ಸ್ನೇಹಿತರೆ ಇವತ್ತಿನ ಲೇಖನದಲ್ಲಿ, ಆದಾಯ ಹಾಗೂ ಜಾತಿ ಪ್ರಮಾಣ ಪತ್ರವನ್ನು ಆನ್ಲೈನ್ ಮೂಲಕ ಪಡೆದುಕೊಳ್ಳುವುದು ಹೇಗೆ ಎಂಬುದರ ಮಾಹಿತಿಯನ್ನು ತಿಳಿಸಿಕೊಡಲಾಗುತ್ತದೆ. ಈ ಪ್ರಮಾಣ ಪತ್ರದ ಹೆಸರಲ್ಲೇ ಸೂಚಿಸಿರುವಂತೆ ವ್ಯಕ್ತಿಯ ಅಥವಾ ಕುಟುಂಬದ ವಾರ್ಷಿಕ ಆದಾಯವನ್ನು ಮತ್ತು ಜಾತಿಯನ್ನು ದೃಢೀಕರಿಸುವ ದಾಖಲೆಯಾಗಿದೆ. ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಎಂದರೇನು?, ಈ ಪ್ರಮಾಣ ಪತ್ರಕ್ಕೆ ಆನ್ಲೈನ್ ಮೂಲಕ ಹೇಗೆ ಅರ್ಜಿಯನ್ನು ಸಲ್ಲಿಸಬಹುದು?, ನಂತರ ಈ ಪ್ರಮಾಣ ಪತ್ರವನ್ನು ಆನ್ಲೈನ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಸುಕೊಡಲಾಗುತ್ತದೆ
ಜಾತಿ, ಆದಾಯ ಪ್ರಮಾಣ ಪತ್ರಗಳಿಗಾಗಿ ಕಚೇರಿಗಳಿಗೆ ಅಲೆಯುವುದೆಂದರೆ ಮದ್ಯ ವರ್ಗದವರಿಗೆ ಬಹಳ ಬೇಸರದ ಸಂಗತಿ. ಹತ್ತಾರು ಬಾರಿ ಅಲೆದರೂ ಪ್ರಮಾಣ ಪತ್ರಗಳು ಮಾತ್ರ ಸಿಗುವುದಿಲ್ಲ. ಅದರಲ್ಲೂ ವಾರಗಳ ವರೆಗೂ ಹಾಗೂ ತಿಂಗಳ ವರೆಗೂ ಅಲೆದಾಡಿದರು, ಕೂಡ ದೊರೆಯದ ಜಾತಿ ಹಾಗೂ ಆದಾಯ ಪ್ರಮಾಣ ಪತ್ರಕೆಲವೊಮ್ಮೆ ಅಧಿಕಾರಿಗಳ ಕಿರುಕುಳ, ದರ್ಪ, ಬೇಜವಾಬ್ದಾರಿ ವರ್ತನೆಯಿಂದ ಬೇಸತ್ತು ಹೋಗುತ್ತದೆ. ಅಲ್ಲದೆ ಜಾತಿ, ಆದಾಯ ಪ್ರಮಾಣಪತ್ರಗಳನ್ನು ಪಡೆಯಬೇಕೆಂದರೆ ಲಂಚ ಕೊಡಬೇಕಾಗುತ್ತದೆ. ಹೆಸರಿಗೆ ಸಕಾಲ ಅಂತಾ ಇದ್ದರೂ ಅದು ಹೆಸರಿಗೆ ಮಾತ್ರ ಸೀಮಿತ. ಹೀಗಾಗಿ ಸಕಾಲಕ್ಕೆ ಯಾವುದು ಆಗುತ್ತಿಲ್ಲ.
ಆದರೆ ಇದೀಗ ಕೇವಲ ರೂ. 20 ಪಾವತಿಸಿ, ಮೊಬೈಲ್ ಅಥವಾ ಆನ್ಲೈನ್ ಮೂಲಕ 5-10 ನಿಮಿಷಗಳಲ್ಲಿಯೇ ಜಾತಿ/ಆದಾಯ ಪ್ರಮಾಣ ಪತ್ರಗಳನ್ನು ಪಡೆಯಬಹುದು. ಈಗಾಗಲೇ ಕರ್ನಾಟಕದಲ್ಲಿ ಈ ವ್ಯವಸ್ಥೆ ಜಾರಿಯಾಗಿದೆ. ಅದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..
ಜಾತಿ ಹಾಗೂ ಆದಾಯ ಪ್ರಮಾಣ ಪತ್ರವನ್ನು ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ ಹಾಗೂ ಅದರ ಕ್ರಮವೇನು…?
