ಈ ದೇವಾಲಯದಲ್ಲಿ ಸಾಕ್ಷಾತ್ ಭಗವಂತನೇ ಜೀವಂತವಾಗಿ ನೆಲೆಸಿದ್ದಾನೆ ಎಂದು ಎಲ್ಲರ ನಂಬಿಕೆ. ತಿರುಮಲದ ದೇವಾಲಯದಲ್ಲಿ ಯಾವುದೇ ರೀತಿಯ ಕಲ್ಲಿನ ವಿಗ್ರಹಗಳಿಲ್ಲ ಅಲ್ಲಿರುವ ದೇವರಿಗೆ ಶೆಕೆ ಆಗಬಾರದು ಎಂದು ದೇವಾಲಯದ ಗರ್ಭಗುಡಿಯಲ್ಲಿ ಫ್ಯಾನ್ಗಳನ್ನು ಹಾಕಿದ್ದಾರೆ ದೇಶದಲ್ಲಿ ಇದು ಅತ್ಯಂತ ಸಂಪತ್ಪರಿತ ದೇವಾಲಯ ಈ ದೇವಾಲಯದ ವಾರ್ಷಿಕ ಆದಾಯ 8,000 ಕೋಟಿ.
ಕಾಣಿಕೆ ರೂಪದಲ್ಲಿ ಹುಂಡಿಗೆ ಸೇರುವ ಹಣವೇ 3000 ಕೋಟಿ ಅಲ್ಲದೆ ಇದು ದೇಶದಲ್ಲಿ ಅತ್ಯಂತ ಶ್ರೀಮಂತ ದೇವಾಲಯಗಳಲ್ಲಿ ಮೊದಲನೇ ಸ್ಥಾನದಲ್ಲಿದೆ. ತಿರುಮಲ ತಿರುಪತಿಯ ದೇವಾಲಯದ ಒಳಗೆ ಇರುವ ರ.ಹ.ಸ್ಯಗಳು ಕೆಲವೇ ಕೆಲವು ಮಂದಿಗೆ ತಿಳಿದಿರುತ್ತದೆ ದಕ್ಷಿಣ ಭಾರತದ ಆಂಧ್ರಪ್ರದೇಶದ ಚಿತ್ತೂರಿನಲ್ಲಿ ತಿರುಪತಿ ಇದೆ ಇತ್ತೀಚೆಗೆ ತಿರುಪತಿಯನ್ನು ಪ್ರತ್ಯೇಕ ಜಿಲ್ಲೆಯಾಗಿ ಘೋಷಣೆ ಮಾಡಲಾಗಿದೆ.
ತಿರುಮಲ ತಿರುಪತಿಯ ಗರ್ಭಗುಡಿಯಲ್ಲಿ ಇರುವಂತಹ ವಿಗ್ರಹಗಳು ಮಾನವನ ಕೈಯಲ್ಲಿ ಮಾಡಿದ್ದಲ್ಲ ಬದಲಾಗಿ ತಿರುಮಲದಲ್ಲಿ ಸ್ವಯಂ ಉದ್ಭವವಾಗಿ ದೇವರು ನೆಲೆಸಿದ್ದಾನೆ ಎಂದು ಭಕ್ತರ ನಂಬಿಕೆ ಇಲ್ಲಿನ ವಿಗ್ರಹಗಳು ಕಲ್ಲಿನ ವಿಗ್ರಹದಂತೆ ಕಂಡು ಹತ್ತಿರದಿಂದ ನೋಡಿದರೆ ಆ ಭಾವನೆ ಬದಲಾಗುತ್ತದೆ ದೇವರನ್ನು ಹತ್ತಿರದಿಂದ ನೋಡಿದರೆ ಆ ಭಗವಂತನೇ ಸಾಕ್ಷಾತ್ ಎದುರಿಗೆ ಪ್ರತ್ಯಕ್ಷವಾಗಿ ನಿಂತಿದ್ದಾನೆ ಎನ್ನುವ ಭಾವನೆ ಉಂಟಾಗುತ್ತದೆ.
ತಿರುಮಲದ ಪ್ರಧಾನ ಆಲಯದಲ್ಲಿ ಬಲ ಭಾಗದಲ್ಲಿ ಒಂದು ಕೋಲನ್ನ ಯಾವಾಗಲೂ ಇಟ್ಟಿರುತ್ತಾರೆ. ಇದೇ ಕೋಲಿನಿಂದಲೇ ವೆಂಕಟೇಶ್ವರ ಸ್ವಾಮಿ ತನ್ನ ಬಾಲ್ಯದಲ್ಲಿ ತಾಯಿಯ ಕೈಯಲ್ಲಿ ಏಟು ತಿಂದಿದ್ದಾರೆ ಎಂದು ಹೇಳಲಾಗುತ್ತದೆ ಒಮ್ಮೆ ಹೀಗೆ ತಾಯಿಯು ಕೋಲಿನಿಂದ ಹೊಡೆಯಬೇಕಾದರೆ ತಲೆಗೆ ಏಟಾಗಿ ರಕ್ತ ಸೋರುತ್ತದೆ ಆಗ ತಾಯಿ ವೆಂಕಟೇಶ್ವರನಿಗೆ ಚಂದನವನ್ನ ಇಡುತ್ತಾರೆ ಇದು ಇಂದಿಗೂ ಕೂಡ ಮುಂದುವರಿದುಕೊಂಡು ಬಂದಿದೆ ಇಂದಿಗೂ ವೆಂಕಟೇಶ್ವರನಿಗೆ ಇಲ್ಲಿನ ಅರ್ಚಕರು ದಿನನಿತ್ಯ ಚಂದನವನ್ನು ಲೇಪಿಸುತ್ತಾರೆ.
ಅರ್ಚಕರು ಹಾಗು ತಿರುಮಲ ತಿರುಪತಿಯ ಭಕ್ತರು ಹೇಳುವುದೇನೆಂದರೆ, ತಿರುಮಲದಲ್ಲಿರುವ ದೇವರ ವಿಗ್ರಹದ ಹಿಂದಿನಿಂದ ಸಮುದ್ರದ ಅಲೆಗಳ ಶಬ್ದ ಕೇಳಿಸುತ್ತದೆ ದೇವಾಲಯದಲ್ಲಿ ನಿಂತು ನಿಶಬ್ದವಾಗಿ ಕೇಳಿದರೆ ಸಮುದ್ರದ ಮಧ್ಯ ನಿಂತು ಅಲೆಗಳ ಶಬ್ದ ಕೇಳಿದ ಅನುಭವವಾಗುತ್ತದೆ ಎಂದು ಭಕ್ತರು ಹೇಳುತ್ತಾರೆ. ತಿರುಪತಿಗೆ ಬಂದು ದೇವರ ದರ್ಶನ ಮಾಡಿಕೊಂಡು ಏನೇ ಕೇಳಿದರು ಹೀಡೇರುತ್ತದೆ ಎನ್ನುವುದು ಭಕ್ತರ ನಂಬಿಕೆ.
ತಿರುಮಲ ಹಾಲಯದಲ್ಲಿ ಪ್ರತಿದಿನ 8,000 ಮಂದಿ ಭಕ್ತರು ತಮ್ಮ ಮುಡಿಯನ್ನು ದೇವರಿಗೆ ಅರ್ಪಿಸುತ್ತಾರೆ. ಇದಲ್ಲದೆ ಹಣ ಚಿನ್ನ ಬೆಳ್ಳಿಯನ್ನು ದೇವರ ಹುಂಡಿಗೆ ಸಮರ್ಪಿಸುತ್ತಾರೆ. ಹೀಗಾಗಿ ದೇಶದಲ್ಲಿ ಅತ್ಯಂತ ಶ್ರೀಮಂತ ದೇವಾಲಯ ಎಂದು ತಿರುಮಲ ದೇವಾಲಯವನ್ನು ಕರೆಯಲಾಗುತ್ತದೆ ಈ ದೇವಾಲಯಕ್ಕೆ ಕಾಣಿಕೆ ರೂಪದಲ್ಲಿ ಬರುವ ಹಣ ಒಡವೆ, ಇತರೆ ಬೆಲೆ ಬಾಳುವ ವಸ್ತುಗಳನ್ನು ಲೆಕ್ಕ ಹಾಕಲು ದೇವಾಲಯದಲ್ಲಿ ಸಾಕಷ್ಟು ಉದ್ಯೋಗಿಗಳು ಇದ್ದಾರೆ.
ಪ್ರತಿ ತಿಂಗಳು ತಿರುಮಲ ದೇವಾಲಯಕ್ಕೆ ಬರುವ ಆದಾಯ 200ರಿಂದ 300 ಕೋಟಿ ರೂಪಾಯಿ ಈ ಆದಾಯದ ಹೆಚ್ಚು ಮೊತ್ತವನ್ನು ಸಾಮಾಜಿಕ ಕಾರ್ಯಗಳಿಗಾಗಿ ಖರ್ಚು ಮಾಡಲಾಗುತ್ತದೆ ಈ ದೇವಾಲಯದ ಆದಾಯ ದೇಶದ ಅದೆಷ್ಟೋ ಬ್ಯಾಂಕುಗಳಲ್ಲಿ ಫಿಕ್ಸೆಡ್ ಡೆಪಾಸಿಟ್ ಆಗಿದೆ. ಪ್ರತಿವರ್ಷಕ್ಕೆ 8000 ಕೋಟಿ ಆದಾಯ ಬರುತ್ತದೆ ಈ ದೇವಾಲಯಕ್ಕೆ ಬಂದು ದೇವರಲ್ಲಿ ಏನೇ ಬೇಡಿಕೊಂಡರು ಅದು ನೆರವೇರುತ್ತದೆ.
ಭಾರತದಲ್ಲಿ ಇರುವಂತಹ ಅದೆಷ್ಟೋ ವಿಐಪಿಗಳು, ವಿವಿಐಪಿ ಗಳು ರಾಜಕಾರಣಿಗಳು ಈ ದೇವಾಲಯಕ್ಕೆ ಬಂದು ದೇವರ ಮುಂದೆ ಮಂಡಿಯುರುತ್ತಿದ್ದಾರೆ ವೆಂಕಟೇಶ್ವರನಿಗಾಗಿ ತಿರುಮಲದಿಂದ 23 ಕಿ.ಮೀ ದೂರದಲ್ಲಿರೋ ಒಂದು ಊರನಿಂದ ಹೂವುಹಣ್ಣು ಹಾಲು ತುಪ್ಪ ಮೊಸರು ಸೇರಿದಂತೆ ಇನ್ನಿತರ ವಸ್ತುಗಳನ್ನು ತರಿಸಲಾಗುತ್ತದೆ ತಿರುಮಲಕ್ಕೆ ಬರುವ ಭಕ್ತರು ನಿಯಮಗಳ ಪ್ರಕಾರ ನಡೆದುಕೊಳ್ಳಬೇಕು ಆಲಯದಲ್ಲಿ ಸಾಂಪ್ರದಾಯಿಕ ವಸ್ತ್ರಗಳನ್ನು ಧರಿಸಬೇಕು.
ತಿರುಮಲ ದೇವಾಲಯದ ಗರ್ಭಗುಡಿಯಲ್ಲಿ ಯಾವಾಗಲೂ ಒಂದು ದೀಪ ನಿರಂತರವಾಗಿ ಉರುತ್ತಿರುತ್ತದೆ ಈ ದೀಪ ಸಾವಿರಾರು ವರ್ಷಗಳಿಂದ ಆರದೆ ಹಾಗೆಯೇ ಉರಿಯುತ್ತಿದ್ದು ಈ ದೀಪದಲ್ಲಿ ಎಣ್ಣೆ ತುಪ್ಪ ಏನು ಸಹಾಯ ಇರುವುದಿಲ್ಲ ಅದು ಯಾವುದು ಇಲ್ಲದೆ ಹೇಗೆ ಉರಿಯುತ್ತದೆ ಎಂಬ ಪ್ರಶ್ನೆಗೆ ಯಾರ ಬಳಿಯೂ ಉತ್ತರವಿಲ್ಲ .