ನಟಿ ಕವಿತಾ (Actress Kavitha)ಟಾಲಿವುಡ್ ವಲಯದ ಹೆಸರಾಂತ ನಟಿ. ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ದೊಡ್ಡ ಹೆಸರು ಮಾಡಿರುವ ನಟಿ ಈವರೆಗೆ ತೆಲುಗಿನಲ್ಲಿ 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ ಹಾಗೂ ತಮಿಳಿ ನಲ್ಲೂ ಕೂಡ ತಮ್ಮದೇ ಆದ ಚಾಪು ಮೂಡಿಸಿದ್ದಾರೆ. ರಜನಿಕಾಂತ್, ಶಿವಾಜಿ ಗಣೇಶನ್ ಮುಂತಾದ ನಟರೊಂದಿಗೆ ತೆರೆ ಹಂಚಿಕೊಂಡಿರುವ ಪ್ರತಿಭಾವಂತ ನಟಿ ಕುರಿತು ಗಾಸಿಪ್ ಒಂದು ಹರಿದಾಡುತ್ತಿವೆ.
ಇದ್ದಕ್ಕಿದ್ದಂತೆ ರಜನಿಕಾಂತ್ ಹಾಗೂ ನಟಿ ಕವಿತಾ ಮಧ್ಯೆ ಮದುವೆ ಆಗಿತ್ತು (Rajanikantha and Kavitha marriage gossip) ಎಂದು ಮಾಧ್ಯಮಗಳಲ್ಲಿ ಸುದ್ದಿ ಹರಿದಾಡಿದೆ. ಈ ಹಿಂದೆಯೂ ಕೂಡ ಕೆಲ ವರ್ಷಗಳ ಹಿಂದೆ ರಜನಿಕಾಂತ್ ಅವರೊಂದಿಗೆ ಕವಿತಾ ಅವರು ನಾಯಕ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದ ವೇಳೆ ಇದೇ ರೀತಿಯಾಗಿ ರೂಮರ್ ಹಬ್ಬಿತ್ತು, ಮತ್ತೊಮ್ಮೆ ಈ ಸುದ್ದಿ ಸದ್ದು ಮಾಡುತ್ತಿರುವುದನ್ನು ನೋಡಿ ಜನ ನಿಜ ಇರಬೇಕು ಎಂದು ಭಾವಿಸಿದ್ದಾರೆ.
ಆದರೆ ಅಸಲಿ ಸತ್ಯ ಏನೆಂದರೆ ಇತ್ತೀಚೆಗೆ ಯೂಟ್ಯೂಬ್ ಸಂದರ್ಶನ ಒಂದರಲ್ಲಿ ಭಾಗಿಯಾಗಿದ್ದ ಕವಿತಾ ಅವರು ತಮ್ಮ ಸಿನಿಮಾ ಜರ್ನಿ ಬಗ್ಗೆ ಅನೇಕ ವಿಷಯಗಳನ್ನು ಹೇಳಿಕೊಳ್ಳುತ್ತಿದ್ದರು. ಹೀಗೆ ನೆನಪಿನ ಪುಟದಲ್ಲಿ ಹಿಂದೊಮ್ಮೆ ತಮ್ಮ ಬಗ್ಗೆ ಹಬ್ಬಿದ್ದ ಗಾಳಿ ಸುದ್ದಿ ಬಗ್ಗೆ ಮಾತನಾಡಿದ ನಟಿ ರಜನಿಕಾಂತ್ ಹಾಗೂ ನನಗೂ ಮದುವೆಯಾಗಿದೆ ಎಂದು ಗಾಳಿಸುದ್ದಿ ಹಬ್ಬಿಸಿದ್ದರು ಅನೇಕ ಪತ್ರಿಕೆಗಳನ್ನು ಕೂಡ ಈ ಬಗ್ಗೆ ಬರೆದಿದ್ದರು.
ಇದೆಲ್ಲಾ ಸುಳ್ಳು ಎನ್ನುವುದು ಗೊತ್ತಾಗುವುದಕ್ಕೆ ಬಹಳ ದಿನ ಬೇಕಾಯಿತು ಎಂದು ಹಳೆಯ ವಿಷಯಗಳ ಬಗ್ಗೆ ಮುಕ್ತವಾಗಿ ಹೇಳಿಕೊಂಡಿದ್ದರು. ಆದರೆ ಈ ಬಗ್ಗೆ ಮಾತನಾಡಿದ ನಟಿಗೆ ಮತ್ತೊಂದು ಶಾ’ಕ್ ಎದುರಾಗಿತ್ತು, ಯಾಕೆಂದರೆ ಈ ಸಂದರ್ಶನವಾದ ಬಳಿಕ ಇದ್ದಕ್ಕಿದ್ದಂತೆ ಮಾಧ್ಯಮಗಳಲ್ಲಿ ರಜನಿಕಾಂತ್ ಹಾಗೂ ಕವಿತಾ ನಡುವೆ ಗುಟ್ಟಾಗಿ ಮದುವೆಯಾಗಿತ್ತು ಎಂದು ಸುದ್ದಿ ಪ್ರಸಾರವಾಗಲು ಶುರುವಾಯಿತು.
