ಶುಕ್ರವಾರ ರಾಜ್ಯದಾದ್ಯಂತ ಕರ್ನಾಟಕ ಬಂದ್ (Karnata bandh) ಅನ್ನು ಯಶಸ್ವಿಯಾಗಿ ಆರಿಸಲಾಗಿದೆ. ಕನ್ನಡ ಚಲನಚಿತ್ರ ಮಂಡಳಿ ಕೂಡ ಇದಕ್ಕೆ ಸಹಕಾರ ನೀಡಿದ್ದು ಹೋರಾಟದಲ್ಲಿ ಭಾಗಿಯಾಗಿ ಕಾವೇರಿ ಪರ ಧ್ವನಿಯಾಗಿದ್ದಾರೆ. ನಿನ್ನೆ ಕನ್ನಡದ ಯಾವ ಚಿತ್ರಗಳ ಶೂಟಿಂಗ್ ನಡೆದಿಲ್ಲ, ಥಿಯೇಟರ್ ಗಳನ್ನು ಮುಚ್ಚಿ ಪ್ರದರ್ಶನ ರದ್ದುಗೊಳಿಸಲಾಗಿದೆ, ಶುಕ್ರವಾರ ರಿಲೀಸ್ ಆಗಬೇಕಿದ್ದ ಕನ್ನಡದ ಚಿತ್ರಗಳನ್ನು ರಿಲೀಸ್ ಡೇಟ್ ಮುಂದೂಡಲಾಗಿದೆ.
ಆದರೆ ನೆರೆ ರಾಜ್ಯ ತಮಿಳುನಾಡಿನ ನಟ ಸಿದ್ದಾರ್ಥ್ (Thamil actor Siddarth) ಅಭಿನಯ ಹಾಗೂ ನಿರ್ಮಾಣದ ಚಿಕ್ಕು (Chikku) ಸಿನಿಮಾ ಸೆಪ್ಟೆಂಬರ್ 28ರಂದು ರಿಲೀಸ್ ಆಗಿದ್ದು ಈ ಸಿನಿಮಾ ಪ್ರಚಾರಕ್ಕೆಂದು ಬೆಂಗಳೂರಿನ ಮಲ್ಲೇಶ್ವರದಲ್ಲಿರುವ SRV ಥಿಯೇಟರ್ಗೆ (Bengaluru SRV theatre) ಆಗಮಿಸಿ ಸಿನಿಮಾ ಬಗ್ಗೆ ಸುದ್ದಿಗೋಷ್ಠಿ ನಡೆಸಿದ್ದಾರೆ.
ಸನಾತನ ಧರ್ಮದಿಂದಲೇ ಸಂವಿಧಾನದ ಉಳಿವು – ಬಸನಗೌಡ ಪಟೀಲ್ ಯತ್ನಲ್
ವಿಶೇಷವೇನೆಂದರೆ, ತಮಿಳು ನಟನಾದರೂ, ಕನ್ನಡದಲ್ಲಿಯೇ ಮಾತು ಆರಂಭಿಸಿ ಕನ್ನಡ ಪ್ರೇಮವನ್ನು ಹೊರಹಾಕಿ ಮಾತನಾಡುತ್ತಿದ್ದರು. ಈ ವೇಳೆ ಏಕಾಏಕಿ ನುಗ್ಗಿದ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಸಂಘಟನೆಯ ಸದಸ್ಯರು, ಕಾರ್ಯಕರ್ತರು ಪತ್ರಿಕಾಗೋಷ್ಠಿಗೆ ಅಡ್ಡಿಪಡಿಸಿ, ಸ್ಥಗಿತಗೊಳಿಸಿ ನಟನನ್ನು ಹೊರಕ್ಕೆ ಕಳಿಸಿದ್ದಾರೆ (apposed to Pressmeet).
ಈ ಸಿನಿಮಾ ಕನ್ನಡ ತೆಲುಗು ಸೇರಿದಂತೆ ಅನೇಕ ಭಾಷೆಗಳಿಗೆ ಡಬ್ ಆಗಿ ರಿಲೀಸ್ ಆಗಿದೆ ಈ ಸಂಬಂಧ ಸುದ್ದಿಗೋಷ್ಠಿ ಕರೆಯಲಾಗಿತ್ತು. ರಾಜ್ಯದ ಜನತೆಗೆ, ರೈತರಿಗೆ ಅನ್ಯಾಯ ಮಾಡಿ ತಮಿಳುನಾಡಿಗೆ ನೀರು ಬಿಡಲಾಗುತ್ತಿದೆ. ಇದನ್ನು ವಿರೋಧಿಸಿ ನಾವೆಲ್ಲಾ ಹೋರಾಟ ಮಾಡುತ್ತಿದ್ದೇವೆ. ಈ ಸಮಯದಲ್ಲಿ ಸಿನಿಮಾ ಪ್ರಚಾರ ಮಾಡುತ್ತಿದ್ದಾರಲ್ಲ ಎಂದು ಕರವೇ ಕಾರ್ಯಕರ್ತರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದಲ್ಲಿಯೂ JCB ಬರುತ್ತದೆ, ಒಂದಲ್ಲ ಒಂದು ದಿನ ಆ ಸ್ಥಾನಕ್ಕೆ ನಾನು ಬರುತ್ತೇನೆ ಎಂದ ಶಾಸಕ.!
ಈ ವಿಚಾರವು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನಟ ಪ್ರಕಾಶ್ ರಾಜ್ (Prakash raj) ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ಕಾವೇರಿ ನಮ್ಮದು ಹೌದು, ಆದರೆ ಕಾವೇರಿ ವಿವಾದ ಇಂದು ನೆನ್ನೆಯದಲ್ಲ, ದಶಕಗಳಷ್ಟು ಹಳೆಯದ್ದು. ದಶಕಗಳ ಈ ಸಮಸ್ಯೆಯನ್ನು ಪರಿಹರಿಸಲಾಗದ ಎಲ್ಲಾ ಅಸಮರ್ಥ ರಾಜಕೀಯ ಪಕ್ಷಗಳ ನಾಯಕರನ್ನು ಪ್ರಶ್ನಿಸದೆ, ಕೇಂದ್ರ ಸರ್ಕಾರಕ್ಕೆ ಒತ್ತಡ ತರದೇ, ನಾಲಾಯಕ್ ಸಂಸದರನ್ನು ತರಾಟೆಗೆ ತೆಗೆದುಕೊಳ್ಳದೆ ಅಸಹಾಯಕ ಜನಸಾಮಾನ್ಯರನ್ನು ಹಾಗೂ ಕಲಾವಿದರನ್ನು ಹಿಂಸಿಸುವುದು ತಪ್ಪು.
ನಾನೊಬ್ಬ ಕನ್ನಡಿಗನಾಗಿ, ಎಲ್ಲಾ ಸಹೃದಯ ಕನ್ನಡಿಗರ ಪರವಾಗಿ ನಡೆದ ಘಟನೆ ಬಗ್ಗೆ ಕ್ಷಮೆ ಕೇಳುತ್ತಿದ್ದೇನೆ. ಕ್ಷಮಿಸಿ ಸಿದ್ದಾರ್ಥ್ ಎಂದು ಪ್ರಕಾಶ್ ರಾಜ್ ಅವರು ತಮ್ಮ ಎಕ್ಸ್ ಜಾಲತಾಣದ ಅಫೀಷಿಯಲ್ ಅಕೌಂಟ್ ಇಂದ ಪೋಸ್ಟ್ ಹಾಕಿದ್ದಾರೆ. ಕನ್ನಡ ಚಲನಚಿತ್ರ ಮಂಡಳಿ ಕರೆಗೆ ಓಗೊಟ್ಟು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಶಿವಣ್ಣ ಕೂಡ ಇದೇ ರೀತಿಯ ಮಾತುಗಳನ್ನು ನುಡಿದಿದ್ದರು.
ತಮಿಳು ನಟ ಸಿದ್ದಾರ್ಥ್ ಅವರ ಪರವಾಗಿ ಧ್ವನಿ ಎತ್ತಿದ್ದರು. ಪ್ರತಿಭಟನೆ ವೇದಿಕೆಯಲ್ಲಿ ಮಾತನಾಡಿದ ಶಿವಣ್ಣ (Shivarajkumar), ಕಾವೇರಿ ತಾಯಿಗೆ ನೋವಾಗಿದೆ, ಆದರೆ ಆ ತಾಯಿಗೆ ಬಹಳ ಶಕ್ತಿ ಇದೆ ಎಲ್ಲವನ್ನು ಸಹಿಸಿಕೊಂಡಿದ್ದಾರೆ. ಕಲಾವಿದರು ಪ್ರತಿಭಟನೆಗೆ ಬಂದು ಏನು ಮಾಡಬೇಕು ಹೇಳಿ, ರೈತ ಅನ್ನೋದು ಕಾಮನ್ ಪದ ಎಲ್ಲಾ ರೈತರು ಒಂದೇ ಅಲ್ವಾ..? ಎಂದು ಪ್ರಶ್ನೆ ಮಾಡಿದರು.
ಈ ಸಮಸ್ಯೆ ನ್ಯಾಯಾಲಯದಲ್ಲಿ ಬಗೆಹರಿಬೇಕು, ಎರಡು ರಾಜ್ಯದ ಸರ್ಕಾರಗಳು ಕುಳಿತು ಮಾತನಾಡಿ ಪರಿಹಾರ ಮಾಡಿಕೊಳ್ಳಬೇಕು, ಅದರ ಬದಲು ಗಲಾಟೆ ಮಾಡಿದರೆ ಏನೂ ಆಗಲ್ಲ, ನಿನ್ನೆ ಒಬ್ಬ ತಮಿಳು ನಟನಿಗೆ ಅವಮಾನವಾಗಿದೆ, ಮನಸ್ಸಿಂದ ಯೋಚನೆ ಮಾಡಿ ನೊಡಿ ಈ ರೀತಿ ಆದ್ರೆ ಹೋರಾಟಕ್ಕೆ ಮರ್ಯಾದೆಯೇ ಇರಲ್ಲ.
ಮುಂದಿನ ತಿಂಗಳಿನಿಂದ 10kg ಅನ್ನಭಾಗ್ಯ ಅಕ್ಕಿ ಗ್ಯಾರೆಂಟಿ – ಸಚಿವ H.K ಮುನಿಯಪ್ಪ
ಇನ್ನೊಬ್ಬರಿಗೆ ನೋ’ವು ಮಾಡಬಾರದು, ಕರ್ನಾಟಕಕ್ಕೆ ಎಲ್ಲೇ ಹೋದರು ಬಹಳ ಗೌರವ ಇದೆ ಅದು ಹಾಳಾಗುವ ರೀತಿ ಆಗಬಾರದು. ಕನ್ನಡ ಜನ ತುಂಬಾ ಒಳ್ಳೆಯವರು ಎಂದು ಶಿವಣ್ಣ ನಟ ಸಿದ್ಧಾರ್ಥ್ ಅವರಿಗೆ ಮಾಧ್ಯಮಗಳ ಮೂಲಕ ಕ್ಷಮೆ ಕೇಳಿದ್ದರು (Shivanna apologies Siddarath).
#ಕಾವೇರಿನಮ್ಮದು .. ಹೌದು .. ನಮ್ಮದೇ.. ಆದರೆ .. ದಶಕಗಳ ಈ ಸಮಸ್ಯೆಯನ್ನು ಪರಿಹರಿಸಲಾರದ ಎಲ್ಲಾ ಅಸಮರ್ಥ ರಾಜಕೀಯ ಪಕ್ಷಗಳನ್ನು .. ನಾಯಕರನ್ನು ಪ್ರಶ್ನಿಸದೆ.. ಕೇಂದ್ರ ಸರ್ಕಾರಕ್ಕೆ ಒತ್ತಡ ತರದ ನಾಲಾಯಕ್ ಸಂಸದರನ್ನು ತರಾಟೆಗೆ ತೆಗೆದುಕೊಳ್ಳದೆ.. ಹೀಗೆ ಅಸಹಾಯಕ ಜನಸಾಮಾನ್ಯರನ್ನು.. ಕಲಾವಿದರನ್ನು ಹಿಂಸಿಸುವುದು ತಪ್ಪು ..ಒಬ್ಬ ಕನ್ನಡಿಗನಾಗಿ… https://t.co/O2E2EW6Pd0
— Prakash Raj (@prakashraaj) September 28, 2023