ನಾಡ ಕಚೇರಿ ವೆಬ್ಸೈಟ್
ನಾಡ ಕಚೇರಿ ವೆಬ್ಸೈಟ್ ಗೆ ಭೇಟಿ ನೀಡಿ, ಆನ್ಲೈನ್ ಅರ್ಜಿ ಸ್ವೀಕೃತಿ ವಿಭಾಗದಲ್ಲಿನ ಆನ್ಲೈನ್ ಅರ್ಜಿ ಆಪ್ಷನ್ ಆಯ್ಕೆ ಮಾಡಿ. ಈ ಕೆಳಗಿನ ಕೊಂಡಿ ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಗೆ ಪ್ರವೇಶಿಸಿ.
http://www.nadakacheri.karnataka.gov.in/
*ನಾಡ ಕಚೇರಿ ವೆಬ್ಸೈಟ್ ಗೆ ಪ್ರವೇಶಿಸುವ ಮೊದಲ ಹಂತದಲ್ಲಿ ನಿಮ್ಮ ನೋಂದಣಿಯಾಗಿರುವ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮುಂದುವರೆಯಬೇಕು. ಅಂದರೆ ಪ್ರೋಸೀಡ್ ಮೇಲೆ ಕ್ಲಿಕ್ ಮಾಡಬೇಕು.
*ನಂತರ ಜಾತಿ ಅಥವಾ ಆದಾಯ ಪ್ರಮಾಣಪತ್ರ ಪಡೆಯಬೇಕೆಂದರೆ ನ್ಯೂ ರಿಕ್ವೆಸ್ಟ್ ನ್ಯೂ ರಿಕ್ವೆಸ್ಟ್ ವಿಧಾನ ಆಯ್ಕೆ ಮಾಡಬೇಕು.ನ್ಯೂ ರಿಕ್ವೆಸ್ಟ್ ಮೇಲೆ ಕ್ಲಿಕ್ ಮಾಡಿದ ನಂತರ ಹಲವಾರು ಸೇವೆಗಳ ಪಟ್ಟಿ ತೆರೆದುಕೊಳ್ಳುತ್ತದೆ. ಅದರಲ್ಲಿ ನಿಮಗೆ ಬೇಕಾದ ಸೇವೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ನಿಮಗೆ ಆದಾಯ ಪತ್ರ ಬೇಕಿದ್ದರೆ ಇನ್ಕಮ್ ಸರ್ಟಿಫಿಕೇಟ್ ಮೇಲೆ ಕ್ಲಿಕ್ ಮಾಡಿ.
*ಆದಾಯ ಪತ್ರಕ್ಕಾಗಿ ಆಪ್ಷನ್ ಆಯ್ಕೆ ಮಾಡಿದ ನಂತರ ಪ್ರಮಾಣಪತ್ರ ಬೇಕಿರುವುದು ಯಾವ ಭಾಷೆಯಲ್ಲಿ ಎಂಬ ಆಪ್ಷನ್ ತೆರೆದುಕೊಳ್ಳುತ್ತದೆ. ನಿಮಗೆ ಕನ್ನಡದಲ್ಲಿ ಬೇಕಿದ್ದರೆ ಕನ್ನಡದ ಮೇಲೆ ಕ್ಲಿಕ್ ಮಾಡಿ. ಕೆಳಗಡೆ ಕೆಂಪು ಅಕ್ಷರಗಳಲ್ಲಿ ನೀಡಿರುವ ಆದಾಯ ಪ್ರಮಾಣಪತ್ರವನ್ನು ಆಯ್ಕೆ ಮಾಡಿ.
*ನಿಮ್ಮ ವೈಯಕ್ತಿಕ ವಿವರಗಳಾದ ಪಡಿತರ ಸಂಖ್ಯೆ, ಆಧಾರ್ ಸಂಖ್ಯೆ, ವಿಳಾಸ ಇತ್ಯಾದಿಗಳನ್ನು ಭರ್ತಿ ಮಾಡಿ ಪ್ರೋಸೀಡ್ ಕೊಡಬೇಕು.
*ಕೊನೆಯಲ್ಲಿ ಆನ್ಲೈನ್ ಪೇಮೆಂಟ್ ಪೇಜ್ ತೆರೆಯುತ್ತದೆ. ಕೇವಲ ರೂ. 20 ಪಾವತಿಸಿ, ಮೊಬೈಲ್ ಅಥವಾ ಆನ್ಲೈನ್ ಮೂಲಕ 5-10 ನಿಮಿಷಗಳಲ್ಲಿಯೇ ಜಾತಿ/ಆದಾಯ ಪ್ರಮಾಣ ಪತ್ರಗಳನ್ನು ಪಡೆಯಬಹುದು.