ದಿನದಿಂದ ದಿನಕ್ಕೆ ಎಲ್ಲಾ ಕಾಳುಗಳ ಮೇಲಿನ ಬೆಲೆ ಏರಿಕೆ ಆಗುತ್ತಿದ್ದು ಮೊದಲು ತರಕಾರಿಯ ಬೆಲೆಗಳು ಹೆಚ್ಚಾಗಿದ್ದು ಇದೀಗ ಎಲ್ಲ ಬೇಳೆಕಾಳುಗಳ ಬೆಲೆಯೂ ಹೆಚ್ಚಾಗುತ್ತಿದೆ ಇದರ ಪರಿಣಾಮದಿಂದಾಗಿ ಕೊಂಡುಕೊಳ್ಳುವವರ ಸಂಖ್ಯೆ ಕಡಿಮೆಯಾಗಿದ್ದು ಕಿರಾಣಿ ಅಂಗಡಿಗಳಿಗೆ ವ್ಯಾಪಾರವು ಕುಸಿಯುತ್ತಿದೆ. ದೈನಂದಿನವಾಗಿ ಬಳಸುವಂತಹ ಧಾನ್ಯ ಕಾಳುಗಳ ಬೆಲೆ ಕೆಜಿಗೆ 25 ರೂಪಾಯಿ ಏರಿಕೆ ಆಗಿದೆ ಜನರು ಖರೀದಿ ಮಾಡಲು ಭಯಪಡುತ್ತಿದ್ದಾರೆ ಖರೀದಿ ಮಾಡುವವರ ಸಂಖ್ಯೆ ಇದೀಗ 50ರಷ್ಟು ಇಳಿಕೆಯಾಗಿದೆ.
ಹೋಲ್ಸೇಲ್ ಮಾರುಕಟ್ಟೆಗೆ ಬೇಳೆಕಾಳುಗಳ ಪೂರೈಕೆಯು ಕಡಿಮೆ ಆಗುವುದರಿಂದ ಈ ರೀತಿಯಾಗಿ ಕಾಳುಗಳ ಬೆಲೆ ಹೆಚ್ಚಾಗುತ್ತಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಈಗಾಗಲೇ ವಿದ್ಯುತ್ ದರ ತರಕಾರಿ ಬೆಲೆ ಏರಿಕೆಯಿಂದಾಗಿ ಕಂಗಾಲಾಗಿರುವಂತಹ ಸಾರ್ವಜನಿಕರ ಜೇಬಿಗೆ ಮೇಲಿಂದ ಮೇಲೆ ಕತ್ತರಿ ಬೀಳುತ್ತಿದೆ ಕಳೆದ ವಾರ 120 ರೂಪಾಯಿ ಇದ್ದ ತೊಗರಿ ಬೇಳೆ ದರ ಶನಿವಾರ 160 ರೂಪಾಯಿಗೆ ತಲುಪಿದೆ ಇದರ ಜೊತೆಯಲ್ಲಿ ಉದ್ದಿನ ಬೇಳೆ ಹೆಸರು ಕಾಳು ಬೇಳೆ ಹಲಸಂದೆ ಕಾಳು ಶೇಂಗಾ ಹಾಗೂ ಉರುಳಿ ಕಾಳುಗಳ ಬೆಲೆ ಕೂಡ ಹೆಚ್ಚಾಗಿದೆ.
