ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 (Bigboss S10) ಕ್ಕೆ ಕಳೆದ ಭಾನುವಾರ ತೆರೆ ಬಿದ್ದಿದೆ. ಹ್ಯಾಪಿ ಬಿಗ್ ಬಾಸ್ ಎನ್ನುವ ಥೀಮ್ ನೊಂದಿಗೆ ಆರಂಭವಾಗಿ ಬಹಳ ಅಗ್ರೆಶನ್ ನೊಂದಿಗೆ ನಡೆದ 112 ದಿನಗಳ ಈ ಆಟ ಅಂತ್ಯವಾಗಿದ್ದು ಅಂತಿಮವಾಗಿ ಟ್ರೋಫಿ ಕಾರ್ತಿಕ್ ಮಹೇಶ್ (Karthik Mahesh Winner) ಅವರ ಪಾಲಾಗಿದೆ.
ಇದುವರೆಗಿನ ಎಲ್ಲಾ ಸೀಸನ್ ಗಿಂತಲೂ ಬಹಳ ಕ್ಯೂರಿಯಾಸಿಟಿ ಕ್ರಿಯೇಟ್ ಮಾಡಿದ್ದ ಸೀಸನ್ ಎಂದೇ ಹೇಳಬಹುದು, ಯಾಕೆಂದರೆ ಈ ಬಾರಿ ಅಂತಿಮವಾಗಿ ಉಳಿದಿದ್ದ ಫೈನಲ್ 5 ಕಂಟೆಸ್ಟೆಂಟ್ ಗಳು ಕೂಡ ಘಟಾನುಘಟಿಗಳಾಗಿದ್ದರು. ಒಳಗೆ ನಡೆಯುತ್ತಿದ್ದ ಟಾಸ್ಕ್ ಗಳು ಮಾತ್ರವಲ್ಲದೆ ಹೊರಗಿನ ಜನ ಬೆಂಬಲ ಕೂಡ ಐದು ಜನರ ಮೇಲೂ ಸಮಾನವಾಗಿತ್ತು.
ಹಾಗಾಗಿ ಬಿಗ್ ಬಾಸ್ ಪ್ರತಿಯೊಬ್ಬ ಅಭಿಮಾನಿ ಕೂಡ ಸುದೀಪ್ ಅವರು ಯಾರ ಕೈ ಮೇಲೆತ್ತಿದ್ದಾರೆ ಎಂದು ನೋಡಲು ಕಾಯುತ್ತಿದ್ದರು. ಬಿಗ್ ಬಾಸ್ ಮುಗಿದು ವಾರ ಕಳೆಯುತ್ತಿದ್ದರು ಬಿಗ್ ಬಾಸ್ ಹವಾ ಮಾತ್ರ ಕಡಿಮೆಯಾಗಿಲ್ಲ. ಮೀಡಿಯಾ ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ಇನ್ನು ಜನರು ಅದೇ ಗುಂಗಿನಲ್ಲಿದ್ದಾರೆ ಮತ್ತು ಎಲ್ಲಾ ಕಡೆ ಬಿಗ್ ಬಾಸ್ ಸ್ಪರ್ಧಿಗಳ ಸಂದರ್ಶನ ಕೂಡ ನಡೆಯುತ್ತಿದೆ.
ಈ ಸುದ್ದಿ ಓದಿ:- ಅಭಿಮಾನಿಗಳಿಗೆ ವಿಶೇಷ ಮನವಿ ಮಾಡಿದ ನಟ ದರ್ಶನ್.!
ಮನೆಯಲ್ಲಿ ಸಿಂಹಿಣಿ ಎಂದು ಕರೆಸಿಕೊಂಡಿದ್ದ ಸಂಗೀತರವರು (Sangeetha Shringeri) ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದಾರೆ ಮತ್ತು ಅವರಿಗೆ ನಿರೂಪಕರಿಂದ ಬಳೆ ಬಗ್ಗೆ ಮತ್ತು ಮನೆಯಲ್ಲಿದ್ದ ಎಲ್ಲ ಸ್ಪರ್ಧಿಗಳ ಬಗ್ಗೆ ಪಾಸಿಟಿವಿಟಿ ಬಗ್ಗೆ ಆಧ್ಯಾತ್ಮದ ಬಗ್ಗೆ ಮತ್ತು ಶೋಗಾಗಿ.
ಅವರು ತೆಗೆದುಕೊಂಡ ರಿಸ್ಕ್ ಗಳ ಬಗ್ಗೆ ಮುಂದಿನ ಅವಕಾಶಗಳ ಬಗ್ಗೆ ಆಸೆ ಆಕಾಂಕ್ಷೆಗಳ ಬಗ್ಗೆ ಮತ್ತು ಬಿಗ್ ಬಾಸ್ ನಂತರದ ಆರಂಭವಾಗಿರುವ ಮತ್ತೊಂದು ಜರ್ನಿ ಬಗ್ಗೆ ಹೀಗೆ ಹತ್ತಾರು ಪ್ರಶ್ನೆಗಳು ಕೇಳಲ್ಪಟ್ಟಿವೆ. ಈ ಪ್ರಶ್ನೆಗಳಲ್ಲೊಂದು ಮನೆ ಒಳಗಿದ್ದಾಗ ಹಾಗೂ ಹೊರಗೆ ಬಂದು ಎಪಿಸೋಡ್ ಗಳನ್ನು ನೋಡಿದ ಮೇಲೆ.
ಯಾರು ಬಿಗ್ ಬಾಸ್ ಟ್ರೋಫಿ ಗೆಲ್ಲುವುದಕ್ಕೆ ಯಾರು ಹೆಚ್ಚು ಡಿಸರ್ವ್ ಎಂದು ನಿಮಗೆ ಅನಿಸಿತು ಎಂದು ಕೇಳಿದ್ದಕ್ಕೆ ತಕ್ಷಣ ರಿಯಾಕ್ಟ್ ಮಾಡಿದ ಸಂಗೀತ ಅವರು. ನನಗೆ ವೇದಿಕೆ ಮೇಲೆ ಕೂಡ ಸುದೀಪ್ ಸರ್ ನಿಂದ ಇದೇ ಪ್ರಶ್ನೆ ಎದುರಾಗಿತ್ತು ಆಗಲು ನಾನು ಇದೇ ಉತ್ತರ ಹೇಳಿದ್ದೆ. ನಾನು ಕಾರ್ಯಕ್ರಮಕ್ಕೆ ಹೋಗಿದ್ದೆ ನಾನು ಗೆಲ್ಲಬೇಕು ಎಂದು ಹಾಗೂ ಗೆಲ್ಲುವುದಕ್ಕಾಗಿ ನಾನು ಸಾಕಷ್ಟು ಕಷ್ಟ ಪಟ್ಟಿದ್ದೇನೆ.
ಈ ಸುದ್ದಿ ಓದಿ:- ತಮ್ಮ ಮತ್ತು ಪತಿ ಅವಿನಾಶ್ ಅವರ ನಡುವಿನ ಒಪ್ಪಂದದ ಬಗ್ಗೆ ಮುಕ್ತವಾಗಿ ಹೇಳಿಕೊಂಡ ಮಾಳ್ವಿಕ ಅವಿನಾಶ್.!
ಯಾರ ಕೈ ಮೇಲಿರಬೇಕು ಎನ್ನುವ ಪ್ರಶ್ನೆ ಬಂದಾಗ ನನ್ನ ಕೈ ಮೇಲಿರಬೇಕು ಎನ್ನುವ ಉತ್ತರ ಕೊಟ್ಟಿದ್ದೇನೆ ಮತ್ತು ಈಗಲೂ ಅದನ್ನೇ ಹೇಳುತ್ತಿದ್ದೇನೆ. ನಾನು ಹೋಗಿದ್ದು ಬೇರೆಯವರನ್ನು ಗೆಲ್ಲಿಸುವುದಕ್ಕಾಗಿ ಅಲ್ಲ ನನಗೆ ನಾನೇ ಗೆಲ್ಲಬೇಕಿತ್ತು ಈಗ ಕಾರ್ತಿಕ್ ಗೆದ್ದಿದ್ದಾರೆ ಅವರು ಗೆದ್ದಿರುವುದಕ್ಕೆ ನಾನು ಏಕೆ ಖುಷಿ ಪಡಬೇಕು ಎಂದು ಕೇಳಿದ್ದಾರೆ.
ಕಾರ್ತಿಕ್ ಅಲ್ಲ ಪ್ರತಾಪ್ ಕೈ ಮೇಲಿದ್ದರೂ ಕೂಡ ಇದೇ ಉತ್ತರ ಹೇಳುತ್ತಿದ್ದೆ. ಯಾಕೆಂದರೆ ನಾನು ಗೆಲ್ಲಬೇಕಿತ್ತು ಗೆಲ್ಲಲಿಲ್ಲ ಆ ಗೆಲುವು ಮತ್ತೊಬ್ಬರ ಪಾಲಾಗಿದೆ ಅದನ್ನು ನಾನು ಅಕ್ಸೆಪ್ಟ್ ಮಾಡಿಕೊಳ್ಳಲೇಬೇಕು ಮತ್ತು ಮುಂದುವರಿಯಬೇಕು. ಇದರಲ್ಲಿ ಖುಷಿ ಪಡುವಂಥದ್ದು ಏನು ಇಲ್ಲ ನಾನು ಗೆದ್ದಿದ್ದರೆ ಖುಷಿ ಆಗುತ್ತಿತ್ತು ಈಗ ಬೇರೆಯವರು ಗೆದ್ದಿದ್ದಾರೆ ಅದನ್ನು ಒಪ್ಪಿಕೊಳ್ಳುತ್ತೇನೆ ಅಷ್ಟೇ ಎಂದು ಖಡಕ್ಕಾಗಿ ಉತ್ತರ ಕೊಟ್ಟಿದ್ದಾರೆ.