ಕನ್ನಡದ ಹೆಸರಾಂತ ಕಂಠದಾನ ಕಲಾವಿದರಲ್ಲಿ ಒಬ್ಬರಾದ ಕನ್ನಡ ಕಿರುತೆರೆಗೆ ಚಿರಪಚಿತವಾದ ರಂಗಭೂಮಿ ಕರ್ಮಿ ಶ್ರೀನಿವಾಸ್ ಪ್ರಭು (Dubbing artist Shrinivas Prabhu) ಅವರು ರವಿಚಂದ್ರನ್ ಅವರ ಸಾವಿರ ಸುಳ್ಳು ಸಿನಿಮಾದಿಂದ ಹಿಡಿದು ಅಭಿಮನ್ಯು ತನಕ ಯಶಸ್ವಿಯಾದ ಸೂಪರ್ ಡೂಪರ್ 20 ಚಿತ್ರಗಳಿಗೆ ರವಿಚಂದ್ರನ್ (dub voice to Ravichandran Movies) ಅವರ ಶಾರೀರ್ಯವಾಗಿದ್ದರು.
ಆದರೆ ಅದಕ್ಕೆ ತಕ್ಕ ಬೆಲೆ ಹಾಗೂ ಗೌರವವನ್ನು ಅವರು ಕೊಡಲಿಲ್ಲ ನಾನು ಅವರಿಗೆ ವಾಯ್ಸ್ ಕೊಡುತ್ತೇನೆ ಎನ್ನುವುದನ್ನು ಹೇಳಿಕೊಳ್ಳಲು ಇಷ್ಟ ಇರಲಿಲ್ಲ ಎನ್ನುವುದನ್ನು ಇತ್ತೀಚೆಗೆ ಯೂಟ್ಯೂಬ್ ಚಾನೆಲ್ ಸಂದರ್ಶನವೊಂದರಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ ಪ್ರಭು.
ರಂಗಭೂಮಿಯಲ್ಲಿ ಬಹಳ ಒಳ್ಳೆಯ ನಾಟಕಗಳಲ್ಲಿ ಕಾಣಿಸಿಕೊಂಡು ಹೆಸರು ಮಾಡಿದ್ದ ಮತ್ತು ದೂರದರ್ಶನವಾಹಿನಿಯಲ್ಲಿ ಕೆಲಸಗಾರನಾಗಿದ್ದ ಶ್ರೀನಿವಾಸ್ ಪ್ರಭು ಅವರಿಗೆ ಒಮ್ಮೆ ರವಿಚಂದ್ರನ್ ಅವರಿಗೆ ಧ್ವನಿ ಆಗುವ ಅವಕಾಶ ಸಿಗುತ್ತದೆ ಇವರ ನಾಟಕಗಳನ್ನು ನೋಡಿದ್ದ ಸಿ.ಆರ್ ಸಿಂಹ ರವರು ಸಾವಿರ ಸುಳ್ಳು ಸಿನಿಮಾದಲ್ಲಿ ಅಭಿನಯಿಸುತ್ತಿದ್ದರು.
ಸಾವಿರ ಸುಳ್ಳು ಸಿನಿಮಾ ಹಿಂದೆ ಬಂದ ರವಿಚಂದ್ರನ್ ಅವರ ಸಿನಿಮಾಗಳಲ್ಲಿ ರವಿಚಂದ್ರನ್ ಅವರಿಗೆ ನೀಡಿದ್ದ ಧ್ವನಿ ರವಿಚಂದ್ರನ್ ಅವರಿಗೂ ಹಾಗೂ ವೀರಾಸ್ವಾಮಿ ಅವರಿಗೂ ಅಷ್ಟೊಂದು ಸಮಾಧಾನ ಇರಲಿಲ್ಲ. ಹಾಗಾಗಿ ಕಲಾವಿದನನ್ನು ಹುಡುಕುತ್ತಿದ್ದರು, ನನ್ನನ್ನು ಕೂಡ ಕರೆಸಿಕೊಂಡಿದ್ದರು.
ಇವರು ಸಿನಿಮಾದ ಕೆಲವು ಸನ್ನಿವೇಶಗಳಿಗೆ ವಾಯ್ಸ್ ಕೊಟ್ಟು ಕೆಲಸಕ್ಕೆ ಹೋಗಿದ್ದರಂತೆ ಆದರೆ ಅವರು ಹೋದ ಒಂದುವರೆ ಎರಡು ಗಂಟೆಗಳೊಂದಿಗೆ ಇನ್ನು ಮುಂದಿನ ಸಿನಿಮಾಗಳಿಗೆ ರವಿಚಂದ್ರನ್ ಗೆ ವಾಯ್ಸ್ ಆಗಬೇಕು ಎಂದು ಆಫರ್ ಕೊಟ್ಟರಂತೆ ಮ. ಆದರೆ ದೂರದರ್ಶನದಲ್ಲಿ ಕೆಲಸ ಮಾಡುವವರು ಬೇರೆ ಕಡೆ ಕಾಣಿಸಿಕೊಳ್ಳುವುದು ನಿ’ಷಿ’ದ್ಧ ಆಗಿತ್ತು.
