ಸಾಲ ಪಡೆದು ಅಥವಾ ಸಾಲ ಪಡೆಯದೇ ನಿವೇಶನ ಖರೀದಿಸುವುದು ಸುಲಭ ಎಂಬುದು ನಿಜವಾದರೂ ಕೂಡ ಆ ಜಾಗದಲ್ಲಿ ಮನೆ ನಿರ್ಮಾಣ ಮಾತ್ರ ಸುಲಭದ ಮಾತಲ್ಲ. ಮನೆ ನಿರ್ಮಾಣದ ವೇಳೆ ಆಗುವ ವೆಚ್ಚಕ್ಕೆ ಕಡಿವಾಣ ಹಾಕುವುದೇ ಇಲ್ಲಿನ ದೊಡ್ಡ ಸವಾಲು. ನಿಮ್ಮ ಮನಸ್ಸಿನಲ್ಲಿ ಸುಂದರ ಮನೆಯೊಂದರ ಪರಿಕಲ್ಪನೆ ಇರಬಹುದು. ಆದರೆ, ಅಂತಹ ಮನೆ ನಿರ್ಮಾಣಕ್ಕೆ ವೆಚ್ಚ ಕೂಡ ಜಾಸ್ತಿಯಾಗಿರುತ್ತದೆ.
ಈಗಿನ ಕಾಲದಲ್ಲಿ ಸಿಂಪಲ್ ಆಗಿ ಒಂದು ಮನೆ ಕಟ್ಟುಸ್ಬೇಕು ಅಂದ್ರೂ 5 ಲಕ್ಷಕ್ಕಿಂತ ಹೆಚ್ಚು ಹಣ ಬೇಕಾಗುತ್ತದೆ. ಹೀಗಾಗಿ, ಅನೇಕರು ಸ್ವಂತ ಮನೆಯ ಕನಸು ಕಾಣುವುದನ್ನು ಬಿಡುತ್ತಾರೆ. ಹಾಗೆಯೇ ಕೆಲವೊಬ್ಬರಿಗೆ ಮನೆ ಕಟ್ಟುವ ಕನಸು ಹಾಗೆ ಉಳಿದು ಹೋಗಿದೆ. ಈಗಿರುವ ಮನೆಯಲ್ಲೇ ಹೇಗೋ ಕಾಲ ಕಳೆಯೋಣ ಅಂತಾ ಸುಮ್ಮನಾಗಿಬಿಡ್ತಾರೆ. ಇನ್ನೂ, ಬಾಡಿಗೆ ಮನೆಯಲ್ಲಿ ವಾಸಿಸೋರಿಗಂತೂ ಏನೇ ಆಗ್ಲಿ ಒಂದು ಚಿಕ್ಕ ಸೂರನ್ನು ಕಟ್ಟಲೇಬೇಕು ಅಂತಾ ಪಣ ತೊಟ್ಟಿರ್ತಾರೆ. ಅದ್ರಂತೇ, ಒಂದು ಪುಟ್ಟ ಗೂಡು ಕಟ್ಕೊತಾರೆ.
ಮನೆ ಕಟ್ಟಿಕೊಳ್ಳಲು ಸಾಧ್ಯವಾಗದವರು ಕಡಿಮೆ ಹಣದಲ್ಲಿ ಮನೆಕಟ್ಟಿಕೊಳ್ಳಲು ಇಲ್ಲೊಂದು ಮಾರ್ಗವಿದೆ. ಇದಕ್ಕೆ ಅಂತಾನೇ ಇಲ್ಲೊಂದು ಕಂಪನಿ ಅತಿ ಕಡಿಮೆ ದರದಲ್ಲಿ ವಾಸಿಸಲು ಯೋಗ್ಯವಾದ ಮನೆಯನ್ನು ಕಟ್ಟಿಕೊಂಡುತ್ತಾರೆ. ಹಾಗೆಯೇ ಇಲ್ಲಿ ಎಲ್ಲಾ ತರಹದ ಫೆಸಿಲಿಟೀಸ್ ಇರುತ್ತದೆ. ನೋಡುವುದಕ್ಕೂ ಕೂಡ ಯಾವುದೇ ಕಾಂಪ್ರಮೈಸ್ ಇಲ್ಲದೆ ತುಂಬಾ ಅಟ್ರಾಕ್ಟಿವ್ ಆಗಿ ಕಾಣುವ ವಿನ್ಯಾಸದ ಮನೆ ಕಟ್ಟಿಕೊಡುತ್ತಾರೆ.
ಇದು ಒಂದು ಸಾವಿರ ಫೀಟ್ ಅಲ್ಲಿ ಎರಡು ಮನೆಗಳನ್ನು ಕಟ್ಟಿಕೊಡುತ್ತಿದ್ದಾರೆ. ಒಂದು ಚಿಕ್ಕದಾಗಿ ಮನೆ ನಿರ್ಮಿಸಲು ಸುಮಾರು 5 ಲಕ್ಷ ಆದರೂ ಮಿನಿಮಮ್ ಬಜೆಟ್ ಬೇಕು. ಇದಕ್ಕೆ ಆಕರ್ಷಣೆ ಇಂಡಸ್ಟ್ರಿ ಎನ್ನುವ ಕಂಪನಿಯು ಈ ರೀತಿ ಜನರಿಗೆ ಕಡಿಮೆ ವೆಚ್ಚದಲ್ಲಿ ಅವರ ಇಚ್ಛೆಗೆ ತಕ್ಕಂತೆ ಮನೆಗಳನ್ನು ನಿರ್ಮಾಣ ಮಾಡಿಕೊಡುತ್ತಿದ್ದಾರೆ.
ಒಂದು ಮನೆಯು ಕಟ್ಟಿಸಲು ಕನಿಷ್ಠ ಎರಡು ಲಕ್ಷ ವೆಚ್ಚದಲ್ಲಿ ಆರಂಭವಾಗುವ ಮನೆ ನಿಮ್ಮ ಆಸಕ್ತಿಗೆ ಹಾಗೂ ವಿನ್ಯಾಸಕ್ಕೆ ತಕ್ಕ ಹಾಗೆ ಅನುಕೂಲವನ್ನು ಇದ್ದರೆ ಹೆಚ್ಚು ಹಣ ಕೊಟ್ಟು ಇನ್ನಷ್ಟು ಬೃಹತ್ ವಿಶಾಲವಾಗಿ ಸುಂದರವಾಗಿ ಮಾಡಿಕೊಳ್ಳಬಹುದು. ಈ ಕಂಪನಿಯವರು ಹೇಗೆ ಮನೆಗಳನ್ನು ನಿರ್ಮಾಣ ಮಾಡಿಕೊಡುತ್ತಿದ್ದಾರೆ ಎಂಬುದು ಲೈವ್ ಆಗಿ ನೋಡಬೇಕಾದರೆ ಕರ್ನಾಟಕದಲ್ಲಿ ಪುತ್ತೂರು ಬಳಿ ಅನೇಕ ಮನೆಗಳನ್ನು ನಿರ್ಮಿಸಿದ್ದಾರೆ, ನಿಮಗೆ ಮನೆಗಳನ್ನು ನೋಡಬಹುದು.
ಇವರು ಮನೆ ಕಟ್ಟುವಾಗ ಫ್ಯಾಬ್ರಿಕೇಟೆಡ್ ವಾಲ್ ಗಳಿಂದ ಇಂತಹ ಮನೆಗಳನ್ನು ನಿರ್ಮಿಸುತ್ತಾರೆ. ಆದ್ದರಿಂದ, ಮೂರೇ ದಿನದಲ್ಲಿ ನಿಮಗೆ ನಿಮ್ಮ ಸ್ವಂತ ಮನೆ ಸಿಗುತ್ತದೆ. ಹಾಗೆ ನೀವು ಅಂದುಕೊಳ್ಳಬಹುದು, ಇದರ ಗುಣಮಟ್ಟದಲ್ಲಿ ಯಾವುದೇ ಕಾಂಪ್ರಮೈಸ್ ಇಲ್ಲ. ಸಾಮಾನ್ಯವಾಗಿ ಕನ್ಸ್ಟ್ರಕ್ಷನ್ ಮನೆ ಹೇಗಿರುತ್ತದೆಯೋ ಹಾಗೆ ಇದು ಕೂಡ ಗಟ್ಟಿಯಾಗಿ ಇರುತ್ತದೆ. ನೀವು ಗಾಳಿ ಮಳೆ ಬಂದರೆ ಸಿಡಿಲು ಬಂದರೆ ಭಯಪಡುವ ಅವಶ್ಯಕತೆ ಇಲ್ಲ.
ಈ ಸುದ್ದಿ ತಪ್ಪದೆ ಓದಿ :- ಮನೆ ಕಟ್ಟಲು ಸಾಲ ಪಡೆಯಬೇಕು ಅಂದುಕೊಂಡವರಿಗೆ ಗುಡ್ ನ್ಯೂಸ್.!
ಯಾಕೆಂದರೆ, ಇದು ಯಾವುದೇ ಬಿರುಗಾಳಿ ಹಾಗೂ ಸಿಡಿಲಿಗು ಜಗ್ಗದ ರೀತಿ ಫ್ಯಾಬ್ರಿಕೇಟ್ ವಾಲ್ ಗಳನ್ನು ತಯಾರಿ ಮಾಡಲಾಗಿದೆ. ಇದನ್ನು ನಿಮ್ಮ ಇಷ್ಟದಂತೆ ಅವರು ವಿನ್ಯಾಸಕ್ಕೆ ಜೋಡಿಸುತ್ತಾರೆ ಅಷ್ಟೇ. ನಾಲ್ಕು ಜನ ವಾಸಿಸುವಂತಹ ಮನೆ ಇದಾಗಿದೆ. ಅಂದರೆ, ಪತಿ, ಪತ್ನಿ ಹಾಗೂ ಅವರ ಇಬ್ಬರ ಮಕ್ಕಳು ಇಲ್ಲಿ ನೆಮ್ಮದಿಯಿಂದ ವಾಸಿಸಬಹುದು. ಒಂದು ಅಡುಗೆಮನೆ ಒಂದು ವಿಶಾಲವಾದ ಹಾಲ್ ಮತ್ತು ಬೆಡ್ರೂಮ್ ಅನ್ನು ಹಾಗೂ ಒಂದು ಅಟ್ಯಾಚ್ ಬಾತ್ ರೂಮ್ ಹೊಂದಿರುತ್ತದೆ.
ಮನೆ ಮುಂದೆ ಅಟ್ಟ್ರಾಕ್ಟಿವ್ ಆಗಿ ಕಾಣುವ ಬಾಲ್ಕನಿ ಹಾಹೂ ಹಾಲ್ನಲ್ಲಿ ವಿಶಾಲವಾದ ಕಿಟಕಿಗಳುಳ್ಳ ಮನೆ ಇದಾಗಿದೆ. ನೀವೇನಾದರೂ ಬ್ಯಾಚುಲರ್ ಗಳಿಗೆ ಬಾಡಿಗೆ ಮನೆ ಕೊಡುವ ಯೋಚನೆ ಇದ್ದರೆ ನೀವು ಈ ರೀತಿ ಮನೆಗಳನ್ನು ಕಟ್ಟಿಸಿಕೊಳ್ಳಬಹುದು ಅಥವಾ ನಿಮ್ಮ ತೋಟದಲ್ಲಿ ಅಥವಾ ನಿಮ್ಮ ಜಮೀನಿನಲ್ಲಿ ಈ ರೀತಿ ಮನೆ ನಿರ್ಮಾಣ ಮಾಡಿಕೊಳ್ಳಬಹುದು.
ಯಾರಿಗಾದರೂ ಅತಿ ಕಡಿಮೆ ವೆಚ್ಚದಲ್ಲಿ ಮನೆ ನಿರ್ಮಿಸಿ ಉಡುಗೊರೆ ಕೊಡಬೇಕೆಂಬುದು ಯೋಚನೆಗಳಿದ್ದರೆ ಹಾಗೂ ಕೂಡ ಈ ರೀತಿ ಮನೆ ಕೊಟ್ಟರೆ ಅವರು ಕೂಡ ನೆಮ್ಮದಿಯಿಂದ ಸಂತೋಷದಿಂದ ನಿಮ್ಮನ್ನು ನೆನೆಸಿಕೊಳ್ಳುತ್ತಾರೆ. ಅಷ್ಟು ಅನುಕೂಲತೆಗಳನ್ನು ಹೊಂದಿದ ಮನೆ ಆಗುತ್ತದೆ. ನಿಮಗೆ ಹೆಚ್ಚು ಮಾಹಿತಿ ಬೇಕಾದರೆ ಕೆಳಗೆ ಕೊಟ್ಟಿರುವ ನಂಬರ್ ಗೆ ಕರೆ ಮಾಡಿ ನೀವು ಇದರ ಬಗ್ಗೆ ಅವರೊಂದಿಗೆ ಚರ್ಚಿಸಿ ಮಾಹಿತಿಗಳನ್ನು ಪಡೆದುಕೊಳ್ಳಬಹುದು. ನಿಮಗೆ ಆಸಕ್ತಿ ಇದ್ದರೆ, ನೀವು ಇರುವ ಸ್ಥಳಕ್ಕೆ ಬಂದು ನಿಮಗೂ ಸಹ ಇಂತಹ ಒಳ್ಳೆಯ ಮನೆಗಳನ್ನು ನಿರ್ಮಿಸಿ ಕೊಡುತ್ತಾರೆ. 06364143375, 09341557370, 0934155731.