ನಮಸ್ಕಾರ ಸ್ನೇಹಿತರೆ ಇಂದಿನ ವಿಶೇಷ ಲೇಖನಕ್ಕೆ ತಮಗೆಲ್ಲರಿಗೂ ಸ್ವಾಗತ ಇಲ್ಲೊಬ್ಬ ವ್ಯಕ್ತಿ 12 ಮದುವೆಯಾಗಿ 13ನೇ ಮದುವೆಗೆ ಸಿದ್ಧವಾಗಿದ್ದಾಗ ಸಿಕ್ಕಿ ಬಿದ್ದಿರುವಂತಹ ವಿಶೇಷ ಸಂಗತಿ ಒಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ ಈಗಿನ ಕಾಲ ಹೇಗಾಗಿದೆ ಎಂದರೆ ಹೆಣ್ಣು ಸಿಗುವುದೇ ಕಷ್ಟ ಎನ್ನುವಷ್ಟರ ಮಟ್ಟಿಗೆ ಬಂದು ನಿಂತಿದೆ ಕಾರಣ ಎಲ್ಲ ಹೆಣ್ಣು ಮಕ್ಕಳು ಸಹ ಓದಿಕೊಂಡು ಕೆಲಸದಲ್ಲಿ ಇರುವಂತಹ ಹುಡುಗರನ್ನು ಅರಸುತಿದ್ದಾರೆ ಇತ್ತೀಚಿಗೆ ಹಳ್ಳಿ ಹುಡುಗರ ಕಥೆ ಹೇಳಲಾಗದ ಸ್ಥಿತಿಗೆ ಬಂದು ನಿಂತಿದೆ ರೈತಾಪಿ ವರ್ಗದವರಿಗೆ ಹೆಣ್ಣು ಸಿಗದಂತಹ ಕಾಲ ಬಂದಿದೆ.
ಹೀಗಿರುವಂತಹ ಪರಿಸ್ಥಿತಿಯಲ್ಲಿ ಇಲ್ಲೊಬ್ಬ ಹನ್ನೆರಡು ಮದುವೆಯನ್ನು ಆಗಿ ಆರು ಮಕ್ಕಳು ಆಗಿದ್ದರೂ ಕೂಡ 13ನೇ ಮದುವೆಗೆ ಸಿದ್ಧವಾಗಿ ನಿಂತಿದ್ದ ಈ ವಿಷಯದ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ. ವಿಧವೆಯರು ಹಾಗೂ ಡಿವಾರ್ಸ್ ಪಡೆದ ಮಹಿಳೆಯರೇ ಇವನ ಟಾರ್ಗೆಟ್ ಈತ ಬರೋಬ್ಬರಿ 12 ಮದುವೆಯಾಗಿ ಮೂರನೇ ಮದುವೆಗೆ ಸಿದ್ಧವಾಗಿ ನಿಂತಿದ್ದ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ ಇದೀಗ ಈತನ ಬಗ್ಗೆ ಸಾಕಷ್ಟು ವಿಷಯಗಳು ಹೊರ ಬಂದಿದೆ. ಈತ ಮೂಲತಹ ಬೆಂಗಳೂರಿನವನು 35 ವರ್ಷದ ಮಹೇಶ್ ಎಂಬ ಈ ವಂಚಕ ಈತನನ್ನು ಮೈಸೂರು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಈ ಕುರಿತಾಗಿ ವಿಚಾರಣೆ ನಡೆಸುವಂತಹ ವೇಳೆ ಇವನ ಇನ್ನಷ್ಟು ಮಾಹಿತಿಗಳು ಬಹಿರಂಗಗೊಂಡಿದೆ ಮಹೇಶ್ ಓದಿರುವುದು ಬರಿ 5ನೇ ಕ್ಲಾಸ್ ಆದರೆ ಮಹಿಳೆಯರಿಗೆ ವಂಚಿಸುವಾಗ ನಾನು ಡಾಕ್ಟರ್, ಇಂಜಿನಿಯರ್ ಎಂದು ಹೇಳಿಕೊಂಡಿದ್ದಾನೆ. ಈತ ಆನ್ಲೈನ್ ನಲ್ಲಿ shadi.com ಮೂಲಕ ಮಹಿಳೆಯರ ಸಂಪರ್ಕ ಪಡೆದು ಅವರನ್ನು ಮದುವೆಯಾಗಿ ಮಕ್ಕಳು ಮಾಡಿ ಹಣ ಆಸ್ತಿ ಎಲ್ಲವನ್ನು ದೋಚಿ ನಾಪತ್ತೆಯಾಗುತ್ತಿದ್ದ ಆದರೆ ಈತನನ್ನು ಮದುವೆಯಾದಂತಹ ಮಹಿಳೆಯರು ಮರ್ಯಾದೆ ಹಾಳಾಗುತ್ತದೆ ಎಂಬ ಕಾರಣಕ್ಕೆ ಪೊಲೀಸರಿಗೆ ದೂರು ನೀಡಲು ಹಿಂಜೆರೆಯುತ್ತಿದ್ದರು.
ಈತ ಮಾಡುತ್ತಿದ್ದ ಮತ್ತೊಂದು ಕತರ್ನಾಕ್ ಕೆಲಸ ಏನೆಂದರೆ ಮದುವೆಯಾಗುವ ಸಂದರ್ಭದಲ್ಲಿ ತಂದೆ ತಾಯಿಯರನ್ನು ಅಥವಾ ಬಂದು ಬಳಗದವರನ್ನು ಕರೆದುಕೊಂಡು ಹೋಗಿ ಮನೆಯಲ್ಲಿ ಹೆಣ್ಣು ಕೇಳುವುದು ವಾಡಿಕೆ ನನ್ನ ಸಂಸ್ಕೃತಿ ಇದಕ್ಕಾಗಿ ಈತ ಮಹಿಳೆಯರನ್ನು ಮದುವೆಯಾಗುವಾಗ ತಲಾ 5,000 ರೂಪಾಯಿಗಲನ್ನು ಕೊಟ್ಟು ಬಾಡಿಗೆಗೆ ತಂದೆ ತಾಯಿ ಬಂಧು ಬಳಗವನ್ನು ಕರೆದುಕೊಂಡು ಹೋಗುತ್ತಿದ್ದ ಒಂದೊಂದು ಮದುವೆಗೆ ಒಂದೊಂದು ಬಳಗ ಫಿಕ್ಸ್ ಮಾಡುತ್ತಿದ್ದ ಒಟ್ಟು 12 ಮದುವೆ ಆಗಿದ್ದಾನೆ ಈ ಪೈಕಿ ಆರು ಮಹಿಳೆಯರಿಗೆ ಮಕ್ಕಳನ್ನು ನೀಡಿದ್ದಾನೆ.
ಈತ ಹೀಗೆ ಏಕೆ ಮಾಡುತ್ತಿದ್ದ ಎಂದು ನೋಡುವುದಾದರೆ ಸುಲಭವಾಗಿ ಹಣ ಗಳಿಸಬಹುದು ಎನ್ನುವ ಕಾರಣಕ್ಕಾಗಿ ಮಹಿಳೆಯರನ್ನು ಮದುವೆಯಾಗುವಂತಹ ಚಾಳಿ ಈತ ನಡೆಸುತ್ತಿದ್ದ ಇವನು ವರ್ಷಕ್ಕೆ ಸರಾಸರಿ 20 ಲಕ್ಷ ರೂಪಾಯಿ ಹಣ ಸಂಪಾದಿಸಿದ್ದ ಹೀಗೆ ಸಂಪಾದಿಸಿದಂತಹ ಹಣದಲ್ಲಿ ಶೋಕಿ ಮಾಡಿ ತಿರುಗಾಡುತ್ತಿದ್ದ. ಇಂತಹ ವ್ಯಕ್ತಿಗಳು ನಮ್ಮ ಮಧ್ಯೆ ಇರುವುದು ನಿಜಕ್ಕೂ ಬೇಸರದ ಸಂಗತಿ ಮತ್ತೊಂದು ಹೆಣ್ಣಿನ ಜೀವನವನ್ನು ಹಾಳು ಮಾಡುವಲ್ಲಿ ಈತ ಮುಂದಾಗಿದ್ದ ಮದುವೆಯಾದ ನಂತರ ಅವರಿಗೆ ವಂಚನೆ ಮಾಡಿ ಅವರನ್ನು ಬಿಟ್ಟು ನಡುನೀರಿನಲ್ಲಿ ಕೈ ಬಿಟ್ಟು ಬರುತ್ತಿದ್ದ.
