ನಮಸ್ಕಾರ ಸ್ನೇಹಿತರೆ ಇಂದಿನ ವಿಶೇಷ ಲೇಖನಕ್ಕೆ ತಮಗೆಲ್ಲರಿಗೂ ಸ್ವಾಗತ ರಾಜ್ಯ ಸರ್ಕಾರವು ರೈತರಿಗೆ ಅನುಕೂಲವಾಗುವಂತಹ ದೃಷ್ಟಿಯಿಂದ ನಾನಾ ರೀತಿಯ ಯೋಜನೆಗಳನ್ನು ಜಾರಿಗೆ ತರುತ್ತಲೇ ಇರುತ್ತದೆ ಪ್ರತಿ ಬಜೆಟ್ ನಲ್ಲಿಯೂ ಸಹ ರೈತರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಜಾರಿಗೆ ತಂದು ಹಣವನ್ನು ಮೀಸಲು ಇಡುತ್ತದೆ ಕೃಷಿಯ ಉತ್ಪಾದನೆಯನ್ನು ಹೆಚ್ಚುವ ಸಲುವಾಗಿ ಹಾಗೆ ಕೃಷಿ ಯಂತ್ರೋಪಕರಣಗಳನ್ನು ಪ್ರೋತ್ಸಾಹಿಸಲು ರಾಜ್ಯ ಸರ್ಕಾರ ಇದೀಗ ಹೊಸ ಯೋಜನೆ ಒಂದನ್ನು ಜಾರಿಗೆ ತಂದಿದೆ.
ರೈತರಿಗೆ ಇಂಧನ ವೆಚ್ಚದ ಭಾರವನ್ನು ಕಡಿಮೆ ಮಾಡುವ ಸಲುವಾಗಿ ಡೀಸೆಲ್ ಇಂಧನಕ್ಕೆ ಸಹಾಯಧನವನ್ನು ನೀಡುವುದಾಗಿ ಇದೀಗ ಸರ್ಕಾರ ಘೋಷಣೆ ಮಾಡಿದೆ. ರೈತರು ತೋಟಗಾರಿಕೆ ಕೃಷಿಯಲ್ಲಿ ಮೆಷಿನ್ ಅಥವಾ ಟ್ರ್ಯಾಕ್ಟರ್ ಗಳನ್ನು ಬಳಸುತ್ತಲೇ ಇರುತ್ತಾರೆ ಇದಕ್ಕೆ ಇಂಜಿನ್ ಬಳಸುವುದು ಅನಿವಾರ್ಯವಾಗಿದೆ ಹಾಗಾಗಿ ರೈತರಿಗೆ ಡೀಸೆಲ್ ಇಂಧನದ ಹೊರೆ ಜಾಸ್ತಿ ಆಗಬಾರದು ಎನ್ನುವಂತಹ ದೃಷ್ಟಿಕೋನದಿಂದ ಸರ್ಕಾರ ಸಹಾಯಧನ ನೀಡುತ್ತಿದೆ.
ರೈತರಿಗೆ ಪ್ರತೀ ಏಕರಿಗೆ 250 ರೂಪಾಯಿಯಂತೆ 5 ಎಕರೆಗೆ 1250 ರೂಪಾಯಿಗಳವರೆಗೆ ನೇರವಾಗಿ ನಗದು ರೂಪದಲ್ಲಿ ವರ್ಗಾವಣೆ ಮಾಡಲಾಗುತ್ತದೆ ಕೃಷಿ ಇಲಾಖೆಯ ವತಿಯಿಂದ ರೈತ ಶಕ್ತಿ ಯೋಜನೆ ಅಡಿಯಲ್ಲಿ ಈ ಒಂದು ಸೌಲಭ್ಯವನ್ನು ಒದಗಿಸಲಾಗುತ್ತಿದೆ ರೈತರು ತಮ್ಮ ಹೆಸರು ನೋಂದಾಯಿಸಬೇಕು ಎಂದು ಕೃಷಿ ನಿರ್ದೇಶಕರು ಇದೀಗ ಮಾಹಿತಿಯನ್ನು ನೀಡಿದ್ದಾರೆ.
ಅರ್ಜಿ ಸಲ್ಲಿಸುವುದು ಹೇಗೆ ಎಂದು ನೋಡುವುದಾದರೆ
* ಸರಕಾರದ ಈ ಇಲಾಖೆಯ ಪೋರ್ಟಲ್ ಕಂದಾಯ ಇಲಾಖೆಯ ಭೂಮಿ ಪೋರ್ಟಲ್ ನೊಂದಿಗೆ ಸಂಯೋಜಿತವಾಗಿದ್ದು ಇಲ್ಲಿ ಕೃಷಿಕ ರೈತರು ತಮ್ಮ ಸಂಪೂರ್ಣ ವಿವರವನ್ನು ನೀಡಬೇಕಾಗುತ್ತದೆ ಹಾಗೆಯೇ ಜೊತೆಯಲ್ಲಿ ಬ್ಯಾಂಕ್ ವಿವರಗಳನ್ನು ಸಹ ನೀಡಿ ನೋಂದಾಯಿಸಿಕೊಳ್ಳಬೇಕಾಗುತ್ತದೆ ರೈತರ ಗುರುತಿನ ಸಂಖ್ಯೆ ಒಂದನ್ನು ನೀಡಬೇಕಾಗುತ್ತದೆ.
* ಹಾಗೆ ಫ್ರೂಟ್ಸ್ ತಂತ್ರಾಂಶವನ್ನು ಬಳಸಿ ಕೃಷಿ ಮತ್ತು ಕೃಷಿಗೆ ಸಂಬಂಧಿಸಿದ ಇಲಾಖೆಯ ಫಲಾನುಭವಿಗಳಿಗೆ ನೇರವಾಗಿ ಅವರ ಹಣ ವರ್ಗಾವಣೆ ಆಗುವಂತೆ ಮಾಡಲಾಗುತ್ತದೆ.
* ಕೆಲವು ರೈತರು ತಮ್ಮ ಭೂಹಿಡುವಳಿ ಬಗ್ಗೆ ನೋಂದಾಯಿಸಿಕೊಂಡು ಸರ್ವೇ ನಂಬರ್ ಕೂಡ ಫ್ರೂಟ್ಸ್ ನಲ್ಲಿ ಬರ್ತಿ ಮಾಡುತ್ತಾರೆ ಅಂತಹವರಿಗೆ ಎಕರೆಗೆ 250 ರೂಪಾಯಿಯಂತೆ ಗರಿಷ್ಠ ಐದು ಎಕರೆಗೆ 1250ಗಳವರೆಗೆ ಡೀಸೆಲ್ ಸಹಾಯಧನವನ್ನು ನೀಡಲಾಗುತ್ತದೆ.
* ಫ್ರೂಟ್ ನಲ್ಲಿ ನೋಂದಾವಣಿ ಮಾಡಿಕೊಳ್ಳದೆ ಇರುವಂತಹ ರೈತರು ತಮ್ಮ ಆಧಾರ್ ಕಾರ್ಡ್ ಬ್ಯಾಂಕ್ ನ ವಿವರ ಪಹಣಿ ವಿವರ ಹಾಗೂ ಜಾತಿ ಪ್ರಮಾಣ ಪತ್ರವನ್ನು ಕೃಷಿ ಇಲಾಖೆ ತೋಟಗಾರಿಕೆಗೆ ಹಾಗು ರೇಷ್ಮೆ ಇಲಾಖೆ ಕಚೇರಿಗಳಲ್ಲಿ ನೀಡಿರಬೇಕು ಜೊತೆಗೆ ಭೂಹಿಡುವಳಿಯ ಸರ್ವೆ ನಂಬರ್ ಕೂಡ ದಾಖಲಿಸಬೇಕು.
ಯೋಜನೆಯ ಲಾಭ ಪಡೆಯಲು ಫ್ರೂಟ್ ನಲ್ಲಿ ನೋಂದಾವಣಿ ಮಾಡಿಕೊಳ್ಳುವುದು ಅಗತ್ಯ.
* ಬರಗಾಲ ಮತ್ತು ಪ್ರವಾಹದ ಸಂದರ್ಭದಲ್ಲಿ ಬೆಳೆ ನಷ್ಟ ಪರಿಹಾರ ಪಡೆದುಕೊಳ್ಳಬಹುದು
* ಬೆಂಬಲ ಬೆಲೆ ಯೋಜನೆಯಲ್ಲಿ ಕೃಷಿ ಉತ್ಪನ್ನ ಖರೀದಿ ಮಾಡಬಹುದು
* ಕೃಷಿಗೆ ಬೇಕಾಗಿರುವ ಸಾಲ ಸೌಲಭ್ಯಗಳನ್ನು ಬ್ಯಾಂಕುಗಳಿಂದ ಪಡೆದುಕೊಳ್ಳಬಹುದು.
* ಕೃಷಿ ಇಲಾಖೆ ತೋಟಗಾರಿಕೆ ಇಲಾಖೆ ಹಾಗೂ ರೇಷ್ಮೆ ಇಲಾಖೆ ಮೊದಲಾದ ಇಲಾಖೆಗಳು ರೈತರಿಗಾಗಿ ತರುವ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.
ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಲು ರೈತರು ಸಂಬಂಧ ಪಟ್ಟಂತಹ ಕೃಷಿ ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದು ಜಂಟಿ ಕೃಷಿ ನಿರ್ದೇಶಕರು ಮಾಹಿತಿಯನ್ನು ನೀಡಿದ್ದಾರೆ ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ನಮಗೆ ಕಮೆಂಟ್ಸ್ ಮೂಲಕ ತಿಳಿಸಿ.