Nayana
ಗಿಣಿರಾಮ ಸೀರಿಯಲ್ ನಲ್ಲಿ (Ginirama) ಮಹತಿ ಪಾತ್ರ ಮಾಡುತ್ತಿದ್ದ ನಯನ ಅವರು ಅದಕ್ಕೂ ಮುನ್ನ ಮಾಡಿದ್ದ ಪಾಪ ಪಾಂಡು ಸೀರಿಯಲ್ ನ ಚಾರು ಪಾತ್ರದ ಮೂಲಕವೇ ಕಿರುತೆರೆ ಜನರಿಗೆ ಹತ್ತಿರವಾಗಿದ್ದರು. ಶಾಲಿನಿ ಹಾಗೂ ನಯನ ಅವರ ಅತ್ತೆ ಸೊಸೆ ಜುಗಲ್ ಬಂದಿ ನೋಡುಗರಿಗೆ ಬಹಳ ಖುಷಿ ಕೊಡುತ್ತಿತ್ತು.
ಕಾಮಿಡಿ ಸೀರಿಯಲ್ ನಲ್ಲಿ ಕಾಣಿಸಿಕೊಂಡಿದ್ದರೂ ಗಿಣಿ ರಾಮ ಸೀರಿಯಲ್ ಗೆ ನಾಯಕಿಯಾಗಿ ಆಯ್ಕೆ ಆದ ಕಥೆಯೇ ರೋಚಕ. ಅವರೇ ಹೇಳುವಂತೆ ಪಾಪ ಪಾಂಡು ಸೀರಿಯಲ್ ನಲ್ಲಿ ಆಕ್ಟಿಂಗ್ ಇಷ್ಟವಾಗಿದ್ದರೂ .ಲುಕ್ ಚೆನ್ನಾಗಿಲ್ಲ ಎಂದು ಹಲ್ಲಿನ ಕಾರಣಕ್ಕೆ ರಿಜೆಕ್ಟ್ ಆಗಬೇಕಿದ್ದ ಇವರಿಗೆ ಅದೇ ಚಾನಲ್ ನಿಂದ ಲೀಡ್ ರೋಲ್ ಪಾತ್ರ ಸಿಕ್ಕಿದ್ದು ಅವರ ಜೀವಮಾನದ ಸಾಧನೆಯಂತೆ ಆದರೆ ಅಷ್ಟು ಸಂತೋಷದಿಂದ ಕುಣಿದು ಕೊಪ್ಪಳಸಿ ಹೆಮ್ಮೆಪಟ್ಟಿದ್ದ ಅದೇ ಸೀರಿಯಲ್ ನಾ ಪಾತ್ರ.
ಕೊನೆಗೆ ಅದರಿಂದಲೇ ನ’ರ’ಕ ಅನುಭವಿಸುವಂತೆ ಮಾಡಿದ್ದ ಕಥೆಯನ್ನು ಖಾಸಗಿ ವಾಹಿನಿಗೆ ಸಂದರ್ಶನ ಒಂದರಲ್ಲಿ ನಟಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ನೇರವಾಗಿ ನುಡಿಯುವುದು ನನ್ನ ವ್ಯಕ್ತಿತ್ವ ನಾನು ಮೊದಲಿನಿಂದಲೂ ಹೀಗೆ ಯಾರಾದರೂ ನನ್ನಿಂದ ನಾನು ಈ ರೀತಿ ಮಾತನಾಡಬಾರದು ಎಂದು ನಿರೀಕ್ಷಿಸಿದರೆ ನಾನು ಕೂಡ ಅವರಿಂದ ಅದನ್ನೇ ನಿರೀಕ್ಷಿಸುತ್ತೇನೆ.
ಆದರೆ ಗಿಣಿ ರಾಮ ಸೆಟ್ ನಲ್ಲಿ ನನಗೆ ಪ್ರೊಡಕ್ಷನ್ ಟೀಮ್ ನಿಂದ ಬಹಳ ಅ’ನ್ಯಾ’ಯ ಆಯ್ತು. ಆರಂಭದಲ್ಲಿ ನೆಗ್ಲೆಟ್ ಮಾಡುತಿದ್ದೆ, ನಂತರ ತಿರುಗಿ ಬಿದ್ದದಕ್ಕೆ ಅದು ವಿಪರೀತ ಮಟ್ಟಕ್ಕೆ ಹೋಯಿತು. ನನ್ನ ಪರ್ಸನಲ್ ಕ್ಯಾರೆಕ್ಟರ್ ಬಗ್ಗೆ ಜಡ್ಜ್ ಮಾಡುವುದು, ಇಲ್ಲಸಲ್ಲದ ಕಮೆಂಟ್ ಪಾಸ್ ಮಾಡುವುದು, ಆಕ್ಷನ್ ಹೇಳುವ ಟೈಮಲ್ಲಿ ನೆಗೆಟಿವ್ ಕಾಮೆಂಟ್ ಮಾಡಿ ವಾತಾವರಣ ಹಾಳು ಮಾಡುವುದು ಯಾರೊಂದಿಗೆ ಮಾತನಾಡಿದರು ನನ್ನ ಎದುರಿಗೆ ಅವರಿಗೆ ಹರ್ಟ್ ಮಾಡುವುದು ಹೀಗೆ ಮಾನಸಿಕ ನೆಮ್ಮದಿ ಹಾಳು ಮಾಡಿಬಿಟ್ಟರು.
