‘ಕಬ್ಜ’ ಚಿತ್ರದ ಪ್ರಿ ರಿಲೀಸ್ ಇವೆಂಟ್ ನಲ್ಲಿ ಭಾಷೆಗಳ ಕುರಿತು ರಿಯಲ್ ಸ್ಟಾರ್ ಉಪೇಂದ್ರ ಅವರು ಹೇಳಿದ್ದೇನು ಗೊತ್ತಾ ‘ಕಬ್ಜ’ ಚಿತ್ರದ ಪ್ರೀ ರಿಲೀಸ್ ಇವೆಂಟ್ನ, ಪ್ರೆಸ್ ಮೀಟ್ ನಲ್ಲಿ ಮಾತನಾಡಿರುವ ಉಪೇಂದ್ರ ಅವರು ಸಂದರ್ಶನ ಕಾರರೊಬ್ಬರು ಕೇಳಿದ ಭಾಷೆಯ ಕುರಿತಾದ ಪ್ರಶ್ನೆಗೆ ಉತ್ತರಿಸಿದ್ದಾರೆ. ಕನ್ನಡಿಗರು ಕರ್ನಾಟಕವನ್ನು ಬಿಟ್ಟು ಬೇರೆಡೆ ಹೋದಾಗ ಅವರ ಭಾಷೆಯನ್ನು ಮಾತನಾಡುತ್ತಾರೆ.. ಆದರೆ ಬೇರೆ ಸ್ಟಾರ್ ಗಳು ಕನ್ನಡವನ್ನೇಕೆ ಮಾತನಾಡುವುದಿಲ್ಲ? ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ.
ಮಾರ್ಚ್ ತಿಂಗಳಿನಲ್ಲಿಯೇ ರಿಲೀಸ್ ಆಗಲಿರುವ ಕಬ್ಜ ಚಿತ್ರವು ಅದ್ದೂರಿಯಾಗಿ ತೆರೆ ಕಾಣಲಿದೆ ಎಂಬುದು ಚಿತ್ರತಂಡದ ಭರವಸೆ. 2023ರ ಹಿಟ್ ಚಿತ್ರಗಳ ಸಾಲಿನಲ್ಲಿ ಕಬ್ಜ ಚಿತ್ರವು ಸೇರಬೇಕು ಎಂಬುದು ಚಿತ್ರಕ್ಕಾಗಿ ಶ್ರಮಿಸಿದವರ ಆಸೆಯಾಗಿದೆ. ‘ಕಬ್ಜ’ ಚಿತ್ರದ ಪ್ರೀ ರಿಲೀಸ್ ಇವೆಂಟ್ನ, ಪ್ರೆಸ್ ಮೀಟ್ ನಲ್ಲಿ, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಶ್ರಿಯಾ ಸರನ್ ಅಕ್ಕಪಕ್ಕ ಕುಳಿತು ಸಂವಾದಕರು ಕೇಳುವ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಕಬ್ಜ ಚಿತ್ರದ ಕುರಿತಾಗಿ ವಿವರಿಸುತ್ತಾ, ಅನೇಕ ಸನ್ನಿವೇಶಗಳನ್ನು ಹಂಚಿಕೊಳ್ಳುತ್ತಿದ್ದರು.
ಶ್ರಿಯಾ ಬಿಳಿಯ ಬಣ್ಣದ ಮಿಂಚುವ ಉಡುಗೆ ತೊಟ್ಟಿದ್ದು, ಫ್ರೀ ಹೇರ್ ನಲ್ಲಿ ಬೆಳ್ಳಿಯ ಗೊಂಬೆಯ ಹಾಗೆ ಕಾಣುತ್ತಿದ್ದರು. ಒಂದಾದ ಮೇಲೆ ಒಂದು ಪ್ರಶ್ನೆಯನ್ನು ಮಾಧ್ಯಮದವರು ಉಪ್ಪಿ ಹಾಗೂ ಶ್ರಿಯಾ ಬಳಿ ಇಡುತ್ತಿದ್ದರು. ಅದೇ ವೇಳೆಯಲ್ಲಿ ಸಂದರ್ಶನ ಕಾರರೊಬ್ಬರು ಶ್ರಿಯಾ ಸರನ್ ಅವರಲ್ಲಿ ಎರಡು ಮಾತುಗಳನ್ನು ಕನ್ನಡ ಭಾಷೆಯಲ್ಲಿ ಹೇಳಲು ತಿಳಿಸಿ ಎಂದು ಉಪ್ಪಿಯವರಲ್ಲಿ ಹೇಳಿದರು.
ಆ ವೇಳೆಯಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರು ಭಾಷೆಗಳ ಕುರಿತಾಗಿ ಮಾತನಾಡಿದರು. ಕನ್ನಡಿಗರು ಕರ್ನಾಟಕದಿಂದ ಬೇರೆ ಪ್ರದೇಶಗಳಿಗೆ ಹೋದಾಗ ಅವರು ಆಡುವ ಭಾಷೆಯಲ್ಲಿಯೇ ಸಾರಾಗವಾಗಿ ಮಾತನಾಡುತ್ತಾರೆ. ಈ ವಿಚಾರವನ್ನು ಧನಾತ್ಮಕ ದೃಷ್ಟಿಯಲ್ಲಿ ನೋಡಬೇಕು. ಯಾಕೆಂದರೆ ಕನ್ನಡಿಗರು ತುಂಬಾ ಬುದ್ಧಿವಂತರು. ವಿಶಾಲ ಹೃದಯಿಗಳು. ತುಂಬಾ ಗ್ರೇಟ್ ನಾವು. ಇತರ ಭಾಷೆಗಳನ್ನು ಸುಲಭವಾಗಿ ಕಲಿತು ಸುಲಲಿತವಾಗಿ ಮಾತನಾಡುತ್ತೇವೆ ಎಂದು ಉಪೇಂದ್ರ ಅವರು ಹೇಳಿದರು.
ತೆಲುಗು, ತಮಿಳು, ಮಲಯಾಳಂ, ಹಿಂದಿ ಹೇಗೆ ವಿಭಿನ್ನ ಭಾಷೆಗಳಲ್ಲಿ ನಟಿಸಿರುವ ಸ್ಟಾರ್ ನಟರು ಕರ್ನಾಟಕಕ್ಕೆ ಬಂದಾಗ ಕನ್ನಡ ಭಾಷೆಯನ್ನು ಏಕೆ ಮಾತನಾಡುವುದಿಲ್ಲ? ಎಂಬ ಪ್ರಶ್ನೆಗೆ ಉತ್ತರವಾಗುವಂತೆ ಹೇಳಿಕೆ ಒಂದನ್ನು ನೀಡಿದರು. ಮಾತನ್ನು ಮುಂದುವರಿಸಿದ ಉಪ್ಪಿ, ‘ಅದೇ ನೋಡಿ ಇತರರು ನಮ್ಮ ಕರ್ನಾಟಕಕ್ಕೆ ಬಂದಾಗ ಅಥವಾ ಕನ್ನಡ ಭಾಷೆಯನ್ನು ಮಾತನಾಡುವ ಸಂದರ್ಭ ಬಂದಾಗ ಕನ್ನಡವನ್ನು ಮಾತನಾಡುವುದಿಲ್ಲ.
ಯಾಕೆಂದರೆ ಅವರಿಗೆ ಪಾಪ ಬರುವುದಿಲ್ಲ.. ಕಷ್ಟ ನೋಡಿ’ ಎಂದು ನಗುತ್ತಾ, ಶ್ರಿಯಾ ಅವರನ್ನು ನೋಡುತ್ತಾ ಹ
ನೀವು ಹೀಗಾಗುವಂತೆ ಮಾಡುತ್ತೀರಾ?’ ಎಂದು ಜಾಣ್ಮೆಯ ಮಾತನಾಡಿದರು. ಬಳಿಕ ಆಂಗ್ಲ ಭಾಷೆಯಲ್ಲಿ ಮಾತನಾಡಿದ ಶ್ರಿಯಾ, ‘ಎಲ್ಲಾ ಶಬ್ದಗಳನ್ನು ಆಡುವ ರೀತಿಯನ್ನು ನೆನಪಿಟ್ಟುಕೊಳ್ಳಲು ನನಗೆ ಕಷ್ಟ. ಅಭ್ಯಾಸ ಮಾಡಿದರೆ ನಾನು ಕನ್ನಡವನ್ನು ಕಲಿಯಬಹುದು’ ಎಂದರು. ಅಷ್ಟೇ ಅಲ್ಲದೆ ಅವರ ಅಜ್ಜಿಯು ಕೂಡ ಕರ್ನಾಟಕದವರೇ ಆಗಿದ್ದು, ಶ್ರೀಯಾ ಅವರಲ್ಲಿ ಕನ್ನಡವನ್ನು ಕಲಿತು ಮಾತನಾಡುವಂತೆ ಪದೇ ಪದೇ ಹೇಳುತ್ತಿದ್ದರಂತೆ. ‘ನಾನು ಸಂದರ್ಶನ ಕಾರರು ಹೇಳುವ ಮಾತನ್ನು ಒಪ್ಪುತ್ತೇನೆ. ಹೌದು. ನಾನು ಕನ್ನಡದಲ್ಲಿಯೇ ಮಾತನಾಡಬೇಕಿತ್ತು’ ಎಂದು ಶ್ರಿಯಾ ಹೇಳಿದರು. ಒಟ್ಟಾರೆಯಾಗಿ ರಿಯಲ್ ಸ್ಟಾರ್ ಉಪೇಂದ್ರ ಅವರು ನೀಡಿರುವ ಉತ್ತರ ರಿಯಲ್ ಆಗಿತ್ತು ಎಂದು, ವೈರಲ್ ಆದ ವಿಡಿಯೋವನ್ನು ವೀಕ್ಷಿಸಿದ ಬಳಿಕ ನೆಟ್ಟಿಗರು ಮೆಚ್ಚಿದರಂತೆ.