ರಾಜ್ಯ ರಾಜಕಾರಣದಲ್ಲಿ (Pilitics) ಅಲ್ಲೋಲ ಕಲ್ಲೋಲವಾಗುತ್ತಿದೆ. ಲೋಕಸಭಾ ಚುನಾವಣೆ (Parliment Election) ಸಮೀಪವಾಗುತ್ತಿದ್ದಂತೆ ನಮ್ಮ ರಾಜ್ಯದಲ್ಲಿ ರಾಜಕೀಯ ಪಕ್ಷಗಳ ಚಿತ್ರಣವೇ ಬದಲಾಗುತ್ತಿದೆ. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ BJP ಪಕ್ಷಕ್ಕೆ ಈ ಹೀನಾಯ ಸೋ’ಲು ಅನಿರೀಕ್ಷಿತವಾಗಿತ್ತು.
ಕೇಂದ್ರದ ಎದುರು ತೀವ್ರ ಮುಖಭಂಗ ಎದುರಿಸಿದ ಕಾರಣ ಲೋಕಸಭಾ ಚುನಾವಣೆಯಲ್ಲಿಯಾದರೂ ಈ ಹಿಂದೆ ಇದ್ದಂತೆ ಕ್ಷೇತ್ರಗಳಲ್ಲಿ ಸ್ಥಾನ ಉಳಿಸಿಕೊಳ್ಳಲು ನಾಯಕರು ಶ್ರಮಿಸುತ್ತಿದ್ದಾರೆ. JDS ಕೂಡ NDA ಜೊತೆ ಮೈತ್ರಿ ಮಾಡಿಕೊಂಡು ರಾಜ್ಯದಲ್ಲಿ BJP ಜೊತೆ ಮುಂದಿನ ಚುನಾವಣೆಗಾಗಿ ಕೆಲಸ ಮಾಡಲು ಒಪ್ಪಿಕೊಂಡಿದೆ.
ಆದರೆ JDS ಮತ್ತು BJP ಮೈತ್ರಿ (BJP-JDS Alliance) ಆಗಿರುವುದು ಪಕ್ಷದ ಎಲ್ಲಾ ಶಾಸಕರಿಗೂ ಸಮಾಧಾನ ತಂದಿಲ್ಲ. ಗುಂಪು ಗುಂಪಾಗಿ ಶಾಸಕರು, ಕಾರ್ಯಕರ್ತರು ಈಗೆ ಪಕ್ಷದ ಮುಖಂಡರುಗಳೇ ತಮ್ಮ ಪಕ್ಷವನ್ನು ತೊರೆಯುತ್ತಿದ್ದಾರೆ.
ಮೊದಲಿಗೆ JDS ಪಾಳಯದಲ್ಲಿ ಈ ಭಿನ್ನಮತ ಕಾಣಿಸಿಕೊಂಡಿತ್ತು, BJP ಜೊತೆ ಮೈತ್ರಿ ಮಾಡಿಕೊಳ್ಳುವುದರ ಬಗ್ಗೆ ಪಕ್ಷದಲ್ಲಿ ಚರ್ಚೆ ಮಾಡಿಲ್ಲ, ಜೊತೆಗೆ ನಮಗೆ BJP ಜೊತೆ ಕೈ ಜೋಡಿಸುವುದು ಇಷ್ಟವಿಲ್ಲ ಎಂದು JDS ನ ಮುಸ್ಲಿಂ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಕ್ಷ ಕೊಟ್ಟಿದ್ದ ಸ್ಥಾನಕ್ಕೂ ರಾಜೀನಾಮೆ ಕೊಟ್ಟಿದ್ದಾರೆ. ಈಗ BJP ಸರದಿ ಶುರುವಾಗಿರುವಂತಿದೆ.
