ಕನ್ನಡದ ಕರಾವಳಿ ಭಾಗ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಸಾಕಷ್ಟು ತಾರೆಗಳನ್ನು ಕೊಟ್ಟಿದೆ. ಇಂದು ಈ ಭಾಗದಿಂದ ಬಂದ ಅನೇಕರು ಬರೀ ಕನ್ನಡ ಚಿತ್ರರಂಗ ಮಾತ್ರವಲ್ಲದೇ ಇಡೀ ದೇಶದಾದ್ಯಂತ ಎಲ್ಲಾ ಚಿತ್ರರಂಗದಲ್ಲೂ ಕೂಡ ಗುರುತಿಸಿಕೊಂಡಿದ್ದಾರೆ. ಅದರಲ್ಲಿ ಐಶ್ವರ್ಯ ರೈ, ಶಿಲ್ಪ ಶೆಟ್ಟಿ, ಪ್ರಕಾಶ್ ರಾಜ್ ಮುಂತಾದವರನ್ನು ಹೆಸರಿಸಬಹುದು. ಪ್ರಕಾಶ್ ರಾಜ್ ಅವರು ಹುಟ್ಟಿ ಬೆಳೆದು ವಿದ್ಯಾಭ್ಯಾಸ ಪಡೆದಿದ್ದೆಲ್ಲಾ ಇದೆ ನೆಲದಲ್ಲಿ ಬಣ್ಣದ ಪ್ರಪಂಚ ಆರಿಸಿಕೊಂಡಾಗ ರಂಗ ಪ್ರವೇಶ ಆರಂಭ ಮಾಡಿದ್ದು ಇಲ್ಲಿಯೇ
ಮೊದಲಿಗೆ ಕನ್ನಡ ಸಿನಿಮಾ ರಂಗದ ಹಲವು ಸಿನಿಮಾಗಳು ಮತ್ತು ಮಾಲ್ಗುಡಿ ಡೇಸ್ ಹಾಗೂ ಗುಡ್ಡದ ಭೂತ ಇಂತಹ ಜನಪ್ರಿಯ ಧಾರಾವಾಹಿಗಳಲ್ಲಿ ಮುಖ್ಯ ಪಾತ್ರ ನಿರ್ವಹಿಸಿದ್ದ ಪ್ರಕಾಶ್ ರಾಜ್ ಅವರು ಅವಕಾಶಗಳ ಕ್ಷೀಣತೆಯಿಂದ ಪಕ್ಕದ ಇಂಡಸ್ಟ್ರಿ ಕಡೆಗೆ ವಲಸೆ ಹೋಗಬೇಕಾಯಿತು. ತಮಿಳು, ತೆಲುಗು ಚಿತ್ರರಂಗದಲ್ಲೂ ಕೂಡ ಬಾರಿ ಹೆಸರು ಮಾಡಿರುವ ಇವರು ಈಗ ಹಿಂದಿ ಚಿತ್ರರಂಗದ ಬಹು ಬೇಡಿಕೆ ನಟನೂ ಹೌದು.
ಈ ರೀತಿ ದೇಶದ ಐದು ಭಾಷೆ ಸಿನಿಮಾಗಳಲ್ಲೂ ನಟಿಸಿ ಪಂಚಭಾಷಾ ಕಲಾವಿದ ಎನ್ನುವ ಖ್ಯಾತಿಗೂ ಒಳಗಾಗಿರುವ ಇವರು ಈವರೆಗೆ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ನಾಗಮಂಡಲ ದಂತಹ ದಂತಕತೆಯಾದ ಚಿತ್ರಗಳಿಂದ ಹಿಡಿದು ಇತ್ತೀಚೆಗೆ ನಾನು ನನ್ನ ಕನಸು, ಒಗ್ಗರಣೆ ಇಂತಹ ಸಿನಿಮಾಗಳಲ್ಲೂ ಕೂಡ ನಾಯಕನಟನಾಗಿ ಮಾಡಿ ಸೈ ಎನಿಸಿಕೊಂಡಿದ್ದಾರೆ. ಜೊತೆಗೆ ವಿಲನ್ ಪಾತ್ರಗಳಲ್ಲಿ ಹೆಚ್ಚು ಮಿಂಚಿರುವ ಇವರು ಈಗಲೂ ಸಹ ವಿಲನ್ ರೋಲ್ ಮತ್ತು ಪೋಷಕ ಪಾತ್ರಧಾರಿ ಆಗಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ಕನ್ನಡದಲ್ಲಿ ದರ್ಶನ್, ಸುದೀಪ್, ಪುನೀತ್, ಯಶ್ ಈ ರೀತಿ ಎಲ್ಲಾ ಸ್ಟಾರ್ಗಳ ಜೊತೆಯಲ್ಲೂ ತೆರೆ ಹಂಚಿಕೊಂಡಿದ್ದಾರೆ ಇವರು. ಪ್ರಕಾಶ್ ರಾಜ್ ಅವರು ಸೆಲೆಬ್ರಿಟಿ ಆಗಿ ಒಂದೊಳ್ಳೆ ಸ್ಥಾನದಲ್ಲಿ ಇದ್ದಾರೆ. ದೇಶದಾದ್ಯಂತ ಇವರು ಹೆಸರು ಮಾಡಿರುವುದರಿಂದ ಎಲ್ಲರೂ ಸಹ ಇವರ ಜೀವನವನ್ನು ಗಮನಿಸುತ್ತಾ ಇರುತ್ತಾರೆ. ಆದರೆ ವೈಯಕ್ತಿಕ ಜೀವನದಲ್ಲಿ ಮಾತ್ರ ಸದಾ ವಿವಾದದಿಂದ ಕೂಡಿರುತ್ತಾರೆ. ತಮ್ಮ ಮದುವೆ ವಿಚಾರವಾಗಿ ಮತ್ತು ಕೆಲ ರಾಜಕೀಯ ಪಕ್ಷದಲ್ಲಿ ಕಾಣಿಸಿಕೊಂಡು ಕೊಡುವ ಹೇಳಿಕೆಗಳ ಕಾರಣವಾಗಿ ಬೇರೆಯವರ ಟೀಕೆಗೆ ಗುರಿಯಾಗಿದ್ದಾರೆ.
ವಿವಾಹದ ವಿಷಯವಾಗಿ ಹೇಳುವುದಾದರೆ ಮೊದಲಿಗೆ ಇವರು ಲಲಿತ ಕುಮಾರಿ ಎನ್ನುವವರನ್ನು ಮದುವೆ ಆಗಿದ್ದರು. ಈ ಮದುವೆಗೆ ಸಾಕ್ಷಿಯಾಗಿ ಇಬ್ಬರು ಹೆಣ್ಣುಮಕ್ಕಳು ಕೂಡ ಇದ್ದರು ಆದರೆ ಅದ್ಯಾವುದ ಕಾರಣಕ್ಕೆ ಇಬ್ಬರು ಬೇರೆ ಆಗಬೇಕಾಯಿತು. ನಂತರ ಪೋನಿ ವರ್ಮ ಎನ್ನುವವರನ್ನು ಮದುವೆಯಾದರು. ಪೋನಿ ವರ್ಮ ಅವರನ್ನು ಪ್ರೀತಿಸಿ ವಿವಾಹವಾದ ಇವರ ಮೇಲೆ ಅನೇಕರು ಆಗ ಬೇಸರಿಸಿಕೊಂಡಿದ್ದರು ಮತ್ತು ಆ.ಕ್ರೋ.ಶ ಹೊರಹಾಕಿದ್ದರು. ಜೊತೆಗೆ ಇವರಿಬ್ಬರ ವಯಸ್ಸಿನ ಅಂತರ 15 ವರ್ಷ ಆಗಿರುವುದರಿಂದ ಸಾಕಷ್ಟು ಜನರು ಇದನ್ನು ಟೀಕೆ ಮಾಡಿದ್ದರು.
ಆದರೆ ಆಗ ಇದು ಯಾವುದರ ಬಗ್ಗೆ ಜೋಡಿ ತಲೆ ಕೆಡಿಸಿಕೊಳ್ಳಲಿಲ್ಲ. ಇವರಿಗೆ ವೇದಾಂತ್ ಎನ್ನುವ ಒಬ್ಬ ಪುತ್ರನು ಕೂಡ ಇದ್ದಾನೆ ಸಂತೋಷವಾಗಿ ಈಗ ಪ್ರಕಾಶ್ ರಾಜ್ ಅವರು ವೈವಾಹಿಕ ಜೀವನ ಕಳೆಯುತ್ತಿದ್ದಾರೂ ಕೂಡ ಅವರ ಮೂರನೇ ಮದುವೆ ಸುದ್ದಿ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಲೇ ಇದೆ. ಅದಕ್ಕೆ ಸಾಕ್ಷಿ ಎನ್ನುವಂತೆ ಹೋಟೆಲ್ ಒಂದರಲ್ಲಿ ಅವರು ಹುಡುಗಿ ಒಬ್ಬಳ ಜೊತೆ ಹಾರ ಬದಲಾಯಿಸಿಕೊಂಡಿರುವ ಫೋಟೋಗಳು ಕೂಡ ವೈರಲ್ ಆಗಿವೆ.
ಆದರೆ ಬಲವಾದ ಮಾಹಿತಿಗಳ ಪ್ರಕಾರ ಇದು ಬೇರೆಯವರ ಜೊತೆ ಹಾರ ಬದಲಾಯಿಸಿಕೊಂಡಿರುವುದು ಅಲ್ಲ, ಬದಲಾಗಿ ತಮ್ಮ ಹೆಂಡತಿ ಪೋನಿ ವರ್ಮ ಅವರ ಜೊತೆಗೆ ಹಾರ ಬದಲಾಯಿಸಿಕೊಂಡಿರುವುದು. ಅವರ ವಿವಾಹ ವಾರ್ಷಿಕೋತ್ಸವದ ದಿನ ಮಗನ ಇಚ್ಛೆ ಮೇರೆಗೆ ಅವರು ಈ ರೀತಿ ಹಾರ ಬದಲಾಯಿಸಿಕೊಂಡಿದ್ದಾರೆ. ಯಾಕೆಂದರೆ ಮಗ ವೇದಾಂತ್ ಯಾವಾಗಲು ನಾನು ನಿಮ್ಮ ಮದುವೆ ನೋಡಿಲ್ಲ ಎನ್ನುತ್ತಿದ್ದರಂತೆ ಅದಕ್ಕಾಗಿ ಅವರ ಚಿಕ್ಕ ಆಸೆ ನೆರವೇರಿಸುವ ಕಾರಣಕ್ಕಾಗಿ ಈ ರೀತಿ ಮಾಡಿದ್ದಾರೆ.
ಪ್ರಕಾಶ್ ರಾಜ್ ಅವರು ರಾಜಕೀಯದಲ್ಲೂ ಕೂಡ ಸಕ್ರಿಯ ರಾಗಿದ್ದಾರೆ. ಜೊತೆಗೆ ವನ್ಯಪ್ರಾಣಿಗಳ ಬಗ್ಗೆ ಬಹಳ ಕಾಳಜಿ ಹೊಂದಿರುವ ಇವರು ಸೇವ್ ದ ಟೈಗರ್ ಎನ್ನುವ ಅಭಿಮಾನವನ್ನು ಕೂಡ ಆರಂಭಿಸಿದ್ದರು. ಈ ಅಭಿಯಾನಕ್ಕೆ ದೇಶದಾದ್ಯಂತ ಒಳ್ಳೆಯ ಪ್ರತಿಕ್ರಿಯೆ ಕೂಡ ಕೇಳಿ ಬಂದಿತ್ತು. ಜೊತೆಗೆ ಕೆಜಿಎಫ್ ಟೂ ಅಂತ ನ್ಯಾಷನಲ್ ಹಿಟ್ ಸಿನಿಮಾಗಳಲ್ಲಿ ಕೂಡ ಮುಖ್ಯ ಪಾತ್ರ ಮಾಡುತ್ತಿದ್ದಾರೆ. ಹೀಗೆ ಇವರ ವೈಯಕ್ತಿಕ ಮತ್ತು ಸಾಮಾಜಿಕ ಜೀವನ ಸದಾ ಹಸಿರಾಗಿರಲಿ ಎಂದು ಹರಸೋಣ.