ಪ್ರತಿಯೊಬ್ಬರಿಗೂ ಕೂಡ ಅವರ ಸ್ವಂತ ವಾಹನಗಳ ಮೇಲೆ ವಿಪರೀತವಾದ ವ್ಯಾಮೋಹ ಇರುತ್ತದೆ. ವಾಹನಗಳು ಅವರ ಪ್ರತಿದಿನದ ಸಂಗಾತಿ ಆಗಿರುವ ಕಾರಣ ಪ್ರತಿನಿತ್ಯವೂ ಅದರ ಜೊತೆ ಒಡನಾಟ ಇರುವ ಕಾರಣ ಅವರ ಬದುಕಿನ ಬಹುದೊಡ್ಡ ಭಾಗ ಆಗಿರುವ ಕಾರಣ ಅದಕ್ಕೆ ಹಾನಿ ಆದರೆ ಸಹಿಸುವುದಿಲ್ಲ. ಈ ಕಾರಣಕ್ಕಾಗಿಯೇ ಮತ್ತೊಬ್ಬರು ವಾಹನ ಕೇಳಿದಾಗ ಕೊಡುವುದಕ್ಕೆ ಹಿಂದೆ ಮುಂದೆ ನೋಡುತ್ತಾರೆ.
ಆದರೆ ತೀರಾ ಹತ್ತಿರದವರು, ಕುಟುಂಬದವರ, ಸ್ನೇಹಿತರು ಕೇಳಿದಾಗ ಕೊಡದೇ ಬೇರೆ ದಾರಿ ಇರುವುದಿಲ್ಲ. ನೀವೇನಾದರೂ ಇದೇ ರೀತಿ ನಿಮ್ಮ ವಾಹನಗಳನ್ನು ಯಾರಾದರೂ ಕೇಳಿದಾಗ ಇಷ್ಟ ಇದ್ದೋ, ಇಲ್ಲದೋ ಅವರಿಗೆ ಕೊಡುತ್ತಿದ್ದೀರಾ ಎಂದರೆ ಕೊಡುವ ಮುನ್ನ ಒಂದು ವಿಚಾರದ ಬಗ್ಗೆ ಗಮನ ಇಟ್ಟಿರಿ. ಸುಪ್ರೀಂ ಕೋರ್ಟ್ ಇತ್ತೀಚೆಗೆ ಕೇಸ್ ಒಂದರಲ್ಲಿ ಹೊಸ ರೂಲ್ಸ್ ಜಾರಿ ಮಾಡಿದೆ. ಅದೇನೆಂದರೆ ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಯಾರಾದರೂ ವಾಹನ ತೆಗೆದುಕೊಂಡು ಬಂದು ಮತ್ತೊಬ್ಬರಿಗೆ ಅ’ಪ’ಘಾ’ತ ಮಾಡಿದರೆ.
ಅಂತಹ ಸಂದರ್ಭಗಳಲ್ಲಿ ಅವನ ಬಳಿ ಡ್ರೈವಿಂಗ್ ಲೈಸೆನ್ಸ್ ಇಲ್ಲದಿದ್ದರೂ ಕೂಡ ಗಾಡಿ ಕೊಟ್ಟ ತಪ್ಪಿಗೆ ಆ ವಾಹನದ ಮಾಲೀಕನಿಗೂ ಕೂಡ ದಂಡ ಬೀಳುತ್ತದೆ, ಈ ಒಂದು ಎಚ್ಚರಿಕೆಯ ಚಾಟಿಯನ್ನು ಸುಪ್ರೀಂಕೋರ್ಟ್ ಬೀಸಿದೆ. ಹಾಗಾಗಿ ನೀವೇನಾದರೂ ಬೇರೆಯವರಿಗೆ ಗಾಡಿ ಕೊಡುತ್ತಿದ್ದೀರಾ ಎಂದರೆ ಮೊದಲಿಗೆ ಅವರಿಗೆ ಡ್ರೈವಿಂಗ್ ಬರುತ್ತದೆಯೇ ಮತ್ತು ಅವರು ಡ್ರೈವಿಂಗ್ ಲೈಸೆನ್ಸ್ ಪಡೆದಿದ್ದಾರೆಯೇ ಎನ್ನುವುದನ್ನು ಕನ್ಫರ್ಮ್ ಮಾಡಿಕೊಂಡು ನಂತರ ನಿಮ್ಮ ವಾಹನ ಕೊಡಿ. ಇಲ್ಲವಾದಲ್ಲಿ ಮಾಡದ ತಪ್ಪಿಗೆ ನೀವು ಶಿಕ್ಷೆ ಪಡಬೇಕಾಗುತ್ತದೆ.
