ಮನುಷ್ಯನಿಗೆ ಬಾಯಿ ಇದ್ದಂತೆ ಮನೆಗೆ ಬಾಗಿಲು, ಬಾಯಿಯಿಂದ ಒಳಗೆ ಹೋಗುವ ಗಾಳಿ, ನೀರು, ಆಹಾರ ಶುದ್ಧವಾಗಿದ್ದಷ್ಟು ಆರೋಗ್ಯ ಉತ್ತಮವಾಗಿರುತ್ತದೆ ಹಾಗೆಯೇ ಮನೆಯ ಮುಖ್ಯದ್ವಾರ, ಅದನ್ನು ಸಿಂಹದ್ವಾರ ಪ್ರಧಾನ ದ್ವಾರ ಎಂದು ಕರೆಯುತ್ತೇವೆ ಇಲ್ಲಿಂದ ಪ್ರವೇಶಿಸುವ ವ್ಯಕ್ತಿ, ಶಕ್ತಿ ನಮ್ಮ ಜೀವನವನ್ನೇ ಬದಲಾಯಿಸಬಹುದು ಇವುಗಳ ನಿರ್ಗಮನಕ್ಕೆ ಹಿಂಬದಿ ದ್ವಾರವು ಅಷ್ಟೇ ಮುಖ್ಯ ಪ್ರಧಾನ ದ್ವಾರಕ್ಕೆ ಮತ್ತು ಹಿಂಬದಿಯ ದ್ವಾರಕ್ಕೆ ಹೊಸ್ತಿಲು ಇರಲೇಬೇಕು ಹಾಗೂ ಮುಂಬದಿ ದ್ವಾರಕ್ಕಿಂತ ಹಿಂಬದಿ ದ್ವಾರ ಒಂದು ಪಟ್ಟು ಚಿಕ್ಕದಾಗಿರಬೇಕು.
ಅದೇ ರೀತಿ ಬಾಗಿಲಿನ ಎಡಬಲಕ್ಕೆ ಕಿಟಕಿಗಳು ಇರಬೇಕು ಅದು ಮನುಷ್ಯನ ಮುಖದಲ್ಲಿ ಎರಡು ಕಣ್ಣುಗಳು ಇದ್ದಂತೆ ಕನಿಷ್ಠ ಒಂದು ಕಿಟಕಿಯಾದರೂ ಇರಲೇಬೇಕು ಬಾಗಿಲನ ಗಾತ್ರ ಕಿಟಕಿಗಳ ಗಾತ್ರಕ್ಕೂ ಹೊಂದಾಣಿಕೆ ಇರಬೇಕು ಬಾಗಿಲು ಮನೆಯ ಒಂದು ಬದಿಗೆ ಉಚ್ಚದಲ್ಲಿರಬೇಕು ಸಾರ್ವಜನಿಕ ಕಟ್ಟಡ, ದೇವಾಲಯ, ಊರಿನ ಮುಖ್ಯಸ್ಥರ ಮನೆ ಇವುಗಳಿಗೆ ಮಧ್ಯಭಾಗದಲ್ಲಿ ಬಾಗಿಲಿಡಬಹುದು ಸಾರ್ವಜನಿಕ ರಸ್ತೆ ಯಾವ ಕಡೆ ಬಂದರು ಆ ಕಡೆಯಲ್ಲಿ ಮನೆಯ ಮುಖ್ಯದ್ವಾರ ಮತ್ತು ನಿವೇಶನದ ಗೇಟ್ ಇಡಬೇಕು ಇಂತಹ ಸಂದರ್ಭದಲ್ಲಿ ದಿಕ್ಕನ್ನು ಪರಿಗಣಿಸಬೇಕಾಗಿಲ್ಲ.
ಮೂಲೆ ದಿಕ್ಕುಗಳು ಸೇರುವ ಜಾಗದಲ್ಲಿ ಯಾವುದೇ ಕಡೆ ಬಾಗಿಲು ಇಡಬಾರದು ಬಾಗಿಲುಗಳು ಮತ್ತು ಕಿಟಕಿಗಳು ಸಮ ಸಂಖ್ಯೆಯಲ್ಲಿ ಇರಬೇಕು ವಾಸ್ತು ಶಾಸ್ತ್ರದಲ್ಲಿ ಪೂರ್ವ ಶ್ರೇಯಸ್ಸು, ಪಶ್ಚಿಮ ಶಾಂತಿ, ಉತ್ತರ ಸಂಪತ್ತು ಹಾಗು ದಕ್ಷಿಣ ಮೋಕ್ಷದ್ವಾರಗಳು ಎಂದು ಕರೆಯಲಾಗುತ್ತದೆ.
ದ್ವಾರಗಳ ಸಂಖ್ಯೆ ಮತ್ತು ಅವುಗಳ ನೀಡುವ ಫಲವನ್ನು ಈ ರೀತಿಯಾಗಿ ಹೇಳಲಾಗುತ್ತದೆ 1 ಬಾಗಿಲು ಶುಭಕರ, 2 ಒಳ್ಳೆಯದು, 3 ಕಲಹ ಹಾಗೂ ಶತ್ರು ವೃದ್ಧಿ, 4 ದೀರ್ಘಾಯುಷ್ಯ, 5 ರೋಗ ಆಗು ಮೃ’ತ್ಯು, 6 ಪುತ್ರ ಪ್ರದ 7 ಮೃ’ತ್ಯುಪ್ರದ, 8 ಚಿರ ಭಾಗ್ಯ, 9 ದೇಹ ಪೀಡೆ, 10 ನಾ’ಶ ಹಾಗೂ ಚೋರ ಭಯ, 11 ಧನನಾಶ, 12 ವ್ಯಾಪಾರ ಅಭಿವೃದ್ಧಿ, 13 ಶೀಘ್ರ ಮರಣ, 14 ಸಂಪತ್ಪರಿತ, 15 ಧನನಾಶ, 16 ಧನ ಲಾಭ, 17 ದಾರಿದ್ರ್ಯ, 18 ಲಕ್ಷ್ಮಿ ಕಾಂತ, 19 ಪೀಡೆ, 20 ಸದಾ ರೋಗ ಎಂದು ಹೇಳಲಾಗುತ್ತದೆ.
