ನಮಸ್ಕಾರ ಸ್ನೇಹಿತರೆ ಇಂದಿನ ಲೇಖನದಲ್ಲಿ ನಾವು ವಿಶೇಷ ಮಾಹಿತಿ ಒಂದನ್ನು ತಿಳಿಸಲು ಹೊರಟಿದ್ದೇವೆ. ತಂದೆಯ ಆಸ್ತಿಯ ಮೇಲೆ ಹಕ್ಕು ಚಲಾಯಿಸುವವರು ತಂದೆಯ ಸಾಲವಾದ ಹೊಣೆಯನ್ನು ಸಹ ಹೊರಬೇಕಾಗುತ್ತದೆ ನ್ಯಾಯಾಂಗ ಸಂವಿಧಾನದ ಬಗ್ಗೆ ನಿಮ್ಮ ಪ್ರಶ್ನೆಗಳಿಗೆ ತುಮಕೂರಿನ ಹಿರಿಯ ವಕೀಲ ಸಿ.ಕೆ ಮಹೇಂದ್ರ ಅವರು ಉತ್ತರವನ್ನು ನೀಡಿದ್ದಾರೆ.
ಪ್ರಶ್ನೆ:- 1 ನನ್ನ ತಂದೆಗೆ ಇಬ್ಬರು ಹೆಂಡತಿಯರು ನಾನು ಮೊದಲ ಹೆಂಡತಿಯ ಮಗ ನನ್ನ ತಂದೆ ತುಂಬಾ ಸಾಲ ಮಾಡಿಕೊಂಡಿದ್ದಾರೆ ಈಗ ಅವರಿಗೆ ವಯಸ್ಸಾಗಿದೆ ಅವರ ನಂತರ ಸಾಲ ತೀರಿಸುವ ಭಾದ್ಯತೆ ಮೊದಲ ಹೆಂಡತಿಯ ಮಕ್ಕಳಿಗೆ ಅಷ್ಟೇ ಇರುತ್ತದೆಯೇ.? ಎರಡನೇ ಹೆಂಡತಿಯ ಮಕ್ಕಳಿಗೂ ಆ ಜವಾಬ್ದಾರಿ ಇರುವುದಿಲ್ಲವೇ.? ಅವರು ಸಾಲ ಮಾಡಿಕೊಂಡಿರುವುದರ ಹೊಣೆ ನನ್ನದೆಲ್ಲ ಎಂದು ನಾನು ಬಿಟ್ಟುಬಿಡಬಹುದೇ.
ಉತ್ತರ:- ಸಾಲ ತೀರಿಸುವಂತಹ ಹೊಣೆ ಇಬ್ಬರ ಮಕ್ಕಳಿಗೂ ಸಹ ಇರುತ್ತದೆ ತಂದೆಯಾ ಆಸ್ತಿಯನ್ನು ಇಬ್ಬರು ಸಮಭಾಗ ಮಾಡಿಕೊಂಡರೆ ಇಬ್ಬರು ಸಹ ಸಾಲವನ್ನು ತೀರಿಸಬೇಕಾಗುತ್ತದೆ ಅಥವಾ ಯಾರಾದರೂ ಒಬ್ಬರು ಮಾತ್ರ ಆಸ್ತಿಯನ್ನು ತೆಗೆದುಕೊಂಡರೆ ಅವರು ಸಾಲದ ಸಂಪೂರ್ಣ ಹೊಣೆಯನ್ನು ಹೊಂದಿರುತ್ತಾರೆ. ನನಗೆ ಆಸ್ತಿ ಬೇಡ ನಾನು ಸಾಲ ತೀರಿಸುವುದಿಲ್ಲ ಎಂದು ನೀವು ಅಂದುಕೊಂಡರೆ ನಿಮಗೆ ಸಾಲದ ಹೊಣೆಗಾರಿಕೆ ಬರುವುದಿಲ್ಲ. ಇಬ್ಬರೂ ಸಮಾನವಾಗಿ ಆಸ್ತಿ ಪಡೆದುಕೊಂಡರೆ ಸಾಲವನ್ನು ಸಹ ಸಮಾನವಾಗಿ ತೀರಿಸಬೇಕಾಗುತ್ತದೆ.
ಪ್ರಶ್ನೆ:- 2 ನಾವು ಈಗ ಹೊಸ ಮನೆಯನ್ನು ಕಟ್ಟಿಸುತ್ತಿದ್ದೇವೆ. ನಮ್ಮ ಪಕ್ಕದ ಸೈಟ್ ಪೊಲೀಸ್ ಕಾನ್ಸ್ಟೇಬಲ್ ಗೆ ಸೇರಿದ್ದು ಅವರು ಕಾಕಿ ಹಾಕಿಕೊಂಡು ಲಾಟಿ ಹಿಡಿದು ನಮ್ಮ ಕೆಲಸಗಾರರನ್ನು ಬೆದರಿಸುತ್ತಾರೆ. ವಿನಾ ಕಾರಣ ಹೀಗೆ ಮಾಡುವವರ ವಿರುದ್ಧ ದೂರು ದಾಖಲಿಸುವುದು ಹೇಗೆ ಮತ್ತು ಯಾರನ್ನು ಸಂಪರ್ಕ ಮಾಡಬೇಕು.?
ಉತ್ತರ: ಕಾನೂನಿನಲ್ಲಿ ಪೊಲೀಸರಿಗೆ ಯಾವುದೇ ವಿಶೇಷ ಸ್ಥಾನಮಾನ, ಅಧಿಕಾರ, ಹಕ್ಕು ಇರುವುದಿಲ್ಲ. ಕರ್ತವ್ಯ ನಿರ್ವಹಣೆಗಾಗಿ ಕೆಲಸದ ಪರಿಮಿತಿಯಲ್ಲಿ ಹಾಗೂ ಕೆಲಸದ ನಿಮಿತ್ತ ನೀಡಲಾಗಿರುವ ಅಧಿಕಾರ ಬಿಟ್ಟು ಅವರಿಗೆ ಬೇರೆ ಅಧಿಕಾರ ಇರುವುದಿಲ್ಲ. ಪೊಲೀಸರು ಸಹ ಸಾಮಾನ್ಯ ಜನರಂತೆ ಸಾಮಾನ್ಯ ನಾಗರೀಕೆರೆ ಅವರು ನಿಮ್ಮೊಂದಿಗೆ ಆ ರೀತಿಯಾಗಿ ವರ್ತಿಸಿದರೆ ನೀವು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಅಪ್ಪಯ್ಯ ಮಾಡಬಹುದು ಸಬ್ ಇನ್ಸ್ಪೆಕ್ಟರ್ ನಿಮ್ಮ ದೂರಿಗೆ ಸ್ಪಂದಿಸದೆ ಹೋದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಹಾಗೂ ಜಿಲ್ಲಾ ಪೊಲೀಸ್ ಪ್ರಾಧಿಕಾರಕ್ಕೆ ದೂರು ನೀಡಬಹುದು. ವ್ಯಾಜ್ಯ ಸಿವಿಲ್ ಸ್ವರೂಪದ್ದಾಗಿದ್ದರೆ ಸ್ಥಳೀಯ ವಕೀಲರನ್ನು ಸಂಪರ್ಕಿಸಿ ನ್ಯಾಯಾಲಯದಲ್ಲಿ ದಾವೆ ಹೂಡಬಹುದು.
ಪ್ರಶ್ನ:- 3 ನನಗೆ ಈಗ 80 ವರ್ಷ ದಾಟಿತು ಗಂಡು ಮಕ್ಕಳು ಇಲ್ಲ. ಮನೆಯನ್ನು ಮಗಳ ಹೆಸರಿಗೆ ಮಾಡಿದ್ದೆ, ಅವಳೂ ತೀರಿ ಹೋಗಿದ್ದಾಳೆ. ಮೊಮ್ಮಕ್ಕಳು ಆ ಮನೆ ಮಾರಿಕೊಂಡಿದ್ದಾರೆ. ಈಗ ನಾನು ಭಾರ ಎನ್ನುವಂತೆ ಬೈದು ಮಾತಾಡ್ತಾರೆ. ಜೀವನ ಭಾರ ಎನ್ನಿಸುತ್ತೆ. ನನಗೆ ಜೀವನಕ್ಕೆ ಇಷ್ಟು ಅಂತ ಬರುವಂತೆ ಮಾಡೋಕೆ ಸಾಧ್ಯವೇ?
ಉತ್ತರ:- ನೀವು ಮೊದಲು ಧೈರ್ಯ ತಂದುಕೊಳ್ಳಿ. ಹಿರಿಯ ನಾಗರಿಕರಿಗೆ ಕಾನೂನಿನಲ್ಲಿ ಹಲವು ರೀತಿಯ ರಕ್ಷಣೆ ಇದೆ. ತಂದೆ ತಾಯಿ ಅವರನ್ನಷ್ಟೇ ಅಲ್ಲ ಅಜ್ಜ, ಅಜ್ಜಿ ಅವರನ್ನು ಸಾಕುವುದು ಕಾನೂನಿನ ಪ್ರಕಾರ ಕಡ್ಡಾಯವಾಗಿದೆ. ನಿಮ್ಮ ಮೊಮ್ಮಗನ ವಿರುದ್ಧ ಸಕ್ಷಮ ಪ್ರಾಧಿಕಾರಕ್ಕೆ ದೂರು ನೀಡಿ ಪರಿಹಾರ ಪಡೆಯಬಹುದು. ನಿಮ್ಮ ನೆರವಿಗಾಗಿ ಸ್ಥಳೀಯವಾಗಿ ಇರುವ ಹಿರಿಯ ನಾಗರಿಕರ ವೇದಿಕೆಯನ್ನು ಸಂಪರ್ಕಿಸಿ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ ಹಾಗೆಯೇ ಇತರರಿಗೂ ಶೇರ್ ಮಾಡಿ.