ಈ ರೀತಿ ಮಾಧ್ಯಮಗಳಲ್ಲಿ ವಿಷಯ ವರದಿಯಾಗುತ್ತಿದ್ದಾಗ ನಟ ಮೋಹನ್ ಬಾಬು (Mohan babu) ಅವರೊಂದಿಗೆ ಕವಿತಾ ಅವರು ಸಿನಿಮಾ ಒಂದರ ಶೂಟಿಂಗ್ನಲ್ಲಿ ಇದ್ದರಂತೆ. ವಿಷಯ ತಿಳಿಯುತ್ತಿದ್ದಂತೆ ಅಲ್ಲಿಯೇ ತಮಗಾದ ಸಮಸ್ಯೆ ಬಗ್ಗೆ ನಟ ಮೋಹನ್ ಬಾಬು ಅವರಿಗೆ ತಿಳಿಸಿದಾಗ ತಕ್ಷಣವೇ ಶೂಟಿಂಗ್ ಅನ್ನು ಪ್ಯಾಕ್ ಅಪ್ ಮಾಡಿಸಿ ನಟ ಸಂಬಂಧಪಟ್ಟ ಮಾಧ್ಯಮಕ್ಕೆ ಕವಿತಾ ಅವರನ್ನು ಆ ಕ್ಷಣದಲ್ಲೇ ಕರೆದುಕೊಂಡು ಹೋಗಿದ್ದಾರೆ ಮತ್ತು ಅಲ್ಲಿರುವವರನ್ನು ಸರಿಯಾಗಿ ತರಾಟೆಗೂ ಕೂಡ ತೆಗೆದುಕೊಂಡಿದ್ದಾರೆ.
ಇದು ಸತ್ಯಕ್ಕೆ ದೂರವಾದ ಮಾತು ಇವರು ಕೊಟ್ಟಿರುವ ಹೇಳಿಕೆಯನ್ನು ತಿರುಚಿ ಸುದ್ದಿ ಹಬ್ಬಿಸಲಾಗುತ್ತಿದೆ ಎಂದು ಕವಿತಾ ಅವರ ಬಗ್ಗೆ ವಾದಕ್ಕಿಳಿದ ನಟ ಮೋಹನ್ ಬಾಬು ಅವರು ಕೊನೆಗೆ ಆ ಮಾಧ್ಯಮವು ಈ ಸುದ್ದಿ ನಿರಾಕರಣೆಗೆ ಪ್ರಕಟಿಸುವುದಾಗಿ ಒಪ್ಪಿಕೊಂಡ ನಂತರವೇ ಅಲ್ಲಿಂದ ಹೊರಬಂದಿದ್ದಾರೆ ಎನ್ನುವುದು ತಿಳಿದು ಬಂದಿದೆ. ಒಟ್ಟಿನಲ್ಲಿ ಸೋಶಿಯಲ್ ಮೀಡಿಯ ಹಾವಳಿಯಲ್ಲಿ ಅನೇಕ ತಾರೆಗಳ ಬಗ್ಗೆ ಈ ರೀತಿ ಸುದ್ದಿ ಹಬ್ಬುವುದು ಮಾಮೂಲಾಗಿಬಿಟ್ಟಿದೆ.
ಇತ್ತೀಚಿನ ಜನರೇಶನ್ ಇದನ್ನು ಬಹಳ ಸಿಂಪಲ್ ಆಗಿ ತೆಗೆದುಕೊಂಡು ನೆಗ್ಲೆಟ್ ಮಾಡಿದರು ಹಿರಿಯ ಕಲಾವಿದರಿಗೆ ಇದನ್ನು ಆರಗಿಸಿಕೊಳ್ಳುವುದು ಬಹಳ ಕಷ್ಟವಾಗುತ್ತದೆ. ತಮಗಾದ ಗಾಸಿಪ್ ವಿಷಯವನ್ನು ಹಂಚಿಕೊಂಡ ತಪ್ಪಿಗೆ ಮತ್ತೊಮ್ಮೆ ಅದನ್ನು ಕಾಂಟ್ರವರ್ಸಿ ಮಾಡಿದ ಮಾಧ್ಯಮಕ್ಕೆ ನಟ ಮೋಹನ್ ಬಾಬು ಸರಿಯಾಗಿ ಬುದ್ಧಿ ಕಲಿಸಿದ್ದಾರೆ ಕೊನೆಗೂ ಇವರ ಮಧ್ಯಪ್ರವೇಶದಿಂದಾಗಿ ಪ್ರಕರಣ ಸುಖಾಂತ್ಯ ಕಂಡಿದೆ.