ಮನೆಗಳಲ್ಲಿ ಚಿಕ್ಕ ಮಕ್ಕಳಿದ್ದರೂ ಕೂಡ ಹೇಳದೆ ಕೇಳದೆ ಪೋಷಕರ ವಾಹನ ತೆಗೆದುಕೊಂಡು ರಸ್ತೆಗೆ ಇಳಿಯುತ್ತಾರೆ ಅಥವಾ ವಾಹನ ಕಲಿಯುವ ನೆಪ ಹೇಳಿ ರಸ್ತೆಗೆ ಗಾಡಿಗಳನ್ನು ತೆಗೆದುಕೊಂಡು ಹೋಗುತ್ತಾರೆ. ಆ ಸಂದರ್ಭದಲ್ಲಿ ಕೂಡ ಮಕ್ಕಳು ಅ’ಪ’ಘಾ’ತ ಮಾಡಿ ಇನ್ನೊಬ್ಬರಿಗೆ ಹಾನಿ ಮಾಡಿದರೆ ಆ ಮಕ್ಕಳು ಯಾರ ವಾಹನದಿಂದ ಅ’ಪ’ಘಾ’ತ ಮಾಡಿದ್ದರು ಆ ವಾಹನದ ಮಾಲೀಕನಿಗೆ ಶಿಕ್ಷೆ ಆಗುತ್ತದೆ.
ಆದ್ದರಿಂದ ಇನ್ನು ಮುಂದೆ ಈ ವಿಚಾರಗಳ ಬಗ್ಗೆ ಗಂಭೀರವಾಗಿ ಚಿಂತಿಸಿ.ಈ ಘಟನೆಯಲ್ಲಿ ಸಂತ್ರಸ್ತರಾಗಿರುವ ಪಾರ್ಟಿಗೆ ಎದುರಾಳಿ ಪಾರ್ಟಿ ಕೂಡಲೇ ವಿಮೆಯನ್ನು ಕ್ಲೇಮ್ ಮಾಡುವ ಮೂಲಕ ಸಂತ್ರಸ್ತರಿಗೆ ಹಣವನ್ನು ಆದಷ್ಟು ಬೇಗ ನೀಡುವ ನಿಯಮವನ್ನು ಸುಪ್ರೀಂ ಕೋರ್ಟ್ ಜಾರಿಗೆ ತಂದಿದೆ. ಇದರಲ್ಲಿ ವಿಶೇಷವಾಗಿ ಈ ರೀತಿ ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಗಾಡಿಯನ್ನು ಓಡಿಸುತ್ತಿರುವ ಪಾರ್ಟಿಯ ವಾಹನದ ಮಾಲೀಕನೇ ಇಂತಹ ಪ್ರಕರಣಗಳಲ್ಲಿ ಹೆಚ್ಚಾಗಿ ತಪ್ಪಿತಸ್ಥರಾಗಿ ಕಾಣಿಸಿಕೊಳ್ಳುತ್ತಾರೆ.
ಕೇವಲ ಈ ಸಂದರ್ಭದಲ್ಲಿ ಇದನ್ನು ಮಾತ್ರ ಲೆಕ್ಕಿಸದೆ ಒಂದು ವೇಳೆ ಎದುರಾಳಿ ಪಾರ್ಟಿ ಮರಣ ಹೊಂದಿದರೆ ಆ ಸಂದರ್ಭದಲ್ಲಿ ಆತ ಪಡೆಯುತ್ತಿದ್ದ ಸಂಭಾವನೆ ಹಾಗೂ ಪಡೆಯಬಹುದಾದ ಆದಾಯ ಸೇರಿದಂತೆ ಅವರ ಕುಟುಂಬ ನಿರ್ವಹಣೆಯ ಖರ್ಚು ಸೇರಿದಂತೆ ಎಲ್ಲವನ್ನು ಕೂಡ ಲೆಕ್ಕಾಚಾರ ಹಾಕಿ ತಪ್ಪಿತಸ್ಥರನ್ನು ಈ ಹಣದ ಮೊತ್ತವನ್ನು ನೀಡುವಂತೆ ನ್ಯಾಯಾಲಯ ಆದೇಶ ನೀಡುತ್ತದೆ.
ಹಾಗಾಗಿ ಇಂತಹ ದೊಡ್ಡ ಮಟ್ಟದ ದಂಡವನ್ನು ಮಾಡದ ತಪ್ಪಿನಿಂದ ಕಟ್ಟಬಾರದು ಎಂದರೆ ನೀವು ಯಾವುದೇ ಕಾರಣಕ್ಕೂ ಕೂಡ ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಇರುವಂತವರಿಗೆ ನಿಮ್ಮ ವಾಹನವನ್ನು ಡ್ರೈವ್ ಮಾಡಲು ಕೊಡಬೇಡಿ. ಈ ಹೊಸ ರೂಲ್ಸ್ ಬಗ್ಗೆ ತಪ್ಪದೆ ನಿಮ್ಮ ಸ್ನೇಹಿತರು ಹಾಗೂ ಕುಟುಂಬದವರಿಗೂ ಕೂಡ ಮಾಹಿತಿ ತಿಳಿಸಿ.