ರಾಜ್ಯದಲ್ಲಿರುವ ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿಯ ಪ್ರತಿ ಫಲಾನುಭವಿಗೆ ಪ್ರತಿ ತಿಂಗಳೂ 10 ಕೆ.ಜಿ, ಆಹಾರ ಧಾನ್ಯವನ್ನು ಉಚಿತವಾಗಿ ವಿತರಿಸಲು ಸರ್ಕಾರ ಆದೇಶ ಹೊರಡಿಸಿದೆ ಈ ಉಚಿತ ವಿತರಣೆ ಜುಲೈ 1ಕ್ಕೆ ಅನ್ವಯವಾಗುವಂತೆ ಜಾರಿಗೆ ಬರಲಿದೆ. ಇದೀಗ ಕಾಂಗ್ರೆಸ್ ಸರ್ಕಾರವು ಅನ್ನಭಾಗ್ಯ ಯೋಜನೆ ಅಡಿಯಲ್ಲಿ ತಲಾ ಒಬ್ಬರಿಗೆ 10 ಕೆಜಿ ಅಕ್ಕಿಯನ್ನು ನೀಡುವುದಾಗಿ ಆಶ್ವಾಸನೆಯನ್ನು ನೀಡಿದ್ದಾರೆ. ಇದರ ಕುರಿತಾಗಿ ಆಹಾರ ಮಂತ್ರಿ ಹಾಗು ಮುಖ್ಯಮಂತ್ರಿಗಳು ಕೇಂದ್ರಕ್ಕೆ ತೆರಳಿ ಅಮಿತ್ ಶಾ ಅವರ ಬಳಿಯಲ್ಲಿ ಆಹಾರದ ಕೊರತೆ ಇರುವುದನ್ನು ತಿಳಿಸಿದ್ದಾರೆ.
ಈ ನಡುವೆ ಕೆಲವೊಂದು ಪ್ರಕರಣಗಳು ಹೊರಗೆ ಬರುತ್ತಿದೆ ರಾಜ್ಯ ಸರ್ಕಾರವು ತಲಾ 10 ಕೆಜಿ ಅಕ್ಕಿಯನ್ನು ನೀಡಲು ಪರದಾಡುತ್ತಿದೆ ಇದರ ನಡುವೆ ಅ’ಕ್ರ’ಮ’ವಾಗಿ 16200 ಕೆಜಿ ಪಡಿತರ ಅಕ್ಕಿಯನ್ನು ಜಿಲ್ಲೆಯ ಆಳಂದ ತಾಲೂಕಿನ ಪೊಲೀಸರು ವ’ಶ ಪಡಿಸಿಕೊಂಡಿರುವಂತಹ ಘಟನೆ ಇದೀಗ ಬೆಳಕಿಗೆ ಬರುತ್ತಿದೆ. ಕೇವಲ ಒಂದು ಪ್ರಕರಣವಲ್ಲದೆ ಇದೇ ರೀತಿಯಾಗಿ ಮತ್ತೊಂದು ಪ್ರಕರಣ ಸಹ ಹೊರಗೆ ಬಂದಿದೆ ಆಳಂದ ಪಟ್ಟಣದಿಂದ ನೆರೆಯ ಮಹಾರಾಷ್ಟ್ರಕ್ಕೆ ಹೋಗುತ್ತಿದ್ದಂತಹ ಟಾಟಾ ಟರ್ಬೋ ವಾಹನದಲ್ಲಿ 12,460 ಕೆಜಿ ಹಾಗೂ ಆಳಂದ ಪಟ್ಟಣದ ವಿದ್ಯಾನಗರ ಗೋಡೌನ್ ನಲ್ಲಿದ್ದ 3740 ಕೆಜಿ ಅಕ್ಕಿಯನ್ನು ಪೊಲೀಸರು ವ’ಶ ಪಡಿಸಿಕೊಂಡಿದ್ದಾರೆ.
ವಾಹನ ಚಾಲಕನನ್ನು ಇದೀಗ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ ಈ ದಂದೆಯ ಹಿಂದೆ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ಇರುವಂತಹ ಶಂ’ಕೆ ವ್ಯಕ್ತವಾಗುತ್ತಿದೆ. ಕಳೆದ ಎರಡು ದಿನದ ಹಿಂದೆ ಕಲಬುರಗಿಯಲ್ಲಿ 24,000 ಕೆಜಿ ಅಕ್ಕಿಯನ್ನು ಆಹಾರ ಇಲಾಖೆ ವ’ಶ ಪಡಿಸಿಕೊಂಡಿತ್ತು. ಇದೀಗ ಜುಲೈ 1 ರಿಂದ ಅನ್ನ ಭಾಗ್ಯ ಯೋಜನೆ ಜಾರಿಯಾಗುವುದು ಅನುಮಾನ ಎಂದು ಖುದ್ದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ ಒಂದೇ ಸಲ ಬೇರೆ ಬೇರೆ ರಾಜ್ಯಗಳ ಜೊತೆಯಲ್ಲಿ ಮಾತುಕತೆ ನಡೆಸಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಯಾವ ರಾಜ್ಯಗಳಲ್ಲೂ ಬೇಡಿಕೆ ಇರುವಷ್ಟು ಸಾಮರ್ಥ್ಯದಲ್ಲಿ ಪೂರೈಕೆ ಆಗದ ಹಿನ್ನೆಲೆಯಲ್ಲಿ ಯೋಜನೆ ಜಾರಿ ಮಾಡುವುದು ಕಷ್ಟವಾಗುತ್ತಿದೆ ಎಂದು ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ. ಹೀಗೆ ರಾಜ್ಯದಲ್ಲಿ ಅಕ್ಕಿಯನ್ನು ಹೊಂದಿಸಲು ಪರದಾಡುತ್ತಿರುವಂತಹ ನಾಯಕರ ಮಧ್ಯೆ ಇದೀಗ ಈ ರೀತಿಯಾದಂತಹ ಪ್ರಕರಣಗಳು ಹೊರಗೆ ಬರುತ್ತಿರುವುದು ಬೇಸರದ ಸಂಗತಿ.
ಕಾಂಗ್ರೆಸ್ ಸರ್ಕಾರದ ಐದು ಮುಖ್ಯ ಯೋಜನೆಗಳಲ್ಲಿ ಅನ್ನಭಾಗ್ಯ ಯೋಜನೆ ಸಹ ಬಹಳ ಪ್ರಮುಖವಾಗಿದೆ ಸಾಕಷ್ಟು ಜನರು ಅನ್ನಭಾಗ್ಯ ಯೋಜನೆ ಅಡಿಯಲ್ಲಿ 10 ಕೆಜಿ ಅಕ್ಕಿಯನ್ನು ಪಡೆದುಕೊಳ್ಳಲು ಕಾತುರದಿಂದ ಕಾಯುತ್ತಾ ಕುಳಿತಿದ್ದಾರೆ ಇದೀಗ ಈ ಯೋಜನೆಯು ತಡವಾಗುತ್ತಿರುವುದು ಕಂಡ ಜನರು ಬೇಸರದ ಸಂಗತಿಯನ್ನು ಹೊರ ಹಾಕುತ್ತಿದ್ದಾರೆ.
ಈ ರೀತಿಯಾದಂತಹ ಅ’ಕ್ರ’ಮ’ವಾಗಿ ಅಕ್ಕಿ ಸಾಗಾಣಿಕೆಯ ಕೇಸ್ ಗಳು ಎಷ್ಟೋ ನಡೆಯುತ್ತಿದೆ ಆದರೆ ಬೆಳಕಿಗೆ ಬಕುರಿತಾಗಿ ಸರ್ಕಾರವು ಸೂಕ್ತ ಕ್ರಮಗಳನ್ನು ಕೈಗೊಂಡು ಯಾವುದೇ ಕಾರಣಕ್ಕೂ ಅಕ್ರಮ ರೀತಿಯಲ್ಲಿ ಸಾಗಾಣಿಕೆ ಆಗದ ರೀತಿಯಲ್ಲಿ ನೋಡಿಕೊಳ್ಳುವುದು ಬಹಳ ಪ್ರಮುಖ. ಜನಸಾಮಾನ್ಯರಿಗೆ ಸಿಗಬೇಕಾಗಿದ್ದಂತಹ ಅಕ್ಕಿ ಇದೀಗ ಅನುಚಿತವಾಗಿ ಬೇರೆ ರಾಷ್ಟ್ರಗಳಿಗೆ ರವಾನೆ ಆಗುತ್ತಿದೆ ಈ ರೀತಿಯಾದಂತಹ ವರ್ತನೆಗಳು ರಾಜ್ಯದಲ್ಲಿ ಹಲವಾರು ಕಂಡುಬರುತ್ತಿದೆ ಇದಕ್ಕೆ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಈ ಮಾಹಿತಿ ಇಷ್ಟ ಆದ್ರೆ ತಪ್ಪದೆ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ.