ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಇಡೀ ಇಂಡಸ್ಟ್ರಿಗೆ ಎನರ್ಜಿ ಅಂತಿದ್ದವರು. ಕರುನಾಡು ಕಂಡ ಈ ದೈವ ಮಾನವನ ಸ್ಥಾನವನ್ನು ಮತ್ತೊಬ್ಬರು ತುಂಬುತ್ತಾರೆ ಎನ್ನುವುದು ನಂಬಲು ಅಸಾಧ್ಯವಾದ ಮಾತು. ಆದರೆ ರಾಜಕುಮಾರ್ ಅವರ ಕುಟುಂಬದ ಮತ್ಯಾರನ್ನಾದರೂ ನಾವು ಆ ರೀತಿ ಕಾಣಬಹುದ ಎಂದು ಅಭಿಮಾನಿಗಳು ಆಸೆ ಪಡುತ್ತಿದ್ದಾರೆ ಹಾಗೂ ಅದರಲ್ಲಿ ಅತಿ ಹೆಚ್ಚು ಜನರು ಯುವರಾಜ್ ಕುಮಾರ್ ಅವರನ್ನು ನೋಡಿದ ಮೇಲೆ ರಾಘವೇಂದ್ರ ರಾಜಕುಮಾರ್ ಅವರ ಕಿರಿಯ ಮಗನಾಗಿರುವ ಯುವರಾಜ್ ಅವರೇ ಪುನೀತ್ ಅವರನ್ನು ಹೊಂದಬಲ್ಲ ನಟ, ಪುನೀತ್ ರಾಜಕುಮಾರ್ ಅವರು ಯಾವ ರೀತಿ ಡೂಪ್ ಇಲ್ಲದೇ ಸ್ಟಂಟ್ ಮಾಡುತ್ತಿದ್ದರೂ, ಡಾನ್ಸ್ ಮಾಡುತ್ತಿದ್ದರೂ ಹಾಗೂ ಎನರ್ಜಿಯಿಂದ ಇರುತ್ತಿದ್ದರು.
ಅದೇ ರೀತಿ ನಮಗೆ ಇಂಡಸ್ಟ್ರಿಯಲ್ಲಿ ಮತ್ತೊಬ್ಬ ಸಿಗಬೇಕು ಅಂದರೆ ಅದು ರಾಜ ಕುಟುಂಬದಿಂದ ಬರುವವರಿಂದ ಮಾತ್ರ ಸಾಧ್ಯ ಆ ಸ್ಥಾನವನ್ನು ಯುವರಾಜ್ ಕುಮಾರ್ ಅವರು ಮಾತ್ರ ತುಂಬಿಸುತ್ತಾರೆ ಎಂದು ಅನಿಸುತ್ತದೆ ಎಂದು ತಮ್ಮ ಅಭಿಪ್ರಾಯಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಳ್ಳುತ್ತಿರುತ್ತಾರೆ. ಈ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಚರ್ಚೆ ಆಗುತ್ತಿರುವುದರಿಂದ ಒಮ್ಮೆ ಶಿವಣ್ಣನಿಗೂ ಈ ಪ್ರಶ್ನೆ ಎದುರಾಗಿದೆ. ಅದಕ್ಕೆ ಶಿವಣ್ಣ ಕೊಟ್ಟಿರುವ ಉತ್ತರ ಎಲ್ಲರಿಗೂ ಮೆಚ್ಚುಗೆ ಆಗಿದೆ. ಅಷ್ಟಕ್ಕೂ ಶಿವರಾಜ್ ಕುಮಾರ್ ಅವರು ಈ ಬಗ್ಗೆ ಏನು ಹೇಳಿದರು ಎಂದರೆ ಕಲೆ ಎನ್ನುವುದು ಯಾರ ಸ್ವತ್ತು ಕೂಡ ಅಲ್ಲ ಯಾರು ಬೇಕಾದರೂ ಬರಬಹುದು ಸಿನಿಮಾ ಇಂಡಸ್ಟ್ರಿ ಒಂದು ಕುಟುಂಬ ಇದ್ದ ಹಾಗೆ.
ಇಲ್ಲಿ ಒಬ್ಬರ ಸ್ಥಳ ತುಂಬಿಸಲು ಮತ್ತೊಬ್ಬರು ಬರುವುದಕ್ಕೆ ಇದು ಸ್ಪರ್ಧೆ ಅಲ್ಲ. ಎಲ್ಲರಿಗೂ ಸಹ ಅವರದ್ದೇ ಆದ ಸ್ಥಾನಗಳು ಇದೆ. ಅಪ್ಪು ಸ್ಥಾನ ಅಪ್ಪುಗೆ ಮಾತ್ರ ಹಾಗೆ ರಾಜಕುಮಾರ್ ಅವರ ಸ್ಥಾನ ರಾಜಕುಮಾರ ಅವರಿಗೆ ಮಾತ್ರ ಹೊಸ ಹೊಸ ಪ್ರತಿಭೆಗಳು ಬರಬೇಕು ನಮ್ಮ ಕುಟುಂಬದಿಂದಲೇ ಬರಬೇಕು ಎಂದು ಯಾವ ನಿಯಮವೂ ಇಲ್ಲ ಕಲೆ ಇರುವ ಯಾರಾದರೂ ಕೂಡ ಬರಬಹುದು ಈ ಇಂಡಸ್ಟ್ರಿಯಲ್ಲಿ ಗಣೇಶ್ ಇದ್ದರೆ, ಧ್ರುವ ಇದ್ದಾನೆ, ಧನಂಜಯ್ ಇದ್ದಾರೆ, ರಿಷಬ್ ಶೆಟ್ಟಿ ಇದ್ದಾರೆ, ಸುದೀಪ್ ಇದ್ದಾರೆ, ದರ್ಶನ್ ಇದ್ದಾರೆ ಇವರ ಯಾರ ಸ್ಥಾನವನ್ನು ಯಾರು ಸಹ ತುಂಬಲು ಸಾಧ್ಯವಿಲ್ಲ.
ಎಲ್ಲರೂ ಸಹ ಒಳ್ಳೆಯ ಸಿನಿಮಾ ಮಾಡಿ ಅಭಿಮಾನಿಗಳನ್ನು ರಂಜಿಸಿ, ಕುಟುಂಬದವರಂತೆ ಇದ್ದರೆ ಸಾಕು. ಇನ್ನು ಯುವರಾಜ್ ಕುಮಾರ್ ಅವರು ಪುನೀತ್ ರಾಜಕುಮಾರ್ ಅವರ ಸ್ಥಾನ ತುಂಬಿಸುತ್ತಾರೆ ಎಂದು ಅಭಿಮಾನಿಗಳ ಹೇಳುತ್ತಿರುವುದು ಖುಷಿಯಾಗಿದೆ. ಯುವರಾಜ್ ಕುಮಾರ್ ಸಹ ಇಂಡಸ್ಟ್ರಿಗೆ ಬರೋದಕ್ಕೆ ತಯಾರು ಆಗುತ್ತಿದ್ದಾನೆ. ಅವನು ಸಹ ಬೇರೆ ರೀತಿ ಹೀರೋ ಆಗಿ ಕಾಣಿಸಿಕೊಳ್ಳುತ್ತಾರೆ. ಪುನೀತ್ ಅವರ ಸ್ಥಾನ ತುಂಬಾ ಬರುತ್ತಾರೆ ಎಂದು ಹೇಳಲು ಅಸಾಧ್ಯ. ರಾಮ್ ಕುಮಾರ್ ಅವರ ಮಕ್ಕಳದ ಧನ್ಯ ರಾಮ್ ಕುಮಾರ್ ಹಾಗೂ ಧೀರಜ್ ರಾಮ್ ಕುಮಾರ್ ಅವರು ಬರುತ್ತಿದ್ದಾರೆ.
ಲಕ್ಷ್ಮಿ ಅವರ ಮಗನು ಬರುತ್ತಿದ್ದಾರೆ ಹಾಗೆ ರಾಘವೇಂದ್ರ ರಾಜಕುಮಾರ್ ಅವರ ಮತ್ತು ಅವರ ಮಗ ವಿನಯ್ ರಾಜಕುಮಾರ್ ಈಗಾಗಲೇ ಇಂಡಸ್ಟ್ರಿಯಲ್ಲಿ ಒಳ್ಳೆ ಹೆಸರು ಮಾಡಿದ್ದಾರೆ. ಎಲ್ಲರೂ ನಮ್ಮ ಕುಟುಂಬದವರೇ ಮಕ್ಕಳಲ್ಲಿ ಅವರು ಇವರು ಎನ್ನುವ ಯಾವ ಭೇದ ಭಾವ ಕೂಡ ಇಲ್ಲ. ಎಲ್ಲರೂ ಬರಲಿ ಎಲ್ಲರೂ ಸಹ ನಮ್ಮ ಮನೆಯ ಗೌರವವನ್ನು ಕಾಪಾಡಿಕೊಂಡು ಹೋಗಲಿ. ಪುನೀತ್ ಅವರು ಯಾವ ರೀತಿ ಹೆಸರು ಮಾಡಿದರು ಅದಕ್ಕಿಂತ ಹೆಚ್ಚಿನ ಪ್ರೀತಿ ವಿಶ್ವಾಸವನ್ನು ಇವರು ಸಹ ಗಳಿಸಲಿ ಒಳ್ಳೆ ರೀತಿ ನಡೆದುಕೊಳ್ಳಲಿ ಎನ್ನುವುದಷ್ಟೇ ನಮ್ಮ ಆಸೆ. ಇದರಲ್ಲಿ ಯಾವ ಕಾಂಪಿಟೇಶನ್ ಕೂಡ ಇಲ್ಲ ಯಾವ ಹೋಲಿಕೆಯು ಇಲ್ಲ ಎಂದು ಹೇಳಿದ್ದಾರೆ.
ಶಿವರಾಜ್ ಕುಮಾರ್ ಅವರು ಇಂಡಸ್ಟ್ರಿ ಬಗ್ಗೆ ಮತ್ತು ಹೊಸ ನಟರ ಬಗ್ಗೆ ತಮ್ಮ ಹೃದಯದಲ್ಲಿ ಎಷ್ಟು ಪ್ರೀತಿ ಇದೆ ಎನ್ನುವುದನ್ನು ಈ ಮಾತುಗಳ ಮೂಲಕ ತಿಳಿಸಿದ್ದಾರೆ. ಆದರೆ ಅಭಿಮಾನಿಗಳು ಯುವರಾಜ್ ಅವರಲ್ಲಿ ಪುನೀತ್ ಅವರನ್ನು ಕಾಣಲು ಬಯಸುತ್ತಿದ್ದಾರೆ. ಅಲ್ಲದೆ ಕೆಲ ಫೋಟೋಗಳಲ್ಲಿ ಅವರ ಮುಖ ರಾಜಣ್ಣ ಅವರನ್ನು ಹೋಲುತ್ತಿರುವುದಕ್ಕೂ ಕೂಡ ಕಂಪೇರ್ ಮಾಡಲಾಗಿದೆ. ಇಡೀ ಕರುನಾಡೆ ಈ ಯುವರಾಜಕುಮಾರ ತೆರೆ ಮೇಲೆ ಕಾಣಲು ತುದಿಗಾಲಲ್ಲಿ ಕಾಯುತ್ತಿದೆ. ಪುನೀತ್ ರಾಜಕುಮಾರ್ ಅವರ ಆಶೀರ್ವಾದದಿಂದ ಹಾಗೂ ಕುಟುಂಬದವರ ಬೆಂಬಲದಿಂದ ಆದಷ್ಟು ಬೇಗ ಯುವರಾಜ್ ಕುಮಾರ್ ಅವರನ್ನು ತೆರೆ ಮೇಲೆ ಕಾಣುವಂತೆ ಆಗಲಿ. ದೊಡ್ಡಪ್ಪಂದಿರು ಹಾಗೂ ಅಪ್ಪ ಮತ್ತು ಅಣ್ಣ ಮಾಡಿದ ಹೆಸರಿನಂತೆ ಯುವರಾಜ್ ಕುಮಾರ್ ಅವರು ಸಹ ಬೆಳ್ಳಿ ಪರದೆ ಮೇಲೆ ಮಿಂಚಿ ಬೆಳಗಲಿ ಎಂದು ಹಾರೈಸೋಣ