ಇದರಿಂದ ವ್ಯಾಪಾರಸ್ಥರಿಗೆ ತುಂಬಾ ನಷ್ಟ ಉಂಟಾಗುತ್ತದೆ ಬೆಲೆ ಹೆಚ್ಚಳದಿಂದ ವ್ಯಾಪಾರ ಕಡಿಮೆ ಆಗಿದೆ ಮೊದಲು ಒಂದು ಕೆಜಿ ಕೊಂಡುಕೊಳ್ಳುತ್ತಿದ್ದಂತಹ ಸಾರ್ವಜನಿಕರು ಈಗ ಅರ್ಧ ಕೆಜಿ ಗೆ ಇಳಿದಿದ್ದಾರೆ ಹೀಗೆ ಎಲ್ಲಾ ಕಾಳುಗಳ ಬೆಲೆ ಹೆಚ್ಚಾಗಿರುವ ಕಾರಣದಿಂದಾಗಿ ಗ್ರಾಹಕರ ಖರೀದಿ ಪ್ರಮಾಣವೂ ಸಹ 50ರಷ್ಟು ಕುಸಿದಿದೆ ಎಂದು ಅಂಗಡಿ ಮಾಲೀಕರು ತಿಳಿಸಿದ್ದಾರೆ. ಹಬ್ಬಗಳ ಸೀಸನ್ ಮುಗಿದ ಮೇಲೆ ಕಾಳು ಧಾನ್ಯಗಳ ಪೂರೈಕೆ ಕಡಿಮೆ ಆಗುವುದಕ್ಕೆ ಬೆಲೆ ಹೆಚ್ಚಾಗುತ್ತದೆ
ಆದರೆ ಈ ವರ್ಷ ಹಬ್ಬಗಳ ಋತುವಿನಲ್ಲಿಯೇ ಬೇಳೆ ಕಾಳುಗಳ ಕೊರತೆ ಕಂಡು ಬರುತ್ತಿದೆ ಪ್ರಸ್ತುತ ಹೋಲ್ಸೇಲ್ ಮಾರುಕಟ್ಟೆಗೆ ಎಲ್ಲಾ ಧಾನ್ಯಗಳ ಪೂರೈಕೆ ನಿರೀಕ್ಷೆ ಮಾಡಿರುವ ಮಟ್ಟದಲ್ಲಿ ತಲುಪಿಲ್ಲ ಇದು ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಮೊದಲು ತರಕಾರಿ ಬೆಲೆ ಏರಿಕೆಯಾಗಿ ಈಗ ಬೇಳೆ ಕಾಳುಗಳ ಬೆಲೆ ಗಗನಕ್ಕೆ ಏರುತ್ತಿದೆ ಹಾಗೆಯೇ ಸೊಪ್ಪು ತರಕಾರಿಗಳು ಸಹ ಸಿಗುತ್ತಿಲ್ಲ ಮನೆಯಲ್ಲಿ ಏನು ಅಡುಗೆ ಮಾಡುವುದು ಎಂಬುದೇ ದೊಡ್ಡ ಚಿಂತೆಯಾಗಿದೆ.
ಕಳೆದ ವಾರದಿಂದ ತರಕಾರಿಗಳ ಬೆಲೆ ಏರುತ್ತಿದ್ದು ಎಲ್ಲಾ ತರಕಾರಿಗಳು 80 ಗಡಿ ದಾಟಿವೆ ಬೀನ್ಸ್ 200ರ ಗಡಿ ದಾಟಿದೆ ಹೀಗಿರುವಾಗ ಮನೆಯಲ್ಲಿ ಅಡುಗೆ ಮಾಡುವ ಬದಲು ಹೋಟೆಲ್ ಗಳಿಗೆ ಹೋಗಿ ತಿನ್ನಬೇಕು, ಹೋಟೆಲ್ ಗೆ ಹೋಗಿ ತಿಂದರೆ ಹಣ ಉಳಿಸಬಹುದು ಎನ್ನುತ್ತಿದ್ದಾರೆ ಗ್ರಾಹಕರು. ತೊಗರಿ ಬೇಳೆ ಒಂದು ಕೆಜಿಗೆ 125 ರಿಂದ 165 ಇದೆ ಜೀರಿಗೆ ಕೆಜಿಗೆ 300 ರಿಂದ 600 ಹೆಚ್ಚಳವಾಗಿದೆ ಉದ್ದಿನಬೇಳೆ 1 ಕೆ.ಜಿಗೆ 100 ರಿಂದ 135 ಹಲಸಂದೆ ಕಾಳು 1 ಕೆ.ಜಿಗೆ 100 ರಿಂದ120 ಹುರುಳಿ ಕಾಳು 66 ರೂಪಾಯಿಯಿಂದ 105 ರೂಪಾಯಿಗೆ ಏರಿಕೆಯಾಗಿದೆ.
ಬೇರೆ ದೇಶಗಳಿಂದ ಧಾನ್ಯಗಳನ್ನು ಆಮದು ಮಾಡಿಕೊಳ್ಳುತ್ತಿರುವುದರಿಂದ ಬೆಲೆಗಳ ಮಟ್ಟದಲ್ಲಿ ಅಲ್ಪ ಪ್ರಮಾಞದ ನಿಯಂತ್ರಣ ಇದ್ದು ಆಮದಿನ ಪ್ರಮಾಣ ಕುಸಿದರೆ ಬೆಲೆಗಳು ಏರಿಕೆಯಾಗುತ್ತದೆ ಎಂದು ಅಂಗಡಿಯ ಮಾಲೀಕರು ತಿಳಿಸುತ್ತಿದ್ದಾರೆ. ದಿನಬಳಕೆಯ ಸಾಮಗ್ರಿಗಳ ಬೆಲೆ ಹೆಚ್ಚಾಗುತ್ತಿರುವುದರ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ ಈ ಮಾಹಿತಿ ಇಷ್ಟ ಆದರೆ ತಪ್ಪದೇ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ.