ಸ್ನೇಹಿತರೆ ನಿಮ್ಮ ಬಳಿ ಇಂದು ವಿಶೇಷವಾದ ಮಾಹಿತಿಯೊಂದಿಗೆ ಬಂದಿದ್ದೇವೆ ಹೌದು ಸ್ನೇಹಿತರೆ ಆಸ್ತಿ ಎಂದರೆ ಯಾರಿಗೆ ಬೇಡ ಹೇಳಿ ಯಾವುದೇ ತರಹದ ಆಸ್ತಿ ಇರಬಹುದು ಅದರಲ್ಲೂ ಒಡವೆ ಮನೆ ನಿವೇಶನ ಅಥವಾ ಯಾವುದೇ ತರಹದ ಜಮೀನುಗಳು ಇರಬಹುದು ಎಲ್ಲರಿಗೂ ಬೇಕು. ಅದರಲ್ಲೂ ನಮ್ಮ ಭಾರತದ ಕಾನೂನು ಎಲ್ಲರಿಗೂ ಸಮವಾದ ಕಾನೂನು ಎಂದು ತಿಳಿಸಿದೆ ಹಾಗಾಗಿ ಭಾಗ ಪಡೆದುಕೊಳ್ಳುವವರು ಸಮಾನವಾದ ಹಕ್ಕಿನೊಂದಿಗೆ ವಿಭಜನೆಯನ್ನು ಕಂಡುಕೊಳ್ಳಬಹುದಾಗಿದೆ.
ನಮ್ಮ ಭವ್ಯವಾದ ಭಾರತ ದೇಶದಲ್ಲಿ ಹೆಣ್ಣು ಮಕ್ಕಳಿಗೆ ಬಹಳ ದೊಡ್ಡದಾದ ಗೌರವ ಗನತೆಯು ಇದೆ. ಹಾಗಾಗಿ ನಮ್ಮ ಕಾನೂನು ಹೆಣ್ಣು ಮಕ್ಕಳಿಗೂ ಕೂಡ ಸಮಾನವಾದ ಭಾಗ ಎಲ್ಲದರಲ್ಲೂ ಇದೆ ಎಂದು ತಿಳಿಸುತ್ತದೆ. 2005ರ ನಮ್ಮ ಉಚ್ಚ ನ್ಯಾಯಾಲಯದ ಆದೇಶದ ಮೇಲೆ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೂ ಗಂಡು ಮಕ್ಕಳಂತೆ ಸಮಾನವಾದ ಭಾಗ ಇದೆ ಎಂದು ತಿಳಿಸಿತು. ಅದರಂತೆ ಈ ಆದೇಶವು ಹೊರಡಿದ ನಂತರ ನಮ್ಮ ಭಾರತ ದೇಶದ ಎಷ್ಟೋ ಹೆಣ್ಣು ಮಕ್ಕಳು ನ್ಯಾಯಾಲಯದ ಮೆಟ್ಟಿಲನ್ನು ಏರಿ ತಮ್ಮ ತಮ್ಮ ಆಸೆಯ ಭಾಗವನ್ನು ಪಡೆಯಲು ನ್ಯಾಯಾಲಯದಲ್ಲಿ ಹೋರಾಡಿದ್ದಾರೆ.
ಈ ಮೂಲಕ ಎಷ್ಟೋ ಭೂಮಿಗಳು ವಿಭಜನೆಯಾಗಿ ಇದರ ಜೊತೆಗೆ ಕುಟುಂಬಗಳು ಕೂಡ ಹೋಗಿವೆ ಏಕೆಂದರೆ ಸಂಬಂಧಗಳಲ್ಲಿ ಬಿರುಕು ಬಿಟ್ಟು ಅಣ್ಣ ತಂಗಿ ಅಕ್ಕ ತಮ್ಮಂದಿರು ದೂರವಾಗಿದ್ದಾರೆ ಸದ್ಯ ನಾವು ಇಲ್ಲಿ ಹೇಳಲು ಬಂದಿರುವ ವಿಷಯವೇನೆಂದರೆ ಹೆಣ್ಣು ಮಕ್ಕಳು ತಮ್ಮ ಭಾಗವನ್ನು ಪಡೆಯುವುದು ತಪ್ಪಲ್ಲ ಆದರೆ ಮದುವೆ ಸಮಯದಲ್ಲಿ ಅವರಿಗೆ ವರದಕ್ಷಿಣೆ ಎಂದು ನಿವೇಶನನ್ನು ಅಥವಾ ಸ್ವಲ್ಪ ಭೂಮಿಯನ್ನು ಇನ್ಯಾವುದನ್ನು ಮೊದಲೇ ಕೊಟ್ಟಿರುತ್ತಾರೆ.
ಈ ಮೂಲಕ ತವರು ಮನೆಯಲ್ಲಿ ಎಷ್ಟೋ ಖರ್ಚು ಮಾಡಿ ತಮ್ಮ ಶ್ರಮವನ್ನು ವಹಿಸಿರುತ್ತಾರೆ. ಇದೇ ರೀತಿ ಹಿಂದೂ ಮದುವೆ ಕಾಯ್ದೆ ಅಡಿ ಒಬ್ಬ ಬೆಂಗಳೂರಿನ ಮಹಿಳೆ ತಮ್ಮ ಆಸ್ತಿಯನ್ನು ಪಡೆಯಲು ನ್ಯಾಯಲಯದಲ್ಲಿ ಅರ್ಜಿಯನ್ನು ನೀಡಿದ್ದರು, ಅವರಿಗೂ ಕೂಡ ಅವರ ಪಿತ್ರಾರ್ಜಿತ ಆಸ್ಥಿಯಲ್ಲಿ ಸಮಭಾಗ ಬೇಕೆಂದು ಅರ್ಜಿ ಸಲ್ಲಿಸಿದರು ಹೀಗೆ ಅದೇ ನ್ಯಾಯಾಲಯದಲ್ಲಿ ಆಕೆಯ ಸಹೋದರ ಕೂಡ ಅವಳ ಎದುರು ನಿಂತು ಆ ಕೇಸನ್ನು ನಡೆಸಿದರು.
ಆದರೆ ಆ ಮಹಿಳೆಯ ಸಹೋದರ ಹೇಳಿದ್ದೇನೆಂದರೆ ಆಕೆಯು ಮದುವೆಯಾಗುವಾಗ ವರದಕ್ಷಿಣೆಯಾಗಿ ಯಾವುದೋ ಒಂದು ಪಿತ್ರಾರ್ಜಿತ ಜಮೀನನ್ನು ಆ ಮಹಿಳೆಗೆ ನೀಡಿರುತ್ತೇವೆ ಅದನ್ನು ಕೂಡ ವಿಭಜನೆಯನ್ನು ಮಾಡುವಾಗ ಸೇರಿಸಬೇಕು ಎಂದು ಕೋರಿರುತ್ತಾರೆ. ಈ ವಿಷಯವನ್ನು ನ್ಯಾಯಾಲಯವು ಇಟ್ಟುಕೊಂಡು ವಿಚಾರಿಸುತ್ತಾ ಇರುತ್ತದೆ ಆದರೆ ಆ ಮಹಿಳೆಯು ಇದಕ್ಕೆ ಒಪ್ಪುವುದಿಲ್ಲ ಇಲ್ಲ ಇದು ನನ್ನ ಮಾವನವರು ಹಾಗೂ ನನ್ನ ಗಂಡನು ಸ್ವಂತವಾಗಿ ಪಡೆದುಕೊಂಡ ಆಸ್ಥಿಯಾಗಿದೆ ಎಂದು ವಾದಿಸುತ್ತಾಳೆ.
ಆದರೆ ವಿಷಯವೇನೆಂದರೆ ಇವೆಲ್ಲವನ್ನು ವಿಚಾರಿಸಿ ನೋಡಿದಾಗ ಅದು ಮದುವೆ ಸಮಯದಲ್ಲಿ ಪಿತ್ರಾಜಿತ ಆಸ್ತಿಯನ್ನು ವರದಕ್ಷಿಣೆಯಾಗಿ ಕೊಟ್ಟಿದ್ದು ನಂತರ ಇದಕ್ಕೆ ನ್ಯಾಯಾಲಯವು ಇದು ಕೂಡ ಪಿತ್ರ ಆಸ್ತಿಯಾಗಿದ್ದು, ವಿಭಜನೆಯ ಅಡಿಯಲ್ಲಿ ಇದು ಕೂಡ ಸೇರಬೇಕಾಗಿದೆ ಎಂದು ನ್ಯಾಯಾಲಯದ ತೀರ್ಪನ್ನು ನೀಡುತ್ತದೆ.
ಇನ್ನು 2018ರಲ್ಲಿ ನಮ್ಮ ನ್ಯಾಯಾಲಯವು ವರದಕ್ಷಿಣೆಯಾಗಿ ನೀಡಿರುವ ಆಸ್ತಿಯಲ್ಲೂ ಕೂಡ ವಿಭಜನೆಯನ್ನು ಕಂಡುಕೊಳ್ಳಬೇಕು ಎಂಬ ಆದೇಶವನ್ನು ಹೊರಡಿಸುತ್ತದೆ ಈ ವಿಷಯಕ್ಕೆ ತಕ್ಕಂತೆ ವಿಚಾರಣೆಯನ್ನು ನ್ಯಾಯಾಲಯದ ವಿಚಾರಣ ಕ್ಕೆ ಸಂಬಂಧಪಟ್ಟವರು ಸರಿಯಾಗಿ ವಿಚಾರಣೆ ಮಾಡಿ ನ್ಯಾಯವನ್ನು ನೀಡಲು ಸಹಕರಿಸಬೇಕೆಂದು ಈಗಾಗಲೇ ಆದೇಶವನ್ನು ಹೊರಡಿಸಿದೆ. ಹಾಗಾದರೆ ಸ್ನೇಹಿತರೆ ಜನರು ಅತಿ ಆಸೆ ಪಡದೆ ಸರಿಯಾದ ನ್ಯಾಯವನ್ನು ಒದಗಿಸಲು ಸರಿಯಾದ ಕ್ರಮವನ್ನು ನಡೆದುಕೊಳ್ಳುವುದು ನಮ್ಮ ಉದ್ದೇಶವಾಗಿದೆ.