ಈಗಾಗಲೇ ಫೆಬ್ರವರಿ 27ರಂದು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 13ನೇ ಕಂತಿನ ಮೊತ್ತವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಿಡುಗಡೆ ಮಾಡಿದ್ದಾರೆ. ಈಗ ರೈತರುಗಳು 14ನೇ ಕಂತಿನ ಮೊತ್ತಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ಈ ಕಂತಿನ ಮೊತ್ತವನ್ನು ಕೂಡಾ ಪ್ರಧಾನ ಮಂತ್ರಿ ಮೋದಿ ಬಿಡುಗಡೆ ಮಾಡಲಿದ್ದಾರೆ. ಆದರೆ 14ನೇ ಕಂತಿನ ಪಿಎಂ ಕಿಸಾನ್ ಮೊತ್ತ ಪಡೆಯಲು ಕೆಲವರು ಅರ್ಹತೆಯನ್ನು ಹೊಂದಿಲ್ಲ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 14ನೇ ಕಂತಿನ ಮೊತ್ತವನ್ನು ಯಾವಾಗ ಬಿಡುಗಡೆ ಮಾಡಲಾಗುತ್ತದೆ ಎಂದು ಕೇಂದ್ರ ಸರ್ಕಾರವು ಈವರೆಗೂ ತಿಳಿಸಿಲ್ಲ. ಆದರೆ ಮೇ ತಿಂಗಳ ಅಂತ್ಯದಲ್ಲಿ 14ನೇ ಕಂತಿನ ಪಿಎಂ ಕಿಸಾನ್ ನಿಧಿ ಮೊತ್ತವನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಇನ್ನು ಮುಂದಿನ ಕಂತನ್ನು ಮೇ ತಿಂಗಳಿನಿಂದ ಜುಲೈ ತಿಂಗಳ ಒಳಗಾಗಿ ಬಿಡುಗಡೆ ಮಾಡಬೇಕಾಗಿದೆ.
ಈ ಯೋಜನೆಯಲ್ಲಿ ಅರ್ಹ ರೈತರು ಒಂದು ವರ್ಷದಲ್ಲಿ ಮೂರು ಕಂತುಗಳಲ್ಲಿ 2 ಸಾವಿರ ರೂಪಾಯಿಯಂತೆ ಒಟ್ಟಾಗಿ 6 ಆರು ಸಾವಿರ ರೂಪಾಯಿ ಪಡೆಯಬಹುದಾಗಿದೆ. ಫೆಬ್ರವರಿ 2019ರಂದು ಈ ಯೋಜನೆಯನ್ನು ಆರಂಭ ಮಾಡಲಾಗಿದೆ. ಆದರೆ ಡಿಸೆಂಬರ್ 2018ರಿಂದಲೇ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಆದರೆ ಈ ಯೋಜನೆಯಡಿಯಲ್ಲಿ ಕೆಲವು ರೈತರು ಮಾತ್ರ ಮೊತ್ತವನ್ನು ಪಡೆಯಲು ಸಾಧ್ಯವಿದೆ. ಅರ್ಹತಾ ಮಾನದಂಡಗಳ ಬಗ್ಗೆ ತಿಳಿಯಲು ಮುಂದೆ ಓದಿ.
ಪಿಎಂ ಕಿಸಾನ್ ಯೋಜನೆ: ಪ್ರಯೋಜನ ಪಡೆಯಲು ಯಾರು ರೈತರು ಅರ್ಹರು?
ತಮ್ಮ ಹೆಸರಿನಲ್ಲಿ ಸಾಗುವಳಿ ಭೂಮಿ ಹೊಂದಿರುವ, ಜಮೀನು ಹೊಂದಿರುವ ರೈತರು ಯೋಜನೆಯಡಿ ಲಾಭ ಪಡೆಯಲು ಅರ್ಹರಾಗಿರುತ್ತಾರೆ. ತಮ್ಮ ಹೆಸರಿನಲ್ಲಿ ಭೂಮಿ ಹೊಂದಿರುವ ರೈತರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಲಾಭವನ್ನು ಪಡೆಯುವ ಅರ್ಹತೆಯನ್ನು ಹೊಂದಿರುತ್ತಾರೆ.
ಪಿಎಂ ಕಿಸಾನ್ ಯೋಜನೆ: ಈ ಯೋಜನೆಗೆ ಯಾರು ಅರ್ಹರಲ್ಲ?
* ಸಾಂಸ್ಥಿಕ ಭೂಮಿಯನ್ನು ಹೊಂದಿರುವವರು ಅಂದರೆ ಮನೆ ಇರುವವರು.
* ಸಾಂವಿಧಾನಿಕವಾಗಿ ಅರ್ಹತೆಯನ್ನು ಹೊಂದಿರುವ ರೈತ ಕುಟುಂಬಗಳು
* ರಾಜ್ಯ ಅಥವಾ ಕೇಂದ್ರ ಸರ್ಕಾರದ ಸೇವೆಯಲ್ಲಿರುವ ಅಥವಾ ನಿವೃತ್ತ ಅಧಿಕಾರಿಗಳು ಮತ್ತು ನೌಕರರು ರೈತ ಕುಟುಂಬಗಳು
* ವೈದ್ಯರು, ಎಂಜಿನಿಯರ್‌ಗಳು ಮತ್ತು ವಕೀಲರಂತಹ ವೃತ್ತಿಪರರು
* ಅಧಿಕ ಮಾಸಿಕ ಪಿಂಚಣಿ ಹೊಂದಿರುವ ನಿವೃತ್ತ ಪಿಂಚಣಿದಾರರು
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಅರ್ಜಿ ಹೀಗೆ ಸಲ್ಲಿಸಿ..
* ಅಧಿಕೃತ ವೆಬ್‌ಸೈಟ್ www.pmkisan.gov.inಗೆ ಭೇಟಿ ನೀಡಿ
*ಹೋಮ್‌ಪೇಜ್‌ನಲ್ಲಿ ಫಾರ್ಮರ್ಸ್ ಕಾರ್ನರ್ ಗೆ ಹೋಗಿ ನ್ಯೂ ಫಾರ್ಮರ್ ರಿಜಿಸ್ಟ್ರೇಷನ್’ ಮೇಲೆ ಕ್ಲಿಕ್ ಮಾಡಿ
*ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ, ಕ್ಯಾಪ್ಚಾ ಕೋಡ್ ಅನ್ನು ಹಾಕಿ
*ಕ್ಲಿಕ್ ಹಿಯರ್ ಟು ಕಂಟಿನ್ಯೂ ಆಯ್ಕೆ ಮೇಲೆ ಕ್ಲಿಕ್ ಮಾಡಿ.
*ಎಸ್ ಮೇಲೆ ಕ್ಲಿಕ್ ಮಾಡಿ ಪಿಎಂ ಕಿಸಾನ್ ರಿಜಿಸ್ಟ್ರೇಷನ್ ಫಾರ್ಮ್ 2023 ಅನ್ನು ಭರ್ತಿ ಮಾಡಿ
*ಈ ಅರ್ಜಿಯನ್ನು ಭರ್ತಿ ಮಾಡಿದ ಬಳಿಕ ಅದನ್ನು ಸೇವ್ ಮಾಡಿ, ಪ್ರಿಂಟ್ ಔಟ್ ಅನ್ನು ತೆಗೆಯಿರಿ.
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಬೇಕಾದ ದಾಖಲೆಗಳು ಯಾವುವು…?
* ಆಧಾರ್ ಕಾರ್ಡ್
* ಭೂಮಿ ನಿಮ್ಮ ಹೆಸರಿನಲ್ಲಿ ಇದೆ ಎಂದು ಖಾತರಿಪಡಿಸುವ ಜಾಗದ ಪತ್ರ
* ನಾಗರಿಕ ಪ್ರಮಾಣಪತ್ರ
* ಆದಾಯ ಪ್ರಮಾಣಪತ್ರ
* ಬ್ಯಾಂಕ್ ಖಾತೆಯ ವಿವರ
* ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ
* ಪಾಸ್‌ಪೋರ್ಟ್ ಗಾತ್ರದ ಫೋಟೋ.
ನೀವು ಕೂಡ ಪಿಎಂ ಕಿಸಾನ್ನ 14ನೇ ಹಂತದ ಯೋಜನೆಗೆ ಅರ್ಹರಾಗಿದ್ದರೆ ಈಗಲೇ ಅರ್ಜಿಯನ್ನು ಸಲ್ಲಿಸಿ.