Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ನಟ ಪೊನ್ನಾಂಬಳಂ ಆರೋಗ್ಯದಲ್ಲಿ ಸಮಸ್ಯೆ ಎಂದಾಗ ಮೆಗಾಸ್ಟಾರ್ ಚಿರಂಜೀವಿ ನೀಡಿದ ಹಣವೆಷ್ಟು ಗೊತ್ತಾ.? ನಿಜಕ್ಕೂ ಶಾ-ಕ್ ಆಗ್ತೀರಾ.

Posted on March 17, 2023 By Admin No Comments on ನಟ ಪೊನ್ನಾಂಬಳಂ ಆರೋಗ್ಯದಲ್ಲಿ ಸಮಸ್ಯೆ ಎಂದಾಗ ಮೆಗಾಸ್ಟಾರ್ ಚಿರಂಜೀವಿ ನೀಡಿದ ಹಣವೆಷ್ಟು ಗೊತ್ತಾ.? ನಿಜಕ್ಕೂ ಶಾ-ಕ್ ಆಗ್ತೀರಾ.

 

ಮೆಗಾ ಸ್ಟಾರ್, ಚಿರಂಜೀವಿ ಹಣ ಸಹಾಯ ಮಾಡಿದ ಬಗ್ಗೆ ಹೇಳಿಕೊಂಡ ಪೊನ್ನಾಂಬಳಂ. ಹೌದು. ಖಳನಾಯಕರ ಪಾತ್ರದಲ್ಲಿ ಬಣ್ಣ ಹಚ್ಚುತ್ತಿದ್ದ ಪೊನ್ನಾಂಬಳಂ ಆರೋಗ್ಯದಲ್ಲಿ ಏರುಪೇರಾಗಿ, ಇನ್ನು ತಡೆಯಲು ಸಾಧ್ಯವೇ ಇಲ್ಲ ಎಂದಾದಾಗ ಆಸ್ಪತ್ರೆಗೆ ತೆರಳಿ ಅಲ್ಲಿಯೇ ದಾಖಲಾಗಿ ಚಿಕಿತ್ಸೆಯನ್ನು ಪಡೆಯಲು ನಿರ್ಧರಿಸಿದರಂತೆ ಆದರೆ ಪೊನ್ನಾಂಬಳಂ ಅವರಿಗಿರುವ ಕಾಯಿಲೆಯನ್ನು ಗುಣಪಡಿಸಲು ಹೆಚ್ಚಿನ ಹಣದ ಅವಶ್ಯಕತೆ ಇತ್ತಂತೆ.

ಅದೇ ಸಂದರ್ಭದಲ್ಲಿ ಚಿರಂಜೀವಿ ಅವರು ಪೊನ್ನಾಂಬಳಂ ಅವರ ಸಮಸ್ಯೆಗೆ ಹೆಗಲಾಗಿ, ಅಣ್ಣನ ಸ್ಥಾನದಲ್ಲಿ ನಿಂತು ಸಹಕರಿಸಿದ್ದಾರೆ. ಚಿರಂಜೀವಿಯವರು ತಮ್ಮ ರಂಗದಲ್ಲಿ ಸೇವೆ ಸಲ್ಲಿಸಿದ ಸಹೋದ್ಯೋಗಿಯ ಆರೋಗ್ಯವನ್ನು ಕಾಪಾಡಲು ನೀಡಿರುವ ಹಣ ಸಹಾಯವು, ಎಲ್ಲರು ಚಪ್ಪಾಳೆ ತಟ್ಟುವಂತೆ ಮಾಡಿದೆ. ಹಾಗಾದರೆ ಅವರು ನೀಡಿರುವ ಹಣವೆಷ್ಟು? ಹಾಗೂ ಈ ಬಗ್ಗೆ ವೈರಲ್ ಆದ ವಿಡಿಯೋದಲ್ಲಿ ಪೊನ್ನಾಂಬಳಂ ಹೇಳಿದ್ದೇನು? ಎಂದು ತಿಳಿದುಕೊಳ್ಳೋಣ ಬನ್ನಿ..

ಸ್ಟಂಟ್ ಮ್ಯಾನ್ ಆಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಪೊನ್ನಂಬಳಂ, ಅಪೂರ್ವ ಸಾಗೋದರರ್ಗಲ್, ಮೈಕಲ್ ಮದನ ಕಾಮರಾಜನ್ ಎಂಬ ಚಿತ್ರಗಳಲ್ಲಿ ಸಣ್ಣ ಪಾತ್ರಗಳಲ್ಲಿ ನಟಿಸಿದರು. ಬಳಿಕ ನಿರ್ದೇಶಕರ ಹಾಗೂ ನಿರ್ಮಾಪಕರ ಮನ ಗೆದ್ದು ಹಲವಾರು ಚಿತ್ರಗಳು ಇವರನ್ನು ಹುಡುಕಿ ಬಂದವು. 1990 ರ ದಶಕದಲ್ಲಿ ಹಲವಾರು ಪ್ರಮುಖ ತಮಿಳು ಚಲನಚಿತ್ರಗಳಲ್ಲಿ ಖಳನಾಯಕನ ಪಾತ್ರಗಳಲ್ಲಿ ನಟಿಸಿದರು. ನಟ್ಟಮೈ, ಮುತ್ತು ಸೇರಿದಂತೆ ಅನೇಕ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಪೊನ್ನಾಂಬಳಂ ಕೆಲವು ತಿಂಗಳುಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಮೂತ್ರ ಪಿಂಡಗಳ ಸಮಸ್ಯೆಯು ದೇಹದಲ್ಲಿ ಶುದ್ಧೀಕರಣ ಕಾರ್ಯವನ್ನು ಅಡ್ಡಿಪಡಿಸುತ್ತದೆ ಎಂಬುದು ನಮಗೆಲ್ಲರಿಗೂ ತಿಳಿದ ವಿಚಾರ. ಎರಡು ಮೂತ್ರಪಿಂಡಗಳು ಕಾರ್ಯವನ್ನು ನಿಲ್ಲಿಸಿದರೆ ಸಾವು ಕೂಡ ಸಂಭವಿಸಬಹುದು.ಅದಕ್ಕಾಗಿ ಕಿಡ್ನಿ ಸಮಸ್ಯೆ ಇರುವವರು ಅದನ್ನು ಪರಿಹರಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಹಣದ ಬಗ್ಗೆ ಯೋಚಿಸಿ ಆರೋಗ್ಯವನ್ನು ನಿರ್ಲಕ್ಷಿಸಲು ಸಾಧ್ಯವೇ? ಎಷ್ಟೇ ಖರ್ಚಾದರೂ ಹಣವನ್ನು ಹೊಂದಿಸಲೇಬೇಕು

ಪೊನ್ನಂಬಲಂ ಆರ್ಥಿಕ ಸಹಾಯದ ಅಗತ್ಯವಿದೆ ಎಂದು ಆಪ್ತರು ಹಾಗೂ ಸಂಬಂಧಿಗಳಲ್ಲಿ ಮನವಿ ಮಾಡಿಕೊಂಡಿದ್ದರಂತೆ. ಹಲವಾರು ಮಂದಿ ತಮ್ಮ ಕೈಲಾದಷ್ಟು ಹಣ ಸಹಾಯವನ್ನು ಮಾಡಿದ್ದಾರಂತೆ. ಆದರೆ ಎಲ್ಲರಿಂದಲೂ ಒಟ್ಟಾದ ಹಣವು ವೈದ್ಯಕೀಯ ಚಿಕಿತ್ಸೆಯ ವೆಚ್ಚಕ್ಕೆ ಸಾಕಾಗದೆ ಇರುವ ಕಾರಣವಾಗಿ ಚಿತ್ರರಂಗದ ಸ್ನೇಹಿತರನ್ನು ಕೇಳಲು ನಿರ್ಧರಿಸಿದರಂತೆ, ಆಗ ಅವರಿಗೆ ನೆನಪಾದದ್ದು ಮೆಗಾಸ್ಟಾರ್ ಚಿರಂಜೀವಿಯವರು ಒಂದೆರಡು ಲಕ್ಷವಾದರೂ ಚಿರಂಜೀವಿ ಅವರಿಂದ ಲಭ್ಯವಾಗಬಹುದು ಎಂದೆನಿಸಿ ಆ ಕೂಡಲೇ ಸಂದೇಶವನ್ನು ರವಾನಿಸಿದರಂತೆ.

ನಂತರ ನಡೆದ ಘಟನೆಯು ಕೊಂಚ ವಿಭಿನ್ನವಾಗಿತ್ತು. ಚಿರಂಜೀವಿಯವರು ಸಂದೇಶವನ್ನು ಓದಿದ ನಂತರ ಮಾಡಿದ್ದೇನು? ಈ ಸಹಾಯವನ್ನು ನೆನೆದು ಭಾವುಕರದ ಪೊನ್ನಂಬಲಂ ಸಂದರ್ಶನದಲ್ಲಿ ಹೇಳಿದ್ದೇನು? ಎಂಬೆಲ್ಲಾ ವಿಚಾರಗಳು ವೈರಲ್ ಆದ ವೀಡಿಯೊಲಿ ಅಡಕವಾಗಿದೆ.

ಪೊನ್ನಾಂಬಳಂ ಹೇಳಿರುವ ಹಾಗೆ, “‘ಅಣ್ಣಯ್ಯ ನಾನು ಪೊನ್ನಾಂಬಳಂ ನನ್ನ ಆರೋಗ್ಯ ಚೆನ್ನಾಗಿಲ್ಲ ಕೈಲಾದಷ್ಟು ಸಹಾಯ ಮಾಡಿ’ ಎಂದು ಸಂದೇಶದಲ್ಲಿಯೇ ತಿಳಿಸಿದ್ದೆ. ಹತ್ತು ನಿಮಿಷಗಳ ಬಳಿಕ ನನಗೆ ಅಣ್ಣಯ್ಯನಿಂದಲೇ call ಬಂತು. Hai.. ಪೊನ್ನಾಂಬಳಂ ಏನಾಯಿತ್ತು? ಆರೋಗ್ಯದ ಸಮಸ್ಯೆಯಾಗಿದೆಯೇ? ಹೈದರಾಬಾದ್‌ಗೆ ಬಂದು ಚಿಕಿತ್ಸೆ ಪಡೆಯಲು ಆಗುತ್ತಾ? ನಾನೇ ಕೊಡಿಸುತ್ತೇನೆ…ಎಂದು ಹೇಳಿದರು. ನನಗೆ ಪ್ರಯಾಣ ಮಾಡಲು ಸಾಧ್ಯವಾಗದಷ್ಟು ಆರೋಗ್ಯ ಹದಗೆಟ್ಟಿದೆ ಎಂದು ಹೇಳಿದೆ. ಹಾಗಾದ್ರೆ ಕೂಡಲೇ ಚೆನ್ನೈ ಅಫೋಲೋ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆ. ನಾನು ಎಲ್ಲವನ್ನು ನೋಡಿಕೊಳ್ಳುತ್ತೇನೆ ಎಂದರು.

ನಾನು ಒಂದೆರಡು ಲಕ್ಷ ಸಹಾಯ ಮಾಡುತ್ತಾರೆ ಎಂದುಕೊಂಡಿದ್ದೆ. ಆದರೆ ಅವರು ಮರುಜನ್ಮವನ್ನೇ ನೀಡುವಂತಹ ಸಹಾಯ ಮಾಡಿದರು” ಎಂದಿದ್ದಾರೆ. ಮಾತನ್ನು ಮುಂದುವರೆಸಿದ ಪೊನ್ನಾಂಬಳಂ, “ಆಸ್ಪತ್ರೆಯಲ್ಲಿ ನನಗೆ ಪ್ರವೇಶ ಶುಲ್ಕವನ್ನೂ ಕೂಡ ಕೇಳಲಿಲ್ಲ.. ಎಲ್ಲಾ ಮೊತ್ತವನ್ನು ಚಿರಂಜೀವಿ ಅಣ್ಣಾನೇ ನೋಡಿಕೊಂಡರು. ನನ್ನ ಚಿಕಿತ್ಸೆಗಾಗಿ ಒಟ್ಟು 45 ಲಕ್ಷ ರೂಪಾಯಿಗಳು ಖರ್ಚಾಗಿತ್ತು” ಎಂದರು. ಮೆಗಾ ಸ್ಟಾರ್ ಚಿರಂಜೀವಿ ಅವರು ಪೊನ್ನಾಂಬಳಂ ಅವರ ಚಿಕಿತ್ಸೆಯ 45 ಲಕ್ಷ ರೂಪಾಯಿ ವೆಚ್ಚವನ್ನು ಭರಿಸಿದುದು, ಅವರು ನಿಜ ಜೀವನದಲ್ಲಿಯೂ ನಾಯಕರೆಂಬುದನ್ನು ಹೇಳಿದೆ.

Viral News Tags:Mega star chiranjeevi

Post navigation

Previous Post: ಯಾರಿದು ಮುರಿಯಲು ಸಾಧ್ಯವಾಗದ ಅಣ್ಣಾವ್ರ ದಾಖಲೆಯನ್ನು ಮುರಿದು ಇತಿಹಾಸದ ಪುಟ ಸೇರಿದ ಏಕೈಕ ನಟಿ ಯಾರು ಗೊತ್ತ.?
Next Post: ಅಪ್ಪು ಹುಟ್ಟುಹಬ್ಬಕ್ಕೆ ತಮ್ಮನಿಗಾಗಿ ಮನ ಮುಟ್ಟುವ ಪತ್ರವನ್ನು ಬರೆದ ಶಿವಣ್ಣ..! ಈ ಪತ್ರದಲ್ಲಿನ ಸಾಲುಗಳನ್ನು ಓದಿದರೆ ಎಂಥ ಕಲ್ಲು ಹೃದಯವು ಕೂಡ ಕರಗುತ್ತದೆ.

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme