ಸಾಮಾನ್ಯವಾಗಿ ಹೆಚ್ಚು ಜನರು ಎಲ್ಲಿ ಇರುತ್ತಾರೋ ಆ ಕಡೆಗಳಲ್ಲಿ ಕಳ್ಳರು ಸಹ ಇರುತ್ತಾರೆ ಅದರಲ್ಲಿಯೂ ಬಸ್ ಗಳಲ್ಲಿ ನಾವು ಹತ್ತುವಾಗ ಇಳಿಯುವಾಗ ಅಥವಾ ಬಸ್ ನಲ್ಲಿ ಇರುವಂತಹ ಸಂದರ್ಭದಲ್ಲಿ ನಮ್ಮ ವಸ್ತುಗಳ ಮೇಲೆ ಜವಾಬ್ದಾರಿಯುತವಾಗಿ ಇರಬೇಕು ಇಲ್ಲವಾದರೆ ಈ ರೀತಿಯಾದಂತಹ ಪ್ರಕರಣಗಳು ನಡೆಯುತ್ತಲೇ ಇರುತ್ತದೆ
ಇದೀಗ ತುಮಕೂರಿನಲ್ಲಿ ಬಸ್ ನಲ್ಲಿ ಪ್ರಯಾಣಿಸುವಾಗ ಒಬ್ಬ ವ್ಯಕ್ತಿಯ ಹಣ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ ಹೌದು ಬಸ್ ನಲ್ಲಿ ಪ್ರಯಾಣಿಕರೊಬ್ಬರ ಹಣ ಕಳುವಾಗಿದ್ದು ಕಳ್ಳರ ಪತ್ತೆಗಾಗಿ ಬಸ್ ಅನ್ನು ಡಿ ವೈ ಎಸ್ ಪಿ ಕಚೇರಿಯ ಬಳಿಗೆ ಕರೆದುಕೊಂಡ ಹೋದ ಘಟನೆ ಈಗ ತುಮಕೂರಿನ ನಗರದಲ್ಲಿ ಶನಿವಾರ ನಡೆದಿದೆ.
ತುಮಕೂರಿನಿಂದ ಪಾವಗಡಕ್ಕೆ ಹೋಗುತ್ತಿದ್ದಂತಹ ಬಸ್ ನಲ್ಲಿ ಮಾರುತಿ ಎಂಬುವರ ಜೇಬಿನಲ್ಲಿ ಇದ್ದಂತಹ 13 ಸಾವಿರ ರೂಪಾಯಿ ಹಣ ಕಳುವಾಗಿದೆ ಈ ವಿಷಯವನ್ನು ಚಾಲಕ ಮತ್ತು ನಿರ್ವಾಹಕರ ಗಮನಕ್ಕೆ ತಂದಂತಹ ಮಾರುತಿ ಕೂಡಲೇ ಬಸ್ ಅನ್ನು ನೇರವಾಗಿ ಡಿವೈಎಸ್‌ಪಿ ಕಛೇರಿಗೆ ಹೊಡೆದಿದ್ದಾರೆ.
ಬಸ್ ನಲ್ಲಿ ಮಹಿಳೆಯರು, ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 60 ಕ್ಕು ಹೆಚ್ಚು ಜನ ಪ್ರಯಾಣಿಸುತ್ತಿದ್ದರು ಎಷ್ಟೇ ಹುಡುಕದರೂ ಸಹ ಕಳ್ಳರು ಸಿಗದ ಕಾರಣವಾಗಿ ಕಳುವಾದ ಹಣದ ಹುಡುಕಾಟದಲ್ಲಿ ವಿಫಲವಾಯಿತು.
ಪರಿಶೀಲನೆಯ ನಂತರ ಬಸ್ಸು ಕಳುಹಿಸಿಕೊಟ್ಟರು ಕಡೆ ಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಬಸ್ ಹತ್ತಿದ್ದೆ, ತುಂಬಾ ಜನರು ಇದ್ದರು ಬಸ್ ಕೊನೆಯಲ್ಲಿ ಬಂದು ನಿಂತುಕೊಂಡಿದ್ದೆ ಕ್ಷಣದಲ್ಲಿ ಹಣ ಕಳುವಾಗಿದೆ ಜೇಬಿನಲ್ಲಿ 13 ಸಾವಿರ ರೂಪಾಯಿ ಹಣ ಇತ್ತು ಎಂದು ಮಾರುತಿ ಹೇಳಿದರು.
ಆದ್ದರಿಂದ ನಾವು ಹೆಚ್ಚಿನ ಮೊತ್ತದ ಹಣ ಅಥವಾ ದುಬಾರಿ ಬೆಲೆಯ ವಸ್ತುಗಳನ್ನು ಕೊಂಡೊಯ್ಯುವಂತಹ ಸಂದರ್ಭದಲ್ಲಿ ಅದರಲ್ಲಿಯೂ ಬಸ್ ನಲ್ಲಿ ಹೋಗುವಂತಹ ಸಮಯದಲ್ಲಿ ನಾವು ತುಂಬಾ ನಿಗಾ ವಹಿಸಿ ನೋಡಿಕೊಳ್ಳಬೇಕು ಇಲ್ಲವಾದರೆ ಈ ರೀತಿಯಾದಂತಹ ಘಟನೆಗಳು ನಡೆಯುತ್ತಲೇ ಇರುತ್ತದೆ.
ಬೇರೆಯವರಿಂದ ಕದ್ದ ಹಣ ಎಷ್ಟು ದಿನ ಬಾಳಿಕೆ ಬರುತ್ತಿದೆ ಎನ್ನುವುದರ ಅರಿವು ಇಲ್ಲದೆ ಕಳ್ಳತನ ಮಾಡುತ್ತಾರೆ ಯಾವ ಕ.ಷ್ಟ.ಕ್ಕಾಗಿ ಹಣವನ್ನು ಹೊಂದಿಸಿ ಇಟ್ಟುಕೊಂಡಿರುತ್ತಾರೆ ಅಥವಾ ಯಾವ ಪರಿಸ್ಥಿತಿಯಲ್ಲಿ ಜನರು ಇದ್ದಾರೆ ಎಂಬುದನ್ನು ನೋಡದೆ ಕಳ್ಳರು ಈ ರೀತಿಯ ಕೆಲಸಗಳನ್ನು ಮಾಡಿದಲ್ಲಿ ಮುಂದೆ ಇದಕ್ಕೆ ಬೆಲೆ ತೆರಬೇಕಾಗುತ್ತದೆ.
ಸಮಾಜದಲ್ಲಿ ಈ ರೀತಿಯ ಜನರು ಇನ್ನೂ ನಮ್ಮ ಸುತ್ತಮುತ್ತ ಇರುವುದು ಬೇಸರದ ಸಂಗತಿ. ಆರ್ಥಿಕವಾಗಿ ಎಷ್ಟೇ ಹಿಂದುಳಿದಿದ್ದರೂ ಸಹ ದೇವರು ನಮಗೆ ನಮ್ಮದೇ ಆದಂತಹ ಒಂದು ಸಾಮರ್ಥ್ಯವನ್ನು ನೀಡಿರುತ್ತಾನೆ ಅದನ್ನು ಬಳಸಿಕೊಂಡು ನಾವು ಕೆಲಸ ಮಾಡಿ ದುಡಿದು ತಿನ್ನುವುದರಲ್ಲಿ ಇರುವಂತಹ ತೃಪ್ತಿ ಬೇರೆಯವರ ಹಣವನ್ನು ಕದ್ದು ಅವರಿಗೆ ನೋ.ವುಂ.ಟು ಮಾಡಿ ಅದನ್ನು ಅದರಿಂದ ತಿನ್ನುವುದು ನಿಜಕ್ಕೂ ಆತ್ಮ ಗೌರವಕ್ಕೆ ಒಪ್ಪುವುದಿಲ್ಲ. ಈ ವಿಷಯದ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ.