ವಿವಾಹದ ಸಂದರ್ಭದಲ್ಲಿ ವಿವಾಹಪೂರ್ವ ಕಾರ್ಯಕ್ರಮಗಳಾದ ನಿಶ್ಚಿತಾರ್ಥದಿಂದ ಹಿಡಿದು ವಿವಾಹ ಆದ ಬಳಿಕ ಕೂಡ ನಡೆಯುವ ಅನೇಕ ಕಾರ್ಯಕ್ರಮಗಳಲ್ಲಿ ದಂಪತಿಗಳಿಗೆ ಶುಭ ಹಾರೈಸಿ ಸಂಬಂಧಿಕರು ಹಾಗೂ ಸ್ನೇಹಿತರು ಉಡುಗೊರೆಗಳನ್ನು ನೀಡುತ್ತಾರೆ. ಈ ರೀತಿ ಪರಿಚಯಿಸ್ಥರಿಂದ ಕುಟುಂಬದವರಿಂದ ಬಂಧುಗಳಿಂದ ಸ್ನೇಹಿತರಿಂದ ಪಡೆದ ಉಡುಗೊರೆಗಳನ್ನು ಸಾಮಾನ್ಯವಾಗಿ ಕಾರ್ಯಕ್ರಮಗಳೆಲ್ಲಾ ಮುಗಿದ ಬಳಿಕ ವಧುವಿನ ಜೊತೆಗೆ ವರನ ಮನೆಗೆ ಕಳುಹಿಸಿಕೊಡಲಾಗುತ್ತದೆ.
ದಂಪತಿಗಳು ಒಟ್ಟಿಗೆ ಇದ್ದಾಗ ಇಬ್ಬರು ಸಹ ಇದರ ಅನುಭೋಗಿಗಳಾಗಿರುತ್ತಾರೆ. ಹೀಗಿದ್ದರೂ ಸಹ ಪತಿಗೆ ಇದರಲ್ಲಿ ಯಾವುದೇ ಹಕ್ಕು ಇರುವುದಿಲ್ಲ ಎನ್ನುತ್ತದೇ ಕಾನೂನು. ಪತಿಯ ಅನುಮತಿ ಮೇರೆಗೆ ಮಾತ್ರ ಪತಿ ಇದರ ಬಳಕೆದಾರ ಆಗಿರುತ್ತಾನೆ, ಕಾನೂನು ಬದ್ಧವಾಗಿ ಮಹಿಳೆಗೆ ಮಾತ್ರ ವಿವಾಹದಲ್ಲಿ ಮತ್ತು ವಿವಾಹದ ನಂತರ ಪಡೆದ ಉಡುಗೊರೆಗಳ ಮೇಲೆ ಸಂಪೂರ್ಣ ಅಧಿಕಾರವಿರುತ್ತದೆ ಎನ್ನುವ ತೀರ್ಪನ್ನು ಛತ್ತೀಸ್ ಘಡ್ ಹೈಕೋರ್ಟ್ ನೀಡಿದೆ.
ಕೌಟುಂಬಿಕ ನ್ಯಾಯಾಲಯಗಳಲ್ಲಿ ನೀಡಿದ್ದ ತೀರ್ಪಿನ ವಿರುದ್ಧ ಹೈ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದ ಮಹಿಳೆಯ ಕೇಸ್ ವಿಚಾರಣೆ ನಡೆಸಿದ ಹೈಕೋರ್ಟ್ ಮಹಿಳೆ ಪರವಾಗಿ ತೀರ್ಪನ್ನು ನೀಡಿದೆ. ಈ ಕೇಸ್ ನ ವಿವರವನ್ನು ನೋಡುವುದಾದರೆ ಛತ್ತೀಸ್ಗಢ ರಾಜ್ಯದ ಅಂಬಿಕಾಪುರ ಕೌಟುಂಬಿಕ ನ್ಯಾಯಾಲಯದಲ್ಲಿ ವಿವಾಹ ವಿಚ್ಛೇದನದ ಪ್ರಕರಣವೊಂದು ದಾಖಲಾಗಿತ್ತು.
ಮದುವೆಯಾಗಿ ಕೆಲವು ವರ್ಷಗಳ ಕಾಲ ಸಂಸಾರ ನಡೆಸಿದ್ದ ಪತಿ-ಪತ್ನಿ ಇಬ್ಬರೂ ಅನೇಕ ಕಾರಣಗಳಿಂದ ವೈಮನಸ್ಸು ನೋಡಿ ಇನ್ನು ಒಟ್ಟಿಗೆ ಬದುಕಲು ಸಾಧ್ಯವಿಲ್ಲ ಎನ್ನುವ ನಿರ್ಧಾರಕ್ಕೆ ಬಂದು ವಿವಾಹ ವಿ’ಚ್ಛೇ’ದ’ನ ಪಡೆದಿದ್ದರು. ಈ ವೇಳೆ ತನಗೆ ಉಡುಗೊರೆಯಾಗಿ ಮದುವೆ ಮತ್ತು ನಂತರದ ಕಾರ್ಯಕ್ರಮಗಳಲ್ಲಿ ಬಂದಿದ್ದ ಆಸ್ತಿ ಮತ್ತು ವಸ್ತುಗಳನ್ನು ಗಂಡನ ಮನೆಯಿಂದ ಕೊಡಿಸಬೇಕು ಎಂದು ಮಹಿಳೆ ಕೇಳಿಕೊಂಡಿದ್ದರು.
ಆದರೆ ಪತಿ ಮನೆಯವರಿಗೆ ಈ ರೀತಿ ಉಡುಗೊರೆಯನ್ನು ವಾಪಸ್ ನೀಡಲು ಮನಸಿರಲಿಲ್ಲ. ಅದಲ್ಲದೆ ಅದರಲ್ಲಿ ಅವರಿಗೂ ಕೂಡ ಹಕ್ಕಿದೆ ಎಂದು ವಾದಿಸಿದ್ದರು. ಇಷ್ಟಕ್ಕೆ ಜಗ್ಗದ ಆ ಮಹಿಳೆ ವಿಚ್ಛೇದನ ಪಡೆದ ಬಳಿಕ ಈ ರೀತಿ ತನ್ನ ಪಾಲಿಗೆ ಬರಬೇಕಾದ ಉಡುಗೊರೆಯಾಗಿ ಬಂದಿದ್ದ ಆಸ್ತಿಯನ್ನು ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಈಕೆಯ ಅರ್ಜಿಯನ್ನು ತಿರಸ್ಕರಿಸಿದ್ದ ಕೌಟುಂಬಿಕ ನ್ಯಾಯಾಲಯ ಪತಿಯ ಪರವಾಗಿ ತೀರ್ಪು ನೀಡಿ ಆದೇಶ ಹೊರಡಿಸಿತ್ತು.
ಈ ತೀರ್ಪಿನ ವಿರುದ್ಧ ಮಹಿಳೆ 2021ರ ಡಿಸೆಂಬರ್ ವೇಳೆ ಛತ್ತೀಸ್ ಘಡ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ನ ತ್ರಿಸದಸ್ಯ ಪೀಠವು, ಕೌಟುಂಬಿಕ ನ್ಯಾಯಾಲಯ ನೀಡಿದ್ದ ತೀರ್ಪನ್ನು ತಳ್ಳಿ ಹಾಕಿದೆ. ಜೊತೆಗೆ, ಪತ್ನಿಗೆ ಬಂದ ಉಡುಗೊರೆಯ ಮೇಲೆ ಪತಿಗೆ ಯಾವುದೇ ಹಕ್ಕು ಇರುವುದಿಲ್ಲ ಎಂದು ಮಹಿಳೆಯ ಪರವಾಗಿ ಮಹತ್ವದ ನಿರ್ಧಾರವನ್ನ ಹೊರಡಿಸಿ ತೀರ್ಪು ನೀಡಿದೆ.
ಈ ಮೂಲಕ ಮಹಿಳೆ ಪಡೆದ ಉಡುಗೊರೆ ಮತ್ತು ವಸ್ತುಗಳನ್ನು ಪಡೆಯುವ ಹಕ್ಕು ಆಕೆಗೆ ಮಾತ್ರ ಇದೆ ಎಂದು ತ್ರಿಸದಸ್ಯ ಪೀಠವು ಆದೇಶ ನೀಡಿದೆ. ಸಾಮಾನ್ಯವಾಗಿ ನ್ಯಾಯಾಲಯಗಳಲ್ಲಿ ಕೇಸ್ ಗಳ ವಿಚಾರಣೆ ನಡೆಸಿ ತೀರ್ಪು ನೀಡುವಾಗ ಹಳೆ ಕೇಸ್ ತೀರ್ಪಿನ ಬಗ್ಗೆ ಉಲ್ಲೇಖ ಮಾಡುವ ರೂಢಿ ಇರುವುದರಿಂದ ಮುಂದೆ ಉಂಟಾಗುವ ಪ್ರಕರಣಗಳಿಗೂ ಕೂಡ ಈ ಕೇಸ್ ಉದಾಹರಣೆ ಕೊಟ್ಟು ತೀರ್ಪನ್ನು ನೀಡಬಹುದು ಎಂದು ನಿರೀಕ್ಷಿಸಬಹುದಾಗಿದೆ. ಛತ್ತೀಸ್ ಘಡ್ ಹೈಕೋರ್ಟ್ ತೆಗೆದುಕೊಂಡಿರುವ ಈ ತೀರ್ಪಿನ ಬಗ್ಗೆ ನಿಮ್ಮ ಅಭಿಪ್ರಾಯ ಏನು ತಪ್ಪದೇ ಎಂದು ಕಮೆಂಟ್ ಮಾಡಿ ತಿಳಿಸಿ.