ಗ್ರಾಮೀಣ ಪ್ರದೇಶದಲ್ಲಿ ನೀರಾವರಿ ವ್ಯವಸ್ಥೆ ಇಲ್ಲದ ಸ್ಥಳದಲ್ಲಿ ಕೊಳವೆ ಬಾವಿ ನೀರಾವರಿ ವ್ಯವಸ್ಥೆ ಕಲ್ಪಿಸುವ ಉದ್ದೇಶದೊಂದಿಗೆ ಕರ್ನಾಟಕ ಸರಕಾರ ಗಂಗಾ ಕಲ್ಯಾಣ ಯೋಜನೆ ಜಾರಿಗೆ ತಂದಿದೆ. ಅಲ್ಲದೆ ನಮ್ಮ ರಾಜ್ಯದ ರೈತರು ಬಡವರು ಹಾಗಾಗಿ ಕಡಿಮೆ ವೆಚ್ಚದಲ್ಲಿ ನೀರಾವರಿ ವ್ಯವಸ್ಥೆಯನ್ನು ಮಾಡಿಕೊಡುವ ನಿಟ್ಟಿನಲ್ಲಿ ನಮ್ಮ ರಾಜ್ಯ ಸರ್ಕಾರವು ವಿಧವಿಧವಾದ ಯೋಜನೆಗಳನ್ನು ಆಗಾಗ ತರುತ್ತಾ ಇರುತ್ತದೆ.
ಇದರಿಂದ ನಮ್ಮ ದೇಶದ ಹಾಗೂ ರಾಜ್ಯದ ಬೆನ್ನೆಲುಬಾಗಿರುವ ರೈತನು ಸಂತೋಷದಿಂದ ಬೆಳೆಯನ್ನು ಬೆಳೆಯಬಹುದು ಅಲ್ಲದೆ ಯಾವುದೇ ನಷ್ಟವನ್ನು ಅನುಭವಿಸದೆ ಲಾಭವನ್ನು ಪಡೆದು ಅವನು ಕೂಡ ಸಂತೋಷದಿಂದ ಜೀವಿಸಬಹುದು ಎಂಬ ಉದ್ದೇಶವೂ ನಮ್ಮ ಸರ್ಕಾರಕ್ಕೆ ಇದೆ. ಹಾಗಾದರೆ ಯಾರೆಲ್ಲ ಈ ಯೋಜನೆ ಅನುಕೂಲ ಪಡೆಯಬಹುದು? ಅರ್ಜಿ ಸಲ್ಲಿಕೆ ಹೇಗೆ ಎಂಬ ವಿವರ ಇಲ್ಲಿದೆ.
ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದಿಂದ ಪ್ರಸಕ್ತ ಸಾಲಿನ ವೈಯಕ್ತಿಕ ಗಂಗಾ ಕಲ್ಯಾಣ ಯೋಜನೆಯಡಿ ವೈಯಕ್ತಿಕ ನೀರಾವರಿ ಕೊಳವೆ ಬಾವಿ ನಿರ್ಮಾಣ ಕಾರ್ಯಕ್ಕೆ ಸಹಾಯ ಧನ ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆ ವಿಧಾನ ಹೇಗೆ? ಈ ಯೋಜನೆಗೆ ಯಾರೆಲ್ಲ ಅರ್ಹರು? ಅಗತ್ಯ ದಾಖಲೆಗಳು ಯಾವುವು? ಈ ಎಲ್ಲ ಮಾಹಿತಿಯ ಬಗ್ಗೆ ನೋಡೋಣ.
ಈ ಯೋಜನೆಯು ಸಂಪೂರ್ಣವಾಗಿ ಸಹಾಯಧನ ಯೋಜನೆಯಾಗಿದೆ. ಅಂದರೆ, ಪೂರ್ಣ ವೆಚ್ಚವನ್ನು ಸರಕಾರವೇ ಭರಿಸುತ್ತದೆ, ಯೋಜನೆಯಡಿಯಲ್ಲಿ 01 ಎಕರೆ 20 ಗುಂಟೆಯಿಂದ 5 ಎಕರೆ ಭೂಮಿಯನ್ನು ಹೊಂದಿರುವ ಫಲಾನುಭವಿಗೆ ಒಂದು ಕೊಳವೆಬಾವಿ ಕೊರೆಯಿಸಿ ಅದಕ್ಕೆ ನಿಗಮದಿಂದ ಪಂಪ್ಸೆಟ್ನ್ನು ಅಳವಡಿಸಲಾಗುವುದು. ಪಂಪ್ಸೆಟ್ ಮತ್ತು ವಿದ್ಯುದ್ದೀಕರಣ ಸೇರಿ ಒಟ್ಟು ವೆಚ್ಚ ರೂ.1.50 ಲಕ್ಷವಾಗಿದೆ. ಅರ್ಜಿದಾರರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಯೋಜನೆಗೆ ಸರ್ಕಾರವು ₹2.00ಲಕ್ಷ ನಿಗದಿಪಡಿಸಿದೆ.
ಈ ಮೊತ್ತದಲ್ಲಿ ಕೊಳವೆ ಬಾವಿಯ ಕೊರೆಯುವಿಕೆ, ಪಂಪ್ಸೆಟ್ಸ್ ಸರಬರಾಜು ಮತ್ತು ವಿದ್ಯುದ್ದೀಕರಣದ ಠೇವಣಿ ಮೊತ್ತವನ್ನು ಭರಿಸಲಾಗುತ್ತದೆ. ಈ ಯೋಜನೆ ಅಡಿಯಲ್ಲಿ ₹2,00,000 ಸಹಾಯಧನ ನೀಡಲಾಗುತ್ತದೆ. ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು ಜಿಲ್ಲೆಗೆ ₹3.50 ಲಕ್ಷ ಸಹಾಧನ ನಿಗದಿಪಡಿಸಿದೆ. ಇದರಲ್ಲಿ ₹50,000 ಹಣವನ್ನು ವಿದ್ಯದ್ದೀಕರಣ ವೆಚ್ಚಕ್ಕೆ ಮೀಸಲಿರಿಸಲಾಗಿದೆ.
ಈ ಸೌಲಭ್ಯ ಪಡೆಯ ಬಯಸುವ ಫಲಾನುಭವಿಗಳು ಸಣ್ಣ ಮತ್ತು ಅತಿ ಸಣ್ಣ ರೈತರಾಗಿರಬೇಕು ಅಂದರೆ ಪ್ರತಿ ಫಲಾನುಭವಿಗೆ 1 ಎಕರೆ 20ಗುಂಟೆ ಯಿಂದ 5 ಎಕ್ಕರೆಯವರೆಗೆ ಕೃಷಿ ಜಮೀನಿರಬೇಕು ಮತ್ತು ವ್ಯವಸಾಯ ವೃತ್ತಿಯನ್ನೇ ಅವಲಂಬಿಸಿರಬೇಕು. ಮಡಿಕೇರಿ, ಮಂಗಳೂರು, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಹಾಸನ ಇಂತಹ ಜಿಲ್ಲೆಗಳಲ್ಲಿ ಜಮೀನನ ಲಭ್ಯತೆ ಬಹಳ ಕಡಿಮೆ ಇರುವುದರಿಂದ ಗರಿಷ್ಠ 1 ಎಕರೆ ಜಮೀನನ್ನು ಹೊಂದಿರತಕ್ಕದ್ದು.
ಅಭ್ಯರ್ಥಿಗಳಿಂದ ಸ್ವಯಂ ಲಿಖಿತ ಅರ್ಜಿ 3 ಭಾವಚಿತ್ರ, ವಾರ್ಷಿಕ ಆದಾಯ ಪ್ರಮಾಣ ಪತ್ರ, ಆಧಾರಕಾರ್ಡ್/ಚುನಾವಣ ಗುರುತಿನ ಚೀಟಿ/ರೇಷನ್ ಕಾರ್ಡ್ ನಕಲು, ಪಹಣಿ, ರೆರ್ಕಾಡ್ ಆಪ್ ರೈಟ್ಸ್ ಪಡೆದು ಆಯ್ಕೆ ಸಮಿತಿಯಲ್ಲಿ ಮಂಡಿಸಿ ನಿಗದಿಪಡಿಸಿದ ಅನುಗುಣವಾಗಿ ವ್ಯಕ್ತಿಗಳನ್ನು ಆಯ್ಕೆ ಮಾಡಲಾಗುವುದು.
ಇನ್ನು ಎಲ್ಲಾ ಜಾತಿಯ ಬಡ ರೈತರಿಗೆ ಇದು ಅನ್ವಯವಾಗುತ್ತದೆ ಅದರಲ್ಲೂ ಹಿಂದುಳಿದ ಜಾತಿಯ ರೈತರ ವರ್ಗ, ಪರಿಶಿಷ್ಟ ಜಾತಿ ಅಥವಾ ಪಂಗಡದ ರೈತರಿಗೆ, ಅಲ್ಪಸಂಖ್ಯಾತರ ರೈತರಿಗೆ,ಉಪ್ಪಾರ ಸಮುದಾಯದ ರೈತರಿಗೆ, ಲಿಂಗಾಯತ ಹಾಗೂ ವಿಶ್ವ ಕರ್ಮದ ರೈತರಿಗೆ, ಭೋವಿ, ಬಂಜಾರ, ಮಡಿವಾಳ ಹಾಗೂ ಸವಿತಾ ಸಮುದಾಯ ವರ್ಗದ ರೈತರಿಗೆ ಇದು ಅನ್ವಯವಾಗುತ್ತದೆ. ಸದ್ಯ ನಮ್ಮ ಈ ಲೇಖನದಿಂದ ಬಡ ರೈತರಿಗೆ ಉಪಯೋಗವಾಗಲಿ ಎಂಬುವುದೇ ನಮ್ಮ ಉದೇಶ.