ಈ ವರ್ಷ ರಾಜ್ಯದಲ್ಲಿ ಕಳೆದ 130 ವರ್ಷಗಳಲ್ಲೇ ಅತ್ಯಂತ ಕಡಿಮೆ ಮಳೆ ಬಿದ್ದು ಬರದ (drought) ಪರಿಸ್ಥಿತಿ ಎದುರಾಗಿದೆ. ರಾಜ್ಯದ ಜಲಾಶಯಗಳಲ್ಲಿ (dam) ನೀರಿನ ಪ್ರಮಾಣಕ್ಕೂ ಕುಸಿಯುತ್ತಿರುವುದರಿಂದ ತಮಿಳುನಾಡಿಗೆ (Thamilunadu) ಹರಿಸಬೇಕಾದ ನೀರನ್ನು ಬಿಡಬಾರದು ಎಂದು ಕಾವೇರಿ ಕೊಳ್ಳದ ರೈತರು (farmers) ಪ್ರತಿಭಟನೆಗೆ ಇಳಿದಿದ್ದಾರೆ.
ಇದರ ಜೊತೆಗೆ ರಾಜ್ಯದ ರೈತ ಸಂಘಗಳು, ಸಿನಿಮಾ ತಾರೆಯರು, ಕನ್ನಡ ಪರ ಸಂಘಟನೆಗಳು ಸರ್ಕಾರವನ್ನು ಖಂಡಿಸಿ ಹೋರಾಟಕ್ಕೆ ಇಳಿದಿವೆ. ಸರ್ಕಾರವು ಕೂಡ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಹಿಂದಿನ ಆದೇಶದಂತೆ ನೀರು ಹರಿಸಿ ನೀರು ಬಿಡಲು ಆಗುವುದಿಲ್ಲ ಎಂದು ಮನವಿ ಮಾಡಿದೆ, ನಿನ್ನೆಯು ಸರ್ವೋಚ್ಛ ನ್ಯಾಯಾಲಯವು (Supreme court order) ಸೆಪ್ಟೆಂಬರ್ 27ರವರೆಗೆ ಈಗಿರುವ ಆದೇಶದಂತೆ ನೀರು ಹರಿಸಬೇಕು ಎಂದು ಹೇಳಿದೆ.
ಇದರ ನಡುವೆ ಮಂಡ್ಯ ಬಂದ್ ಗೆ ಕರೆ ನೀಡಿರುವುದರ ಬಗ್ಗೆ ಉಪಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ (DCM D.K Shivakumar) ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕೇಂದ್ರ ಸರ್ಕಾರ ಮನಸ್ಸು ಮಾಡಿದರೆ ಕಾವೇರಿ ಸಮಸ್ಯೆಗೆ ಪರಿಹಾರ ಸಿಗಲಿ ಎಂದಿದ್ದಾರೆ. ಕಾವೇರಿ ನದಿ ನೀರಿನ ಹಂಚಿಕೆ ವಿಚಾರ ದಶಕಗಳಿಂದಲೂ ಕೂಡ ಜೀವಂತವಾಗಿದೆ, ಆದರೆ ಮಳೆ ಕಡಿಮೆಯಾದ ಬರದ ಪರಿಸ್ಥಿತಿ ಎದುರಾದ ವರ್ಷಗಳಲ್ಲಿ ಇದು ಭುಗಿಲೇಳುತ್ತದೆ.
ಅದೇ ರೀತಿ ಈ ವರ್ಷದಲ್ಲೂ ಕೂಡ ಕಾವೇರಿ ನೀರಿನ ಗಲಾಟೆ ಜೋರಾಗಿದೆ. ಸರ್ವ ಪಕ್ಷಗಳ ಸಭೆ ನಡೆಸಿ ಜೊತೆಗೆ ಕೇಂದ್ರದ ಜಲ ಶಕ್ತಿ ಸಚಿವರಿಗೂ ಕೂಡ ರಾಜ್ಯದ ಪರಿಸ್ಥಿತಿಯ ಬಗ್ಗೆ ವಿವರಿಸಿ ಮನವಿ ಸಲ್ಲಿಸಿರುವ ಸರ್ಕಾರವು ಸುಪ್ರೀಂಕೋರ್ಟ್ ಎದುರು ಕೂಡ ರಾಜ್ಯದಲ್ಲಿ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿಕೊಟ್ಟಿದೆ. ಈವರೆಗೆ ಆಗಿರುವ ಬೆಳವಣಿಗೆ ಕುರಿತು ಸದಾಶಿವನಗರದ ತಮ್ಮ ನಿವಾಸದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಕೆಶಿ ರಾಜ್ಯ ಸರ್ಕಾರವನ್ನು ದೂಷಿಸುತ್ತಿರುವ ವಿರೋಧ ಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.
ಈಗಾಗಲೇ ಕೋರ್ಟ್ ನೀಡಿರುವ ಆದೇಶ ಪಾಲಿಸದೆ ಮನವಿ ಸಲ್ಲಿಸಿದರೆ ರಾಜ್ಯದ ಬಗ್ಗೆ ತಪ್ಪು ಅಭಿಪ್ರಾಯ ಬರಬಹುದು ಎನ್ನುವ ಕಾರಣಕ್ಕೆ ನಾವು ಆದೇಶ ಪಾಲಿಸಿದ್ದೇವೆ. ಹಾಗೆಯೇ ಇಂತಹ ಪರಿಸ್ಥಿತಿಗಳು ಎದುರಾದಾಗ BJP, ಜನತಾದಳ ಸರ್ಕಾರಗಳು ಯಾವ ವಕೀಲರನ್ನು ಇಟ್ಟುಕೊಂಡು ವಾದ ಮಾಡಿದ್ದವು ಅವರ ಪ್ರಕಾರವೇ ನಾವು ಕಾನೂನಿನ ಮೂಲಕ ಮುಂದುವರಿಯುತ್ತಿದ್ದೇವೆ.
ಆಗಿನ ಪರಿಸ್ಥಿತಿಗಳಲ್ಲಿ 10,000 ಕ್ಯೂಸೆಕ್ ವರೆಗೂ ಕೂಡ ನೀರು ಹರಿಸಿರುವ ದಾಖಲೆಗಳು ನನ್ನ ಬಳಿ ಇದೆ, ಪ್ರತಿಪಕ್ಷಗಳು ಏನೇ ದೂರುವುದಿದ್ದರೂ ಅವರ ಸಮಯದಲ್ಲಿ ಏನು ಮಾಡಿದ್ದರು ಎನ್ನುವ ದಾಖಲೆ ಇಟ್ಟುಕೊಂಡು ನನ್ನ ಬಳಿ ಮಾತನಾಡಲಿ. ಈಗ ಸಿನಿಮಾ ತಾರೆಗಳು ಹಾಗೂ ಕನ್ನಡಪರ ಸಂಘಟನೆಗಳು ಹೋರಾಟ ಮಾಡುತ್ತಿವೆ. ಆದರೆ ನಾನು ಮೇಕೆದಾಟು ಯೋಜನೆ ಬಗ್ಗೆ ಧ್ವನಿಯೆತ್ತಿದಾಗ ಯಾರು ಜೊತೆಗೂಡಲಿಲ್ಲ.
ರೈಲು ನಿಲ್ದಾಣದಲ್ಲಿ ಸೂಟ್ ಕೇಸ್ ಹೊತ್ತು, ಕೂಲಿ ಕಾರ್ಮಿಕರ ಸಮಸ್ಯೆ ಆಲಿಸಿದ ರಾಹುಲ್ ಗಾಂಧಿ.!
ನಾನು ಆ ಯೋಜನೆಯನ್ನು ನನ್ನ ಸ್ವಾರ್ಥಕ್ಕೆ ಮಾಡಿರಲಿಲ್ಲ ಈ ರೀತಿ ಸಮಸ್ಯೆಗಳು ಉಂಟಾದಾಗ ಕರ್ನಾಟಕಕ್ಕೆ ಅನುಕೂಲವಾಗಲಿ ಹೋರಾಟ ಮಾಡಿದ್ದು. ಸುಪ್ರೀಂ ಕೋರ್ಟ್ ಕೂಡ ಇದಕ್ಕೆ ವಿರೋಧಿಸದೆ ಪ್ರಾಧಿಕಾರದಲ್ಲಿ ಬಗೆಹರಿಸಿಕೊಳ್ಳಿ ಎಂದಿದೆ. ಈಗ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು, ಈ ಹಿಂದೆ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಕಾವೇರಿ ಪ್ರಾಧಿಕಾರದ ಸಭೆ ಕರೆದಿದ್ದರು.
ನ್ಯಾಯಾಲಯದಲ್ಲಿ ಇನ್ನೂ ವಿಚಾರಣೆ ನಡೆಯುತ್ತಿದ್ದ ಕಾರಣ ಸುಮ್ಮನಾಗಿದ್ದರು ಆದರೆ ಈಗ ನ್ಯಾಯಾಲಯವೇ ಅನುಮತಿ ನೀಡಿರುವುದರಿಂದ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಪರಿಹಾರ ಮಾಡಬೇಕು. ಈ ಬಗ್ಗೆ ಮಾತನಾಡಿದರೆ ಪ್ರತಿಪಕ್ಷಗಳು ಎಲ್ಲದಕ್ಕೂ ಕೇಂದ್ರ ಸರ್ಕಾರವನ್ನು ದೊರುತ್ತೇವೆ ಎನ್ನುತ್ತಾರೆ. ಹೋರಾಟ ಮಾಡುವವರು ಮಾಡಲಿ ಆದರೆ ಜನಸಾಮಾನ್ಯರಿಗೆ ತೊಂದರೆ ಕೊಡಬೇಡಿ ನಮ್ಮ ಸರ್ಕಾರ ಎಂದು ಕೂಡ ಜನತೆಯ ಪರವಾಗಿತ್ತು.
ನಮ್ಮನ್ನ ಕೆಣಕಿದ್ರೆ ಮಸೀದಿಲೂ ಗಣೇಶನನ್ನು ಕೂರಿಸ್ತಿವಿ ಅಷ್ಟೇ, ಪ್ರಮೋದ್ ಮುತಾಲಿಕ್ ರಿಂದ ಎಚ್ಚರಿಕೆಯ ಸಂದೇಶ.!
ನಾವು ಈಗಲೂ ಕೂಡ ಅದಕ್ಕೆ ಬದ್ಧವಾಗಿದ್ದೇವೆ ಮುಂದೆಯೂ ಕೂಡ ನಮ್ಮ ರಾಜ್ಯದ ರೈತರ ಕಾಳಜಿ ಮಾಡಲಿದ್ದೇವೆ ಕೇಂದ್ರ ಜಲ ಶಕ್ತಿ ಸಚಿವರು ಸಹಾಯ ಮಾಡುವ ಭರವಸೆ ನೀಡಿದ್ದಾರೆ. ಸರ್ವ ಪಕ್ಷ ಸಭೆ ನಡೆಸಿದಾಗ ನಾವು ವಿಚಾರ ಮಾಡಿದ ಮಾತುಗಳನ್ನು ಎಲ್ಲರೂ ಒಪ್ಪಿಕೊಂಡರು ಆದರೆ ಹೊರಗೆ ಬಂದು ರಾಜಕೀಯ ಮಾಡುತ್ತಿದ್ದಾರೆ ಇಷ್ಟ ಬಂದ ಹೇಳಿಕೆ ನೀಡುತ್ತಿದ್ದಾರೆ ನಾನು ಕಾವೇರಿ ವಿಚಾರದಲ್ಲಿ ರೈತರ ವಿಚಾರದಲ್ಲಿ ರಾಜಕೀಯ ಮಾಡಲು ಇಷ್ಟಪಡುವುದಿಲ್ಲ ಎಂದು ಪತಿಪಕ್ಷಗಳನ್ನು ದೂರಿದ್ದಾರೆ.