ಆದರೂ ಆಸಕ್ತಿಯಿಂದ ಕೆಲಸಕ್ಕೆ ತೊಂದರೆ ಆಗದಂತೆ ನಿಭಾಯಿಸಿಕೊಂಡು ಬಿಡುವಿದ್ದಾಗ ಡಬ್ಬಿಂಗ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು ತಮ್ಮ ಮತ್ತು ನಾಟಕಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು ಶ್ರೀನಿವಾಸ್ ಪ್ರಭು. ಸಾವಿರ ಸುಳ್ಳು, ಪ್ರೇಮಲೋಕ, ರಣಧೀರ, ಯುದ್ಧಕಾಂಡ, ಯುಗಪುರುಷ, ಸ್ವಾಭಿಮಾನಿ, ನಾನು ನನ್ನ ಹೆಂಡ್ತಿ, ಬಣ್ಣದ ಗೆಜ್ಜೆ, ಕಿಂದರಿ ಜೋಗಿ ಸೇರಿದಂತೆ ಅಭಿಮನ್ಯು ಸಿನಿಮಾ ತನಕ ಸುಮಾರು 20 ಯಶಸ್ವಿ ಸಿನಿಮಾಗಳಿಗೆ ರವಿಚಂದ್ರನ್ ಅವರ ವಾಯ್ಸ್ ಆಗಿದ್ದರು ಪ್ರಭು.
ಸಂಭಾವನೆ ವಿಚಾರದಲ್ಲಿ ಆಗಲಿ ಅಥವಾ ಪ್ರಶಂಶಿಸುವ ವಿಚಾರದಲ್ಲಿ ಆಗಲಿ ಇವರಿಗೆ ಸರಿಯಾದ ಸ್ಥಾನಮಾನ ಸಿಗಲಿಲ್ಲ ಎಂದು ಇಂದಿಗೂ ಆ ಘಟನೆಗಳನ್ನು ನೆನೆದು ಬೇಸರಿಸಿಕೊಳ್ಳುತ್ತಾರೆ ಇವರು. ಹಿಂದಿನ ಘಟನೆಗಳನ್ನು ನೆನೆದ ಇವರು ಪ್ರೇಮಲೋಕ ಸಿನಿಮಾ (Premaloka) ಗೆದ್ದ ಸಂತಸದಲ್ಲಿ ಎಲ್ಲರಿಗೂ ಸ್ಮರಣಿಕೆಗಳನ್ನು ಕೊಡುತ್ತಿದ್ದರು, ಆದರೆ ಕಂಠದ ಕಲಾವಿದರಿಗೆ ಇರಲಿಲ್ಲ.
ಪ್ರೊಡಕ್ಷನ್ ನಲ್ಲಿ ಕೆಲಸ ಮಾಡಿದ ಹುಡುಗನಿಗೆ ಸಿಗುತ್ತೆ ಕಂಠದಾನ ಕಲಾವಿದನ ಕೊಡುಗೆ ಸಿನಿಮಾದಲ್ಲಿ ಇಲ್ಲವೇ ದಯವಿಟ್ಟು ನಮ್ಮ ಪರವಾಗಿ ಕೇಳಿ ಎಂದು ಉಳಿದ ಕಂಠದಾನ ಕಲಾವಿದರು ಇವರನ್ನು ಮುಂದೆ ಕಳಿಸಿದ್ದರಂತೆ. ರವಿಚಂದ್ರನ್ ಅವರ ಜೊತೆ ಇವರು ಮಾತನಾಡಿದಾಗ ನಾನು ವೇದಿಕೆ ಮೇಲೆ ಹೇಗೆ ನೀನು ನನಗೆ ಧ್ವನಿ ಎಂದು ಹೇಳಿಕೊಳ್ಳಲಿ ಆಗುವುದಿಲ್ಲ ಎಂದು ಹೇಳಿದರಂತೆ.
ನೀವು ಪರಿಚಯ ಮಾಡುವುದ ಬೇಡ ಕಂಠದಾನ ಕಲಾವಿದ ಎಂದು ಹೇಳಿಕೊಡಿ ಅಥವಾ ತಂತ್ರಜ್ಞ ಎಂದು ಹೇಳಿಕೊಡಿ ಎಂದು ಕೇಳಿದ್ದಕ್ಕೂ ಸುಮ್ಮನೆ ಹಾಗೆ ಒಂದು ಕೊಡುತ್ತೇನೆ ಇಟ್ಟುಕೊಳ್ಳಿ ಎಂದ್ದಿದ್ದರಂತೆ. ಹಾಗಾದರೆ ನನಗೆ ಅದು ಬೇಡ ಬಿಡಿ ಎಂದು ಸುಮ್ಮನಾಗಿದ್ದರಂತೆ. ಆದರೆ ಕಾರ್ಯಕ್ರಮಕ್ಕೆ ಆಹ್ವಾನ ಕೊಟ್ಟು ನಂತರ ನಡೆದ ಪಾರ್ಟಿಗೂ ಕರೆದಿದ್ದರಂತೆ.
