ನಮಸ್ಕಾರ ಸ್ನೇಹಿತರೆ ಇಂದಿನ ವಿಶೇಷವಾದ ಮಾಹಿತಿಯೊಂದಿಗೆ ನಿಮ್ಮ ಬಳಿ ತಂದಿದ್ದೇವೆ ಸ್ನೇಹಿತರೆ ಮಕ್ಕಳು ಶಾಲೆ ಈ ಎರಡು ತಂದೆ ತಾಯಿಯರ ಜೀವನದಲ್ಲಿ ಬಹಳ ಮುಖ್ಯವಾದದ್ದು ಅದರಲ್ಲೂ ಇತ್ತೀಚಿಗೆ ಸರ್ಕಾರದಿಂದ ಬರುತ್ತಿರುವ ಹೊಸ ಹೊಸ ಯೋಜನೆ ಗಳಲ್ಲಿ ಹಾಗೂ ಹೊಸ ಹೊಸ ರೀತಿಯ ದೇಶದ ಏಳಿಗೆಗಾಗಿ ಕೆಲವೊಂದು ಬದಲಾವಣೆ ಅವಶ್ಯಕವಾಗಿದೆ. ಮೇ 29 ರಿಂದ ಮತ್ತೆ ಶಾಲೆಯು ಶುರುವಾಗಲಿದೆ.
ಸದ್ಯ ಈಗಾಗಲೇ ಶೈಕ್ಷಣಿಕ ಕ್ಷೇತ್ರದಲ್ಲಿ ಕೆಲವೊಂದು ಮಾಹಿತಿಗಳು ವೈರಲಾಗುತ್ತಿದ್ದು, ಈ ಸಾಲಿನ ಶೈಕ್ಷಣಿಕ ಕ್ಷೇತ್ರದಲ್ಲಿ ಕೆಲವೊಂದು ಬದಲಾವಣೆಗಳು ಮಹತ್ವವಾದ ತಿರುವನ್ನು ತರಲಿದೆ. ಇನ್ನು ಅದೇ ರೀತಿ ಸರ್ಕಾರದ ಹೊಸ ನಿಯಮಗಳು ಕೂಡ ಜಾರಿಗೆ ಬಂದಿದ್ದು ಮಕ್ಕಳು ಹಾಗೂ ಶಾಲೆಗಳಿಗೆ ಇದನ್ನು ಪಾಲಿಸಲು ಸರ್ಕಾರದ ಆದೇಶವು ಬಂದಿದೆ.
ಯಾವುದು ಈ ಹೊಸ ನಿಯಮ…?
ಪ್ರಸಕ್ತ 2023-24 ರ ಶಾಲೆಯ ದಾಖಲಾತಿಗೆ ಆಧಾರ್ ಕಾರ್ಡ್ ಕಡ್ಡಾಯವಾಗಿ ನೋಂದಣಿಯಾಗಬೇಕು. ಇನ್ನೂ ಶಾಲೆಗೆ ಸೇರುವ ಮಕ್ಕಳ ವಯಸ್ಸಿನ ಬಗ್ಗೆ ಕೂಡ ಹೆಚ್ಚಾಗಿ ಮಾಹಿತಿಗಳು ವೈರಲಾಗುತ್ತಿದ್ದು ಇದರ ಚರ್ಚೆ ಕೂಡ ಹೆಚ್ಚಾಗಿದೆ ಇನ್ನು ವಯಸ್ಸಿನ ಅಂತರಗಳು ಹಾಗೂ ಹೆಚ್ಚು ಕಡಿಮೆಯ ವ್ಯತ್ಯಾಸಗಳು ಯಾವುದು ಹೇಗೆ ಎಂಬುವ ಗೊಂದಲದಲ್ಲಿ ಪೋಷಕರು ಇದ್ದಾರೆ.
ಹಾಗಾಗಿ ಈ ತರಹದ ಗೊಂದಲಗಳನ್ನು ತಪ್ಪಿಸಲು ಸರ್ಕಾರವು ಹಾಗೂ ಶಿಕ್ಷಣ ಇಲಾಖೆಯು ಆಧಾರ್ ಕಾರ್ಡ್ ನೋಂದಣಿಯನ್ನು ಕಡ್ಡಾಯವಾಗಿಸಿದೆ. ಸದ್ಯ ಈಗಾಗಲೇ ರಾಜ್ಯದ ಶಾಲೆಯ 60% ನಷ್ಟು ಮಕ್ಕಳ ಆಧಾರ್ ಕಾರ್ಡ್ ನೊಂದಣಿ ಈಗಾಗಲೇ ಮುಗಿದಿದ್ದು ಇನ್ನು ಎಷ್ಟು ಮಕ್ಕಳ ಆಧಾರ್ ನೊಂದಣಿಯು ಆಗಿಲ್ಲ ಇನ್ನು ಕೆಲವರದ್ದು ನೊಂದಣಿ ಆಗಿದ್ದರು ತಮ್ಮ ಹೆಸರಿನ ಹಾಗೂ ಕೆಲವೊಂದು ವಿಷಯವಾಗಿ ತಾಂತ್ರಿಕೇತರ ತೊಂದರೆ ಆಗಿದೆ ಮಕ್ಕಳು ಕಡ್ಡಾಯವಾಗಿ ತಮ್ಮ ಆಧಾರ್ ಕಾರ್ಡನ್ನು ಶಾಲೆಯಲ್ಲಿ ನೋಂದಣಿಯನ್ನು ಮಾಡಿಕೊಳ್ಳಬೇಕು.
ಈ ವಿಷಯವಾಗಿ ಬರಿ ಮಕ್ಕಳಲ್ಲದೆ ತಂದೆ ತಾಯಿಯರಿಗೂ ಕೂಡ ಜವಾಬ್ದಾರಿಗಳು ಹೆಚ್ಚಾಗಿವೆ, ಸದ್ಯ ಶಾಲೆಯು ತೆರೆಯುವ ಮುನ್ನ ಆಧಾರ್ ಕಾರ್ಡ್ ನೊಂದಿಗೆ ಸಿದ್ಧವಾಗಿದ್ದರೆ ಒಳ್ಳೆಯದು. ಇದು ಬರಿ ಸರ್ಕಾರಿ ಶಾಲೆಗೆ ಅಲ್ಲದೆ ಎಲ್ಲಾ ಖಾಸಗಿ ಶಾಲೆಗಳಿಗೂ ಕೂಡ ಇದು ಅನ್ವಯವಾಗಲಿದೆ ಹಾಗಾಗಿ ಈಗಾಗಲೇ ಎಷ್ಟೋ ಖಾಸಗಿ ಶಾಲೆಗಳು ಹಾಗೂ ಸರ್ಕಾರಿ ಶಾಲೆಗಳು ಮಕ್ಕಳಿಗೂ ಹಾಗೂ ಪೋಷಕರಿಗೂ ಈ ಮೊದಲೇ ತಿಳಿಸಿದ್ದು ಎಷ್ಟೋ ಪೋಷಕರು ಇದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ.
ಹಾಗಾಗಿ ಈ ಮಾಹಿತಿ ಪೋಷಕರಿಗೆ ಬಹಳ ಉಪಯುಕ್ತವಾಗಿದೆ ಎಂದು ಬಯಸುತ್ತೇವೆ ಅಲ್ಲದೇ ಸರ್ಕಾರದ ಯಾವುದೇ ಒಂದು ಮೀಸಲಾತಿಗಾಗಿ ಆಧಾರ್ ಕಾರ್ಡ್ ಕೂಡ ಒಂದು ದಾಖಲೆ ಎಂದು ಹೇಳಿದರೆ ತಪ್ಪಾಗದು. ಇನ್ನು ಮಕ್ಕಳ ಹೊಸದಾಗಿ ಆಧಾರ್ ಕಾರ್ಡನ್ನು ಮಾಡಿಸಲು ಮಗುವಿನ ಜನನ ಪ್ರಮಾಣ ಪತ್ರ ಹಾಗೂ ತಂದೆ ತಾಯಿಯರ ಆಧಾರ್ ಕಾರ್ಡನ್ನು ತೆಗೆದುಕೊಂಡು ಹೋದರೆ ಸರ್ಕಾರಿ ನಾಡಕಚೇರಿಗಳಲ್ಲಿ ಉಚಿತವಾಗಿ ಆಧಾರ್ ಕಾರ್ಡನ್ನು ಮಾಡಿಕೊಡುತ್ತಾರೆ ಆಧಾರ್ ಕಾರ್ಡನ್ನು ಮಾಡಿಸುವಾಗ ಸರಿಯಾಗಿ ಮಾಡಿಸಬೇಕು.
ಏಕೆಂದರೆ ಈ ಮುಂದೆ ಅಲ್ಲಿ ಮಕ್ಕಳ ದಾಖಲಾತಿಗೆ ಬಳಸಲಾಗುತ್ತದೆ ಹಾಗಾಗಿ ಪೋಷಕರು ಎಚ್ಚರಿಕೆಯಿಂದ ಈ ವಿಷಯವನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಸರ್ಕಾರಿ ಶಾಲೆಗಳಲ್ಲಿ ಆಧಾರ್ ಕಾರ್ಡ್ ನೊಂದಣಿ ಏಕೆ ಬೇಕು ಎಂದರೆ ಸರ್ಕಾರದಿಂದ ಸಿಗುವ ಸೌಲಭ್ಯಗಳು ಅಂದರೆ ಕ್ಷೀರಭಾಗ್ಯ ಅನ್ನಭಾಗ್ಯ ಉಚಿತ ಪುಸ್ತಕ ಉಚಿತ ಸಮವಸ್ತ್ರಗಳನ್ನು ನೀಡಲಾಗುತ್ತದೆ ಇದನ್ನು ದುರುಪಯೋಗ ಪಡಿಸಕೊಳ್ಳಬಾರದೆಂದು ಉದ್ದೇಶದಿಂದ ಸರ್ಕಾರ ಹಾಗೂ ಶಿಕ್ಷಣ ಇಲಾಖೆಯ ಆಧಾರ್ ಕಾರ್ಡ್ ನೊಂದಣಿಯನ್ನು ಜಾರಿಗೆ ತಂದಿದೆ.