ನಟಿ ಹರ್ಷಿತ ಪೂಣಚ್ಚ ಹಾಗೂ ವಿಜಯ ರಾಘವೇಂದ್ರ ಅವರು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ಕಾಸಿನ ಸರ ಸಿನಿಮಾ ಒಳ್ಳೆ ಪ್ರದರ್ಶನ ಕಾಣುತ್ತಿದೆ. ಸಿನಿಮಾ ರಿಲೀಸ್ ಆಗಿ ಎರಡು ವಾರಗಳಾಗಿದ್ದು ಎರಡನೇ ವಾರವು ಕೂಡ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಇದರ ಸಕ್ಸಸ್ ಮೀಟ್ ಕೂಡ ಚಿತ್ರತಂಡ ನಡೆಸಿದೆ. ಜೊತೆಗೆ ಪ್ರೆಸ್ ಮೀಟ್ ಕೂಡ ಮಾಡಿದೆ. ಆ ಪ್ರೆಸ್ ಮೀಟ್ ಅಲ್ಲಿ ನಟಿ ಹರ್ಷಿಕ ಪುಣಚ್ಚ ಅವರು ಸಿನಿಮಾ ಬಗ್ಗೆ ಬಹಳಷ್ಟು ಮಾತನಾಡಿದ್ದಾರೆ. ಮತ್ತು ಮಾಧ್ಯಮದವರ ಎದುರೇ ಈ ಸಿನಿಮಾದಲ್ಲಿ ನಾನು ಅಭಿನಯಿಸಿದ ಮೇಲೆ ಬಹಳ ತಿಳುವಳಿಕೆ ಬಂದಿದೆ ಅದೇ ಕಾರಣಕ್ಕಾಗಿ ನಾನು ಮದುವೆ ಆದರೆ ರೈತನನ್ನು ಮದುವೆ ಆಗಬೇಕು ಎಂದು ನಿರ್ಧಾರ ಮಾಡಿದ್ದೇನೆ ಎಂದು ಹೇಳಿಕೆ ಕೂಡ ಕೊಟ್ಟಿದ್ದಾರೆ.
ಕಾಸಿನ ಸರ ಸಿನಿಮಾ ಕನ್ನಡದ ಅತ್ಯದ್ಭುತ ಪ್ರಯೋಗಾತ್ಮಕ ಚಿತ್ರ ಆಗಿದೆ. ಹಳ್ಳಿಗಾಡಿನ ರೈತನ ಜೀವನದ ಬಗ್ಗೆ ಹೋರಾಟಗಳ ಬಗ್ಗೆ ಸಮಸ್ಯೆಗಳ ಬಗ್ಗೆ ಬೆಳಕು ಚೆಲುವ ಪ್ರಯತ್ನ ಈ ಚಿತ್ರದಲ್ಲಿ ಮಾಡಲಾಗಿದ್ದು, ಸಾಂಪ್ರದಾಯಿಕ ಕೃಷಿ ಮಹತ್ವ ಸಾರಿರುವ ಸಿನಿಮಾ ಆಗಿದೆ. ಇದರ ಬಗ್ಗೆ ಕೂಡ ಮಾತನಾಡಿದ ನಟಿ ಹರ್ಷಿಕಾ ಪುಣಚ್ಚ ಇತ್ತೀಚಿನ ಸಿನಿಮಾಗಳಲ್ಲಿ ಮನರಂಜನೆ ಮಾತ್ರ ಮುಖ್ಯ ಆದರೆ ಈ ಸಿನಿಮಾದಲ್ಲಿ ನಾವು ಮನರಂಜನೆಯೊಂದಿಗೆ ಒಂದೊಳ್ಳೆ ಸಂದೇಶವನ್ನು ಸಮಾಜಕ್ಕೆ ತಲುಪಿಸಿದ ಸಮಾಧಾನ ಇದೆ.ನನ್ನ ವೃತ್ತಿ ಚೀನಾದಲ್ಲಿಯೇ ನಾನು ಒಪ್ಪಿಕೊಂಡ ಅತ್ಯುತ್ತಮ ಚಿತ್ರ ಇದು ಎಂದು ಹೇಳಿಕೊಂಡಿದ್ದಾರೆ.
ಸಿನಿಮಾದಲ್ಲಿ ತಾವು ಮಾಡಿರುವ ತಮ್ಮ ಪಾತ್ರದ ಬಗ್ಗೆ ಕೂಡ ಹೇಳಿಕೊಂಡ ನಟಿ ಸಿನಿಮಾದಲ್ಲಿ ಸಂಪಿಗೆ ಎನ್ನುವ ಪಾತ್ರ ಮಾಡಿದ್ದೇನೆ ಆದರೆ ನಿಜ ಜೀವನದಲ್ಲಿ ನಾನು ಆ ಪಾತ್ರದಷ್ಟು ಒಳ್ಳೆವಳು ಅಲ್ಲ ಎಂದು ಕೂಡ ಒಪ್ಪಿಕೊಂಡಿದ್ದಾರೆ. ಮಾಧ್ಯಮದವರು ಕೇಳಿದ ಪ್ರಶ್ನೆ ಒಂದಕ್ಕೆ ಹರ್ಷಿಕಾ ಉತ್ತರಿಸುವಾಗ ಈ ರೀತಿ ಹೇಳಿದ್ದಾರೆ. ಈಗಿನ ಕಾಲದ ಹುಡುಗಿಯರು ಸಿಟಿ ಹುಡುಗರನ್ನೇ ಮದುವೆಯಾಗಲು ಬಯಸುತ್ತಾರೆ ಅಲ್ಲವಾ ಎನ್ನುವ ಪ್ರಶ್ನೆ ಎದುರಾದಾಗ ಹರ್ಷಿಕ ಪುಣಚ್ಚ ಅವರು ಕಾಸಿನ ಸರ ಸಿನಿಮಾದಿಂದ ನಾನು ಕಲಿತ ಪಾಠ ಎಂದರೆ ನಾನು ಕೂಡ ರೈತನನ್ನೇ ಮದುವೆಯಾಗಬೇಕು ಎಂದುಕೊಂಡಿದ್ದೇನೆ.
ಖಂಡಿತ ನಾನು ರೈತನನ್ನು ಮದುವೆಯಾಗುತ್ತೇನೆ ಎಂದು ಹೇಳಿದ ತಕ್ಷಣವೇ ಪಕ್ಕದಲ್ಲಿದ್ದ ನಿರ್ದೇಶಕರಿಗೆ ಕಾಫಿ ಪ್ಲಾಂಟರ್ ಅನ್ನು ಕೂಡ ಕೃಷಿಕ ಎಂದು ಪರಿಗಣಿಸಬಹುದು ಅಲ್ಲವಾ ಎಂದು ಪ್ರಶ್ನೆ ಕೇಳಿದ್ದಾರೆ. ನಿರ್ದೇಶಕ ಎನ್ ಆರ್ ನಂಜೇಗೌಡ ಅವರು ಸಹ ಮಾತನಾಡಿ ಇದು ಪ್ರತಿಯೊಬ್ಬ ರೈತನಿಗೂ ಕೂಡ ತಲುಪಬೇಕಾದ ಸಿನಿಮಾ ಸರ್ಕಾರದ ಜೊತೆ ಮಾತನಾಡಿ ಇದನ್ನು ಇನ್ನಷ್ಟು ರೈತರಿಗೆ ತಲುಪಿಸುವ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.
ಈ ಸಕ್ಸಸ್ ಮೀಟ್ ಗೆ ಸಿನಿಮಾಗೆ ಸಂಬಂಧಪಟ್ಟ ಪ್ರತಿಯೊಬ್ಬ ಕಲಾವಿದರು ಹಾಗೂ ತಂತ್ರಜ್ಞರು ಕೂಡ ಭಾಗಿಯಾಗಿದ್ದರು. ಸಿನಿಮಾ ಗೆ ಸಂಭಾಷಣೆ ಬರೆದ ಹೆಚ್.ಸಿದ್ದರಾಮಯ್ಯ, ಹಿರಿಯ ನಿರ್ದೇಶಕ ಬಿ ರಾಮಮೂರ್ತಿ, ಚಿತ್ರ ಸಾಹಿತಿ ಜಿಎನ್ ಪ್ರಹ್ಲಾದ್ ಮುಂತಾದವರು ಪತ್ರಿಕಾ ಗೋಷ್ಠಿಯಲ್ಲಿ ಭಾಗಿಯಾಗಿದ್ದರು. ಕನ್ನಡದ ಅನೇಕ ನಟಿ ಮಣಿಯರು ಈ ರೀತಿ ಈಗಾಗಲೇ ರೈತರನ್ನು ಮದುವೆ ಆಗುವುದಾಗಿ ಹೇಳಿಕೆ ಕೊಟ್ಟಿದ್ದಾರೆ ಆದರೆ ಅದನ್ನು ಪಾಲಿಸಿದವರು ಬೆರಳೆಣಿಕೆ ಅಷ್ಟು ಜನ ಮಾತ್ರ. ಈಗ ಹರ್ಷಿಕ ಕೂಡ ಅದೇ ಸಾಲಿಗೆ ಸೇರುತ್ತಾರಾ ಅಥವಾ ಆಡಿದ ಮಾತು ಉಳಿಸಿಕೊಳ್ಳುತ್ತಾರಾ ಕಾದು ನೋಡೋಣ.