ಹಿಂದೂ ಸಂಪ್ರದಾಯದಲ್ಲಿ ಹೂವಿಗೆ ವಿಶೇಷವಾದಂತಹ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ ಅದರಲ್ಲಿಯೂ ಮಹಿಳೆಯರು ಹೂವನ್ನು ಮುಡಿಯುವುದರಿಂದ ತುಂಬಾ ಸುಂದರವಾಗಿ ಕಾಣಿಸುತ್ತಾರೆ ಅಷ್ಟೇ ಅಲ್ಲದೆ ದೇವರ ಪೂಜೆಗೆ ಅತ್ಯವಶ್ಯಕವಾಗಿ ಬೇಕಾಗಿರೋದು ಹೂವು. ಇಂತಹ ಹೂವನ್ನು ಸಂರಕ್ಷಣೆ ಮಾಡುವುದು ಅಂದರೆ ಒಂದು ತಿಂಗಳುಗಳ ಕಾಲ ಕೆಡದೆ ಇರುವ ಹಾಗೆ ಬಾಡದೆ ಇರುವ ಹಾಗೆ ನೋಡಿಕೊಳ್ಳುವ ವಿಧಾನವನ್ನು ನಾವು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ.
ಅಂಗಡಿಯಿಂದ ಹೂವನ್ನು ತಂದ ನಂತರ ಅದನ್ನು ನಾವು ನೇರವಾಗಿ ಫ್ರಿಡ್ಜ್ ನಲ್ಲಿ ಇಡಬಾರದು ಬದಲಿಗೆ ಅದರಲ್ಲಿ ತೇವಾಂಶ ಇರುತ್ತದೆ ಒಂದು ನ್ಯೂಸ್ ಪೇಪರ್ ಅನ್ನು ಹರಡಿ ಅದರ ಮೇಲೆ ಹೂವನ್ನು ಹಾಕಿ 10 ರಿಂದ 15 ನಿಮಿಷಗಳ ಕಾಲ ಹರಡಬೇಕು ತೇವಾಂಶ ಎಲ್ಲಾ ಹೋದ ನಂತರ ಅದನ್ನು ನಾವು ಫ್ರಿಡ್ಜ್ ನಲ್ಲಿ ಇಡಬೇಕು ಅಲ್ಲದೆ ಬಾಡಿರುವಂತಹ ಹೂಗಳನ್ನು ತೆಗೆಯಬೇಕು ಹುಳ ಇರುವದನ್ನು ನೋಡಿ ತೆಗೆಯಬೇಕು.
ತೇವಾಂಶ ಎಲ್ಲಾ ಒಣಗಿದೆ ಎಂದ ಮೇಲೆ ತಟ್ಟೆಗೆ ಹೂವನ್ನು ಹಾಕಿಕೊಳ್ಳಿ ಹೂವನ್ನು ಸಂರಕ್ಷಿಸುವ ಮೊದಲನೆಯ ಟಿಪ್ಸ್ ಒಂದು ಪ್ಲಾಸ್ಟಿಕ್ ಬಾಕ್ಸ್ ಅನ್ನು ತೆಗೆದುಕೊಂಡು ಅದರ ಕೆಳಗೆ ನ್ಯೂಸ್ ಪೇಪರ್ ಹಾಕಿ, ಬಾಕ್ಸ್ ಸುತ್ತ ಕೂಡ ನ್ಯೂಸ್ ಪೇಪರ್ ಹಾಕಿ ಸ್ವಲ್ಪವೂ ಸಹ ಗ್ಯಾಪ್ ಇರಬಾರದು ಯಾವುದೇ ಹೂವುಗಳನ್ನು ತಂದರು ಸಹ ಹೀಗೆ ಮಾಡುವುದರಿಂದ ಹೂವು ಬೇಗ ಹಾಳಾಗುವುದಿಲ್ಲ ಬಾಕ್ಸ್ ಗೆ ಹೂವನ್ನು ಹಾಕಿದ ನಂತರ ಮೇಲೆ ಒಂದು ನ್ಯೂಸ್ ಪೇಪರ್ ಹಾಕಿ ಬಾಕ್ಸ್ ಮುಚ್ಚಳವನ್ನು ಮುಚ್ಚಿ ಫ್ರಿಡ್ಜ್ ನಲ್ಲಿ ಇಡಿ ಹೀಗೆ ಮಾಡುವುದರಿಂದ 15 ರಿಂದ 20 ದಿನಗಳ ಕಾಲ ಹೂವು ಫ್ರೆಶ್ ಆಗಿರುತ್ತೆ.
ಮಲ್ಲಿಗೆ ಹೂವ ಅಥವಾ ಮುಲ್ಲೆ ಹೂವ ತಂದಂತಹ ಸಂದರ್ಭದಲ್ಲಿ ಅದರಲ್ಲಿಯೂ ಸಹ ತೇವಾಂಶ ಇಲ್ಲದ ಹಾಗೆ 15 ನಿಮಿಷಗಳ ಕಾಲ ಅದನ್ನು ಒಂದು ನ್ಯೂಸ್ ಪೇಪರ್ ಮೇಲೆ ಹಾಕಿ ನಂತರ ಒಂದು ಬಾಕ್ಸ್ ತೆಗೆದುಕೊಂಡು ಕೆಳಗೆ ಒಂದು ಟಿಶ್ಯೂ ಪೇಪರ್ ಹಾಕಿ ಎರಡು ಟೇಬಲ್ ಸ್ಪೂನ್ ನಷ್ಟು ಅಕ್ಕಿಯನ್ನು ಹಾಕಿ ಅದರ ಮೇಲೆ ಹೂವನ್ನು ಹಾಕಿ ನಂತರ ಮೇಲೆ ಒಂದು ಟಿಶ್ಯೂ ಪೇಪರ್ ಅನ್ನು ಹಾಕಿ ಮುಚ್ಚಳ ಮುಚ್ಚಿ ಫ್ರಿಡ್ಜ್ ನಲ್ಲಿ ಇಡುವುದರಿಂದ ಹೂ ಬೇಗ ಹಾಳಾಗುವುದಿಲ್ಲ.
ಮೂರನೇ ಟಿಪ್ಸ್ ಸಾಮಾನ್ಯವಾಗಿ ನಾವು ದೇವರ ದೀಪವನ್ನು ಹಚ್ಚಲು ಅಥವಾ ಮನೆಯಲ್ಲಿ ಕಡ್ಡಿ ಪೆಟ್ಟಿಯನ್ನು ಬಳಸುತ್ತೇವೆ. ದೀಪವನ್ನು ಹಚ್ಚಿದ ನಂತರ ನಾವು ಕಡ್ಡಿಯನ್ನು ಬಿಸಾಕಿರುವುದನ್ನು ನೋಡುತ್ತೇವೆ ಆದರೆ ಇನ್ನು ಮುಂದೆ ಮರದ ಕಡ್ಡಿ ಪಟ್ಟಿಯನ್ನು ತಂದಾಗ ದೀಪವನ್ನು ಹಚ್ಚಿ ಕಡ್ಡಿಯನ್ನು ಬಿಸಾಡಬೇಡಿ,
ಹೂವು ತೇವಾಂಶ ಇಲ್ಲದ ಹಾಗೆ ಹರಡಿ ನಂತರ ಒಂದು ಬಾಕ್ಸ್ ನಲ್ಲಿ ಕೆಳಗೆ ಟಿಶ್ಯು ಪೇಪರ್ ಅಥವಾ ನ್ಯೂಸ್ ಪೇಪರ್ ಅನ್ನು ಹಾಕಿ ದೇವರ ದೀಪವನ್ನು ಹಚ್ಚಿ ಬಿಸಾಡುವ ಕಡ್ಡಿ ಪೆಟ್ಟಿಗೆಯ ಕಡ್ಡಿಗಳನ್ನು ಅದರ ಮೇಲೆ ಹಾಕಿ ನಂತರ ಹೂವನ್ನು ಹಾಕಿ ಮೇಲೆ ನ್ಯೂಸ್ ಪೇಪರ್ ನಿಂದ ಕವರ್ ಮಾಡಿ ಬಾಕ್ಸ್ ನ ಮುಚ್ಚಳ ಮುಚ್ಚಿ ಫ್ರಿಜ್ ನಲ್ಲಿ ಇಡುವುದರಿಂದ ಹೂವಿನಲ್ಲಿ ಸ್ವಲ್ಪ ತೇವಾಂಶ ಇದ್ದರೂ ಸಹ ಅದು ಅಬ್ಸರ್ವ್ ಮಾಡಿಕೊಳ್ಳಲು ಸಹಾಯವಾಗುತ್ತದೆ.
ಹೀಗೆ ಮಾಡುವುದರಿಂದ ಹೂವನ್ನು ಒಂದು ತಿಂಗಳವರೆಗೂ ಸಹ ನೀವು ಫ್ರೆಶ್ ಆಗಿ ಇಟ್ಟುಕೊಳ್ಳಬಹುದು ಅದರಲ್ಲಿ ಹಬ್ಬ ಹರಿದಿನದ ಸಮಯದಲ್ಲಿ ಹೂವಿಗೆ ಜಾಸ್ತಿ ಬೇಡಿಕೆ ಇರುತ್ತದೆ ನಾವು ಒಂದು ತಿಂಗಳ ಮೊದಲೇ ಹೂವನ್ನು ತಂದು ನಾವು ತಿಳಿಸಿದ ರೀತಿಯಲ್ಲಿ ಸ್ಟೋರ್ ಮಾಡಿ ಇಟ್ಟುಕೊಳ್ಳಬಹುದು.