ನಮ್ಮ ಹಿರಿಯರು ಹೇಳುವ ಪ್ರಕಾರ ಆಯುರ್ವೇದ ತಿಳಿಸುವ ಹಾಗೆ ಕೆಲವೊಂದು ಆಹಾರ ಪದಾರ್ಥಗಳನ್ನು ಬೆರೆಸಿ ತಿನ್ನುವುದರಿಂದ ಅದು ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ ಮೊಟ್ಟೆ ಮತ್ತು ಪಡವಲಕಾಯಿ:- ಪಡವಲ ಕಾಯಿ ನೀರಿನ ಅಂಶ ಹೆಚ್ಚಾಗಿ ಇರುವುದರಿಂದ ಬೇಗ ಜೀರ್ಣವಾಗುತ್ತದೆ ಹಾಗೆಯೇ ಮೊಟ್ಟೆಯಲ್ಲಿ ಪ್ರೋಟೀನ್ ಹೆಚ್ಚಾಗಿ ಇರುತ್ತದೆ ಇದರಿಂದ ಮೊಟ್ಟೆ ನಿಧಾನವಾಗಿ ಜೀರ್ಣವಾಗುತ್ತದೆ ಆದ್ದರಿಂದ ಜೀರ್ಣಕ್ರಿಯೆ ಸರಿಯಾಗಿ ಆಗುವುದಿಲ್ಲ.
ಪುಂಡೆ ಸೊಪ್ಪು ಮತ್ತು ಬದನೆಕಾಯಿ:- ಆಯುರ್ವೇದ ಔಷಧಿ ಉಪಯೋಗಿಸುವಂತಹವರು ಹಾಗೆಯೇ ಆಪರೇಷನ್ ಆಗಿರುವವರು ಹಾಗೆಯೇ ಕಡಿತ ಸಂಬಂಧಿತ ವ್ಯಾಧಿಗಳು ಇರುವವರು ಪುಂಡೆ ಸೊಪ್ಪು ಮತ್ತು ಬದನೆಕಾಯಿಯನ್ನು ಬೆರೆಸಿ ತಿನ್ನಬಾರದು ಇದರಲ್ಲಿ ಎನರ್ಜಿ ಕರಗಿಸುವಂತಹ ಅಂಶ ಇದ್ದು ಅಲರ್ಜಿ ಇರುವವರು ಇದನ್ನು ತಿಂದ ತಕ್ಷಣ ಸಮಸ್ಯೆಗಳು ಉಂಟಾಗುತ್ತದೆ.
ನಲ್ಲಿಕಾಯಿ:- ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಅಂಶ ಹೆಚ್ಚಾಗಿ ಇರುತ್ತದೆ ಇದನ್ನು ಸ್ವಲ್ಪ ತೆಗೆದುಕೊಂಡರೆ ನಮ್ಮ ದೇಹಕ್ಕೆ ಬೇಕಾಗಿರುವಷ್ಟು ವಿಟಮಿನ್ ಸಿ ದೊರೆಯುತ್ತದೆ ಅಧಿಕ ಮಟ್ಟದಲ್ಲಿ ನಮ್ಮ ದೇಹಕ್ಕೆ ವಿಟಮಿನ್ ಸಿ ಇದ್ದರೆ ಜೀರ್ಣ ಸಂಬಂಧಿ ಸಮಸ್ಯೆಗಳು ಉಂಟಾಗುತ್ತದೆ ಅದರಲ್ಲಿಯೂ ರಾತ್ರಿ ಸಮಯದಲ್ಲಿ ಹುಳಿ ಹೆಚ್ಚಾಗಿ ತೆಗೆದುಕೊಂಡರೆ ಕಫ ಹೆಚ್ಚಾಗುತ್ತದೆ ಆದ್ದರಿಂದ ರಾತ್ರಿ ಸಮಯದಲ್ಲಿ ನೆಲ್ಲಿಕಾಯಿ ಅಥವಾ ಹುಳಿ ಇರುವಂತಹ ಪದಾರ್ಥಗಳನ್ನು ತೆಗೆದುಕೊಳ್ಳಬಾರದು.
ಪಾಲಕ್ ಸೊಪ್ಪು ಮತ್ತು ಟೊಮೆಟೊ:- ಇವೆರಡನ್ನು ಬೆರೆಸಿ ತಿನ್ನುವುದರಿಂದ ಮೂತ್ರಪಿಂಡದಲ್ಲಿ ಕಲ್ಲು ಬರುತ್ತದೆ ಹೆಚ್ಚಾಗಿ ನೀರು ಕುಡಿಯದೆ ಇರುವಂತಹ ಜನರು ಎಂದಿಗೂ ಸಹ ಪಾಲಕ್ ಸೊಪ್ಪು ಮತ್ತು ಟೊಮೇಟೊವನ್ನು ಮಿಕ್ಸ್ ಮಾಡಿ ತಿನ್ನಬಾರದು ನಮ್ಮ ಶರೀರಕ್ಕೆ ನೀರಿನ ಅವಶ್ಯಕತೆ ಹೆಚ್ಚಾಗಿ ಇದ್ದು ದಿನದಲ್ಲಿ 3 ಲೀಟರ್ ಆದರೂ ನೀರನ್ನು ಕುಡಿಯಲೇಬೇಕು.
ಬೆಂಡೆಕಾಯಿ:- ಬೆಂಡೆಕಾಯಿ ನಮ್ಮ ದೇಹಕ್ಕೆ ಬೇಕಾದಂತಹ ಅಧಿಕ ಪೋಷಕಾಂಶಗಳನ್ನು ಒದಗಿಸುವಲ್ಲಿ ಮೊದಲ ಸ್ಥಾನದಲ್ಲಿ ಇದೆ ಬೆಂಡೆಕಾಯಿ ತಿಂದ ನಂತರ ಕೆಲವೊಂದು ತರಕಾರಿಯನ್ನು ತಿನ್ನುವುದರಿಂದ ನಮ್ಮ ದೇಹಕ್ಕೆ ಕೆಲವೊಂದು ಸಮಸ್ಯೆಗಳು ಉಂಟಾಗುತ್ತದೆ ಇದೆರಡು ವಿರುದ್ಧ ಆಹಾರ ಪದಾರ್ಥಗಳು ಆಗಿರುವುದರಿಂದ ಇದರನ್ನು ಬೆರೆಸಿ ತಿನ್ನುವುದರಿಂದ ಜೀರ್ಣ ಸಂಬಂಧಿತ ಸಮಸ್ಯೆಗಳು ಉಂಟಾಗಿ ತೀವ್ರ ಅನಾರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಹಾಗೆಯೇ ಬೆಂಡೆಕಾಯಿಯನ್ನು ತಿಂದ ದಿನದಂದು ನಾವು ಮೂಲಂಗಿಯನ್ನು ಸೇವನೆ ಮಾಡಬಾರದು ಕೆಲವೊಬ್ಬರು ಪಲ್ಯ ಚೆನ್ನಾಗಿ ಇರಬೇಕೆಂದು ಎರಡು ಮೂರು ತರಕಾರಿಗಳನ್ನು ಬೆರೆಸಿ ಮಾಡಿ ತಿನ್ನುತ್ತಾ ಇರುತ್ತಾರೆ ಆದರೆ ಬೆಂಡೆಕಾಯಿ ಮತ್ತು ಮೂಲಂಗಿಯನ್ನು ಸೇರಿಸಿ ಪಲ್ಯ ಮಾಡಿ ಅಥವಾ ಅಡಿಗೆ ಮಾಡಿ ತಿನ್ನುವುದರಿಂದ ಚರ್ಮ ಸಂಬಂಧಿ ಕಾಯಿಲೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.
ಚರ್ಮದ ಮೇಲೆ ಗುಳ್ಳೆಗಳು ಹೆಚ್ಚಾಗುತ್ತದೆ ಹಾಗೆ ಬಿಳಿ ಚಿಬ್ಬು, ತೊನ್ನು ಈ ರೀತಿಯಾದಂತಹ ಸಮಸ್ಯೆಗಳು ಕಾಡುತ್ತದೆ ಆದ್ದರಿಂದ ಯಾವುದೇ ಕಾರಣಕ್ಕೂ ಕೂಡ ಬೆಂಡೆಕಾಯಿ ಮತ್ತು ಮೂಲಂಗಿಯನ್ನು ಸೇವನೆ ಮಾಡಲೇಬಾರದು.ಬೆಂಡೆಕಾಯಿಯನ್ನು ಎಣ್ಣೆಯಲ್ಲಿ ಕರಿದು ಸೇವನೆ ಮಾಡುತ್ತಿರುತ್ತಾರೆ ಇದರಿಂದ ನಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗಿ ಬೊಜ್ಜಿನ ಸಮಸ್ಯೆ ಉಂಟಾಗುತ್ತದೆ.
ನಾವಿಲ್ಲಿ ತಿಳಿಸಿದಂತಹ ಆಹಾರ ಪದಾರ್ಥಗಳನ್ನು ಸೇರಿಸಿ ತಿನ್ನುಬಾರದು ಇದರಿಂದ ಅನಾರೋಗ್ಯ ಹೆಚ್ಚಾಗಿ ಕಂಡು ಬರುತ್ತದೆ ಯಾವಾಗಲೂ ಹಿರಿಯರು ಹೇಳುವ ಮಾರ್ಗದರ್ಶನದಲ್ಲಿ ನಾವು ಆಹಾರ ಪದ್ಧತಿಯನ್ನು ಅನುಸರಿಸಿದ್ದೆ ಆದಲ್ಲಿ ನಮ್ಮ ಆರೋಗ್ಯವು ಅಷ್ಟೇ ಉತ್ತಮವಾಗಿ ಇರುತ್ತದೆ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್ಸ್ ಮೂಲಕ ತಿಳಿಸಿ ಹಾಗೆಯೇ ಲೈಕ್ ಮಾಡಿ ಮತ್ತು ಇತರೆ ಎಲ್ಲರಿಗೂ ಶೇರ್ ಮಾಡಿ.