Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ಶೀಘ್ರದಲ್ಲೇ ರಾಜ್ಯದಲ್ಲಿ 3000 ಕರ್ನಾಟಕ ಪಬ್ಲಿಕ್ ಶಾಲೆಗಳ‌ ನಿರ್ಮಾಣ ಮಾಡುತ್ತೆನೆ – ಡಿ.ಕೆ ಶಿವಕುಮಾರ್

Posted on October 7, 2023 By Admin No Comments on ಶೀಘ್ರದಲ್ಲೇ ರಾಜ್ಯದಲ್ಲಿ 3000 ಕರ್ನಾಟಕ ಪಬ್ಲಿಕ್ ಶಾಲೆಗಳ‌ ನಿರ್ಮಾಣ ಮಾಡುತ್ತೆನೆ – ಡಿ.ಕೆ ಶಿವಕುಮಾರ್

 

ಅಕ್ಟೋಬರ್ 11 ರಾಮನಗರ ಜಿಲ್ಲೆ ಮಾಗಡಿ ಬಳಿಯ ಕುದುರಿನಲ್ಲಿ (Ramanagara Disrict Kudoor) ನೂತನ ಕರ್ನಾಟಕ ಪಬ್ಲಿಕ್ ಶಾಲಾ (Karnataka public School) ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಮಾನ್ಯ ಉಪ ಮುಖ್ಯಮಂತ್ರಿಗಳಾದ ಸನ್ಮಾನ್ಯ ಡಿ.ಕೆ ಶಿವಕುಮಾರ್ (D.K Shivakumar) ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ನಡೆಸಿ ಕೊಟ್ಟರು.

ಇದೇ ಸಂದರ್ಭದಲ್ಲಿ ಅವರು ರಾಜ್ಯದಲ್ಲಿರುವ ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಕೂಡ ಅಂತರಾಷ್ಟ್ರೀಯ ಗುಣಮಟ್ಟದ ಪಬ್ಲಿಕ್ ಶಾಲೆಗಳನ್ನು ನಿರ್ಮಾಣ ಮಾಡುವ ಯೋಜನೆ ಬಗ್ಗೆ ಮಾತನಾಡಿದ್ದಾರೆ. ಹಳ್ಳಿ ಕಾಡಿನ ಮಕ್ಕಳು ವಿದ್ಯಾಭ್ಯಾಸದ ಕಾರಣಕ್ಕಾಗಿ ತಮ್ಮ ಹಳ್ಳಿಗಳನ್ನು ಬಿಟ್ಟು ದೂರ ಪ್ರದೇಶದಲ್ಲಿ ಹೋಗಿ ಇರಬೇಕು.

ರೈಲ್ವೆ ಪ್ರಯಾಣಿಕರ ಗಮನಕ್ಕೆ.! ಮೈಸೂರು-ಧಾರವಾಡ ಸೇರಿದಂತೆ 314 ರೈಲುಗಳ ವೇಳಾಪಟ್ಟಿ ಬದಲಾವಣೆ.! ಇಲ್ಲಿದೆ ನೋಡಿ ಹೊಸ ವೇಳಾಪಟ್ಟಿ ಬಗ್ಗೆ ಕಂಪ್ಲೀಟ್ ಮಾಹಿತಿ.

ಹೀಗೆ ಶಿಕ್ಷಣಕ್ಕಾಗಿ ವಲಸೆ ಹೋಗುವುದು ತಪ್ಪಿಸಲು ಪ್ರತಿ ಪಂಚಾಯಿತಿಯಲ್ಲಿಯೂ ಅಂತರರಾಷ್ಟ್ರೀಯ ಗುಣಮಟ್ಟದ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಕಟ್ಟಬೇಕು ಎಂಬುದು ನನ್ನ ಕನಸಾಗಿದೆ ಆದಷ್ಟು ಬೇಗ ಇದನ್ನು ಕಾರ್ಯಗತ ಮಾಡಲಿದ್ದೇವೆ ಎಂದು ಹೇಳಿದ್ದಾರೆ.

ಕುದೂರಿನಂತಹ ಗ್ರಾಮೀಣ ಭಾಗದಲ್ಲಿ 16 ಕೋಟಿ ಹಣ ಖರ್ಚು ಮಾಡಿ ಸರ್ಕಾರಿ ಶಾಲೆ ನಿರ್ಮಾಣ ಮಾಡಲು ಹೊರಟಿರುವುದು ಒಂದು ಕ್ರಾಂತಿಕಾರಿ ಆಲೋಚನೆಯಾಗಿದೆ. ಇಂತಹ ಸುಸಜ್ಜಿತ ಶಾಲೆ ನಿರ್ಮಾಣ ಮಾಡಲು ಮನಸ್ಸು ಮಾಡಿರುವ ಟೊಯೋಟೊ ಕಿರ್ಲೋಸ್ಕರ್ (Toyota Kiloskar) ಸಂಸ್ಥೆಗೆ ನಾವೆಲ್ಲಾ ಎಂದು ಕೂಡ ಅಭಾರಿಯಾಗಿರುತ್ತೇವೆ.

ಶಿವಣ್ಣ, ಪ್ರಕಾಶ್ ರಾಜ್ ಕ್ಷಮೆಯನ್ನು ನಾನು ಸ್ವೀಕರಿಸುವುದಿಲ್ಲ, ನನಗೆ ನನ್ನ ಸಿನಿಮಾ ಮುಖ್ಯ ಎಂದ ತಮಿಳು ನಟ ಸಿದ್ಧಾರ್ಥ್.!

ಈ ಸಂಸ್ಥೆಯವರು ರಾಮನಗರ ಜಿಲ್ಲೆಯ 4 ತಾಲ್ಲೂಕುಗಳಲ್ಲಿ ಒಂದೊಂದು ಶಾಲೆ ನಿರ್ಮಾಣ ಮಾಡುವುದಾಗಿ ಮಾತುಕೊಟ್ಟಿದ್ದಾರೆ ಇದು ಆರಂಭ ಇನ್ನು ಮುಂದೆ ಈ ವಿಚಾರದಲ್ಲಿ ಕ್ರಾಂತಿಯೇ ಆಗಲಿದೆ ಎಂದಿದ್ದಾರೆ. ಮುಂದುವರೆದು ರಾಮನಗರ ಜಿಲ್ಲೆಯಲ್ಲಿ ಇರುವ ಎಲ್ಲಾ ಕೈಗಾರಿಕೆಗಳ CSR ಹಣವನ್ನು ಶಿಕ್ಷಣದ ಕಾರಣಕ್ಕೆ ಮಾತ್ರ ಬಳಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.

ಈವರೆಗೆ 36 ಕೋಟಿಯಷ್ಟು ಹಣ ಈ ಅನುದಾನದ ಅಡಿಯಲ್ಲಿ ಸಂಗ್ರಹವಾಗಿದೆ ಇವುಗಳನ್ನು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಒಂದೊಳ್ಳೆ ಯೋಜನೆಗೆ ಬಳಸಿಕೊಳ್ಳಲು ಮೀಸಲಿಟ್ಟಿದ್ದೇವೆ ಎಂದಿದ್ದಾರೆ. ಕಾರ್ಯಕ್ರಮಕ್ಕೆ ನೆರೆದಿದ್ದ ವಿದ್ಯಾರ್ಥಿಗಳನ್ನು ಕೂಡ ಉದ್ದೇಶಿಸಿ ಮಾತನಾಡಿದ ಉಪಮುಖ್ಯಮಂತ್ರಿಗಳು ಕಣ್ಣು ಚೆನಾಗಿದ್ದರೆ, ನಾವು ನೋಡುವ ನೋಟ ಚೆನ್ನಾಗಿರುತ್ತದೆ.

ರಾಜ್ಯದಾದ್ಯಂತ ನಾವು ಸನಾತನಿಗಳಲ್ಲ ಅಭಿಯಾನ ಶುರು – ಕೆ.ಎಸ್. ಭಗವಾನ್ ನೇತೃತ್ವ

ನಾಲಿಗೆ, ನಡತೆ ಚೆನ್ನಾಗಿದ್ದರೆ ಇಡೀ ಜಗತ್ತೇ ನಮ್ಮನ್ನು ನಂಬುತ್ತದೆ, ಹಿಂಬಾಲಿಸುತ್ತದೆ ಇದೆಲ್ಲವೂ ಆಗಬೇಕು ಎಂದರೆ ಶಿಕ್ಷಣ ಅತ್ಯಗತ್ಯ. ಸಮಯ ನಿಲ್ಲುವುದಿಲ್ಲ, ಆಡಿದ ಮಾತು ಮತ್ತೆ ಮರಳಿ ಬರುವುದಿಲ್ಲ, ಹಾಗಯೇ ವಿದ್ಯೆ ಕಲಿಯುವ ವಯಸ್ಸು ಕಳೆದು ಹೋದರೆ ಮತ್ತೆ ದೊರೆಯುವುದಿಲ್ಲ ಹಾಗಾಗಿ ವಿದ್ಯಾರ್ಥಿ ಜೀವನದಲ್ಲಿ ಎಷ್ಟು ಕಲಿಯಲು ಸಾಧ್ಯವೋ ಅಷ್ಟು ಕಲಿಯಬೇಕು.

ನಿಮ್ಮ ತಂದೆ- ತಾಯಿ ನಿಮ್ಮ ಬಗ್ಗೆ ನೂರಾರು ಕನಸು ಕಂಡಿರುತ್ತಾರೆ, ಆ ಕನಸಿನಂತೆ ನೀವು ಬೆಳೆಯಬೇಕು, ಸಾಧನೆ ಮಾಡಬೇಕು ನಿಮ್ಮ ವಿದ್ಯಾಭ್ಯಾಸದ ಉದ್ದೇಶ ಕುಟುಂಬ ಇವುಗಳನ್ನು ಮರೆತರೆ ನಿಮಗೆ ಭವಿಷ್ಯದಲ್ಲಿ ಏನು ಸಹ ಇರುವುದಿಲ್ಲ ಎನ್ನುವ ಕಿವಿ ಮಾತುಗಳನ್ನು ಹೇಳಿದ್ದಾರೆ. ಸ್ವತಃ ಖಾಸಗಿ ವಿದ್ಯಾ ಸಂಸ್ಥೆಗಳನ್ನು ಕೂಡ ಹೊಂದಿರುವ ಡಿ.ಕೆ ಶಿವಕುಮಾರ್ ಅವರು ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುತ್ತಾರೆ ಎನ್ನುವುದು ಅನೇಕ ಬಾರಿ ತಿಳಿದು ಬಂದಿದೆ.

ದರ್ಶನ್ & ನನ್ನ ನಡುವೆ ಮನಸ್ತಾಪ ಇರೋದು ನಿಜ.! ನಾಟಕ ಆಡೋ ವ್ಯಕ್ತಿ ನಾನಲ್ಲ, ದರ್ಶನ್ ಗೆ 3 ಪ್ರಶ್ನೆ ಕೇಳ್ಬೇಕು.!

ಈ ಬಾರಿಯೂ ಅವರು ಶಾಲೆಗಳ ನಿರ್ಮಾಣದ ವಿಚಾರವಾಗಿ ಹೆಚ್ಚು ಮುತುವರ್ಜಿ ತೋರುತ್ತಿದ್ದಾರೆ. ಅವರ ಮಾತಿನಂತೆ ರಾಜ್ಯದಾದ್ಯಂತ ಶೀಘ್ರವಾಗಿ ಉತ್ತಮ ಸೌಲಭ್ಯಗಳುಳ್ಳ ಅತ್ಯಾಧುನಿಕ ಸೌಕರ್ಯಗಳಿಂದ ಕೂಡಿದ ಶಾಲೆಗಳು ರಾಜ್ಯದೆಲ್ಲೆಡೆ ತಲೆ ಎತ್ತಲಿ, ಭಾರತದ ಭವ್ಯ ಭವಿಷ್ಯ ಬೆಳಕಾಗಲಿ ಎಂದು ನಾವು ಕೂಡ ಬಯಸೋಣ.

Viral News

Post navigation

Previous Post: ರೈಲ್ವೆ ಪ್ರಯಾಣಿಕರ ಗಮನಕ್ಕೆ.! ಮೈಸೂರು-ಧಾರವಾಡ ಸೇರಿದಂತೆ 314 ರೈಲುಗಳ ವೇಳಾಪಟ್ಟಿ ಬದಲಾವಣೆ.! ಇಲ್ಲಿದೆ ನೋಡಿ ಹೊಸ ವೇಳಾಪಟ್ಟಿ ಬಗ್ಗೆ ಕಂಪ್ಲೀಟ್ ಮಾಹಿತಿ.
Next Post: ಮೂರು ವರ್ಷಗಳ ನಂತರ ಮತಗಳ ಮರು ಎಣಿಕೆ, ಮತ್ತೆ ಗೆದ್ದ ಗ್ರಾಮ ಪಂಚಾಯತಿ ಸದಸ್ಯೆ.!

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme