ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ (Nanjanagudu) ಸೆಪ್ಟೆಂಬರ್ 15ರಂದು ತಾಲೂಕು ಮಡಿವಾಳರ ಸಮುದಾಯ ಭವನ ಕಚೇರಿ ಉದ್ಘಾಟನೆ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ, ವರುಣ ವಿಧಾನಸಭಾ ಕ್ಷೇತ್ರದ ಆಶ್ರಯ ಸಮಿತಿ ಅಧ್ಯಕ್ಷ ಡಾ. ಯತೀಂದ್ರ ಸಿದ್ದರಾಮಯ್ಯ (Dr. Yatheendra Siddaramaih) ಅವರು ಕಾರ್ಯಕ್ರಮದಲ್ಲಿ ಭಾಷಣ ಮಾಡಿರುವ ವೇಳೆ ನೀಡಿರುವ ಹೇಳಿಕೆಯ ವಿಡಿಯೋ ಒಂದು ವೈರಲ್ ಆಗಿ ಕಳೆದ ಮಂಗಳವಾರದಿಂದ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಇದು ರಾಜ್ಯ ರಾಜಕಾರಣದಲ್ಲಿ ಬಾರಿ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದ್ದು , ಸದ್ಯಕ್ಕೆ ರಾಜಕೀಯದಲ್ಲಿ ಬಹಳ ಚರ್ಚೆಯಾಗುತ್ತಿರುವ ವಿಷಯವಾಗಿದೆ. ಅಷ್ಟಕ್ಕೂ ಈ ವಿಡಿಯೋದಲ್ಲಿ ಇರುವ ಭಾಷಣದಲ್ಲಿ ಅವರು ನುಡಿದಿರುವುದು ಏನೆಂದರೆ, ಈ ವರ್ಷ ನಡೆದ ವಿಧಾನಸಭಾ ಚುನಾವಣೆ ವೇಳೆ ವರುಣ ಕ್ಷೇತ್ರದಲ್ಲಿ ಮಡಿವಾಳ (Madivala committee) ಸಮುದಾಯದವರನ್ನು ಸಂಘಟನೆ ಮಾಡಬೇಕು ಎಂದು ಸಾವಿರಾರು ಜನರನ್ನು ಸೇರಿಸಿ ಅವರಿಗೆಲ್ಲರಿಗೂ ಕುಕ್ಕರ್ ಮತ್ತು ಇಸ್ತಿ ಪಟ್ಟಿಗೆ ನೀಡಲಾಗಿತ್ತು.
ಮಡಿವಾಳ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ನಂಜಪ್ಪ ಅವರು ನನ್ನ ತಂದೆಯಿಂದಲೇ ಅವುಗಳನ್ನು ಕೊಡಿಸಬೇಕು ಎಂದು ಬಹಳ ಶ್ರಮ ಪಟ್ಟರು. ತಂದೆಯ ಬೇಟಿಗಾಗಿ ಎರಡು ಮೂರು ಬಾರಿ ಅವರು ಬಂದಾಗ ತಂದೆಯವರು ಬ್ಯುಸಿ ಇದ್ದರು, ಆದರೆ ಪಟ್ಟು ಬಿಡದೆ ಕೊನೆಗೂ ತಂದೆಯವರನ್ನೇ ಕರೆಸಿ ಅವರ ಕೈಯಿಂದಲೇ ಎಲ್ಲರಿಗೂ ಕುಕ್ಕರ್ ಹಾಗೂ ಇಸ್ತ್ರಿ ಪೆಟ್ಟಿಗೆ ವಿತರಣೆ ಮಾಡಿಸಿ ಮಡಿವಾಳ ಸಮಾಜದ ಹೆಚ್ಚು ಮತಗಳು ನಮಗೆ ಸಿಗುವಂತೆ ಮಾಡಿದರು.
ನಮಗೆ ಅನುಕೂಲವಾಗಲೆಂದು ನಂಜಪ್ಪ ಅವರು ಈ ಕೆಲಸ ಮಾಡಿದರು. ನಾನು ಅಂದು ಆ ಕಾರ್ಯಕ್ರಮಕ್ಕೆ ಬರಲು ಆಗಿರಲಿಲ್ಲ, ಮಡಿವಾಳ ಸಮಾಜ ಚುನಾವಣೆಯಲ್ಲಿ ನಮ್ಮ ಗೆಲುವಿಗೆ ದೊಡ್ಡ ಕೊಡುಗೆ ನೀಡಿದೆ ಹಾಗಾಗಿ ಅವರ ಬೇಡಿಕೆಗಳನ್ನು ಈಡೇರಿಸಲು ನಮ್ಮ ಸರ್ಕಾರ ಕ್ರಮಗಳನ್ನು ಕೈಗೊಳ್ಳುತ್ತದೆ ಎನ್ನುವ ಭರವಸೆಯನ್ನು ಕೊಡುತ್ತೇನೆ ಎಂದಿರುವ ವಿಡಿಯೋ ವೈರಲ್ ಆಗಿದೆ.
ಈ ಸುದ್ದಿ ಸದ್ದಾಗುತ್ತಿದ್ದಂತೆ ವಿರೋಧ ಪಕ್ಷದ ಅನೇಕರು ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ಅದರಲ್ಲೂ ಮಾಜಿ ಸಿ.ಎಂ ಕುಮಾರಸ್ವಾಮಿ (ex C.M Kumaraswamy) ಅವರು ಇದಕ್ಕೆ ಪ್ರತಿಕ್ರಿಯೆ ನೀಡಿ ಮತದಾರರಿಗೆ ಕುಕ್ಕರ್, ಇಸ್ರಿಪೆಟ್ಟಿಗೆ ಕೊಟ್ಟಿರುವುದಾಗಿ ಮುಖ್ಯಮಂತ್ರಿಗಳ ಮಗನೇ ಹೇಳುತ್ತಿರುವುದರಿಂದ ಕೇಂದ್ರ ಚುನಾವಣಾ ಆಯೋಗ ಇದನ್ನು ಗಂಭೀರವಾಗಿ ತೆಗೆದುಕೊಂಡು ಈ ಅಕ್ರಮ ಸರ್ಕಾರವನ್ನು ವಜಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಅಸಲಿ ಸತ್ಯ ಈಗ ಬಹಿರಂಗವಾಗಿದೆ, ಸಿಎಂ ಪುತ್ರನೇ ರಾಜ್ಯದ ಜನತೆಗೆ ಸತ್ಯದ ಸಾಕ್ಷಾತ್ಕಾರ ಮಾಡಿಸಿದ್ದಾರೆ. ಪ್ರಕರಣದ ಕುರಿತು ಸರಿಯಾಗಿ ತನಿಖೆ ಮಾಡಿ ಕಾಂಗ್ರೆಸ್ ನ ಎಲ್ಲಾ ಅಭ್ಯರ್ಥಿಗಳನ್ನು ಕೂಡ ಚುನಾವಣಾ ಕಣದಿಂದ ಹೊರಗೆ ಇಡಬೇಕು. ವಾಮಾಮಾರ್ಗವಾಗಿ ಚುನಾವಣೆಯಲ್ಲಿ ಗೆದ್ದಿರುವುದರಿಂದ 135 ಶಾಸಕರನ್ನು ಅನರ್ಹಗೊಳಿಸಬೇಕು ಇದು ಅಪ್ರಜಾಸತ್ತಾತ್ಮಕ ಗೆದ್ದಿರುವ ಗೆಲುವಾಗಿದೆ ಎಂದು ಒತ್ತಾಯಿಸಿದ್ದಾರೆ.
ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲೂ ಕೂಡ ಕಾಂಗ್ರೆಸ್ ಅಭ್ಯರ್ಥಿಗಳು ಇದೇ ರೀತಿಯಾಗಿ ಗಿಫ್ಟ್, ಗ್ಯಾರಂಟಿ ಕೂಪನ್, ಸೀರೆ, ತವಾ, ಕುಕ್ಕರ್ ಗಳನ್ನು ಹಂಚಿ ಆ ಬಗ್ಗೆ ಜನರಿಗೆ ಆಮಿಷ ಒಡ್ಡಿ ಗೆದ್ದಿದ್ದಾರೆ. ಪಕ್ಷದ ಅಧ್ಯಕ್ಷರು, ಶಾಸಕಾಂಗ ಪಕ್ಷದ ನಾಯಕರೇ ಸಹಿ ಹಾಕಿದ ಗ್ಯಾರಂಟಿ ಕೂಪನ್ ಗಳನ್ನು ಮನೆಮನೆಗೂ ಹಂಚಿಕೆ ಮಾಡಿ ಮತದಾರರ ಮೇಲೆ ಪ್ರಭಾವ ಬೀರಿದ್ದಾರೆ. ಇದು ಜಗತ್ತಿನಲ್ಲಿ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎನ್ನುವ ಹೆಗ್ಗಳಿಕೆಯ ಕ’ಗ್ಗೊ’ಲೆ, ಇದು ಅತಿ ದೊಡ್ಡ ಚುನಾವಣಾ ಅಕ್ರಮ ಎಂದಿದ್ದಾರೆ.