Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ಅಮ್ಮ ಲೀಲಾವತಿ ನೆನಪಿಗಾಗಿ 55 ಲಕ್ಷ ಖರ್ಚು ಮಾಡಲು ಹೊರಟ ವಿನೋದ್‌ ರಾಜ್, ಎಲ್ಲರೂ ಮೆಚ್ಚಿದ ಆ ಕಾರ್ಯ ಯಾವುದು ಗೊತ್ತಾ.?.

Posted on January 15, 2024 By Admin No Comments on ಅಮ್ಮ ಲೀಲಾವತಿ ನೆನಪಿಗಾಗಿ 55 ಲಕ್ಷ ಖರ್ಚು ಮಾಡಲು ಹೊರಟ ವಿನೋದ್‌ ರಾಜ್, ಎಲ್ಲರೂ ಮೆಚ್ಚಿದ ಆ ಕಾರ್ಯ ಯಾವುದು ಗೊತ್ತಾ.?.

 

ಕನ್ನಡ ಚಿತ್ರರಂಗದ ದಂತಕಥೆ ಹಿರಿಯ ನಟಿ ಲೀಲಾವತಿಯವರು (Actress Leelavathi) ಸಾವಿರಾರು ಸಿನಿಮಾಗಳಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕಾಗಿ ಬಹಳ ದೊಡ್ಡ ಕೊಡುಗೆ ನೀಡಿದ್ದಾರೆ. ಕಪ್ಪು ಬಿಳುಪು ಕಾಲದಿಂದ ಹಿಡಿದು ಸರಿಸುಮಾರು ಜೀವಮಾನದ ಇಳಿ ವಯಸ್ಸಿನವರೆಗೆ ಚಿತ್ರರಂಗಕ್ಕಾಗಿ ದುಡಿದ ಇವರು ಕನ್ನಡ ಚಿತ್ರರಂಗ ಕಟ್ಟುವುದಕ್ಕೆ ಬುನಾದಿ ಕೊಟ್ಟ ಪ್ರಮುಖರಲ್ಲಿ ಒಬ್ಬರು ಎಂದರೆ ತಪ್ಪಾಗಲಾರದು.

ಡಿಸೆಂಬರ್ 8 ರಂದು ವಯೋ ಸಹಜ ಕಾರಣಗಳಿಂದ ಲೀಲಾವತಿಯವರು ಇಹಲೋಕ ತ್ಯಜಿಸಿದ್ದಾರೆ. ನೆಲಮಂಗಲ ಅಂಬೇಡ್ಕರ್ ಕಾಲೋನಿ, ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಇವರ ಅಂತಿಮ ದರ್ಶನಕ್ಕೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿತ್ತು, ಅಭಿಮಾನಿಗಳು ಹಾಗೂ ಕನ್ನಡ ಚಿತ್ರರಂಗದ ಎಲ್ಲಾ ಗಣ್ಯರು ಕೂಡ ಭಾಗಿಯಾಗಿ ಗೌರವ ಸೂಚಿಸಿದ್ದರು.

ಅವರ ಇಚ್ಛೆಯಂತೆ ನೆಲಮಂಗಲದ ಬಳಿಯ ಸೋಲದೇವನಹಳ್ಳಿ ತೋಟದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತಿಮ ವಿಧಿ ವಿಧಾನ ನಡೆಯಿತು. ಲೀಲಾವತಿಯವರ ಮೇಲೆ ಅಪಾರ ಪ್ರೀತಿ ಹೊಂದಿರುವ ಅವರ ಮುದ್ದಿನ ಮಗ ವಿನೋದ್ ರಾಜ್ (Vinod Raj) ಅಮ್ಮನಿಲ್ಲದೆ ಅಕ್ಷರಶಃ ಅ’ನಾ’ಥನಾಗಿದ್ದಾರೆ.

ಜೀವನಮಾನ ಪೂರ್ತಿ ಕೊನೆ ದಿನದವರೆಗೂ ಜೊತೆಗಿದ್ದು ಅಮ್ಮನ ಶಕ್ತಿ ಮತ್ತು ಅವರ ಜೀವನದ ಉದ್ದೇಶವು ಆಗಿದ್ದ ಮಗ ವಿನೋದ್ ರಾಜ್ ಅವರು ತಮ್ಮ ತಾಯಿಯೇ ಸರ್ವಸ್ವ ಎಂದುಕೊಂಡು ಬೆಳೆದವರು. ಈಗ ಅಮ್ಮನಿಲ್ಲದ ಆ ನೋವಿನಿಂದ ಹೊರಬಂದು ಸಹಜ ಜೀವನದತ್ತ ಮುಖ ಮಾಡಲೇಬೇಕಾದರೂ ಅಮ್ಮನ ನೆನಪಿಲ್ಲದೆ ಬದುಕುವುದು ಅಷ್ಟು ಸುಲಭವಲ್ಲ.

ಹಾಗಾಗಿ ಸದಾ ಕಾಲ ಅಮ್ಮನ ನೆನಪನ್ನು ಶಾಶ್ವತವಾಗಿಡುವ ಉದ್ದೇಶದಿಂದ ಒಂದು ಮಹತ್ವದ ನಿರ್ಧಾರಕ್ಕೆ ಬಂದಿದ್ದು ಇದೇ ಸಂಕ್ರಾಂತಿ ದಿನದಂದು ಅದಕ್ಕೆ ಚಾಲನೆಯನ್ನು ಕೊಟ್ಟಿದ್ದಾರೆ. ಎಲ್ಲೆಡೆ ಇದಕ್ಕಾಗಿ ಪ್ರಶಂಸೆ ಕೂಡ ಕೇಳಿ ಬರುತ್ತಿದೆ.

ವಿನೋದ್‌ ರಾಜ್‌ ಅಮ್ಮನ ಸಮಾಧಿ ಸ್ಥಳವನ್ನೇ ಸ್ಮಾರಕವನ್ನಾಗಿಸಲು ನಿರ್ಧರಿಸಿದ್ದಾರೆ. ಅಮ್ಮನನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಗೌರವಿಸುತ್ತಿದ್ದ ಇವರು ಅಮ್ಮನಿಗಾಗಿ ಈ ಅನುಷ್ಠಾನಕ್ಕೂ ಮುಂದಾಗಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಅಮ್ಮನ ಸ್ಮಾರಕ ಮಾಡುವ ಬಗ್ಗೆ ವಿಷಯ ಹಂಚಿಕೊಂಡಿದ್ದ ವಿನೋದ್‌ ರಾಜ್‌ ಅದರಂತೆ, ಸಂಕ್ರಾಂತಿಯ ಶುಭ ದಿನವೇ ಅಮ್ಮ ಮಲಗಿದ ಜಾಗದ ಪಕ್ಕದಲ್ಲಿಯೇ ಸ್ಮಾರಕ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ್ದಾರೆ..

ಈ ಪೂಜೆ ವೇಳೆಯಲ್ಲಿ ಅವರ ಪತ್ನಿ ಅನು ಮತ್ತು ಪುತ್ರ ಯುವರಾಜ್‌ ಸಹ ಹಾಜರಿದ್ದರು. ಈ ಸ್ಮಾರಕ ಹೇಗಿರಲಿದೆ ಎಂಬುದಕ್ಕೂ ಕಿರು ಪ್ರತಿಕೃತಿ ನಿರ್ಮಾಣ ಮಾಡಲಾಗಿತ್ತು. ಗುದ್ದಲಿ ಪೂಜೆ ಬಳಿ ಅದಕ್ಕೂ ಆ ಪ್ರತಿಕೃತಿಗೆ ಪೂಜೆ ಸಲ್ಲಿಸಲಾಯಿತು.

ಬಳಿಕ ಕೆಲವು ಮಾಧ್ಯಮಗಳೊಂದಿಗೆ ಈ ಬಗ್ಗೆ ಮಾತನಾಡಿ ವಿನೋದ್‌ ರಾಜ್‌ ಸ್ಮಾರಕದ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಒಂದಷ್ಟು ಮಾಹಿತಿ ನೀಡಿದ್ದಾರೆ. ಒಟ್ಟು 55 ಲಕ್ಷ ರೂಪಾಯಿ ವೆಚ್ಚದಲ್ಲಿ ಸ್ಮಾರಕ ನಿರ್ಮಾಣವಾಗಲಿದೆಯಂತೆ,

ಲೀಲಾವತಿ ಅವರ ವಿಶೇಷ ಫೋಟೋಗಳೂ ಸ್ಮಾರಕ ಆವರಣದಲ್ಲಿ ಕಾಣಿಸಲಿವೆಯಂತೆ, ಮತ್ತು ಅವರು ನಟಿಸಿದ ಎಲ್ಲ ಸಿನಿಮಾಗಳ ಮಾಹಿತಿಯೂ ಇಲ್ಲಿರಲಿದೆಯಂತೆ. ಸಂಕ್ರಾಂತಿ ದಿನದಿಂದ ಆರಂಭವಾಗಿ ಮುಂದಿನ ನಾಲ್ಕು ತಿಂಗಳ ಅವಧಿಯಲ್ಲಿ ಸ್ಮಾರಕ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಈ ಗುದ್ದಲಿ ಪೂಜೆಯ ಕಾರ್ಯಕ್ರಮದಲ್ಲಿ ಮಾನ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್‌. ಮುನಿಯಪ್ಪ ಸೇರಿದಂತೆ ಇನ್ನು ಕೆಲವು ಪ್ರಮುಖರು ಸಹ ಭಾಗವಹಿಸಿದ್ದರು.

 

cinema news

Post navigation

Previous Post: ರವಿಚಂದ್ರನ್‌ ನಟಿಸಿದ 20 ಚಿತ್ರಗಳಿಗೆ ಧ್ವನಿ ಕೊಟ್ಟೆ, ಆದ್ರೆ ಅವರಿಂದ ಆ ಗೌರವ ಮಾತ್ರ ಸಿಗಲಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ ಕಂಠದಾನ ಕಲಾವಿದ ಶ್ರೀನಿವಾಸ್‌ ಪ್ರಭು.!
Next Post: ಕನ್ನಡದಿಂದ ಎಷ್ಟೊಂದು ಸಿನಿಮಾಗಳನ್ನು ರಿಮೇಕ್ ಮಾಡಿದ್ದಾರೆ ಗೊತ್ತಾ.?

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme