ಸೆಲೆಬ್ರೆಟಿಗಳ ಸಂಸಾರದ ವಿಚಾರ ಯಾವಾಗಲೂ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಲ್ಲಿ ಇರುತ್ತದೆ. ಅವರ ಕುಟುಂಬದವರು ಹಂಚಿಕೊಳ್ಳುವ ಒಂದು ಸಣ್ಣ ವಿಡಿಯೋ ಸೈಟ್ ಗಾಗಿ ಕೂಡ ಅಭಿಮಾನಿಗಳು ಕಾಯುತ್ತಿರುತ್ತಾರೆ ಹಾಗೂ ತಮ್ಮ ನೆಚ್ಚಿನ ತಾರೆಯ ಕುಟುಂಬದಲ್ಲಿ ಅಥವಾ ವೈಯಕ್ತಿಕ ಜೀವನದ ಖುಷಿ ಹಾಗೂ ವಿಶೇಷ ಕ್ಷಣಗಳ ಸಂಭ್ರಮವನ್ನು ತಾವು ಕೂಡ ಸಂಭ್ರಮಿಸುತ್ತಾರೆ.
ಈ ನಿಟ್ಟಿನಲ್ಲಿ ಕ್ರಿಕೆಟ್ ತಾರೆಗಳು ಹಾಗೂ ಸಿನಿಮಾ ಸ್ಟಾರ್ಗಳ ಮೇಲಿನ ಅಭಿಮಾನ ಒಂದು ಮಟ್ಟಕ್ಕೆ ಹೆಚ್ಚಿನದು ಎಂದೇ ಹೇಳಬಹುದು. ಸಿನಿಮಾ ವಿಚಾರವಾಗಿ ಹೇಳುವುದಾದರೆ ನಮ್ಮ ಕರ್ನಾಟಕದಲ್ಲಿ ಸದ್ಯಕ್ಕೆ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿರುವ ಯಶ್ ಅವರ ಜೀವನದ ಬಗ್ಗೆ ಅಭಿಮಾನಿ ವಲಯಕ್ಕೆ ಬಹಳ ಕುತೂಹಲ ಇದೆ.
ಯಶ್ ಅವರ ಸಿನಿಮಾ ಅಪ್ಡೇಟ್ ಹೊರತಾಗಿಯೂ ಅವರ ಹಂಚಿಕೊಳ್ಳುವ ಅವರ ಪರ್ಸನಲ್ ಲೈಫ್ ಫೋಟೋ ಹಾಗೂ ವಿಡಿಯೋಗಳು ಅವರನ್ನು ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರಗೊಳಿಸುತ್ತಿದೆ ಈಗಾಗಲೇ ಕರ್ನಾಟಕದಲ್ಲಿ ಸಾವಿರಾರು ಮಂದಿ ಯಶ್ ದಂಪತಿಗಳನ್ನು ಸ್ಪೂರ್ತಿಯಾಗಿ ತೆಗೆದುಕೊಂಡು ಸಾಧನೆ, ಪ್ರೀತಿ, ಮದುವೆ ಸಂಸಾರ ಎಲ್ಲ ವಿಷಯದಲ್ಲೂ ಮಿಸ್ಟರ್ ಪರ್ಫೆಕ್ಟ್ ಎನ್ನುವ ಅವಾರ್ಡ್ ಕೊಟ್ಟಿದ್ದಾರೆ.
ಸಿನಿಮಾದಲ್ಲಿ ತಾವಷ್ಟೇ ಉತ್ತುಂಗಕ್ಕೆ ಏರಿದರು ಆಗಾಗ ಮಡದಿ ಹಾಗೂ ಮಕ್ಕಳ ಜೊತೆ ಇರಲು ಸಮಯ ಮಾಡಿಕೊಳ್ಳುವ ಇವರು ಮಕ್ಕಳೊಂದಿಗೆ ಆಡುವ ತುಂಟಾಟದ ವಿಡಿಯೋಗಳನ್ನು ಕೂಡ ಪೋಸ್ಟ್ ಮಾಡಿ ಜೀವನದಲ್ಲಿ ಸಂತೋಷ ಎನ್ನುವುದು ಎಷ್ಟು ಸಿಂಪಲ್ ಆಗಿರುತ್ತದೆ ಎನ್ನುವುದನ್ನು ಎಲ್ಲರಿಗೂ ಅನುಭವವಾಗುವಂತೆ ಮಾಡುತ್ತಾರೆ.
ಜೊತೆಗೆ ರಾಧಿಕಾ ಪಂಡಿತ್ ಅವರು ಕೂಡ ಸದ್ಯಕ್ಕೆ ಚಿತ್ರರಂಗದಿಂದ ದೂರ ಇದ್ದು ತಮ್ಮ ಇಬ್ಬರು ಮಕ್ಕಳ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಯಶ್ ಅವರ ಸಿನಿಮಾ ಸಂಬಂಧಿತ ಕಾರ್ಯಕ್ರಮಗಳನ್ನು ಹೊರತುಪಡಿಸಿ ಹೊರಗೆಲ್ಲೂ ಕ್ಯಾಮೆರಾ ಕಣ್ಣಿಗೆ ಹೆಚ್ಚಾಗಿ ಬೆಳೆದ ರಾಧಿಕಾ ಪಂಡಿತ್ ಅವರು ಸೋಶಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿರುತ್ತಾರೆ.
ಸದಾ ತಮ್ಮ ಮಗಳ ಹಾಗೂ ಮಗನ ಬಗ್ಗೆ ಪೋಸ್ಟ್ ಹಂಚಿಕೊಳ್ಳುವ ಅವರ ಖಾತೆಯಿಂದ ಮತ್ತೊಂದು ವಿಡಿಯೋ ಶೇರ್ ಆಗಿದ್ದು ಈಗ ಅದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ ಈ ಫೋಟೋದಲ್ಲಿ ರಾಧಿಕ ಪಂಡಿತ್ ಹಾಗೂ ಯಥರ್ವ್ ಕಾಣಿಸಿಕೊಂಡಿದ್ದಾರೆ. ಈ ಫೋಟೋದಲ್ಲಿ ಯಶ್ ಪುತ್ರ ಅಮ್ಮ ರಾಧಿಕಾ ಪಂಡಿತ್ ಗೆ ಬಹಳ ಪ್ರೀತಿಯಿಂದ ಮಲ್ಲಿಗೆ ಹೂ ಮುಡಿಸುತ್ತಿದ್ದಾರೆ.
ಮಗನ ಈ ಪ್ರೀತಿಗೆ ಕರಗಿ ರಾಧಿಕಾ ಥ್ಯಾಂಕ್ಸ್ ಹೇಳಿದ್ದಾರೆ ಕೆಲವೇ ಸೆಕೆಂಡ್ಗಳ ಕಾಲ ಇರುವ ವಿಡಿಯೋ ನೋಡಿ ಇದರಲ್ಲಿ ಅಮ್ಮ ಮಗನ ಬಾಂಧವ್ಯಕ್ಕೆ ಅಭಿಮಾನಿಗಳ ಫಿದಾ ಆಗಿದ್ದಾರೆ. ರಾಕಿ ಬಾಯ್ ಮಗನಿಗೆ ಅಮ್ಮನ ಮೇಲಿರುವ ಪ್ರೀತಿಯ ಬಗ್ಗೆ ಹಾಡಿ ಹೊಗಳಿ ಕಮೆಂಟ್ ಮಾಡುತ್ತಿದ್ದಾರೆ. ರಾಧಿಕಾ ಪಂಡಿತ್ ಅವರು ಪ್ರತಿಯೊಂದು ವಿಶೇಷ ಸಂದರ್ಭದಲ್ಲೂ ಕೂಡ ಮಕ್ಕಳ ಜೊತೆ ಫೋಟೋಶೂಟ್ ಮಾಡಿಸಿ ಅದನ್ನು ತಮ್ಮ ಸೋಶಿಯಲ್ ಮೀಡಿಯ ಖಾತೆಯಲ್ಲಿ ಹಂಚಿಕೊಳ್ಳುದ್ದಾರೆ.
ಈಗಷ್ಟೇ ದಸರಾ ಹಬ್ಬದ ಪ್ರಯುಕ್ತ ತಮ್ಮ ಮನೆಯ ಮಕ್ಕಳುಗಳು ಅವರ ಸೈಕಲ್ಗಳಿಗೆ ಪೂಜೆ ಮಾಡಿದ ಫೋಟೋ ಕೂಡ ಹಂಚಿಕೊಂಡಿದ್ದ ಇವರು ಹೀಗೆ ಪ್ರತಿಯೊಂದು ವಿಷಯದಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಸದಾ ಕನ್ನಡ ಜನತೆಗೆ ಜೊತೆ ಕನೆಕ್ಟ್ ಆಗಿರುತ್ತಾರೆ. ಈ ಮುದ್ದು ಕುಟುಂಬದ ಬಗ್ಗೆ ನಿಮ್ಮ ಅಭಿಪ್ರಾಯ ಕಾಮೆಂಟ್ ಮಾಡಿ ತಿಳಿಸಿ.