚು ಸುರಕ್ಷತೆ ಹಾಗೂ ಭದ್ರತೆ ಇರುವ HSRP ನಂಬರ್ ಪ್ಲೇಟ್ ಹಾಕಿಸಬೇಕು ಎನ್ನುವ ನಿಯಮ ಜಾರಿಗೆ ತಂದಿದೆ.
ಈಗಾಗಲೇ ಅನೇಕ ರಾಜ್ಯಗಳು ಇದನ್ನು ಕಡ್ಡಾಯ ಮಾಡಿದ್ದು ನಮ್ಮ ರಾಜ್ಯ ಸರ್ಕಾರ ಸಾರಿಗೆ ಇಲಾಖೆ ಕೂಡ ಆಗಸ್ಟ್ 13ರಂದು ಈ ಕುರಿತು ಆದೇಶ ಹೊರಡಿಸಿ ನವೆಂಬರ್ 17 ರ ಒಳಗೆ ಕಡ್ಡಾಯವಾಗಿ ಎಲ್ಲಾ ವಾಹನ ಮಾಲೀಕರು HSRP ಹಾಕಿಸಬೇಕು ಎಂದು ಆದೇಶ ನೀಡಿದೆ.
ನಮ್ಮ ಜಲ, ನಮ್ಮ ಹಕ್ಕು CM ಗೆ ಮನವಿ ಮಾಡಿದ ಕಿಚ್ಚ ಸುದೀಪ್.! ಕಾವೇರಿ ಹೋರಾಟಕ್ಕೆ ಬೆಂಬಲ
ಆದರೆ ಈ ಮಧ್ಯೆ ನವೆಂಬರ್ 17 ರ ವರೆಗೆ 2019 ರ ಏಪ್ರಿಲ್ 1 ಕ್ಕಿಂತ ಹಿಂದೆ ನೋಂದಣಿಯಾದ ವಾಹನಗಳಿಗೆ HSRP ಅಳವಡಿಕೆಯ ಕಡ್ಡಾಯಗೊಳಿಸಿದ ಆದೇಶಕ್ಕೆ ತಡೆ ನೀಡುವಂತೆ Karnataka High Court ಗೆ ಕೆಲವರು ಮನವಿ ಸಲ್ಲಿಸಿದ್ದಾರೆ. ಇದೀಗ ಆ ಅರ್ಜಿ ತನಿಖೆ ನಡೆಸಿದ ನ್ಯಾಯಾಲಯವು ಸರ್ಕಾರದ ಅಧಿಸೂಚನೆ ತಡೆ ನೀಡಲು ನಿರಾಕರಿಸಿದೆ.
2019 ರ ಏಪ್ರಿಲ್ 1 ಕ್ಕಿಂತ ಹಿಂದೆ ನೋಂದಣಿಯಾದ ವಾಹನಗಳು ಇನ್ನು 90 ದಿನಗಳಲ್ಲಿ HSRP ಯನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ಸೂಚನೆ ನೀಡಿದೆ. ಈಗ ಸರ್ಕಾರದ ನಿಯಮದಂತೆ ಈ ನಿಗದಿತ ಅವಧಿಯೊಳಗೆ ಎಲ್ಲಾ ವಾಹನ ಮಾಲೀಕರು ತಮ್ಮ ವಾಹನಗಳಿಗೆ HSRP ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದೆ.
ಆರೋಗ್ಯ ಲೆಕ್ಕಿಸದೆ ಈ ವಯಸ್ಸಿನಲ್ಲೂ ಕಾವೇರಿ ಹೋರಾಟ ಮಾಡಲು ಮಂಡ್ಯಕ್ಕೆ ಹೊರಟ ನಟಿ ಲೀಲಾವತಿ.!
ಇಲ್ಲವಾದಲ್ಲಿ ಆ ಗಡುವು ಮುಗಿದ ಬಳಿಕ HSRP ನಂಬರ್ ಪ್ಲೇಟ್ ಇಲ್ಲದೇ ವಾಹನಗಳನ್ನು ರಸ್ತೆಗೆ ತಂದರೆ ಗರಿಷ್ಠ 1000ರೂ. ವರೆಗೂ ಕೂಡ ದಂಡ (Fine) ಕಟ್ಟಬೇಕಾಗುತ್ತದೆ. ಈ HSRP ಅಳವಡಿಸಿಕೊಳ್ಳುವುದರಿಂದ ವಾಹನ ಕಳ್ಳತನವಾದಾಗ ಸುಲಭವಾಗಿ ಮತ್ತು ಶೀಘ್ರವಾಗಿ ಪತ್ತೆ ಹಚ್ಚಬಹುದು, ನಮ್ಮ ವಾಹನಗಳು ಕಾನೂನು ಬಾಹಿರ ಅಪರಾಧ ಕೃತ್ಯಗಳಿಗೆ ಬಳಕೆ ಆಗದಂತೆ ತಡೆಯಲುಬಹುದು.
ಈ ಮೂಲಕ ಪರೋಕ್ಷವಾಗಿ ರಾಷ್ಟ್ರೀಯ ಭದ್ರತೆಯಲ್ಲೂ ಪ್ರಮುಖ ಪಾತ್ರ ವಹಿಸಿದಂತಾಗುತ್ತದೆ. ಹಾಗಾಗಿ ವಾಹನ ಮಾಲೀಕರೇ ಜವಾಬ್ದಾರಿಯಂತೆ ಇದನ್ನು ಪೂರ್ತಿಗೊಳಿಸುವುದು ಒಳ್ಳೆಯದು. ಒಂದು ವೇಳೆ HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳದಿದ್ದರೆ ಮುಂದೆ ವಾಹನ ಮಾರುವ ಸಂದರ್ಭದಲ್ಲಿ, ಮಾಲೀಕತ್ವ ಬದಲಾಯಿಸುವ ಸಂದರ್ಭದಲ್ಲಿ ಇನ್ನಿತರ ಸಂದರ್ಭದಲ್ಲಿ ಬಹಳ ಸಮಸ್ಯೆಯಾಗುತ್ತದೆ. ಹಾಗಾಗಿ ಸರ್ಕಾರ ನೀಡಿರುವ ಕಾಲಾವಧಿಯೊಳಗೆ ನೀಡಿರುವ ಮಾರ್ಗಸೂಚಿ ಪ್ರಕಾರ ನಂಬರ್ ಪ್ಲೇಟ್ ಬದಲಾಯಿಸಿಕೊಳ್ಳಿ.
ಒಂದೇ ಆವಾರ್ಡ್ ಫಂಕ್ಷನ್ ನಲ್ಲಿ ಬರೋಬ್ಬರಿ 10 SIIMA ಅವಾರ್ಡ್ ಪಡೆದುಕೊಂಡ ಕಾಂತರಾ ಸಿನಿಮಾ.!
ನಂಬರ್ ಪ್ಲೇಟ್ ಬದಲಾಯಿಸಿಕೊಳ್ಳುವ ವಿಧಾನ:-
● ಮೊದಲಿಗೆ https://transport.karnataka.gov.in ಗೆ ಭೇಟಿ ನೀಡಿ, ಬಳಿಕ ಬುಕ್ HSRP ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ.
● ನಿಮ್ಮ ವಾಹನದ ಮೂಲ ವಿವರವನ್ನು ಸರಿಯಾಗಿ ಭರ್ತಿ ಮಾಡಬೇಕು ಆನಂತರ ನಿಮಗೆ ಅನುಕೂಲವಾಗುವ ಹತ್ತಿರದ ಡೀಲರ್ಸ್ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬೇಕು.
● ಶುಲ್ಕ ವನ್ನು ಆನ್ಲೈನ್ ಮೂಲಕವೇ ಪಾವತಿ ಮಾಡಿ, ವಾಹನ ಮಾಲೀಕರ ಮೊಬೈಲ್ ಸಂಖ್ಯೆಗೆ OTP ಬರುತ್ತದೆ ಅದನ್ನು ಎಂಟ್ರಿ ಮಾಡಿ. ಮುಂದಿನ ಆಯ್ಕೆಗಳಲ್ಲಿ ನಿಮಗೆ ಬೇಕಾದ ದಿನಾಂಕ, ಸ್ಥಳ, ಸಮಯವನ್ನು ಆಯ್ಕೆ ಮಾಡಿಕೊಂಡು ಅದೇ ನಿಗದಿತ ಸಮಯದಲ್ಲಿ ಹೋಗುವ ಮೂಲಕ ನಿಮ್ಮ ನಂಬರ್ ಪ್ಲೇಟ್ ಅನ್ನು HSRP ನಂಬರ್ ಪ್ಲೇಟ್ ಗೆ ಬದಲಾಯಿಸಿಕೊಳ್ಳಿ.
● ನೀವು ವಾಹನ ಖರೀದಿಸಿದ ಶೋರೂಮ್ ಗಳು ಅಥವಾ ಡೀಲರ್ಸ್ ಬಳಿ ಬದಲಾಯಿಸಿಕೊಳ್ಳಲು ಅವಕಾಶ ಇದೆ 400ರೂ. ಶುಲ್ಕ ನಿಗದಿಯಾಗಿದೆ.