ಇಂದಿನ ವಿಶೇಷ ಲೇಖನಕ್ಕೆ ತಮಗೆಲ್ಲರಿಗೂ ಸ್ವಾಗತ ಇಂದು ನಾವು ಸರ್ಕಾರದ ಒಂದು ವಿಶೇಷ ಯೋಜನೆಯ ಬಗ್ಗೆ ತಿಳಿಸಲು ಹೊರಟಿದ್ದೇವೆ . ಈ ಯೋಜನೆ ವಿಶೇಷವಾಗಿ 2022 23ನೇ ಸಾಲಿನಲ್ಲಿ ಯಾರು ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೋ ಅಂತಹ ಜೋಡಿಗಳಿಗೆ ಕೇಂದ್ರ ಸರ್ಕಾರದಿಂದ 250000 ಲಕ್ಷ ಉಚಿತ ಸಹಾಯಧನವನ್ನು ನೀಡಲು ಸರ್ಕಾರ ಮುಂದಾಗಿದೆ. ಸರ್ಕಾರವು ಎರಡುವರೆ ಲಕ್ಷ ಹಣವನ್ನು ಯಾವ ಕಾರಣಕ್ಕಾಗಿ ನವಜೋಡಿಗಳಿಗೆ ನೀಡಲಾಗುತ್ತಿದೆ.
ಹಾಗೆಯೇ ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು ಯಾವೆಲ್ಲ ದಾಖಲಾತಿಗಳು ಬೇಕು ಇನ್ನಿತರ ಸಂಪೂರ್ಣ ಮಾಹಿತಿಯನ್ನು ನಾವು ಈ ಮಾಹಿತಿ ಲೇಖನದಲ್ಲಿ ತಿಳಿಸುತ್ತಿದ್ದೇವೆ. ಪ್ರತಿ ವರ್ಷವೂ ಸಹ ದೀಪಾವಳಿಯ ನಂತರ ಮದುವೆಯ ಕಾರ್ಯಕ್ರಮಗಳು ಪ್ರಾರಂಭವಾಗುತ್ತದೆ ಪ್ರತಿವರ್ಷವೂ ಸಹ ಅನೇಕ ವಧು ವರರಿಗೆ ವಿವಾಹವಾಗಿ ನವ ಜೀವನಕ್ಕೆ ಕಾಲಿಡುತ್ತಾರೆ ಹಾಗಾದರೆ ಯಾವ ವಧು ವರರು ಈ ಒಂದು ಸರ್ಕಾರದ ಯೋಜನೆಯನ್ನು ಲಾಭವನ್ನು ಪಡೆದುಕೊಳ್ಳಬಹುದು ಆಗೆಯೇ ಸರ್ಕಾರದ ಉದ್ದೇಶ ಏನು ಎಂಬುದನ್ನು ನೋಡುವುದಾದರೆ.
ಯಾವೆಲ್ಲ ಹೊಸ ಜೋಡಿಗಳು ಸರ್ಕಾರದ ಈ ಯೋಜನೆಯ ಲಾಭ ಪಡೆದುಕೊಳ್ಳಬಹುದು ಎಂದು ನೋಡುವುದಾದರೆ.
* ದಲಿತ ಹುಡುಗಿಯನ್ನು ಮದುವೆಯಾಗಿರಬೇಕು ಅಂದರೆ ಮದುವೆ ಆಗುವ ಹುಡುಗ ದಲಿತ ಜಾತಿಗೆ ಸೇರಿಲ್ಲ ಅಂದರೂ ಪರವಾಗಿಲ್ಲ ನವ ವಿವಾಹಿತರು ಹಿಂದೂ ವಿವಾಹ ಕಾಯ್ದೆ 1956ರ ಅಡಿಯಲ್ಲಿ ನೋಂದಾಯಿಸಿರಬೇಕು ಇದು ದಂಪತಿಗಳ ಮೊದಲ ಮದುವೆ ಆಗಿರಬೇಕು.
* ಎರಡನೇ ಮದುವೆಯಾದರೆ ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಸಾಧ್ಯವಿಲ್ಲ.
* ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುವ ಮೊದಲು ನೀವು ಯಾವುದೇ ರಾಜ್ಯ ಅಥವಾ ಕೇಂದ್ರ ಸರ್ಕಾರದ ಪ್ರಯೋಜನ ಪಡೆದುಕೊಂಡಿದ್ದೀರಾ ಎನ್ನುವುದನ್ನು ನಮೂದಿಸಬೇಕು.
* ನೀವು ಬೇರೆ ಯಾವುದೇ ಪ್ರಯೋಜನಗಳನ್ನು ಪಡೆದುಕೊಂಡಿದ್ದರೆ ಈ ಯೋಜನೆಯ ಮೊತ್ತ ಕಡಿಮೆಯಾಗುತ್ತದೆ.
ಈ ಯೋಜನೆಯಿಂದ ನೀವು ನವ ವಿವಾಹಿತರು ಹೇಗೆ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ನೋಡುವುದಾದರೆ ದಂಪತಿಗಳು ಇರುವ ಪ್ರದೇಶದ ಪ್ರಸ್ತುತ ಶಾಸಕ ಸಂಸದ ಸಂಪರ್ಕಿಸಬೇಕಾಗಿದೆ ಈ ಯೋಜನೆಗೆ ರಾಜ್ಯ ಸರ್ಕಾರ ಅಥವಾ ಜಿಲ್ಲಾ ಆಡಳಿತ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದು ನಿಯಮಗಳ ಪ್ರಕಾರ ದಂಪತಿಗಳು ಅರ್ಜಿ ಬರ್ತಿ ಮಾಡಿ ಕಚೇರಿಗೆ ನೀಡಬೇಕು ಅಲ್ಲಿಯಿಂದ ಕಳುಹಿಸಿದ ಅರ್ಜಿಯನ್ನು ಡಾಕ್ಟರ್ ಅಂಬೇಡ್ಕರ್ ಫೌಂಡೇಶನ್ ಗೆ ಕಳುಹಿಸಲಾಗುತ್ತದೆ.
ಈ ಮುಖಾಂತರವಾಗಿ ನಿಮಗೆ ಈ ಯೋಜನೆಯಿಂದ ಎರಡೂವರೆ ಲಕ್ಷ ರೂಪಾಯಿ ಹಣವನ್ನು ನೀಡಲಾಗುತ್ತದೆ. ಅಲ್ಲಿ ಕೇಳುವಂತಹ ಅಗತ್ಯ ದಾಖಲಾತಿಗಳೊಂದಿಗೆ ನೀವು ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸಿದರೆ ನಿಮಗೆ ಎರಡುವರೆ ಲಕ್ಷ ರೂಪಾಯಿ ಸಹಾಯಧನ ಉಚಿತವಾಗಿ ನೀಡಲಾಗುತ್ತದೆ ದಲಿತರನ್ನು ಮೇಲೆ ತರುವಂತಹ ದೃಷ್ಟಿಯಿಂದ ಈ ಒಂದು ಯೋಜನೆಯನ್ನು ಜಾರಿಗೆ ತಂದಿದ್ದು ಯಾರಾದರೂ ಸರಿ ದಲಿತರ ಹೆಣ್ಣುಮಕ್ಕಳನ್ನು ಮದುವೆಯಾದರೆ ಅವರಿಗೆ ಸರ್ಕಾರದಿಂದ ಉಚಿತ ಸಹಾಯಧನ ದೊರೆಯಲಿದೆ.
ಇದರಿಂದ ನವ ವಿವಾಹಿತರು ಜೀವನವನ್ನು ಕಟ್ಟಿಕೊಳ್ಳಲು ಸುಲಭವಾಗುತ್ತದೆ ಇದರಿಂದ ಅವರ ಜೀವನ ಸುಲಲಿತವಾಗಿ ಸಾಗಲು ಸ್ವಲ್ಪ ಮಟ್ಟದಲ್ಲಿ ಸಹಾಯ ಮಾಡಿದಂತೆ ಆಗುತ್ತದೆ ಎನ್ನುವ ದೃಷ್ಟಿಯಿಂದ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ ಕೇಂದ್ರ ಸರ್ಕಾರವು ನವ ವಿವಾಹಿತರಿಗೆ 250000 ಲಕ್ಷ ಸಹಾಯಧನ ನೀಡುತ್ತಿರುವುದರ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ನಮಗೆ ಕಮೆಂಟ್ಸ್ ಮೂಲಕ ತಿಳಿಸಿ ಹಾಗೆ ಈ ಮಾಹಿತಿ ಇಷ್ಟ ಆದ್ರೆ ತಪ್ಪದೆ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ.