ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ದೇವರಿಗೆ ಮತ್ತು ದೇವರ ಕೋಣೆಗೆ ವಿಶೇಷವಾದಂತಹ ಸ್ಥಾನವನ್ನು ನಾವು ನೀಡುತ್ತೇವೆ ಅದೇ ರೀತಿಯಲ್ಲಿ ನಾವು ನಮ್ಮ ದೇವರ ಕೋಣೆಯನ್ನು ಯಾವ ರೀತಿಯಲ್ಲಿ ಸ್ವಚ್ಛಗೊಳಿಸಬೇಕು ಯಾವ ವಸ್ತುಗಳನ್ನು ದೇವರ ಕೋಣೆಯಲ್ಲಿ ಇಡಬಾರದು ಎನ್ನುವಂತಹ ಮಾಹಿತಿ ತಿಳಿದಿರುವುದಿಲ್ಲ. ನಮಗೆ ಗೊತ್ತಿದ್ದು ಗೊತ್ತಿಲ್ಲದೆಯೋ ನಮ್ಮ ದೇವರ ಕೋಣೆಯಲ್ಲಿ ಇಡುವಂತಹ ಕೆಲವೊಂದು ವಸ್ತುಗಳು ನಮ್ಮ ಜೀವನದ ಮೇಲೆ ಪರಿಣಾಮವನ್ನು ಬೀರುತ್ತದೆ ಇದು ಕೆಲವೊಮ್ಮೆ ಶುಭ ಪರಿಣಾಮವನ್ನು ಬೀರಿದರೆ ಇನ್ನೂ ಕೆಲವೊಮ್ಮೆ ಅಶುಭ ಪರಿಣಾಮವನ್ನು ಬೀರುತ್ತದೆ.
ಎಂತಹ ವಸ್ತುಗಳನ್ನು ನಮ್ಮ ದೇವರ ಕೊನೆಯಲ್ಲಿ ಇಡಬೇಕು ಹಾಗೆಯೇ ಯಾವ ವಸ್ತುಗಳನ್ನು ದೇವರ ಕೋಣೆಯಲ್ಲಿ ಇಡಬಾರದು ಎನ್ನುವಂತಹ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿದ್ದೇವೆ. ಪುರಾಣಗಳ ಮತ್ತು ಶಾಸ್ತ್ರಗಳ ಪ್ರಕಾರ ಮನೆಯಲ್ಲಿ ಪೂಜಾ ಸ್ಥಳವು ಅತ್ಯಂತ ಪವಿತ್ರವಾದ ಸ್ಥಳವಾಗಿದೆ ಈ ಸ್ಥಳದಿಂದ ಪಡೆದ ಶಕ್ತಿಯಿಂದಾಗಿ ಮನೆ ಕಾರ್ಯನಿರ್ವಹಿಸುತ್ತದೆ ನಮ್ಮ ದೇವರ ಕೋಣೆ ಇಂದಾಗಿಯೇ ನಮ್ಮ ಮನೆಯಲ್ಲಿ ಸಕಾರಾತ್ಮಕ ಶಕ್ತಿಯು ತುಂಬಿಕೊಂಡಿರುತ್ತದೆ.
ನಾವು ಕಾಳಜಿ ವಹಿಸದೆ ಕೆಲವೊಂದು ವಸ್ತುಗಳನ್ನು ದೇವರ ಕೋಣೆಯಲ್ಲಿಯೇ ಬಿಟ್ಟಿರುತ್ತೇವೆ ಅದು ನಮ್ಮ ಮೇಲೆ ಋಣಾತ್ಮಕ ಶಕ್ತಿಯನ್ನು ಸೃಷ್ಟಿ ಮಾಡಿ ಮನೆಯ ಸದಸ್ಯರ ಮೇಲೆ ಪರಿಣಾಮವನ್ನು ಉಂಟುಮಾಡುತ್ತದೆ. ಇದರ ಪರಿಣಾಮವಾಗಿ ಮನೆಯಲ್ಲಿ ಅಶಾಂತಿ ಅಶುಭ ಮತ್ತು ಕುಟುಂಬದ ಸದಸ್ಯರ ಮಧ್ಯೆ ಪ್ರೀತಿ ಕಡಿಮೆಯಾಗಲು ಆರಂಭಿಸುತ್ತದೆ ಆದ್ದರಿಂದ ನಿಯಮಗಳ ಪ್ರಕಾರ ದೇವರ ಕೋಣೆಯಲ್ಲಿ ಕೊಳಕು ಸಂಗ್ರಹವಾಗಬಾರದು ಅಂದರೆ ಅಗರಬತ್ತಿಯಿಂದ ಉಂಟಾದಂತಹ ಕೊಳಕು ಹಾಳೆಗಳಿಂದ ಹಾಗೂ ಬಳಸಿದಂತಹ ಹೂವುಗಳು, ಪೂಜೆಗೆ ಬಳಸಿದ ಹಾರಗಳು ಪೂಜೆಗೆ ಸಂಬಂಧಿಸಿದ ಯಾವುದೇ ಒಂದು ಖಾಲಿಯಾದಂತಹ ವಸ್ತುವನ್ನು ನಾವು ದೇವರ ಕೊನೆಯಲ್ಲಿ ಇರಿಸಬಾರದು.
ಈ ವಸ್ತುಗಳು ನಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಉಂಟುಮಾಡುತ್ತದೆ ಬಡತನವನ್ನು ಆಹ್ವಾನಿಸುತ್ತದೆ ಇಂತಹ ವಸ್ತುಗಳಿಂದ ನಮಗೆ ಮಂಗಳ ದೋಷ ಅಥವಾ ವಾಸ್ತುದೋಷ ಉಂಟುಮಾಡುತ್ತದೆ. ಒಡೆದ ಫೋಟೋಗಳು ಹಾಗೂ ವಿಗ್ರಹಗಳನ್ನು ನಾವು ತಕ್ಷಣ ದೇವರ ಮನೆಯಿಂದ ಅಥವಾ ಮನೆಯಿಂದ ನಾವು ಹೊರಗೆ ಹಾಕಬೇಕು ಇದು ನಕಾರಾತ್ಮಕ ಶಕ್ತಿಯನ್ನು ಉಂಟುಮಾಡುತ್ತದೆ ಆದ್ದರಿಂದ ಈ ರೀತಿಯಾದಂತಹ ವಿಗ್ರಹ ಮತ್ತು ಫೋಟೋಗಳನ್ನು ದೇವರ ಕೋಣೆಯಲ್ಲಿ ಇರಿಸಬಾರದು, ಹೀಗೆ ಹಾಳದಂತಹ ಫೋಟೋ ಮತ್ತು ವಿಗ್ರಹಗಳನ್ನು ನಾವು ಹರಿಯುವ ನೀರಿಗೆ ಬಿಡಬೇಕು.
ದೇವರ ಕೋಣೆಗೆ ಬಳಸುವಂತಹ ಪೂಜಾ ಸಾಮಗ್ರಿಗಳನ್ನು ಯಾವಾಗಲೂ ಜೋಪಾನವಾಗಿ ನೋಡಿಕೊಳ್ಳಬೇಕು ಮುರಿದು ಹೋದ ಪೂಜಾ ಸಾಮಗ್ರಿಗಳನ್ನು ಪೂಜೆಯಲ್ಲಿ ಬಳಸುವುದು ಅಶುಭ ಅಂತಹ ವಸ್ತುಗಳನ್ನು ನಾವು ತಕ್ಷಣವೇ ಮನೆಯಿಂದ ಹೊರಗೆ ಹಾಕಬೇಕು ಇದರಿಂದ ಎಲ್ಲಾ ರೀತಿಯ ದೋಷಗಳನ್ನು ತಪ್ಪಿಸಬಹುದು ದೇವರ ಕೋಣೆಯಲ್ಲಿ ಒಡೆದ ಸಾಮಗ್ರಿಗಳನ್ನು ಇಟ್ಟಿದ್ದರೆ ಅದು ಮನೆಯ ಸದಸ್ಯರ ಮೇಲೆ ಪರಿಣಾಮವನ್ನು ಬೀರುತ್ತದೆ. ಆರ್ಥಿಕವಾಗಿ ಕುಗ್ಗಿಸುತ್ತದೆ, ಮನಸ್ಸಿನಲ್ಲಿ ಅಶಾಂತಿ ಉಂಟುಮಾಡುತ್ತದೆ ಮನೆಯ ಸದಸ್ಯರ ನಡುವೆ ಜಗಳ ಉಂಟಾಗುವ ರೀತಿಯಲ್ಲಿ ಮಾಡುತ್ತದೆ.
ದೇವರ ಕೋಣೆಯಲ್ಲಿ ಯಾವಾಗಲೂ ಅಚ್ಚುಕಟ್ಟಾದ ಪಾತ್ರೆಗಳನ್ನು ಬಳಸಬೇಕು ಅದು ಜೀವನದ ಸಕಾರಾತ್ಮಕವನ್ನು ತರುತ್ತದೆ ಹೀಗಾಗಿ ನಾವು ದೇವರ ಕೋಣೆಯನ್ನು ಬಹಳಸುವ ಸಾಮಾಗ್ರಿಗಳನ್ನು ಜೋಪಾನವದಿಂದ ಇಟ್ಟುಕೊಂಡರೆ ನಮ್ಮ ಕುಟುಂಬದ ಎಲ್ಲಾ ಸದಸ್ಯರು ಸಹ ನೆಮ್ಮದಿಯಿಂದ ಋಣಾತ್ಮಕವಾಗಿ ಜೀವನವನ್ನು ನಡೆಸಬಹುದು ಹಾಗೆಯೇ ಆರ್ಥಿಕವಾಗಿ ಮುಗ್ಗಟ್ಟನ್ನು ತಡೆಗಟ್ಟಬಹುದು ಪ್ರಗತಿಯ ಹಾದಿಯಲ್ಲಿ ನಾವು ಜೀವನ ನಡೆಸಬಹುದು. ಈ ಮಾಹಿತಿ ಇಷ್ಟ ಆದರೆ ತಪ್ಪದೆ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ.