ಸಿವಿಲ್ ಸರ್ವಿಸ್ ಎಕ್ಸಾಮ್ಸ್ (CSE) ಈ ಹೆಸರು ಕೇಳುತ್ತಿದಂತೆ ಒಂದು ರೀತಿಯ ರೋಮಾಂಚನವಾಗುತ್ತದೆ. ದೇಶದ ಅತ್ಯಂತ ನಾಗರಿಕ ಸೇವೆಯಾಗಿರುವ ಈ ಹುದ್ದೆ ಪಡೆಯಲು ಎದುರಿಸಬೇಕಾಗಿರುವ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆ (UPSC) ಏಷ್ಯಾದಲ್ಲಿಯೇ ಅತ್ಯಂತ ಕಠಿಣ ಪರೀಕ್ಷೆ ಎಂದು ಕರೆಸಿಕೊಂಡಿದೆ.
ಹಾಗಾದರೆ ಈ ಪರೀಕ್ಷೆಗೆ ತಯಾರಿ ಹೇಗಿರಬೇಕು ಎಂದು ಒಂದು ಅಂದಾಜು ಬಂದಿರುತ್ತದೆ. ಸಾಮಾನ್ಯವಾಗಿ ನಮ್ಮ ಸುತ್ತಮುತ್ತಲಿರುವ ಈ ಪರೀಕ್ಷೆಗಳಿಗೆ ತಯಾರಾಗುತ್ತಿರುವವರನ್ನು ಆಸ್ಪಿರೆಂಟ್ಸ್ ಗಳನ್ನು (Aspirants) ನೋಡಿದರೆ ಅವರ ಜೀವನಶೈಲಿ ಹಾಗೂ ಮನಸ್ಥಿತಿ ಹೇಗಿರುತ್ತದೆ ಎಂದು ನಮಗೆ ಅರ್ಥ ಆಗುತ್ತದೆ.
ಪೂರ್ಣಾವಧಿ ಮುಖ್ಯಮಂತ್ರಿ ಪ್ರಶ್ನೆ – ಅಧಿಕಾರ ಬಿಡುತ್ತೇನೆ ಎಂದು ನಾನು ಎಂದು ಹೇಳಿಲ್ಲ – ಸಿದ್ದರಾಮಯ್ಯ.!
ಸೋಶಿಯಲ್ ಮೀಡಿಯಾಗಳಿಂದ ಬಹು ದೂರ, ಯಾರೊಂದಿಗೂ ಹೆಚ್ಚಿಗೆ ಮಾತಿಲ್ಲ, ಕ್ರಿಕೆಟ್ ಸಿನಿಮಾ ಟೂರ್ ಟ್ರಿಪ್ ಸೆಲೆಬ್ರೇಷನ್ ಆಸಕ್ತಿ ಇಲ್ಲ. 24 ಗಂಟೆ ಓದು ಬಿಟ್ಟು ಅವರಿಗೆ ಮತ್ತೇನು ಬೇಕಾಗಿರುವುದಿಲ್ಲ, ಅಂದುಕೊಂಡಿದ್ದನ್ನು ಸಾಧಿಸುವವರೆಗೂ ಕೂಡ ಅವರು ಒಂದು ರೀತಿ ತಪಸ್ಸಿನಲ್ಲಿ ಇರುತ್ತಾರೆ ಅಂತಲೇ ಹೇಳಬಹುದು.
ಇದಕ್ಕೆ ತದ್ವಿರುದ್ಧವಾಗಿ ಇಲ್ಲೊಬ್ಬರು ಅಧಿಕಾರಿ IAS ಮಾತ್ರವಲ್ಲದೆ ಸಿನಿಮಾ ಹಾಗೂ ರಾಜಕೀಯದಲ್ಲಿ ಕೂಡ ಗುರುತಿಸಿಕೊಂಡಿದ್ದಾರೆ. ಇವರ ಇಷ್ಟೆಲ್ಲ ಸಾಧನೆಗೆ ಸ್ಫೂರ್ತಿ ಏನು ಎನ್ನುವುದನ್ನು ಕೂಡ ಕಾರ್ಯಕ್ರಮ ಒಂದರಲ್ಲಿ ಹೇಳಿಕೊಂಡಿದ್ದಾರೆ. ಸ್ಪರ್ಧಾರ್ಥಿಗಳು ಅಂದುಕೊಂಡಂತೆ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕ ಗಳಿಸಿ IAS, IPS, IFS ಗಳಾಗಿ ನೇಮಕಗೊಂಡಾಗ ವೇದಿಕೆಗಳಲ್ಲಿ ಇವರಾಡುವ ಪ್ರತಿ ಮಾತು ಕೂಡ ದೇಶದ ಇನ್ನಷ್ಟು ಆಕಾಂಕ್ಷಿಗಳಿಗೆ ಹೊಸ ಹುರುಪನ್ನು ನೀಡುತ್ತದೆ.
ಪ್ರವಾದಿಯ ನಾಡಲ್ಲಿ ಹಿಂಸೆ ಅಟ್ಟಹಾಸ ತಾಂಡವ.! ಓ ಗಾಂಧೀ ಆ ನಿಮ್ಮ ರಾಮನೆಲ್ಲಿ ಎಂದು ಪ್ರಶ್ನಿಸಿದ – ನಟ ಕಿಶೋರ್.!
ಅಂತೆಯೇ 2011ರ ಬ್ಯಾಚಿನಲ್ಲಿ 94 ನೇ ರಾಂಕ್ ಪಡೆದು ಗುಜರಾತ್ ಕೇಡರ್ ನಲ್ಲಿ UAS ಅಧಿಕಾರಿಯಾಗಿ ನೇಮಕಗೊಂಡು ಕಾರ್ಯನಿರ್ವಹಿಸುತ್ತಿದ್ದ ಇತ್ತೀಚೆಗೆ ಮನೋರಂಜನ ಕ್ಷೇತ್ರಕ್ಕೂ ಕಾಲಿಟ್ಟಿರುವ ಅಭಿಷೇಕ್ ಸಿಂಗ್ (Abhishek Singh) ಅವರು ತಮ್ಮ IAS ಜರ್ನಿ ಬಗ್ಗೆ ಇತ್ತೀಚೆಗೆ ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ್ದಾರೆ.
ಪ್ರತಿಯೊಬ್ಬರಿಗೂ ಕೂಡ ಸಾಧನೆಗೆ ಸ್ಪೂರ್ತಿ ಎನ್ನುವುದು ಇರುತ್ತದೆ, ಅದೇ ರೀತಿ ಇವರನ್ನು ಪ್ರಶ್ನಿಸಿದಾಗ ಇವರು ಕೊಟ್ಟ ಉತ್ತರ ಎಲ್ಲರಿಗೂ ಹುಬ್ಬೇರಿಸಿದೆ. ಕಾಲೇಜು ದಿನಗಳಲ್ಲಿ ತಾನು ಪ್ರೀತಿಸಿದ ಹುಡುಗಿ ದ್ರೋ’ಹ ಮಾಡಿದ್ದಳು, ಆ ನಂತರ ಆ’ತ್ಮ’ಹ’ತ್ಯೆ ಮಾಡಿಕೊಳ್ಳುವ ಯೋಚನೆಯನ್ನೂ ಮಾಡಿದ್ದೆ.
ಚಂದ್ರ ಗ್ರಹದಲ್ಲಿ 1 ಎಕರೆ ಭೂಮಿ ಖರೀದಿಸಿದ ಗೋವಾ ಯುವಕ.!
ಆದರೆ ತನ್ನನ್ನು ತಾನು ನಿಯಂತ್ರಿಸಿಕೊಂಡ ನಂತರ UPSC ನಾಗರಿಕ ಸೇವೆಗಳ ಪರೀಕ್ಷೆಯ ಸಿದ್ಧತೆಗೆ ನಿರ್ಧರಿಸಿ, ತಯಾರಿ ಆರಂಭಿಸಿ 2011 ರಲ್ಲಿ ಪರೀಕ್ಷೆಯಲ್ಲಿ 94 ನೇ Rank ಪಡೆದೆ ಎಂದು ಅವರು ಹೇಳಿಕೊಂಡಿದ್ದಾರೆ. 2022 ರಲ್ಲಿ ಗುಜರಾತ್ ವಿಧಾನಸಭಾ ಚುನಾವಣೆ ವೇಳೆ ಚುನಾವಣಾ ವೀಕ್ಷಕರಾಗಿ ನೇಮಕಗೊಂಡಿದ್ದ ಇವರು ಅಬ್ಸರ್ವರ್ ಎಂದು ವಾಹನದ ಮೇಲೆ ಬರೆದಿರುವ ಫೋಟೋ ಕ್ಲಿಕಿಸಿ ಹಂಚಿಕೊಂಡಿದ್ದರಿಂದ ಫೆಬ್ರವರಿ 2023ರಲ್ಲಿ ಅಮಾನತುಗೊಂಡಿದ್ದರು.
ಆದರೆ ಈಗ ಅವರೇ ರಾಜೀನಾಮೆ ಸಲ್ಲಿಸಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಸಿನಿಮಾ ಕ್ಷೇತ್ರದಲ್ಲಿ ಅಪಾರ ಆಸಕ್ತಿ ಹೊಂದಿರುವ ಇವರು ಆ ಕ್ಷೇತ್ರದಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ನೆಟ್ಫ್ಲಿಕ್ಸ್ನಲ್ಲಿ ಮೆಚ್ಚುಗೆ ಪಡೆದ ಸಿರೀಸ್ ದೆಹಲಿ ಕ್ರೈಮ್ ನಲ್ಲಿ ಅವರ ನಟನೆಗೆ ಮನ್ನಣೆ ಸಿಕ್ಕಿತ್ತು ನಂತರ ಚಾರ್ ಪಂದ್ರಾಹ್ ಎಂಬ ಕಿರುಚಿತ್ರದಲ್ಲಿಯೂ ಕಾಣಿಸಿಕೊಂಡಿದ್ದರು.
ಟೊಮೇಟೊ ಬೆಳೆ ಲಾಭದ ನಿರೀಕ್ಷೆ ಹುಸಿ, ಒಂದೇ ವೇಲಿಗೆ ನೇಣು ಬಿಗಿದುಕೊಂಡು ರೈತ ದಂಪತಿ ಆ-ತ್ಮಹ-ತ್ಯೆ
ಬಿ ಪ್ರಾಕ್ನ ದಿಲ್ ತೋಡ್ ಕೆ ಹಾಡಿನಲ್ಲೂ ಕಾಣಿಸಿಕೊಂಡಿದ್ದರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕೂಡ ಇವರು ಕಣಕ್ಕಿಳಿವ ಸಿದ್ಧತೆ ನಡೆಸುತ್ತಿದ್ದಾರೆ ಎನ್ನುವ ಗಾಳಿ ಮಾತುಗಳು ಕೂಡ ಕೇಳಿ ಬರುತ್ತಿವೆ. ಒಟ್ಟಿನಲ್ಲಿ ವ್ಯಕ್ತಿಯೊಬ್ಬ ಮನಸ್ಸು ಮಾಡಿದರೆ ಅಂದುಕೊಂಡಿದ್ದನ್ನು ಮಾಡಬಲ್ಲ ಎನ್ನುವುದಕ್ಕೆ ಅಭಿಷೇಕ್ ಸಿಂಗ್ ಪ್ರತ್ಯಕ್ಷ ಉದಾಹರಣೆ ಎಂದೇ ಹೇಳಬಹುದು.