ನಮಸ್ಕಾರ ಸ್ನೇಹಿತರೆ ಇಂದಿನ ಲೇಖನದಲ್ಲಿ ನಾವು ಒಬ್ಬ ತಂದೆ ತನ್ನ ಆಸ್ತಿಯ ಮೇಲೆ ಎಷ್ಟು ಹಕ್ಕನ್ನು ಹೊಂದಿರುತ್ತಾನೆ. ಹಾಗೆಯೇ ಮಕ್ಕಳಿಗೆ ಕೊಡಲು ಇಷ್ಟವಿಲ್ಲದಿದ್ದರೆ ಆ ಆಸ್ತಿಯನ್ನು ಏನು ಮಾಡಬಹುದು ತನ್ನ ಆಸ್ತಿಯನ್ನು ಮಾರಬಹುದ ಈ ಎಲ್ಲಾ ವಿಷಯಗಳಿಗೆ ನಾವು ಸಂಕ್ಷಿಪ್ತವಾಗಿ ವಿವರಿಸಲು ಹೊರಟಿದ್ದೇವೆ. ಪಿತ್ರಾರ್ಜಿತವಾಗಿ ಬಂದಂತಹ ಆಸ್ತಿ ಹಾಗೆ ತಾನು ದುಡಿದು ಸ್ವಂತವಾಗಿ ಗಳಿಸಿಕೊಂಡಂತಹ ಆಸ್ತಿ ಇವೆರಡಕ್ಕೂ ಸಹ ಕೆಲವೊಂದು ಉದಾಹರಣೆಗಳಿವೆ ಏನೆಂದರೆ ಪಿತ್ರಾಜಿತವಾಗಿ ಬಂದಂತಹ ಆಸ್ತಿಯಲ್ಲಿ ಮಕ್ಕಳಿಗೂ ಸಹ ಪಾಲು ಇರುತ್ತದೆ.
ಆದರೆ ತಾನು ಸ್ವಂತವಾಗಿ ದುಡಿದಂತಹ ಆಸ್ತಿಯನ್ನು ತನ್ನ ಇಚ್ಛೆಯ ಮೇರೆಗೆ ತಂದೆ ಮಕ್ಕಳಿಗೆ ಕೊಡಬಹುದು ಅಥವಾ ಇಷ್ಟ ಇಲ್ಲದಿದ್ದರೆ ಆ ಆಸ್ತಿಯ ಒಡೆತನವನ್ನು ಸಂಪೂರ್ಣವಾಗಿ ತಂದೆಯೇ ಹೊಂದಿರುತ್ತಾನೆ. ಒಬ್ಬ ತಂದೆ ತನ್ನ ಜೀವನಪೂರ್ತಿ ಮಾಡಿದಂತಹ ಆಸ್ತಿ ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ಅವರ ಹೆಸರಿನಲ್ಲಿ ಬರೆದು ಇಡುವುದು ಸಾಮಾನ್ಯ. ಈ ರೀತಿಯ ಜೀವನ ಕ್ರಮವನ್ನು ನಾವು ಭಾರತೀಯ ಕುಟುಂಬಗಳಲ್ಲಿ ಕಾಣುತ್ತೇವೆ ಆದರೆ ಕೆಲವೊಮ್ಮೆ ಅದರಲ್ಲಿ ಬದಲಾವಣೆಗಳು ಕೂಡ ಕಂಡು ಬರಬಹುದು ಅವುಗಳಲ್ಲಿ ಒಂದು ಆಸ್ತಿಯ ನಿಯಮದ ಬಗ್ಗೆ ನಾವು ಇಂದು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ.
ಒಬ್ಬ ವಯಸ್ಸಾಗಿರುವ ವ್ಯಕ್ತಿ ತನ್ನ ಮಕ್ಕಳು ತನ್ನನ್ನು ಚೆನ್ನಾಗಿ ನೋಡಿಕೊಳ್ಳದೆ ಹೋದಾಗ ಅವರ ಮೇಲೆ ನನಗೆ ಯಾವುದೇ ಆಸಕ್ತಿ ಇಲ್ಲ ಎಂಬ ಕಾರಣಕ್ಕಾಗಿ ತನ್ನ ಪಿತ್ರಾರ್ಜಿತ ಆಸ್ತಿಯನ್ನು ನಾನು ಮಾರಾಟ ಮಾಡಬಹುದೆ ಅಥವಾ ಜಾಮೀನಿನ ಮೇಲೆ ಸಾಲದ ರೂಪದಲ್ಲಿ ಹಣವನ್ನು ಪಡೆದುಕೊಳ್ಳಬಹುದೆ ಎನ್ನುವಂತಹ ಮಾಹಿತಿಯನ್ನು ವಕೀಲರ ಬಳಿ ಪ್ರಶ್ನೆಯಾಗಿ ಕೇಳುತ್ತಾರೆ.
ಸಾಮಾನ್ಯವಾಗಿ ಪ್ರತಿಯೊಬ್ಬರ ಜೀವನದಲ್ಲಿ ಕೂಡ ಬಯಸಿದ ಹಾಗೆ ಮಕ್ಕಳು ನೋಡಿಕೊಳ್ಳದೆ ಇರುವ ಪರಿಸ್ಥಿತಿಗಳು ಕಂಡುಬರುತ್ತವೆ ಅಂತಹ ಪರಿಸ್ಥಿತಿಯಲ್ಲೂ ಪೋಷಕರು ಈ ನಿಯಮಾವಳಿಗಳನ್ನು ಕೇಳಿದರೆ ಸಾಕಷ್ಟು ಸಹಾಯವಾಗುತ್ತದೆ ಈ ಪರಿಸ್ಥಿತಿಯಲ್ಲಿ ಅವರು ಯಾವ ರೀತಿ ಕಾನೂನನ್ನು ಉಪಯೋಗಿಸಿಕೊಳ್ಳಬಹುದು ಎಂದು ನೋಡುವುದಾದರೆ ಇದಕ್ಕೆ ಉತ್ತರ ನೀಡಿದಂತಹ ವಕೀಲರು ನಿಮ್ಮ ತಂದೆಗೆ ಪಿತ್ರಾರ್ಜಿತವಾಗಿ ಸಿಕ್ಕಿರುವಂತಹ ಆಸ್ತಿಯಲ್ಲಿ ನಿಮಗೆ ಎಷ್ಟು ಭಾಗವಿದೆಯೋ ಅಷ್ಟು ಮಾತ್ರ ನಿಮ್ಮ ಹಕ್ಕಿಗೆ ಬರುತ್ತದೆ.
ಒಂದು ವೇಳೆ ನಿಮ್ಮ ತಂದೆ ಸ್ವಂತವಾಗಿ ಹೊಂದಿರುವ ಆಸ್ತಿಯಲ್ಲಿ ಸಂಪೂರ್ಣವಾಗಿ ನೀವೇ ಹಕ್ಕು ಬಾಧ್ಯರಾಗಿರುತ್ತೀರಿ ಹೀಗಾಗಿ ಯಾವುದೇ ಲೆಕ್ಕದಿಂದ ನೋಡಿದರೂ ಕೂಡ ನಿಮ್ಮ ಮಕ್ಕಳಿಗಿಂತ ಹೆಚ್ಚಿನದಾಗಿ ನೀವು ಆಸ್ತಿಯ ಹಕ್ಕನ್ನು ಹೊಂದಿರುತ್ತೀರಿ ಯಾವುದೇ ಅನುಮಾನವಿಲ್ಲದೆ ನಿಮಗೆ ಯಾವ ರೀತಿ ಈ ಆಸ್ತಿಯನ್ನು ಬಳಸಿಕೊಳ್ಳಬೇಕು ಎನ್ನುವಂತಹ ಮನಸ್ಸು ಬರುತ್ತದೆಯೋ ಆ ರೀತಿಯಲ್ಲಿ ನೀವು ನಿರ್ಧಾರವನ್ನು ತೆಗೆದುಕೊಳ್ಳಬಹುದು.
ತಂದೆ ತಾಯಿಯರನ್ನು ನೀವು ಚೆನ್ನಾಗಿ ನೋಡಿಕೊಂಡರೆ ಅವರ ಸಂಪೂರ್ಣ ಆಸ್ತಿಯನ್ನು ಮಕ್ಕಳಿಗೆ ನೀಡಲು ತಂದೆ ಇಷ್ಟಪಡುತ್ತಾನೆ ವಯಸ್ಸಾದ ನಂತರ ತಂದೆ ತಾಯಿಯನ್ನು ನೋಡಿಕೊಳ್ಳುವುದು ಮಕ್ಕಳ ಕರ್ತವ್ಯ ಆದರೆ ಇತ್ತೀಚಿನ ದಿನಗಳಲ್ಲಿ ಎಷ್ಟೋ ಮಕ್ಕಳು ಆಸ್ತಿ ಗೋಸ್ಕರ ತಂದೆ ತಾಯಿಯನ್ನು ನೋಡಿಕೊಳ್ಳುತ್ತಾರೆ ಇನ್ನು ಕೆಲವರು ಪ್ರೀತಿಯಿಂದ ತನ್ನ ತಂದೆ ತಾಯಿಯನ್ನು ನೋಡಿಕೊಳ್ಳುತ್ತಾರೆ. ಇನ್ನೂ ಕೆಲವು ಮಕ್ಕಳು ತನ್ನ ತಂದೆಯನ್ನು ನೋಡಿಕೊಳ್ಳದೆ ಇರುವಂತಹ ಪರಿಸ್ಥಿತಿಯಲ್ಲಿ ಅವರ ಆಸ್ತಿಯ ಸಂಪೂರ್ಣ ಹೊಣೆಯನ್ನು ತಂದೆ ಹೊಂದಿರುತ್ತಾನೆ ಆ ಆಸ್ತಿಯ ಮೇಲೆ ಆತ ಯಾವುದೇ ರೀತಿಯಾದಂತಹ ಹಕ್ಕು ಚಲಾಯಿಸಬಹುದು ಬೇರೆ ಕಡೆಗಳಲ್ಲಿ ಸಾಲ ಪಡೆಯಬಹುದು. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ ಮಾಹಿತಿ ಇಷ್ಟಾದರೆ ತಪ್ಪದೆ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ.