ಕನ್ನಡದ ಕಿರುತೆರೆ ಪ್ರೇಕ್ಷಕರಿಗೆ ಬರಪೂರ ಮನರಂಜನೆ ನೀಡಲು ಈ ವರ್ಷದ ಬಿಗ್ ಬಾಸ್ ಸೀಸನ್ 10 (Bigboss S10) ಆರಂಭವಾಗಿದೆ. ಕಳೆದ ಎರಡು ಸೀಸನ್ ಗಳಂತೆ ಈ ಸೀಸನ್ ನಲ್ಲೂ ಕೂಡ ಎರಡನೇ ವಾರಕ್ಕೆ ಅತಿ ಹೆಚ್ಚು ಸ್ಪರ್ಧಿಗಳು ಎಕ್ಸ್ಪೋಸ್ ಆಗಿ ಜಗಳ, ಕೋಪ, ಚೀರಾಟ, ಪ್ರೀತಿ, ರೊಮ್ಯಾನ್ಸ್, ಫ್ರೆಂಡ್ಶಿಪ್ ಎಲ್ಲ ಸಂಬಂಧಗಳು ಸೃಷ್ಟಿಯಾಗಿವೆ.
ಇದರೊಂದಿಗೆ ಬಿಗ್ ಬಾಸ್ ಹತ್ತಿರವಾಗುವುದಕ್ಕೆ ಮತ್ತಷ್ಟು ಕಾರಣ ಆಗುವುದು ನಮ್ಮ ನೆಚ್ಚಿನ ಸೆಲೆಬ್ರಿಟಿಗಳು ಮನೆಯಲ್ಲಿದ್ದಾಗ ಹೊರಗಿನ ಬದುಕಿನ ಬಗ್ಗೆ ಹಂಚಿಕೊಳ್ಳುವ ನೆನಪುಗಳು. ಮಾತು ಮಾತಲ್ಲಿ ಅವರು ತಮ್ಮ ವೈಯಕ್ತಿಕ ಜೀವನದ ವಿವರಗಳನ್ನು ಬಿಟ್ಟುಕೊಡುತ್ತಾರೆ. ಮತ್ತೆ ಇಂತಹ ವಿಷಯಗಳೇ ವೀಕ್ಷಕರನ್ನು ನಗಿಸಿ ಅಥವಾ ಅಳಿಸಿ ಇನ್ನಷ್ಟು ಹತ್ತಿರವಾಗಿಸುತ್ತದೆ.
ಹಾಗೆ ಈ ರೀತಿ ಮಾತು ಮಾತನಾಡುತ್ತಿದ್ದಂತೆ ರಕ್ಷಕ್ (Rakshak Bullet) ಹೇಳಿದ ಅವರ ಮದುವೆ ವಿಚಾರ ಮನೆ ಮಂದಿಯನ್ನು ಹೊಟ್ಟೆ ಹಿಡಿದು ನಗುವಂತೆ ಮಾಡಿದೆ. ಅಲ್ಲದೆ ಹೊರಗಡೆ ಪ್ರೇಕ್ಷಕರು ಕೂಡ ಈ ವಿಷಯ ಕೇಳಿ ನಗುವಂತೆ ಮತ್ತು ಆಶ್ಚರ್ಯ ಸೂಸುವಂತೆ ಆಗಿದೆ. ಸಹ ಕಂಟೆಸ್ಟೆಂಟ್ ಗಳಾದ ಸಿರಿ, ಸ್ನೇಹಿತ್, ರಕ್ಷಕ್ ಹಾಗೂ ತನಿಷ ಅವರು ಒಂದು ಕಡೆ ಮಾತನಾಡುತ್ತಾ ಕುಳಿತಿದ್ದರು.
ಆಗ ಯಾವುದೋ ವಿಚಾರಕ್ಕೆ ಸ್ನೇಹಿತ್ ಅವರು ಇದುವರೆಗೆ ತನಗಾದ ರಿಲೇಷನ್ ಶಿಪ್ ಗಳು, ಬ್ರೇಕ್ ಅಪ್ ಗಳು ಇವುಗಳ ಬಗ್ಗೆ ವಿಷಯ ಹಂಚಿಕೊಂಡರು. ಆಗ ಸಿರಿ ಅವರು ಕೂಡ ತಮಗೆ ಮದುವೆ ಬಗ್ಗೆ ಆಸಕ್ತಿಯೇ ಇಲ್ಲದರ ಬಗ್ಗೆ ಮಾತನಾಡಿದರು. ಆ ಸಮಯದಲ್ಲಿ ತಕ್ಷಣವೇ ರಕ್ಷಕ್ ನಮ್ಮ ಮದುವೆಯ ಬಗ್ಗೆ ಮಾತನಾಡಿದ್ದು ಈಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ವಿಷಯವಾಗಿದೆ.
ನಮ್ಮ ಅಪ್ಪ ಬದುಕಿದ್ದಾಗ ಒಮ್ಮೆ ನನ್ನ ಜಾತಕವನ್ನು ಜ್ಯೋತಿಷ್ಯರ ಬಳಿ ತೋರಿಸಿದ್ದರಂತೆ. ಆಗ ಜ್ಯೋತಿಷಿ ರಕ್ಷಕ್‌ಗೆ 5 ಮದುವೆಯಾಗುವ ಯೋಗ ಇದೆ ಎಂದು ಹೇಳಿದರಂತೆ ಎಂದಿದ್ದಾರೆ ರಕ್ಷಕ್. ರಕ್ಷಕ್ ಬುಲೆಟ್ ತನಗೆ 05 ಮದುವೆಯಾಗುವ ಯೋಗ ಇದೆ ಎಂದು ಹೇಳಿದ ಕೂಡಲೇ , ಸ್ನೇಹಿತ್ ರಕ್ಷಕ್ ಗೆ ಅದಕ್ಕೇನಾ ವೈಲ್ಡ್ ಕಾರ್ಡ್ ಎಂಟ್ರಿ ಬರಲಿ ಅಂತಾ ಹೇಳ್ತಾ ಇದ್ದಿದ್ದು ಎಂದು ಕಾಲೆಳೆದಿದ್ದಾರೆ.
ರಕ್ಷಕ್ ಹಾಗು ಸ್ನೇಹಿತ್ ಮಾತಿಗೆ ಮನೆಮಂದಿಯೆಲ್ಲಾ ನಕ್ಕಿದ್ದಾರೆ. ಹೊರಗೆ ಇದ್ದಾಗಲೂ ರಕ್ಷಕ್ ಇಂತಹ ಡೈಲಾಗ್ ಗಳಿಂದಲೇ ಹಲವು ಬಾರಿ ಟ್ರೋಲ್ ಆಗಿದ್ದರು. ರಕ್ಷಕ್ ಸಿನಿಮಾ ಇಂಡಸ್ಟ್ರಿಯಲ್ಲಿ ಗುರುತಿಸಿ ಕೊಳ್ಳಬೇಕೆಂಬುದು ತಂದೆ ಬುಲೆಟ್ ಪ್ರಕಾಶ್ ರ ಅತಿ ದೊಡ್ಡ ಕನಸಾಗಿತ್ತು. ಅಂತೆಯೇ ತಯಾರಾಗುತ್ತಿದ್ದರೆ ಮಗ ಹಾಗೂ ಈಗಾಗಲೇ ಗುರು ಶಿಷ್ಯರು ಸಿನಿಮಾ ಮೂಲಕ ತಮ್ಮ ನಟನೆಯ ಝಲಕ್ ಕೂಡ ತೋರಿಸಿದ್ದಾರೆ.
ಹೊರಗೆ ತಮ್ಮ ಮಾಸ್ ಡೈಲಾಗ್ಗಳಿಂದ ಫೇಮಸ್ ಆಗಿದ್ದ ಇವರು ಆಟಿಟ್ಯೂಡ್ ಗೈ ಎಂದು ಕರೆಸಿಕೊಳ್ಳುತ್ತಿದ್ದರು. ಆದರೆ ಬಿಗ್ ಬಾಸ್ ಮನೆ ಸೇರಿದ ಮೇಲೆ ದಿನ ಕಳೆಯುತ್ತಿದ್ದಂತೆ ಬಿಗ್ ಬಾಸ್ ಮನೆ ಒಳಗಡೆ ಇವರಾಡುತ್ತಿರುವ ಪ್ರತಿ ಮಾತು ಜನತೆಗೆ ಇಷ್ಟ ಆಗುತ್ತಿದೆ. ಕೆಲವೊಮ್ಮೆ ಮುಗ್ಧತೆ ಎನಿಸಿದರೆ, ಕೆಲವೊಮ್ಮೆ ತಮಾಷೆ ಅನಿಸುತ್ತದೆ ಮತ್ತು ಹಲವು ಕಡೆಗಳಲ್ಲಿ ಇವರಾಡಿರುವ ಮಾತುಗಳು ನ್ಯಾಯವಾದದ್ದು ಎನಿಸಿರುವ ಕಾರಣ ನಿಧಾನಕ್ಕೆ ಕನ್ನಡ ಜನತೆಯ ಮನ ಗೆಲ್ಲುತ್ತಿದ್ದಾರೆ ಬುಲೆಟ್ ರಕ್ಷಕ್ ಅವರ ಆಟಕ್ಕೆ ಶುಭವಾಗಲಿ ಎಂದು ನಾವು ಹಾರೈಸೋಣ.