ಹೀಗಿದ್ದು ನಾನು 780 ಎಪಿಸೋಡ್ ಗಳನ್ನು ಮುಗಿಸಿದೆ ನನ್ನ ಎಲ್ಲಾ ಕೋ’ಪವನ್ನು ನನ್ನ ಸ್ನೇಹಿತೆ ಹಾಗೂ ಬಾವಿ ಪತಿ ಮೇಲೆ ಹಾಕುತ್ತಿದ್ದೆ ಅಥವಾ ಸೀರಿಯಲ್ ನಲ್ಲಿ ಜೊತೆಯಾಗಿದ್ದ ಹೀರೋ ಲಿಖಿತ್ ಅವರ ಮೇಲೆ ಹಾಕುತ್ತಿದ್ದೆ. ಕೊನೆಗೊಂದು ದಿನ ಡಿಸೈಡ್ ಮಾಡಿದೆ ನನ್ನ ನೆಮ್ಮದಿ ಹಾಳು ಮಾಡಿಕೊಂಡು ದುಡಿಯುವ ಅವಶ್ಯಕತೆ ಇಲ್ಲ ಎಂದು ಹೀಗಾಗಿ ನಾನು ನೇರವಾಗಿ ಇನ್ನು ಮುಂದೆ ಸೀರಿಯಲ್ ಮಾಡುವುದೇ ಇಲ್ಲ ಎಂದು ಹೇಳಿದೆ.
ಅದಕ್ಕೂ ಮುನ್ನ ಚಾನೆಲ್ ಗೆ ಕಂಪ್ಲೇಂಟ್ ಮಾಡಿದ್ದಾಗ ಪ್ರೊಡಕ್ಷನ್ ಟೀಮ್ ಗೆ ಬೈದು ಸಂಧಾನ ಮಾಡುವ ಪ್ರಯತ್ನ ಪಟ್ಟಿದ್ದರು ಕೊನೆಗೆ ನಾನು ಸೀರಿಯಲ್ ಮಾಡುವುದೇ ಇಲ್ಲ ಎಂದು ಹೇಳಿದಾಗ ಆರು ತಿಂಗಳು ಸಮಯ ಕೇಳಿದರು. ಸೀರಿಯಲ್ ನಡೆಯುವುದರಿಂದ ಎಲ್ಲರಿಗೂ ದುಡ್ಡು ಬರುತ್ತಿತ್ತು ನಾನು ಇನ್ನೂ ಆರೇ ತಿಂಗಳು ಸೀರಿಯಲ್ ಮಾಡುವುದು ಎಂದು ಹೇಳಿದಾಗ ಚಾನೆಲ್ ಅವರು ನೀವು ಸೀರಿಯಲ್ ಬಿಟ್ಟರೆ ನಾವು ಸೀರಿಯಲ್ ಮುಗಿಸುತ್ತೇವೆ ಎಂದು ಹೇಳಿದರು ಹೀಗಾಗಿ ಪ್ರೊಡಕ್ಷನ್ ಟೀಂ ನಿಮ್ಮಿಂದ ನಮಗೆ ದುಡ್ಡು ಹೋಗುತ್ತಿದೆ ಎಂದು ಇನ್ನೂ ಹೆಚ್ಚು ಮಾಡಿದರು.
ನಾನು ಯಾವುದಕ್ಕೂ ಅಂಜಲಿಲ್ಲ, ಇವತ್ತಿಗೂ ಎಲ್ಲಾ ಅಪವಾದವನ್ನು ನನ್ನ ತಲೆಗೆ ಕಟ್ಟಿದ್ದಾರೆ. ಬೇರೆ ಇಂಡಸ್ಟ್ರಿ ಅವರು ಕರೆ ಮಾಡಿ ನೀವು ಕಿರಿಕ್ ಅಂತೆ ಸೀರಿಯಲ್ ಅರ್ಧಕ್ಕೆ ಬಿಡುತ್ತೀರಂತೆ ಎಂದು ಕೇಳುತ್ತಾರೆ ನಾನು ತಿರುಗಿಸಿ 780 ಎಪಿಸೋಡ್ ಎನ್ನುವುದು ಅರ್ಧಕ್ಕೆ ಬಿಡುವುದಾ ಎಂದು ಕೇಳುತ್ತೇನೆ ಮತ್ತು ನಾನು ಸೀರಿಯಲ್ ಮಾಡುವುದೇ ಇಲ್ಲ ಎಂದು ಡಿಸೈಡ್ ಆಗಿದ್ದೇನೆ.
ನನಗೆ ಇಷ್ಟು ಹಿಂ’ಸೆ ಕೊಟ್ಟಿದ್ದರು ಪ್ರೊಡಕ್ಷನ್ ಅಸೋಸಿಯೇಷನ್ ನನ್ನನ್ನು ಯಾವುದೇ ಸೀರಿಯಲ್ ಗೆ ಹಾಕಿಕೊಳ್ಳಲೇಬಾರದು ಎಂದು ಬ್ಯಾನ್ ಕೂಡ ಮಾಡಿದ್ದಾರೆ. ಸದ್ಯಕ್ಕೆ ನನ್ನ ಹಾಡು ನನ್ನ ಪತಿ ನನ್ನ ಫ್ಯಾಮಿಲಿ ಎಂದುಕೊಂಡು ನಾನು ನೆಮ್ಮದಿಯಾಗಿ ಇದ್ದೇನೆ ಎಂದು ತಮ್ಮಗಾದ ಅ’ನ್ಯಾ’ಯದ ಬಗ್ಗೆ ಹೇಳಿಕೊಂಡಿದ್ದಾರೆ.