BJP ಯ ಕೆಲ ಶಾಸಕರು ಕೂಡ ಅದೇ ನಡೆ ತೋರುತ್ತಿದ್ದಾರೆ. ಇದರ ನಡುವೆ ಡಿ.ಕೆ ಶಿವಕುಮಾರ್ ಅವರು ನೀಡಿರುವ ಹೇಳಿಕೆಯು ಆಪರೇಷನ್ ಹಸ್ತ ನಡೆಯುತ್ತಿದೆಯಾ ಎನ್ನುವ ಅನುಮಾನ ಹುಟ್ಟು ಹಾಕುತ್ತಿದೆ. ಗುರುವಾರ BJP ಮುಖಂಡ ಮಾಜಿ ಶಾಸಕ ರಾಮಪ್ಪ ಲಮಾಣಿ ಅವರು (Ramappa Lamani joined to Congress party) ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಖುದ್ದು ಉಪಮುಖ್ಯಮಂತ್ರಿಗಳೇ KPCC ಕಛೇರಿಯಲ್ಲಿ ಕಾರ್ಯಕ್ರಮ ಏರ್ಪಡಿಸಿ ಅವರನ್ನು ಸ್ವಾಗತ ಮಾಡಿಕೊಂಡಿದ್ದಾರೆ. ಈ ಸಮಯದಲ್ಲಿ ನಡೆದಿದ್ದ ಪತ್ರಿಕಾಗೋಷ್ಠಿ ಜೊತೆ ಮಾತನಾಡಿದ್ದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (D.K Shivakumar) ಅವರು ಅನೇಕ ಗಂಭೀರ ವಿಚಾರಗಳ ಜೊತೆ ಮಾಧ್ಯಮದೊಂದಿಗೆ ಹಂಚಿಕೊಂಡರು.
BJP-JDS ಮೈತ್ರಿಗೆ ವಿರೋಧ ವ್ಯಕ್ತಪಡಿಸಿ ಎರಡು ಪಕ್ಷದಿಂದ ಅನೇಕ ಪ್ರಮುಖರು ಕಾಂಗ್ರೆಸ್ ಸೇರ್ಪಡೆ ಆಗುತ್ತಿದ್ದಾರೆ. ಸುಮಾರು 40 ನಾಯಕರು ನನ್ನ ಬಳಿ ಅರ್ಜಿ ಹಾಕಿಕೊಂಡಿದ್ದಾರೆ. ಅನಿವಾರ್ಯವಾಗಿ ನಾನು ಇಂದು ಈ ವಿಷಯ ಹೇಳಿಕೊಳ್ಳಬೇಕಾಗಿದೆ. BJPಯ ಒಂದು ಟೀಮ್ ನಮ್ಮ ಶಾಸಕರನ್ನು ಭೇಟಿ ಮಾಡುತ್ತಿದೆ. ಸಿನಿಮಾ ಸ್ಟೈಲ್‌ನಲ್ಲಿ ಬಂದು ಭೇಟಿ ಮಾಡಿ ಹೋಗುತ್ತಿದ್ದಾರೆ.
ಯಾರು ಯಾರನ್ನು ಭೇಟಿ ಮಾಡಿದ್ದಾರೆ ಎಂದು ನಮ್ಮ ಶಾಸಕರು ವರದಿ ಕೊಡುತ್ತಿದ್ದಾರೆ, ಏನಾಗುತ್ತಿದೆ ಎಂಬ ಮಾಹಿತಿ ನನಗಿದೆ. ಆಮ್ ಆದ್ಮಿ ಪಕ್ಷದಿಂದ ಸ್ಪರ್ಧಿಸಿದ್ದ ನೂರಕ್ಕೂ ಹೆಚ್ಚು ಅಭ್ಯರ್ಥಿಗಳು ಸಹ ಕಾಂಗ್ರೆಸ್ ಸೇರಲು ಇಚ್ಛೆ ವ್ಯಕ್ತಪಡಿಸುತ್ತಿದ್ದಾರೆ. ಬೀದರ್‌ನಿಂದ ಚಾಮರಾಜನಗರದವರೆಗೂ ಪಕ್ಷಕ್ಕೆ ಬರುತ್ತಾ ಇದ್ದಾರೆ. ಉತ್ತರ ಕರ್ನಾಟಕ ಕಡೆಯಿಂದ ಕಾಂಗ್ರೆಸ್ ನೀಡಲು ಬಯಸಿರುವವರ ದೊಡ್ಡ ಪಟ್ಟಿಯೇ ಇದೆ.
ಮೋದಿ ಹಾಗೂ ಜಗದೀಶ್ ಶೆಟ್ಟರ್ ಅವರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು. KPCCಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ರಾಮಪ್ಪ ಲಮಾಣಿ, ಡಿ.ಕೆ ಶಿವಕುಮಾರ್, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಸಚಿವರಾದ ಎಚ್.ಕೆ. ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಚಂದ್ರಪ್ಪ, ಸಲೀಂ ಅಹ್ಮದ್, ಮಾಜಿ ಸಚಿವ ವಿನಯ್ ಕುಲಕರ್ಣಿ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.