ಅಪ್ಪು (Appu) ಅವರ ನಮ್ಮನ್ನು ದೈಹಿಕವಾಗಿ ಅಗಲಿ ಎರಡು ವರ್ಷಗಳಾಯಿತು, ಆದರೆ ಅಪ್ಪು ನೆನಪು ನಮ್ಮ ಮನಸ್ಸಿನಲ್ಲಿ ಶಾಶ್ವತವಾಗಿ ಇರುತ್ತದೆ. ಅಲ್ಲದೆ ಈ ಭೂಮಿ ಇರುವವರೆಗೂ ಕೂಡ ಕನ್ನಡ ನಾಡಿನಲ್ಲಿ ಮಾತ್ರವಲ್ಲದೆ ಭಾರತದ ಇತಿಹಾಸದಲ್ಲಿ ಅಪ್ಪು ಹೆಸರು ಅಜರಾಮರ.
ಪುನೀತ್ ರಾಜಕುಮಾರ್ (Punith Rajkumar) ಸಿನಿಮಾದಲ್ಲಿದ್ದಾಗ ಎಷ್ಟು ಜನರನ್ನು ತಲುಪಿದ್ದರು ಗೊತ್ತಿಲ್ಲ ಆದರೆ ಅವರ ಸಾ’ವು ಇಡಿ ವಿಶ್ವದ ಗಮನ ಸೆಳೆದಿತ್ತು. ಯಾಕೆಂದರೆ ನಿಷ್ಕಲ್ಮಶ ಮನಸ್ಸಿಗೆ ಬಡಿದಿದ್ದ ಬರಸಿಡಿಲು ಅದು. ಯಾರು ಕೂಡ ಊಹಿಸಿರದ ರೀತಿ ಅಂದು ಕರ್ನಾಟಕದ ರತ್ನವೊಂದು ಮಣ್ಣಿಉರುಳಿತ್ತು.
ಈ ನೋ’ವನ್ನು ಅರಗಿಸಿಕೊಳ್ಳಲು ಯಾರಿಗೂ ಸಾಧ್ಯವಾಗುತ್ತಿಲ್ಲ ಇನ್ನು ಕುಟುಂಬಸ್ಥರಿಗಂತೂ ಎಂದಿಗೂ ಆಗವುದೇ ಇಲ್ಲ ಎನ್ನಬಹುದು. ಅದರಲ್ಲೂ ನಟ ಶಿವರಾಜಕುಮಾರ್ (Shivarajkumar) ಮತ್ತು ಸಹೋದರ ಪುನೀತ್ ರಾಜಕುಮಾರ್ ಅವರನ್ನು ತಮ್ಮ ಎನ್ನುವುದಕ್ಕಿಂತ ಮಗನಂತೆ ಕಾಣುತ್ತಿದ್ದರು ಅಪ್ಪು ಅವರು ಸಾ’ವನ್ನಪ್ಪಿಸುವ ಹಿಂದಿನ ರಾತ್ರಿ ಕೂಡ ಭಜರಂಗಿ 2 ಸಿನಿಮಾ ರಿಲೀಸ್ ಇವೆಂಟ್ ನಲ್ಲಿ ಅಣ್ಣ ತಮ್ಮ ಎಲ್ಲರ ಕಣ್ಣು ಕುಕ್ಕುವಂತೆ ಎನರ್ಜಿಯಿಂದ ಡ್ಯಾನ್ಸ್ ಮಾಡಿ ರಂಜಿಸಿದ್ದರು.
ಬಿಗ್ ಬಾಸ್ ಖ್ಯಾತಿಯ ನಟ ರೂಪೇಶ್ ಶೆಟ್ಟಿ ಮದುವೆ, ಕೈ ಹಿಡಿಯುತ್ತಿರುವ ಹುಡುಗಿ ಯಾರು ಗೊತ್ತಾ.?
ಈಗ ಅಪ್ಪು ಇಲ್ಲದ ಶಿವಣ್ಣನ ಮುಖದಲ್ಲಿ ಕಳೆ ಮಾಯವಾಗಿದೆ ಇತ್ತೀಚಿಗೆ ಅವರು ತಮಿಳು ಸಿನಿಮಾಗಳ ಕಡೆ ಕೂಡ ಮುಖ ಮಾಡಿದ್ದು ತಮ್ಮ ಬೇಸರ ಮರೆಯಲು ಯಾವಾಗಲೂ ಬಿಸಿಯಾಗಿರಲು ಬಯಸುತ್ತಿದ್ದಾರೆ. ಶಿವಣ್ಣ ಈಗ ರಜನಿ ಅಳಿಯ ಧನುಷ್ ಮುಖ್ಯ ಭೂಮಿಕೆಯ ಕ್ಯಾಪ್ಟನ್ ಮಿಲ್ಲರ್ (Captain Miller) ಸಿನಿಮಾದಲ್ಲೂ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಈಗಾಗಲೇ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು ಈರಪ್ಪನು ಸಾಂಗ್ ವೈರಲ್ (Erappanu Song Viral) ಕೂಡ ಆಗಿದೆ. ಶಿವಣ್ಣನ ಸ್ಟೈಲ್ ಮತ್ತು ಎನರ್ಜಿಗೆ ಕಾಲಿವುಡ್ ಕೂಡ ಕಳೆದು ಹೋಗಿದೆ. ಸಿನಿಮಾ ಸಂಬಂಧಿತ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿರುವ ಶಿವಣ್ಣನಿಗೆ ತಮಿಳು ಮಾಧ್ಯಮದಲ್ಲಿ ಕೂಡ ಪುನೀತ್ ರಾಜಕುಮಾರ್ ಅವರ ಬಗ್ಗೆ ಪ್ರಶ್ನೆಗಳು ಎದುರಾಗುತ್ತಿವೆ.
ಹೀಗೆ ಸಂದರ್ಶನ ಒಂದರಲ್ಲಿ ಅಪ್ಪು ಬಗ್ಗೆ ಪ್ರಶ್ನೆ ಬರುತ್ತಿದ್ದಂತೆ ಭಾವುಕರಾಗಿದ ಶಿವಣ್ಣ ತಮ್ಮನ ಬಗ್ಗೆ ಅಪಾರ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅಪ್ಪು ನಗು ಯಾರು ಕೂಡ ಮರೆಯಲು ಸಾಧ್ಯವಿಲ್ಲ, ಇಡೀ ವಿಶ್ವವನ್ನು ಸೆಳೆಯುವಂತಹ ನಗು ಅದು. ನಾನು ಪ್ರಪಂಚದ ಯಾವುದೇ ಮೂಲೆಗೆ ಹೋದರು ಕೂಡ ಆತನ ಬಗ್ಗೆ ಪ್ರಶ್ನೆ ಕೇಳುತ್ತಾರೆ ಅವನ ನಗು ಮರೆಯುವಂತದ್ದಲ್ಲ.
ತಮ್ಮ ಹೀರೋ ಬಗ್ಗೆ ಕೆಟ್ಟ ಕಮೆಂಟ್ ಮಾಡಿದ್ದಕ್ಕೆ ಕೈಯಲ್ಲಿ ಕರ್ಪೂರ ಹಚ್ಚಿಸಿ ಶಿಕ್ಷೆ ಕೊಟ್ಟ ಅಭಿಮಾನಿಗಳು.?
ಹುಟ್ಟುವಾಗಲೇ ಸೂಪರ್ ಸ್ಟಾರ್ ಆಗಿ ಹುಟ್ಟಿದ್ದ ಅಪ್ಪು ಅವನನ್ನು ಬೇರೆ ಯಾರೊಂದಿಗೂ ಕಂಪೇರ್ ಮಾಡಲು ಆಗುವುದಿಲ್ಲ. ಅವನು ಇಲ್ಲ ಎಂದು ನನಗೆ ಇಂದಿಗೂ ಊಹಿಸಿಕೊಳ್ಳಲು ಆಗುವುದಿಲ್ಲ ಅವನು ಎಲ್ಲೋ ಹೋಗಿದ್ದಾನೆ ನನ್ನ ತಮ್ಮ ಬಂದೇ ಬರುತ್ತಾನೆ ಎನ್ನುವ ನಂಬಿಕೆಯಲ್ಲಿ ಕಾಯುತ್ತಿದ್ದೇನೆ.
ಅಪ್ಪು ಸಮಾಧಿ ಬಳಿ ಹೋದರೆ ನನಗೆ ಆ ದಿನ ಆ ಕ್ಷಣಗಳು ನೆನಪಿಗೆ ಬರುತ್ತದೆ ನನಗೆ ಕಂಟ್ರೋಲ್ ಮಾಡದಷ್ಟು ದುಃ’ಖ ಆಗುತ್ತದೆ ನನಗೆ ಅದನ್ನು ತಡೆದುಕೊಳ್ಳುವ ಶಕ್ತಿ ಇಲ್ಲ ಹೀಗಾಗಿ ಇತ್ತೀಚಿಗೆ ಅಪ್ಪು ಸಮಾಧಿ ಬಳಿ ಹೋಗುತ್ತಿಲ್ಲ. ನಂಬಿಕೆಯಿಂದ ಕಾಯುವುದೇ ಒಂದು ಸಮಾಧಾನ ಹಾಗಾಗಿ ನನ್ನ ತಮ್ಮ ಖಂಡಿತವಾಗಿಯೂ ಬಂದೇ ಬರುತ್ತಾನೆ ಎಂದು ಕಾಯುತ್ತಿದ್ದೇನೆ ಎಂದು ಕ’ಣ್ಣೀ’ರಿಡುತ್ತಾ ತಮ್ಮನ ನೆನಪು ಮಾಡಿಕೊಂಡಿದ್ದಾರೆ ಶಿವಣ್ಣ.
ಪುನೀತ್ ರಾಜಕುಮಾರ್ ಅವರು ಇಲ್ಲವಾಗಿ ಎರಡು ವರ್ಷ ಕಳೆದಿದ್ದರೂ ಅಭಿಮಾನಿಗಳ ಕಣ್ಣಂಚಲ್ಲಿಯೂ ಇನ್ನೂ ಕೂಡ ಅಪ್ಪು ನೆನಪಿನಲ್ಲಿ ಕಂಬನಿ ತುಂಬುತ್ತದೆ. ಅವರ ಸಾಧನೆ ಮಾತ್ರವಲ್ಲದೆ ಸಮಾಜಮುಖಿ ಕಾರ್ಯ ಇದಕ್ಕೆ ಕಾರಣ ಅಪ್ಪು ಮತ್ತೊಮ್ಮೆ ಇದೆ ಮಣ್ಣಲ್ಲಿ ಹುಟ್ಟು ಬರುವಂತಾಗಲಿ ನಾವು ಕೂಡ ಪ್ರಾರ್ಥಿಸೋಣ.