ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಸ್ಟಾರ್ ವಾರ್ (Sandalwood starwar) ಶುರುವಾಗಿದೆಯಾ? ಈ ಬಾರಿ ಗುರು-ಶಿಷ್ಯನ ನಡುವೆ ಮನಸ್ತಾಪ ಮಾಡಿದೆಯಾ? ಈ ಬಗ್ಗೆ ಎಲ್ಲರೂ ಮಾತನಾಡುವಂತೆ ಮಾಡಿದ್ದು ಕರ್ನಾಟಕ ಬಂದ್ ದಿನ ವೇದಿಕೆ ಮೇಲೆ ದರ್ಶನ್ ಹಾಗೂ ಧ್ರುವ (Darshan v/s Druva contraversy) ನಡೆದುಕೊಂಡ ರೀತಿ
ದರ್ಶನ್ ಅರ್ಜುನ್ ಸರ್ಜಾ ಕುಟುಂಬ ಮೇಲೆ ಬಹಳ ಪ್ರೀತಿ ವಿಶ್ವಾಸ ಇಟ್ಟುಕೊಂಡಿದ್ದಾರೆ.
ಅದರಲ್ಲಿಯೂ ಧ್ರುವ ಸರ್ಜಾ ಅವರನ್ನು ಮೊದಲ ಸಿನಿಮಾದಿಂದಲೂ ಸಪೋರ್ಟ್ ಮಾಡಿಕೊಂಡು ಬೆಳೆಸುತ್ತಾ ಬಂದಿದ್ದಾರೆ. ಆದರೆ ಮೊನ್ನೆ ಇಬ್ಬರು ಎದುರಾದರೂ ಮಾತನಾಡದೆ ಇದ್ದದ್ದು, ದರ್ಶನವರು ಮಾತನಾಡಿ ಬರುತ್ತಿದ್ದಂತೆ ಸೀಟ್ ಬಿಟ್ಟುಕೊಟ್ಟು ಧ್ರುವ ಸರ್ಜಾ ಕೆಳಗೆ ಇಳಿದು ಹೋದದ್ದು ಇವರ ನಡುವೆ ಏನೋ ಸರಿ ಇಲ್ಲ ಎನ್ನುವುದನ್ನು ಸಾರಿ ಹೇಳುತ್ತಿತ್ತು.
ಬಂದ್ ದಿನ ನಡೆದ ಆ ಘಟನೆ ಸಾಕಷ್ಟು ಅನುಮಾನಗಳನ್ನು ಹುಟ್ಟು ಹಾಕಿದೆ. ಇದರಿಂದ ಸೋಶಿಯಲ್ ಮೀಡಿಯಾದಲ್ಲಿ ಧ್ರುವ ಸರ್ಜಾ ಅವರ ಮೇಲೆ ಡಿ ಬಾಸ್ ಅಭಿಮಾನಿಗಳು ಕೋಪಗೊಂಡು ಪ್ರತಿಕ್ರಿಸುತ್ತಿದ್ದಾರೆ, ಅನೇಕರು ಟ್ರೋಲ್ ಕೂಡ ಮಾಡುತ್ತಿದ್ದಾರೆ. ಆದರೆ ಈ ವಿಚಾರದಲ್ಲಿ ಸತ್ಯ ಏನಿದೆ ಎನ್ನುವುದು ಯಾರಿಗೂ ತಿಳಿದಿಲ್ಲ ಹಾಗಾಗಿ ಅಂದು ಧ್ರುವ ಏಕೆ ಹಾಗೆ ನಡೆದುಕೊಂಡರು ಎನ್ನುವ ವಿಚಾರವನ್ನು ಪ್ರಥಮ್ ಅವರು ರಾಜಮಾರ್ತಂಡ (Raja Marthanda pressmeet) ಸಿನಿಮಾ ಸುದ್ದಿಗೋಷ್ಠಿಯಲ್ಲಿ ಹಂಚಿಕೊಂಡಿದ್ದಾರೆ.
ಇದೇ ಅಕ್ಟೋಬರ್ 6 ರಂದು ಧ್ರುವ ಸರ್ಜಾ ಅವರ ಹುಟ್ಟು ಹಬ್ಬದ ಪ್ರಯುಕ್ತ ಅವರ ಅಣ್ಣ ಚಿರಂಜೀವಿ ಕೊನೆಯ ಸಿನಿಮಾ ಮತ್ತು ಧ್ರುವ ವಾಯ್ಸ್ ನೀಡಿರುವ ರಾಜಮಾರ್ತಾಂಡ ಸಿನಿಮಾ ರಿಲೀಸ್ ಆಗುತ್ತಿದೆ. ಈ ಸಿನಿಮಾ ಗೆ ಸಂಬಂಧಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಥಮ್ (Pratham) ಅವರು ಅಂದು ನಡೆದ ಆ ಘಟನೆ ಬಗ್ಗೆ ಕೂಡ ವಿವರಿಸಿದ್ದಾರೆ.
ಮೊಬೈಲ್ ಚಾರ್ಜಿಂಗ್ ಗೆ ಹಾಕಿ ಬಳಸಿದ ಪರಿಣಾಮ ಮೊಬೈಲ್ ಸ್ಪೋಟಗೊಂಡು ಮಹಿಳೆ ಸಾ’ವು.!
ಧ್ರುವ ಸರ್ಜಾ ದರ್ಶನ್ ಜೊತೆ ಯಾಕೆ ಮಾತನಾಡಿಲ್ಲ ಎಂದು ನೇರವಾಗಿ ವಿಷಯ ಪ್ರಸ್ತಾಪ ಮಾಡದೆ ಇದ್ದರೂ ಧ್ರುವ ಸರ್ಜಾ ಮನಸ್ಥಿತಿ ಹೇಗಿತ್ತು ಎಂದು ಹೇಳುವುದರ ಮೂಲಕ ಪರೋಕ್ಷವಾಗಿ ಇದಕ್ಕೆ ಸ್ಪಷ್ಟನೆ ಕೊಡುವ ಪ್ರಯತ್ನವನ್ನು ಮಾಡಿದ್ದಾರೆ. ಸೆಪ್ಟೆಂಬರ್ 28ರ ರಾತ್ರಿ ರಘುನಾಥ್ ಭಜಂತ್ರಿ ಎನ್ನುವ ಸಾಫ್ಟ್ವೇರ್ ಉದ್ಯಮಿ ಮತ್ತು ಅವರ ನಾಲ್ಕು ಸ್ನೇಹಿತರು ಹಾಸನದಿಂದ ಬೆಂಗಳೂರಿಗೆ ಬರುವ ಮಾರ್ಗ ಮಧ್ಯದಲ್ಲಿ ಕಾರ್ ಗೆ ಬಸ್ ಡಿಕ್ಕಿಯಾಗಿ ಸ್ಥಳದಲ್ಲಿಯೇ ಮೃ’ತ ಪಟ್ಟಿದ್ದಾರೆ.
ಈ ರಘುನಾಥ್ ಭಜಂತ್ರಿ ಅವರು ಧ್ರುವ ಸರ್ಜಾ ಅವರ ಅಪ್ಪಟ ಅಭಿಮಾನಿ, ಧ್ರುವ ಸರ್ಜಾ ಅವರಿಗೆ ಒಂದು ಸಿನಿಮಾವನ್ನು ಡೈರೆಕ್ಟ್ ಮಾಡಬೇಕು ಎಂದು ಬಹಳ ಕನಸು ಇಟ್ಟುಕೊಂಡರು, ವರ್ಷಗಳಿಂದ ಇದರ ಕುರಿತಾಗಿ ತಯಾರಿ ಕೂಡ ಶುರು ಮಾಡಿಕೊಂಡಿದ್ದರು. ಇತ್ತೀಚಿಗೆ ನನಗೆ ಅವರು ಪರಿಚಯ ಆಗಿದ್ದರು ಯಾವಾಗಲೂ ಧ್ರುವ ಸರ್ಜಾ ಅವರನ್ನು ಮೀಟ್ ಮಾಡಿಸಿ ಎಂದು ಕೇಳುತ್ತಿದ್ದರು.
ಅವರಿಗೆ ಧ್ರುವ ಸರ್ಜಾ ಅವರ ಮೇಲಿದ್ದ ಅಭಿಮಾನ ನೋಡಿ ನಾನು ಕೂಡ ಧ್ರುವ ಅವರ ಜೊತೆ ಈ ಬಗ್ಗೆ ಮಾತನಾಡಿದ್ದೆ, ಮೀಟ್ ಮಾಡೋಣ ಎಂದು ಹೇಳಿದ್ದರು. ಸೆ.28ರ ರಾತ್ರಿ ನಾನು ಅವರಿಗೆ ಕರೆ ಮಾಡಿ ರಘು ಭಜಂತ್ರಿ ಹೆಸರು ಹೇಳಿದೆ ಆಗ ಅವರು ನನ್ನ ಹುಟ್ಟುಹಬ್ಬಕ್ಕೆ ಕರೆದುಕೊಂಡು ಬಂದುಬಿಡಿ ಅಂದೇ ಮೀಟ್ ಮಾಡೋಣ ಎಂದು ಹೇಳಿದ್ದರು.
ಆದರೆ ನಾನು ಅವರಿಗೆ ಕರೆ ಮಾಡಿದ್ದು ಆಕ್ಸಿಡೆಂಟ್ ಅಲ್ಲಿ ರಘು ತೀರಿಕೊಂಡರು ಎಂದು ಹೇಳುವುದಕ್ಕೆ. ಆ ಗಳಿಗೆಯಿಂದ ನನಗಾಗಿ ಕಾಯುತ್ತಿದ್ದ ವ್ಯಕ್ತಿಯನ್ನು ನಾನು ನೋಡಲು ಆಗಲಿಲ್ಲವಲ್ಲ ಎಂದು ಧ್ರುವ ಬಹಳ ಡಿಪ್ರೆಷನ್ ಗೆ ಹೋದರು. ಮೂರು ದಿನಗಳ ಕಾಲ ಅವರ ಮನಸ್ಥಿತಿ ಹೀಗೆ ಇತ್ತು ಅವರಿಗೆ ನಗುವ ಹಾಗೂ ಮಾತನಾಡುವ ಚೈತನ್ಯ ಕೂಡ ಇರಲಿಲ್ಲ ಆದರೆ ಅಷ್ಟರಲ್ಲಿ ನಡೆದೆ ಘಟನೆಗಳಿಗೆ ಜನರು ಅವರ ಇಷ್ಟ ಬಂದಾಗ ಊಹಿಸಿಕೊಳ್ಳುತ್ತಿದ್ದಾರೆ. ಇದೆಲ್ಲ ಸುಳ್ಳು ಎನ್ನುವುದಕ್ಕೆ ಈ ಘಟನೆ ಬಗ್ಗೆ ವಿವರಿಸಬೇಕಾಗಿ ಬಂತು ಎಂದು ಹೇಳಿದ್ದಾರೆ.