ಈ ರೀತಿಯಾಗಿ ಇವನು ಬರೋಬ್ಬರಿ 12 ಜನ ಮಹಿಳೆಯರನ್ನು ಮದುವೆಯಾಗಿ 13ನೇ ಮದುವೆಗೆ ಸಿಕ್ಕಿ ಬಿದ್ದಂತಹ ಸಂದರ್ಭದಲ್ಲಿ ಈತ ಪೊಲೀಸರಿಗೆ ಅತಿಥಿಯಾಗಿದ್ದಾನೆ. ಈತ ಮಹಿಳೆಯರಿಗೆ ವಂಚಿಸಿದಂತಹ ಸಂದರ್ಭದಲ್ಲಿ ಅವರು ಯಾವುದೇ ಕಾರಣಕ್ಕು ಕುಗ್ಗದೇ ಮತ್ತೊಬ್ಬ ಹೆಣ್ಣು ಮಗಳ ಜೀವನ ನಮ್ಮ ಹಾಳು ಆಬಾರದು ಎನ್ನುವಂತಹ ದೃಷ್ಟಿಯನ್ನು ಇಟ್ಟುಕೊಂಡು ಪೊಲೀಸರಿಗೆ ದೂರನ್ನು ನೀಡಿದರೆ ಈ ವ್ಯಕ್ತಿ ಇಷ್ಟರಮಟ್ಟಿಗೆ ಮಹಿಳೆಯರನ್ನು ಮದುವೆಯಾಗಿ ಅವರಿಗೆ ಮೋಸ ಮಾಡಲು ಸಾಧ್ಯವಾಗುತ್ತಿರಲಿಲ್ಲ.
ಹಣ ಗಳಿಸಬೇಕು ಎಂಬ ಒಂದೇ ಕಾರಣಕ್ಕಾಗಿ ಈ ರೀತಿ ಮದುವೆಯ ನಾಟಕ ಆಡುವುದು ಎಷ್ಟರಮಟ್ಟಿಗೆ ಸರಿ ಇದನ್ನಯ ನಮ್ಮ ಸಮಾಜ ಹೇಗೆ ಒಪ್ಪುತ್ತದೆ. 5ನೇ ತರಗತಿ ಓದಿರುವಂತಹ ಈತ ಇಷ್ಟರ ಮಟ್ಟಿಗೆ ತಲೆ ಉಪಯೋಗಿಸಿರುವುದನ್ನು ನೋಡಿದರೆ ನಿಜಕ್ಕೂ ಆ’ ಶ್ಚ’ ರ್ಯ’ ವಾಗುತ್ತದೆ ಓದಿರುವುದು 5ನೇ ತರಗತಿ ಆದರೆ ಹೇಳಿಕೊಂಡಿರುವುದು ಡಾಕ್ಟರ್ ಇಂಜಿನಿಯರ್ ಹೀಗೆ ಬೇರೆ ಬೇರೆ ಹುದ್ದೆಗಳನ್ನು ಬೇರೆ ಬೇರೆ ಮಹಿಳೆಯರಿಗೆ ಹೇಳಿ ಮದುವೆಯಾಗುತ್ತಿದ್ದ.
ಹೆಣ್ಣು ಮಕ್ಕಳಿಗೆ ಮದುವೆ ಎನ್ನುವಂತಹದು ಬಹಳ ಸೂಕ್ಷ್ಮವಾದಂತಹ ಘಟ್ಟ ಅದನ್ನು ತಂದೆ ತಾಯಿ ಆದವರು ತುಂಬಾ ಮುತುವರ್ಜಿ ವಹಿಸಿ ನಡೆಸಿ ಕೊಡಬೇಕು ಹೀಗಿರುವಾಗ ಆತನ ಬಗ್ಗೆ ಯಾವುದೇ ವಿಚಾರವನ್ನು ತಿಳಿದುಕೊಳ್ಳದೆ ಮದುವೆ ಮಾಡಿಕೊಡುವುದು ಎಷ್ಟರ ಮಟ್ಟಿಗೆ ಸರಿ, ಒಂದು ಹೆಣ್ಣು ಕೂಡ ತಾನು ಮದುವೆಯಾಗುವಂತಹ ಸಂದರ್ಭದಲ್ಲಿ ಆತನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದು ಹಾಗೆಯೇ ತನ್ನ ಮನಸ್ಸಿಗೆ ಒಪ್ಪಿಗೆ ಆದರೆ ಮಾತ್ರ ಮದುವೆಯಲ್ಲಿ ಮುಂದುವರೆಯಬೇಕು. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮಗೆ ಕಮೆಂಟ್ಸ್ ಮೂಲಕ ತಿಳಿಸಿ.