ತುಂಬಾ ಜನರು ಮನೆ ನಿರ್ಮಿಸುವಾಗ ಅಥವಾ ಖರೀದಿಸುವಾಗ
ಪೂರ್ವಾಭಿಮುಖ ವಾಗಿರುವ ಮನೆ ಉತ್ತರಾಭಿ ಮುಖವಾಗಿರುವ ಮನೆಯನ್ನು ಖರೀದಿಸುತ್ತಾರೆ ಕೆಲವು ವೇಳೆ ಪಶ್ಚಿಮಾಭಿಮುಖವಾಗಿ ನಿರ್ಮಿಸುತ್ತಾರೆ ಆದರೆ ವಾಸ್ತು ಶಾಸ್ತ್ರದ ಪ್ರಕಾರ ನಿಮ್ಮ ಮನೆಯ ಮುಖ್ಯ ಬಾಗಿಲು ಉತ್ತರಕ್ಕೆ ಮುಖ ಮಾಡಿದರೆ ಅದು ತುಂಬಾ ಮಂಗಳಕರ ಎಂದು ಪರಿಗಣಿಸಲಾಗುತ್ತದೆ.
ಉತ್ತರ ದಿಕ್ಕನ್ನು ಕುಬೇರ ದಿಕ್ಕು ಎಂದು ಪರಿಗಣಿಸಲಾಗುತ್ತದೆ ಹಾಗಾಗಿ ಮುಖ್ಯದ್ವಾರ ಈ ದಿಕ್ಕಿನಲ್ಲಿ ಇರುವುದೇ ಸೂಕ್ತ ಎನ್ನುವ ಅಭಿಪ್ರಾಯ ವಾಸ್ತು ತಜ್ಞರದ್ದು ಈ ದಿಕ್ಕಲ್ಲಿ ಮುಖ್ಯ ದ್ವಾರ ಇದ್ದರೆ ಮನೆಯಲ್ಲಿ ಆಧ್ಯಾತ್ಮಿಕ ವಾತಾವರಣ ನಿರ್ಮಾಣವಾಗುತ್ತದೆ ಏಕೆಂದರೆ ಹೆಚ್ಚಿನ ದೇವರುಗಳು ಈ ದಿಕ್ಕಿಗೆ ಆಧಾರಿತವಾಗಿದೆ ಎಂದು ನಂಬಲಾಗಿದೆ.
ಉತ್ತರ ದಿಕ್ಕಿಗೆ ಮುಖ ಮಾಡಿರುವ ಮನೆಯಾಗಿದ್ದರೆ ಮುಖ್ಯದ್ವಾರ ಯಾವಾಗಲು ಈಶಾನ್ಯ ಭಾಗದಲ್ಲಿ ಇರುವ ಹಾಗೆ ನೋಡಿಕೊಳ್ಳಬೇಕು ಏಕೆಂದರೆ ಪೂರ್ವ ದಿಂದ ಸೂರ್ಯನ ಬಿಸಿಲು ಹರಿತ ಪಶ್ಚಿಮದ ಕಡೆ ಸಾಗುತ್ತದೆ ಜೊತೆಗೆ ಸ್ವಲ್ಪ ಮಧ್ಯ ಭಾಗದಲ್ಲೂ ಬಾಗಿಲು ಮತ್ತು ಈಶಾನ್ಯ ಭಾಗ್ಯದಲ್ಲಿ ಕಿಟಕಿ ಅಳವಡಿಸಬಹುದು.
ಅದೇ ರೀತಿ ಉತ್ತರದ ಬಾಗಿಲು ಅಂದರೆ ನಂದಿಯ ಬಾಗಿಲು ಯಾವುದೇ ಕಾರಣಕ್ಕೂ ಮನೆಯ ನೈರುತ್ಯ ಭಾಗ ತಗ್ಗಿನಲ್ಲಿರ ಬಾರದು ಅಂದರೆ ನೈರುತ್ಯ ಭಾಗ ಬೇರೆ ಎಲ್ಲಾ ಭಾಗಗಳಿಂದ ಎರಡು ಇಂಚಿನಷ್ಟು ಎತ್ತರ ಇರಬೇಕು. ರಾಶಿ ಆಧಾರದಲ್ಲಿ ಕರ್ಕಾಟಕ ವೃಶ್ಚಿಕ ಮೀನ ರಾಶಿಯವರಿಗೆ ಉತ್ತರ ದಿಕ್ಕು, ಮೇಶ, ಸಿಂಹ ಧನಸ್ಸು ರಾಶಿಯವರಿಗೆ ಪೂರ್ವ ದಿಕ್ಕು ವೃಷಭ ಕನ್ಯ ಮಕರ ದವರಿಗೆ ದಕ್ಷಿಣ ದಿಕ್ಕು ಮಿಥುನ ತುಲಾ ಕುಂಭ ರಾಶಿಯವರಿಗೆ ಪಶ್ಚಿಮ ದಿಕ್ಕಿನ ಬಾಗಿಲು ಶುಭ.