ನಮಸ್ಕಾರ ಸ್ನೇಹಿತರೆ ಇಂದಿನ ವಿಶೇಷ ಲೇಖನಕ್ಕೆ ತಮಗೆಲ್ಲರಿಗೂ ಸ್ವಾಗತ ರಾಷ್ಟ್ರೀಯ ಆಹಾರ ಮತ್ತು ಸುರಕ್ಷಣಾ ಮಿಷನ್ ಯೋಜನೆಯ ಅಡಿ ಬಿತ್ತನೆ ಬೀಜಗಳ ಕಿಟ್ ಅನ್ನು ಉಚಿತವಾಗಿ ಕೃಷಿ ಇಲಾಖೆಯ ವತಿಯಿಂದ ರೈತರಿಗೆ ನೀಡಲಾಗುತ್ತಿದೆ ಆಸಕ್ತಿ ಇರುವಂತಹ ರೈತರು ಕೂಡಲೇ ಅರ್ಜಿ ಸಲ್ಲಿಸಿ ಉಚಿತ ಬಿತ್ತನೆ ಬೀಜದ ಕಿಟ್ಟನ್ನು ಪಡೆದುಕೊಳ್ಳಬಹುದು. ಇದೀಗ ಮುಂಗಾರು ಮಳೆ ಪ್ರಾರಂಭವಾಗಿದ್ದು ಕೃಷಿಕರು ಕೃಷಿ ಚಟುವಟಿಕೆಯಲ್ಲಿ ತೊಡಗಿ ಕೊಳ್ಳುತ್ತಿದ್ದಾರೆ ಅದರಲ್ಲಿಯೂ ಮಳೆ ಆಶ್ರಿತ ಪ್ರದೇಶಗಳಿಗೆ ರೈತರು ಬಿತ್ತನೆ ಬೀಜ ಹಾಗೆ ಗೊಬ್ಬರವನ್ನು ಖರೀದಿ ಮಾಡಲು ಈಗಾಗಲೇ ಪ್ರಾರಂಭ ಮಾಡಿದ್ದಾರೆ.
ರೈತ ಸಂಪರ್ಕ ಕೇಂದ್ರಗಳಲ್ಲಿ ಗುಣಮಟ್ಟದ ಬೀಜ ಹಾಗೂ ಗೊಬ್ಬರಕ್ಕಾಗಿ ಸಾಲುಗಟ್ಟಿ ರೈತರು ನಿಂತಿದ್ದಾರೆ ರಾಜ್ಯದಲ್ಲಿ ತಡವಾಗಿ ನಿಧಾನಕ್ಕೆ ಮುಂಗಾರು ಮಳೆ ಬಿರುಸಿಕೊಳ್ಳುತ್ತಿದೆ ಈಗಾಗಲೇ ರಾಜ್ಯದ ಅನೇಕ ಭಾಗಗಳಲ್ಲಿ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಕೃಷಿ ಇಲಾಖೆಯ ವತಿಯಿಂದ ಉಚಿತವಾಗಿಯೇ ಬಿತ್ತನೆ ಬೀಜದ ಕಿಟ್ ವಿತರಣೆ ಮಾಡಲಾಗುತ್ತಿದೆ ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಆಹಾರ ಮತ್ತು ಸುರಕ್ಷಣಾ ಮಿಷನ್ ಯೋಜನೆಯ ಅಡಿ ಬಿತ್ತನೆ ಬೀಜವನ್ನು ಉಚಿತವಾಗಿ ನೀಡಲು ಕೃಷಿ ಇಲಾಖೆ ಮುಂದಾಗಿದೆ.
ಉಚಿತ ಬಿತ್ತನೆ ಬೀಜವನ್ನು ಪಡೆಯಲು ರೈತರು ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ 2023 24ನೇ ಸಾಲಿನ ರಾಷ್ಟ್ರೀಯ ಆಹಾರ ಮತ್ತು ಸುರಕ್ಷಣಾ ಮಿಷನ್ ಯೋಜನೆಯ ಅಡಿಯಲ್ಲಿ ಚಿತ್ರದುರ್ಗ ಜಿಲ್ಲೆ, ಮೊಳಕಾಲ್ಮೂರು ತಾಲೂಕಿನ ರೈತರಿಗೆ ಶೇಂಗಾ, ನವಣೆ, ರಾಗಿ, ಸಜ್ಜೆ ಬೆಳೆಗಳಿಗೆ ಸಂಬಂಧಪಟ್ಟಂತೆ ಕಿಟ್ ಅನ್ನು ನೀಡಲು ಮುಂದಾಗಿದೆ ಹೀಗಾಗಿ ಸದರಿ ತಾಲೂಕು ವ್ಯಾಪ್ತಿಯ ರೈತರಿಂದ ಕೃಷಿ ಇಲಾಖೆ ಅರ್ಜಿ ಕರೆಯಲಾಗಿದೆ.
ಆಸಕ್ತಿ ಇರುವವರು ಜೂನ್ 26 ರಿಂದ ಜುಲೈ 4ರ ತನಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಒಟ್ಟು 1520 ರೈತರಿಗೆ ಕಿಟ್ ನೀಡಲು ಅವಕಾಶವಿದ್ದು ಇದಕ್ಕೂ ಹೆಚ್ಚಿನ ಅರ್ಜಿ ಬಂದಲ್ಲಿ ಜುಲೈ 6 ರಂದು ಹೋಬಳಿವಾರು ರೈತ ಸಂಪರ್ಕ ಕೇಂದ್ರಗಳಲ್ಲಿ ಲಾಟರಿ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ಈಗಾಗಲೇ ತಿಳಿಸಿದ್ದಾರೆ. ಈ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಿಮಗೆ ಸಂಬಂಧ ಪಟ್ಟಂತಹ ರೈತ ಸಂಪರ್ಕ ಕೇಂದ್ರದಲ್ಲಿ ನೀವು ತಿಳಿದುಕೊಳ್ಳಬಹುದು ಎಂದು ಮೊಳಕಾಲ್ಮುರು ತಾಲೂಕು ಸಹಾಯಕ ಕೃಷಿ ನಿರ್ದೇಶಕ ವಿ ಸಿ ಉಮೇಶ್ ಅವರು ತಿಳಿಸಿದ್ದಾರೆ.
ಗುಣಮಟ್ಟದ ಬಿತ್ತನೆ ಬೀಜ ಹಾಗೆಯೇ ಗೊಬ್ಬರವನ್ನು ಹಾಕಿದಾಗಲೇ ಇಳುವರಿ ಚೆನ್ನಾಗಿ ಬರುತ್ತದೆ ಹಾಗೆಯೇ ರೈತರಿಗೆ ಯಾವುದೇ ರೀತಿಯಾದಂತಹ ನಷ್ಟ ಉಂಟಾಗುವುದಿಲ್ಲ ಇದರ ಕಾರಣದಿಂದಾಗಿ ಇದೀಗ ಚಿತ್ರದುರ್ಗ ಜಿಲ್ಲೆಯಲ್ಲಿ ಉಚಿತ ಬಿತ್ತನೆ ಬೀಜವನ್ನು ನೀಡಲು ಮುಂದಾಗಿದ್ದಾರೆ ಕೃಷಿ ಇಲಾಖೆಯ ವತಿಯಿಂದ ಈ ಕಾರ್ಯಕ್ರಮವು ಜರುಗಿದ್ದು ಆಸಕ್ತಿ ಇರುವಂತಹ ಅವರು ಅರ್ಜಿಯನ್ನು ಸಲ್ಲಿಸಿ ಉಚಿತ ಬಿತ್ತನೆ ಬಿದಕಿಟ್ಟನ್ನು ಪಡೆದುಕೊಳ್ಳಬಹುದು.
ರೈತರಿಗೆ ಸಹಾಯವಾಗಬೇಕು ಎನ್ನುವಂತಹ ದೃಷ್ಟಿಯಿಂದ ಈ ಒಂದು ಉಚಿತ ಬಿತ್ತನೆ ಬೀಜದ ಕಿಟ್ ಅನ್ನು ವಿತರಣೆ ಮಾಡಲಾಗುತ್ತಿದೆ ಈಗಾಗಲೇ ಮಳೆಯು ಪ್ರಾರಂಭವಾಗಿದ್ದು ಬಿತ್ತನೆ ಬೀಜದ ಸಮಯ ಬಂದಿದೆ ಈ ಕಾರಣದಿಂದಾಗಿ ನೀವು ಬಿತ್ತನೆ ಬೀಜ ಪಡೆದುಕೊಂಡು ಬಿತ್ತನೆ ಮಾಡಿ ಒಳ್ಳೆಯ ಇಳುವರಿಯನ್ನು ಪಡೆದುಕೊಳ್ಳಬಹುದು. ಈ ರೀತಿಯಾದಂತಹ ಸಾಕಷ್ಟು ಯೋಜನೆಗಳ ಬಗ್ಗೆ ರೈತರಿಗೆ ತಿಳಿದಿರುವುದಿಲ್ಲ ರೈತರು ದೇಶದ ಬೆನ್ನೆಲುಬು ಅವರು ಉತ್ತು ಬಿತ್ತು ಮಾಡಿದರೆ ಇತರರು ಚೆನ್ನಾಗಿರಲು ಸಾಧ್ಯ ಆದ್ದರಿಂದ ಈ ರೀತಿಯಾದಂತಹ ವಿಷಯಗಳನ್ನು ರೈತರಿಗೆ ತಲುಪುವ ತನಕ ಶೇರ್ ಮಾಡಿ ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆಯನ್ನು ನಮಗೆ ಕಮೆಂಟ್ಸ್ ಮೂಲಕ ತಿಳಿಸಿ.