KGF ಕನ್ನಡ ಚಿತ್ರರಂಗದಲ್ಲಿ ಹಿರಿಮೆ. KGF ಸಿನಿಮಾ (KGF Movie) ಸರಣಿಗಳು ಚಂದನವನದ ದಿಕ್ಕು ದೆಸೆಯನ್ನೇ ಬದಲಾಯಿಸಿದವು ಎಂದೇ ಹೇಳಬಹುದು. ಇದು ಕನ್ನಡ ಚಿತ್ರರಂಗದ ಒಂದು ದಾಖಲೆ. ಇಡೀ ದೇಶ ಯಶ್ (Yash) ಮುಂದಿನ ಪ್ರಾಜೆಕ್ಟ್ ಗಾಗಿ ಕಾಯುತಿದೆ ಎಂದರೆ ಇಷ್ಟು ವರ್ಷಗಳ ಯಶ್ ಪರಿಶ್ರಮಕ್ಕೆ ಸಿಕ್ಕ ಗೆಲುವು ಅದು.
ಕೆಜಿಎಫ್ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆದರೂ ಕೂಡ ಕನ್ನಡ ಚಿತ್ರರಂಗದಲ್ಲಿ 2014ರಿಂದಲೇ ಟಾಪ್ ಹೀರೋ ಆಗಿದ್ದರು. ತನ್ನ ದೂರದೃಷ್ಟಿಯಿಂದ ಹಾಗೂ ಪಾತ್ರಕ್ಕೆ ಜೀವ ತುಂಬಿದ ಕಾರಣ ಎಂದು ಇಂಟರ್ನ್ಯಾಷನಲ್ ಮಟ್ಟದಲ್ಲಿ ಯಶ್ ಸುದ್ದಿಯಲ್ಲಿದ್ದಾರೆ. ಆದರೆ ಈ ಸಿನಿಮಾ ಬಗ್ಗೆ ಹಾಗೂ ಯಶ್ ಬಗ್ಗೆ ಟಾಲಿವುಡ್ ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ (Allu Aravind Contrevercy Statement about Yash and KGF) ಅವರು ಉಡಾಫೆಯಾಗಿ ಮಾತನಾಡಿದ್ದಾರೆ.
ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರ ತಂದೆ ಆಗಿರುವ ಅಲ್ಲು ಅರವಿಂದ್ ಅವರು ತೆಲುಗು ಚಿತ್ರರಂಗದ ಖ್ಯಾತ ನಿರ್ಮಾಪಕರು. ಈಗ ಟಾಲಿವುಡ್ ನಲ್ಲಿ ಎಲ್ಲಾ ಸ್ಟಾರ್ ಗಳು ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಳ್ಳುತ್ತಿರುವ ಕಾರಣದಿಂದಾಗಿ ನಿರ್ಮಾಪಕರ ಸಂಘದಿಂದ ಇದಕ್ಕೆ ವಿರೋಧವಿದೆ. ಇದೇ ವಿಚಾರ ಹೆಚ್ಚು ಚರ್ಚೆಯಲ್ಲಿದೆ ಮತ್ತು ಇದಕ್ಕೆ ಸಂಬಂಧಿಸಿದಂತೆ ಸಂದರ್ಶನ ಒಂದರಲ್ಲಿ ಅಲ್ಲು ಅರವಿಂದ ಅವರಿಗೆ ಪ್ರಶ್ನೆ ಎದುರಾಯಿತು.
ಇತ್ತೀಚಿಗೆ ಸಿನಿಮಾಗಳು ಹೈ ಬಜೆಟ್ ನಲ್ಲಿ ತಯಾರಾಗಿ ಅಷ್ಟೇ ದೊಡ್ಡದ ಮಟ್ಟದ ಹಣವನ್ನು ಕೂಡ ಪಡೆಯುತ್ತಿದ್ದೆ ಹಾಗಿದ್ದಲ್ಲಿ ಸ್ಟಾರ್ ಗಳು ತಮ್ಮ ಸಂಭಾವನೆ ಹೆಚ್ಚಿಸಿಕೊಳ್ಳುವುದರಲ್ಲಿ ಏನು ತಪ್ಪು ಎಂದಿದ್ದಕ್ಕೆ ಅವರು ಕೊಟ್ಟ ಉತ್ತರ ಈ ರೀತಿ ಇತ್ತು ಈ ಬಗ್ಗೆ ಮಾತನಾಡಿರುವ ಅಲ್ಲು ಅರವಿಂದ್ ಅವರು ಸಿನಿಮಾದಲ್ಲಿ ನಾಯಕ ನಟನಾದವನು, ಆ ಚಿತ್ರದ ಶೇ. 20 ರಿಂದ 25 ರಷ್ಟು ಮೊತ್ತವನ್ನು ಸಂಭಾವನೆ ರೂಪದಲ್ಲಿ ಪಡೆಯುತ್ತಾನೆ.
ಆದರೆ, ಅವನ ಸಂಭಾವನೆಯಿಂದ ಮಾತ್ರವೇ ಸಿನಿಮಾದ ಬಜೆಟ್ ಹೆಚ್ಚಾಗುತ್ತದೆ ಎಂದು ಹೇಳುವಂತಿಲ್ಲ. ಸಿನಿಮಾಗೆ ಯಾರು ಹೀರೋ ಆಗಿದ್ದಾರೆ ಎಂಬುದು ಮುಖ್ಯವಲ್ಲ ಕಥೆಗೆ ತಕ್ಕ ಹಾಗೆ ನಟರು ಯಾರೇ ಆದರೂ, ಸಿನಿಮಾ ಅದ್ಧೂರಿಯಾಗಿ ಮೂಡಿಬರಬೇಕು ಎನ್ನುವ ಕಾರಣದಿಂದ ಅಲ್ಲಿ ಹೂಡಿಕೆ ಮಾಡಲಾಗುತ್ತದೆ ಎಂದಿದ್ದಾರೆ.
ಮುಂದುವರೆದು ಅದೇ ಸಮಯದಲ್ಲಿ ಯಶ್ ಅವರನ್ನು ನೆನೆದು ಯಶ್ ಹೆಸರನ್ನೂ ಹೇಳಿದ ಅಲ್ಲು ಅರವಿಂದ್, KGF ಸಿನಿಮಾ ಬರುವುದಕ್ಕೂ ಮುನ್ನ ಯಶ್ ಯಾರು? ಆ ಸಿನಿಮಾ ಏಕೆ ಸದ್ದು ಮಾಡಿತು? ಮೇಕಿಂಗ್‌ನಿಂದ ಮತ್ತು ಅದ್ಧೂರಿತನದಿಂದಲೇ ಆ ಸಿನಿಮಾವನ್ನು ಮೇಲಕ್ಕೆ ಎತ್ತಿದರು ಆ ಶ್ರೀಮಂತಿಕೆಯೇ KGF ಸಿನಿಮಾದ ಯಶಸ್ಸಿಗೆ ಕಾರಣವಾದದ್ದು ಇದು ಕೇವಲ ಒಂದು ಉದಾಹರಣೆ ಮಾತ್ರ.
ಸಿನಿಮಾದ ಹೀರೋ ಯಾರೇ ಆದರೂ, ಮೇಕಿಂಗ್‌ನಿಂದಲೇ ಅದು ಪ್ರೇಕ್ಷಕನನ್ನು ಸೆಳೆಯುವುದು ದೊಡ್ಡ ಕಲಾವಿದರನ್ನು ಆಯ್ಕೆ ಮಾಡಿದ ತಕ್ಷಣ ಸಿನಿಮಾ ಗೆಲ್ಲುವುದಿಲ್ಲ. ಕ್ವಾಲಿಟಿ ನೀಡುವುದೂ ಅಷ್ಟೇ ಮುಖ್ಯ ಎಂದು ವಿವಾದಾತ್ಮಕ ಹೇಳಿಕೆ ಕೊಟ್ಟು ಕಾಂಟ್ರವರ್ಸಿ ಸೃಷ್ಟಿಸಿ ಕೊಂಡಿದ್ದಾರೆ ಅಲ್ಲು ಅರವಿಂದ್.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಯಶ್ ಬಗ್ಗೆ ಅಲ್ಲು ಅರ್ಜುನ್ ತಂದೆ ಈ ರೀತಿ ಮಾತನಾಡಿದ ತಪ್ಪು ಎಂದು ಯಶ್ ಅಭಿಮಾನಿಗಳೆಲ್ಲರೂ ಖಂಡಿಸುತ್ತಿದ್ದಾರೆ. ಆದರೆ ಅಲ್ಲು ಅರವಿಂದ್ ಅವರು ಈ ರೀತಿ ಸಂಭಾವನೆ ಮಟ್ಟ ಕಡಿಮೆ ಆದರೆ ಇನ್ನೂ ಹೆಚ್ಚಿನ ಸಿನಿಮಾವನ್ನು ನಿರ್ಮಾಣ ಮಾಡಲು ನಿರ್ಮಾಪಕರಿಗೆ ಅನುಕೂಲವಾಗುತ್ತದೆ ಮತ್ತು ಸಿನಿಮಾ ಇನ್ನು ಗ್ರಾಂಡ್ ಆಗಿರುತ್ತದೆ ಎನ್ನುವುದು ನನ್ನ ಮಾತಿನ ಅಭಿಪ್ರಾಯ ಎಂದಿದ್ದಾರೆ.