ಸ್ತ್ರೀ ಶಕ್ತಿ ಯೋಜನೆಯ ಅಡಿಯಲ್ಲಿ ಎಲ್ಲಾ ಮಹಿಳೆಯರಿಗೂ ಸಹ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಕಲ್ಪಿಸಿ ಕೊಟ್ಟಿರುವಂತಹ ರಾಜ್ಯ ಸರ್ಕಾರವು ಇದರಿಂದಾಗಿ ಹಲವಾರು ರೀತಿಯಾದಂತಹ ಸಮಸ್ಯೆಗಳು ಎದುರಾಗುತ್ತದೆ. ಇದೀಗ ಮಹಿಳೆ ಒಬ್ಬರು ಕೆ ಎಸ್ ಆರ್ ಟಿ ಸಿ ಬಸ್ ಗೆ ಕಲ್ಲು ತೋರಿಸಿರುವಂತಹ ಘಟನೆ ನಡೆದಿದ್ದು ಆ ಮಹಿಳೆ ಯಾವ ಕಾರಣದಿಂದಾಗಿ KSRTC ಬಸ್ ಕೆ ಕಲ್ಲು ಎಸೆದಿದ್ದಾರೆ ಎನ್ನುವಂತಹ ಸಂಪೂರ್ಣ ಮಾಹಿತಿಯನ್ನು ನಾವು ಇಂದು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ.
ಫ್ರೀ ಬಸ್ ಪ್ರಯಾಣಕ್ಕಾಗಿ ಬಸ್ ಮೇಲೆ ಶಕ್ತಿ ತೋರಿಸಿ ಕಲ್ಲು ಎಸೆದು 5000 ರೂಪಾಯಿ ದಂಡ ಕಟ್ಟಿದ ಮಹಿಳೆ ಕೊಪ್ಪಳದಿಂದ ಹೊಸಪೇಟೆಗೆ ಹೊರಟಿದ್ದಂತಹ ನಾನ್ ಸ್ಟಾಪ್ ಬಸ್ ಗೆ ಇಲಕಲ್ ಬಳಿಯ ಪಾಪನಹಳ್ಳಿ ನಿವಾಸಿಯಾಗಿರುವ ಲಕ್ಷ್ಮಿ ಎನ್ನುವ ಮಹಿಳೆ ಕಲ್ಲು ತೋರಿಸಿದ್ದಾರೆ. ಈ ಘಟನೆ ನಡೆದಿರುವುದು ಕೊಪ್ಪಳದಲ್ಲಿ ಫ್ರೀಯಾಗಿ ಹೋಗಬೇಕಿದ್ದ ಮಹಿಳೆ ಬಸ್ ಮೇಲೆ ಶಕ್ತಿ ತೋರಿಸಿ ಬರೋಬ್ಬರಿ 5,000 ದಂಡ ಕಟ್ಟಿದ್ದಾರೆ ಏನಿದರ ಸ್ಟೋರಿ ಎಂಬುವಂತಹ ಸಂಪೂರ್ಣ ಮಾಹಿತಿ ಇಲ್ಲಿದೆ. ಸ್ತ್ರೀ ಶಕ್ತಿ ಯೋಜನೆಯ ಮೂಲಕ ಕೆ ಎಸ್ ಆರ್ ಟಿ ಸಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಿ ಕೊಟ್ಟಿದೆ.
ಈ ಯೋಜನೆಯ ಅಂಗವಾಗಿ ನಾನಾ ರೀತಿಯಾದಂತಹ ಸಮಸ್ಯೆಗಳು ಎದುರಾಗುತ್ತಲೇ ಇದೆ ಸಹಸ್ರಾರು ಮಹಿಳಾ ಪ್ರಯಾಣಿಕರು ಉಚಿತವಾಗಿ ಸುಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದಾರೆ ಇದರಿಂದ ಬಸ್ ಗಳು ತುಂಬಿತುಳುಕುತ್ತಿದೆ ಇನ್ನೂ ಕೆಲವು ಪ್ರಯಾಣಿಕರು ಹಾಗೂ ಬಸ್ ಚಾಲಕರ ನಡುವೆ ಗಲಾಟೆ ಏರ್ಪಡುತ್ತಿದೆ. ಇದರ ನಡುವೆ ಇಲ್ಲೊಬ್ಬರು ಮಹಿಳಾ ಪ್ರಯಾಣಿಕರೊಬ್ಬರು ಬಸ್ಸಿಗೆ ಕಲ್ಲು ಎಸೆದಿದ್ದಾರೆ ಹೌದು. ಬಸ್ ನಿಲ್ಲಿಸಲಿಲ್ಲವೆಂದು ಮಹಿಳೆಯೊಬ್ಬರು ಆಕ್ರೋಶದಿಂದ ಬಸ್ ಗೆ ಕಲ್ಲೆಸೆದಿರುವಂತಹ ಘಟನೆ ಕೊಪ್ಪಳ ತಾಲೂಕಿನ ಹೊಸ ಲಿಂಗನಪುರ ಬಳಿ ಜೂನ್ 25ರಂದು ಸಂಜೆ ನಡೆದಿದೆ.
kA- 35 kAF- 252 ಕೊಪ್ಪಳ ಡಿಪೋ ದ ಬಸ್ ಗ್ಲಾಸ್ ಗೆ ಡ್ಯಾಮೇಜ್ ಆಗಿದೆ ಇದರಿಂದ ಚಾಲಕ ಬಸ್ ಅನ್ನು ಪ್ಯಾಸೆಂಜರ್ ಸಮೇತ ಮುನಿರಾಬಾದ್ ಪೊಲೀಸ್ ಠಾಣೆಗೆ ತಂದು ನಿಲ್ಲಿಸಿದ್ದಾರೆ ಅಲ್ಲದೆ ಡ್ರೈವರ್ ಮುತ್ತಪ್ಪ ಮಹಿಳೆ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ ಸಂಧಾನ ಮಾಡುವಂತಹ ಕೆಲಸ ಮಾಡಿದ್ದಾರೆ ಬಸ್ ಡ್ಯಾಮೇಜ್ ಹಿನ್ನೆಲೆಯಲ್ಲಿ 5000 ದಂಡ ಕಟ್ಟುವಂತೆ ಡ್ರೈವರ್ ಹೇಳಿದ್ದಾನೆ ಇಲ್ಲವಾದರೆ ಎಫ್ಐಆರ್ ದಾಖಲಿಸುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ ಕೊನೆಗೆ ಮಹಿಳೆ ಕ್ಷಮೆ ಕೇಳಿ ಪೊಲೀಸರ ಸಮ್ಮುಖದಲ್ಲಿ 5,000 ರೂ ದಂಡ ಕಟ್ಟಿ ಅಲ್ಲಿಂದ ತೆರಳಿದ್ದಾರೆ.
ಹುಲಿಗಿ ದರ್ಶನ ಪಡೆದು ಲಿಂಗನಪುರ ದಲ್ಲಿ ಬಸ್ ಗಾಗಿ ಕಾದು ಕುಳಿತಿದ್ದ ಲಕ್ಷ್ಮಿ ತನ್ನ ಊರಿಗೆ ತೆರಳಲು ಯಾವುದು ಬಸ್ ನಿಲ್ಲುತ್ತಿಲ್ಲವೆಂದು ಕೋಪಕೊಂಡಿದ್ದಾರೆ ಇವರು ನಾಲ್ಕು ಗಂಟೆಗಳಿಂದ ಕಾಯುತ್ತಿದ್ದರು ಯಾವುದು ಬಸ್ ನಿಲ್ಲಿಸದ ಕಾರಣ ಕೋಪದಿಂದ ಬಸ್ ಗೆ ಕಲ್ಲು ಎಸೆದಿದ್ದಾರೆ ಫ್ರೀಯಾಗಿ ಬಸ್ ನಲ್ಲಿ ಪ್ರಯಾಣ ಮಾಡಬೇಕಿದ್ದ ಮಹಿಳೆ ತನ್ನ ಶಕ್ತಿ ಪ್ರದರ್ಶನ ತೋರಿ ಬರೋಬ್ಬರಿ 5,000 ದಂಡವನ್ನು ಕಟ್ಟಿದ್ದಾರೆ ಈ ಮಹಿಳೆ ಮಾಡಿರುವುದು ಸರಿಯೇ ಅಥವಾ ತಪ್ಪ ಎಂದು ನಮಗೆ ಕಮೆಂಟ್ಸ್ ಮೂಲಕ ತಿಳಿಸಿ ಹಾಗೆ ಈ ಮಾಹಿತಿ ಇಷ್ಟ ಆದ್ರೆ ತಪ್ಪದೆ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ.