ದೇಶದಲ್ಲಿ ಎಷ್ಟೇ ಕ್ರೀಡೆಗಳು (Sports) ನಡೆದರೂ ಕ್ರಿಕೆಟ್ (Cricket) ಎಂದ ತಕ್ಷಣ ಎಲ್ಲರ ಕಿವಿ ನೆಟ್ಟಗಾಗುತ್ತದೆ. ಪ್ರಪಂಚದಾದ್ಯಂತ ಉಳಿದ ಎಲ್ಲಾ ಕ್ರೀಡೆಗಳಿಗೆ ಹೋಲಿಸಿಕೊಂಡರೆ ಕ್ರಿಕೆಟ್ ಕ್ರೀಡಾಭಿಮಾನಿಗಳು ಹೆಚ್ಚಿದ್ದಾರೆ ಎಂದರೂ ತಪ್ಪಾಗಲಾರದು. ಭಾರತಕ್ಕೆ ಇದು ಕೊರತೆನಲ್ಲ, ಅಕ್ಟೋಬರ್ 5 ರಿಂದ ಭಾರತದಲ್ಲಿ ನಮ್ಮ ದೇಶ ಆತಿಥ್ಯ ವಹಿಸಿಕೊಂಡಿರುವ ODI WORLDCUP-2023 ಪಂದ್ಯಾವಳಿಗಳು ಶುರುವಾಗಲಿವೆ.
ಇದಕ್ಕಾಗಿ ಆಯ್ಕೆ ಆಗಿರುವ 10 ತಂಡಗಳು ಕ್ರಿಕೆಟ್ ಸಮರದಲ್ಲಿ ಸೆಣಸಾಡಲು ತಯಾರಾಗಿವೆ. ಈ ಟೂರ್ನಿ ಶುರುವಾಗಲು ದಿನಗಣನೆ ಆರಂಭವಾಗಿರುವುದರಿಂದ 9 ತಂಡಗಳು ಭಾರತಕ್ಕೆ ಬಂದು ಸೆಣಸಾಡುತ್ತಿವೆ. ವಾರದ ಹಿಂದೆಯೇ ಎಲ್ಲಾ ತಂಡಗಳು ಬಂದಿದ್ದರು ಬಾಬರ್ ಅಜಮ್ (Babar Azam) ನಾಯಕತ್ವದ ಪಾಕಿಸ್ತಾನ ಕ್ರಿಕೆಟ್ (Pak team) ತಂಡ ಬುಧವಾರ ತಡರಾತ್ರಿ ಹೈದರಾಬಾದ್ ವಿಮಾನ ನಿಲ್ದಾಣಕ್ಕೆ (Hyderabad) ಬಂದಿಳಿದಿದೆ, ಅವರಿಗೆ ಭಾರತದಲ್ಲಿ ಚಿಕ್ಕ ಸ್ವಾಗತ ಬಹಳ ವಿಶೇಷವಾಗಿದೆ.
ರೈತರು ವ್ಯವಸಾಯಕ್ಕೆಂದು ಸಾಲ ಮಾಡಿ ಮದುವೆ ಮಾಡುವುದನ್ನು ಮೊದಲು ನಿಲ್ಲಿಸಿ – ಮುಖ್ಯಮಂತ್ರಿ ಸಿದ್ದರಾಮಯ್ಯ
2016 ರ ನಂತರ ಬರೋಬ್ಬರಿ 7 ವರ್ಷಗಳ ಬಳಿಕ ಭಾರತದ ನೆಲಕ್ಕೆ ಪಾಕ್ ಪಡೆ ಪಾದರ್ಪಣೆ ಮಾಡುತ್ತಿದೆ. ಭಾರತದ ಅಖಾಡದಲ್ಲಿ ಇಂಡಿಯಾ ಮತ್ತು ಪಾಕಿಸ್ತಾನ ಪಡೆಗಳು ಎದುರು ಬದಲಾಗುವ ರೋಮಾಂಚನಕಾರಿಯಾದ ಪಂದ್ಯ ನೋಡಿ ಕಣ್ತುಂಬಿಕೊಳ್ಳಲು ಭಾರತದ ಅಭಿಮಾನಿಗಳು ಕಾಯುತ್ತಿದ್ದಾರೆ.
ಯಾವುದೇ ಕ್ರಿಕೆಟ್ ಟೂರ್ನಿ ನಡೆದರು ಉಳಿದ ಎಲ್ಲಾ ಮ್ಯಾಚ್ ಗಳಿಗಿಂತ ಭಾರತ ಮತ್ತು ಪಾಕಿಸ್ತಾನ ತಂಡ ಎದುರು ಬದಲಾಗುವ ಆ ಒಂದು ಸ್ಪರ್ಧೆ ನೋಡಲು ಇಡೀ ವಿಶ್ವವೂ ಕೂಡ ಕುತೂಹಲದಿಂದ ಕಾಯುತ್ತದೆ ಎಂದರೂ ತಪ್ಪಾಗಲಾರದು. ಸ್ಪರ್ಧೆ ಹೊರತುಪಡಿಸಿ ಭಾರತಕ್ಕೆ ಯಾರೇ ಬಂದರೂ ಸ್ವಾಗತಕೋರಿ ಅತಿಥಿ ದೇವೋ ಭವ ಎಂದು ಗೌರವಿಸುವ ಸಂಸ್ಕೃತಿ ನಮ್ಮದು.
ಜೆಡಿಎಸ್ & ಮುಸ್ಲಿಂ ನಾಯಕರ ಸಭೆ ಅಂತ್ಯ, ಸಾಮೂಹಿಕ ರಾಜೀನಾಮೆಗೆ ನಿರ್ಧಾರ.!
ಹೈದರಾಬಾದ್ ನಿಲ್ದಾಣಕ್ಕೆ ಬಂದಿಳಿದ ಪಾಕ್ ಕ್ರಿಕೆಟ್ ಆಟಗಾರರಿಗೆ ಕೇಸರಿ ಶಾಲು ಹೊಂದಿಸಿ ಆತ್ಮೀಯವಾಗಿ ಬರಮಾಡಿಕೊಳ್ಳಲಾಗಿದೆ. ವಿಮಾನ ನಿಲ್ದಾಣದ ಈ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ವಿಡಿಯೋ ನೋಡಿದ ಪ್ರತಿಯೊಬ್ಬ ಭಾರತೀಯನು ಹೆಮ್ಮೆಪಡುವಂತಿದೆ.
ಇನ್ನು ಪಾಕಿಸ್ತಾನಿ ತಂಡದಲ್ಲಿ ಬಾಬರ್ ಅಜಮ್ , ಶಾದಾಬ್ ಖಾನ್, ಅಬ್ದುಲ್ಲಾ ಶಫೀಕ್, ಫಖರ್ ಜಮಾನ್, ಹ್ಯಾರಿಸ್ ರೌಫ್, ಹಸನ್ ಅಲಿ, ಇಫ್ತಿಕರ್ ಅಹ್ಮದ್, ಇಮಾಮ್-ಉಲ್-ಹಕ್, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ವಾಸಿಮ್, ಸಲ್ಮಾನ್ ಅಘಾ, ಸೌದ್ ಶಕೀಲ್, ಶಾಹೀನ್ ಶಾ ಅಫ್ರಿದಿ, ಉಸಾಮಾ ಮಿರ್ ತಂಡದಲ್ಲಿ ಇರಲಿದ್ದಾರೆ.
ಒಂದೇ ದಿನಕ್ಕೆ 24,000 ರೂಪಾಯಿ ಮೌಲ್ಯದ ಆಸ್ತಿ ನೋಂದಣಿ, ಸರ್ಕಾರಕ್ಕೆ ಬರೋಬ್ಬರಿ 244 ಕೋಟಿ ಆದಾಯ.!
ಇವರೆಲ್ಲರೂ ದೇಶಕ್ಕೆ ಎಂಟ್ರಿ ಕೊಡ್ತಿದ್ದಂತೆ ಸ್ವಾಗತ ಮಾಡಿರುವ ರೀತಿಗೆ ಎಲ್ಲೆಡೆ ಪ್ರಸಂಸೆಗೆ ವ್ಯಕ್ತವಾಗುತ್ತಿದೆ. ಪಾಕ್ ತಂಡದ ನಾಯಕ ಬಾಬರ್ ಸಹಾ ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ನಲ್ಲಿ ಭಾರತದಲ್ಲಿ ನಮಗೆ ಸಿಕ್ಕಿದ ಸ್ವಾಗತಕ್ಕೆ ನಾನು ಮನಸೋತಿದ್ದೇನೆ ಎಂದು ಪೋಸ್ಟ್ ಹಾಕಿ ಸಂತೋಷ ವ್ಯಕ್ತಪಡಿಸಿದ್ದಾರೆ. ಬಾಬರ್ ಜೊತೆಗೆ, ಪಾಕಿಸ್ತಾನದ ವೇಗದ ಬೌಲರ್ ಶಾಹೀನ್ ಶಾ ಆಫ್ರಿದಿ ಕೂಡ ಪೋಸ್ಟ್ ಮೂಲಕ ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ.
Welcome to India, Babar Azam and Team Pakistan.#BabarAzam𓃵 #PakistanCricketTeam pic.twitter.com/GCsuSjgobI
— Aarz-e-ishq (@Aarzaai_Ishq) September 28, 2023
ಅಕ್ಟೋಬರ್ 14,2023 ರಂದು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸಾಂಪ್ರದಾಯಿಕ ಬದ್ಧ ವೈರಿ ಪಾಕ್ ವಿರುದ್ಧ ರೋಹಿತ್ ಶರ್ಮ (Rohith Sharma team) ನೇತೃತ್ವದ ಭಾರತದ ಟೀಮ್ ಸೆಣಸಾಟ ನಡೆಸಲಿದೆ. ಈ ಐತಿಹಾಸಿಕ ಪಂದ್ಯಾವಳಿ ನೋಡಿ ಕಣ್ತುಂಬಿಕೊಳ್ಳಲು ಇಡೀ ಭಾರತ ತಯಾರಾಗಿದೆ. ಭಾರತಕ್ಕೆ ಬಂದಿರುವ ಎಲ್ಲಾ ತಂಡಗಳಿಗೂ ಕೂಡ ಶುಭವಾಗಲಿ ಎಂದು ಹರಸೋಣ.