ಆ ಪಾರ್ಟಿಯಲ್ಲಿ ಕಾಣಿಸಿಕೊಂಡ ಇವರನ್ನು ನೋಡಿದ ಪತ್ರಕರ್ತ ಗೆಳೆಯರು ನಿಮಗೆ ಏಕೆ ಸ್ಮರಣಿಕೆ ಕೊಡಲಿಲ್ಲ ಎಂದು ಶ್ರೀನಿವಾಸ್ ಅವರನ್ನು ಪ್ರಶ್ನೆ ಮಾಡಿದಾಗ ನಿಮ್ಮ ಪ್ರಶ್ನೆ ಸರಿಯಾಗಿದೆ, ಆದರೆ ಕೇಳುತ್ತಿರುವ ವ್ಯಕ್ತಿ ಸರಿಯಾಗಿಲ್ಲ ಎಂದಿದ್ದರಂತೆ. ಬಳಿಕ ಅರಗಿಣಿ ಮುಂತಾದ ಪತ್ರಿಕೆಗಳಲ್ಲಿ, ಯಾರೂ ಕ್ಯಾರೆ ಎನ್ನದ ಟಿವಿ ಪ್ರಭು ಕಂಠ ಎಂಬ ಲೇಖನಗಳು ಬಂದು ವೀರಾಸ್ವಾಮಿಗಳ ಕಣ್ಣಿಗೂ ಬಿದ್ದು ಬೇಸರ ಮಾಡಿಕೊಂಡಿದ್ದರಂತೆ.
ಆದರೆ ನಿಜವಾಗಿಯೂ ಇದರಲ್ಲಿ ನನ್ನ ಪಾಲು ಏನು ಇಲ್ಲ ಅವರಾಗಿಯೇ ಬರೆದಿದ್ದಾರೆ ನಿಮಗೆ ಅಷ್ಟು ಬೇಸರವಾಗಿದ್ದರೆ, ನನ್ನ ಧ್ವನಿಯನ್ನು ಬದಲಾಯಿಸಿಕೊಳ್ಳಬಹುದು ಎಂದು ವೀರಾಸ್ವಾಮಿ ಮುಂದೆ ಹೇಳಿಕೊಂಡರಂತೆ. ಇದೊಂದೆ ಅಲ್ಲ ಆಗ ಕಂಠದಾನ ಕಲಾವಿದರಿಗೆ ಸಂಭಾವನೆ ನಿರೀಕ್ಷಿತ ಪ್ರಮಾಣದಲ್ಲಿ ಸಿಗುತ್ತಿರಲಿಲ್ಲ. ನಾವು ಮಾಡುವ ಕೆಲಸಕ್ಕೆ ಅದು ತುಂಬ ಕಡಿಮೆ ಎಂದು ಅನಿಸುತ್ತಿತ್ತು.
ಕಂಠದಾನ ಕಲಾವಿದರಿಗೆ ಇಷ್ಟೇ ಎಂದು ಅವರು ಫಿಕ್ಸ್ ಆಗಿದ್ದರು ಅದು ಜ’ಗ’ಳ ಅಲ್ಲ, ಹುಸಿ ಮುನಿಸುಗಳು, ಸಣ್ಣ ಸಣ್ಣ ಅಸಮಾಧಾನಗಳು. ಆಮೇಲೆ ಸ್ವಲ್ಪ ಸಂಭಾವನೆ ಜಾಸ್ತಿ ಮಾಡಿದರು. ಈ ಕಾರಣಕ್ಕೂ ಅವರಿಗೆ ಬೇಸರ ಆಯ್ತು. ಪ್ರತಿಯೊಬ್ಬ ಕಲಾವಿದನಿಗೂ ತಾನು ಪರಿಪೂರ್ಣ ನಟ ಆಗಬೇಕು ಎಂದು ಇರುತ್ತದೆ, ಇನ್ಮೇಲೆ ನನ್ನ ಪಾತ್ರಕ್ಕೆ ನಾನೇ ಧ್ವನಿ ಕೊಡ್ತಿನಿ ಎಂದು ರವಿಚಂದ್ರನ್ ನಿರ್ಧರಿಸಿದರು. ರಾಮಾಚಾರಿಯಿಂದ ಅವರೇ ಅವರ ಪಾತ್ರಕ್ಕೆ ಧ್ವನಿ ಕೊಡಲು ಶುರು ಮಾಡಿದರು ಎಂದು ಶ್ರೀನಿವಾಸ್ ಪ್ರಭು ಹಳೆಯದರ ಬಗ್ಗೆ ನೆನೆದು ಮಾತನಾಡಿದ್ದಾರೆ.